twitter
    For Quick Alerts
    ALLOW NOTIFICATIONS  
    For Daily Alerts

    ಬಿಗ್ ಬಾಸ್ ನಲ್ಲಿ ಜ್ಯೋತಿರ್ವಿಜ್ಞಾನಿ ಜಯ ಶ್ರೀನಿವಾಸನ್

    By Rajendra
    |

    ಫೈನಲ್ ಗೆ ಯಾರು ಹೋಗುತ್ತಾರೆ, ಹೋಗಬೇಕು ಎಂದರೆ ಏನು ಮಾಡಬೇಕು ಎಂಬ ಬಗ್ಗೆ ಗುರುಪ್ರಸಾದ್ ಅವರು ಸಂತೋಷ್ ಜೊತೆಗೆ ಕೆಲವು ಯುಕ್ತಿಗಳನ್ನು ಹಂಚಿಕೊಂಡರು. ತಾವು ಫೈನಲ್ ಗೆ ಹೋಗಬೇಕಾದರೆ ಹೇಗೆ ಪ್ಲಾನ್ ಮಾಡಬೇಕು ಎಂಬುದನ್ನೂ ಹೇಳಿದರು.

    ಪ್ರಬಲ ಸ್ಪರ್ಧಿಗಳನ್ನು ಏನು ಮಾಡಬೇಕು. ಅವರ ಕೈಯಲ್ಲಿ ಯಾವುದಾದರೂ ತಪ್ಪು ಮಾಡಿಸಬೇಕು. ಆಮೇಲೆ ಅವರನ್ನು ಮನೆಯಿಂದ ಹೊರಹಾಕುವುದು ಸುಲಭ ಎಂದೆಲ್ಲಾ ಏನೇನೋ ಹೇಳಿ ಸಂತೋಷ್ ರನ್ನು ಮರುಳು ಮಾಡಿದರು.

    ಇನ್ನೊಂದು ಕಡೆ ದೀಪಿಕಾ ಅವರು ಖಂಡಿತ ಫೈನಲ್ ತಲುಪುತ್ತಾರೆ ಎಂದೂ ಹೇಳಿದರು. ಬಿಗ್ ಬಾಸ್ ಟೈಟಲ್ ಗೆಲ್ಲುವ ಎಲ್ಲಾ ಅರ್ಹತೆಗಳು ಅವರಿಗೆ ಇವೆ ಎಂದರು. ಅನುಪಮಾ ಭಟ್ ಗೆ ಮೆಚ್ಯುರಿಟಿ ಇಲ್ಲ. ನೀತೂಗೆ ಸ್ಟ್ರಾಟೆಜಿ ಇಲ್ಲ ಎಂದೆಲ್ಲಾ ಹೇಳಿದರು.

    ಆದಿ ಲೋಕೇಶ್ ರನ್ನು ಯಾಕೆ ಹೊರಹಾಕಿದರು

    ಆದಿ ಲೋಕೇಶ್ ರನ್ನು ಯಾಕೆ ಹೊರಹಾಕಿದರು

    ಇದೇ ವಿಚಾರವಾಗಿ ಮನೆಯ ಇತರೆ ಸದಸ್ಯರು ಗುರುಪ್ರಸಾದ್ ಅವರ ಬಗ್ಗೆ ಮಾತನಾಡಿಕೊಂಡರು. ಅನುಪಮಾ ಅವರಿಗೆ ಮೆಚ್ಯುರಿಟಿ ಇಲ್ಲ ಎಂದಾದರೆ 110 ಸಿನಿಮಾಗಳನ್ನು ಮಾಡಿದವರು ಆದಿ ಲೋಕೇಶ್ ರನ್ನು ಮನೆಯಿಂದ ಯಾಕೆ ಕಳುಹಿಸಿದರು. ಮನೆಯಲ್ಲಿ ಹೇಗಿದ್ದರು, ಏನು ಮಾಡಿದರು ಎಂಬುದು ಮುಖ್ಯವೇ ಹೊರತು ಸೀನಿಯಾರಿಟಿ, ಅನುಭವ ಮುಖ್ಯ ಅಲ್ಲ ಎಂದೂ ಮಾತನಾಡಿಕೊಂಡರು.

    ಮನೆಗೆ ಬಂದ ಹೊಸ ಅತಿಥಿ ಜ್ಯೋತಿರ್ವಿಜ್ಞಾನಿ

    ಮನೆಗೆ ಬಂದ ಹೊಸ ಅತಿಥಿ ಜ್ಯೋತಿರ್ವಿಜ್ಞಾನಿ

    ಇದೇ ಸಂದರ್ಭದಲ್ಲಿ ಮನೆಗೆ ಹೊಸ ಅತಿಥಿಯ ಆಗಮನವಾಯಿತು. ಅವರು ಬೇರಾರು ಅಲ್ಲ ಸಂಖ್ಯಾವಾಸ್ತು, ಜ್ಯೋತಿರ್ವಿಜ್ಞಾನಿ, ಮಹರ್ಷಿ ಗುರೂಜಿ ಜಯ ಶ್ರೀನಿವಾಸನ್. ಅವರ ಆಗಮನದಿಂದ ಮನೆಯಲ್ಲಿ ಸ್ವಲ್ಪ ಗಲಿಬಿಲಿ ಉಂಟಾಯಿತು. ಇವರು ಸ್ಪರ್ಧಿಯಾಗಿ ಬಂದರೇ ಅಥವಾ ಅತಿಥಿಯಾಗಿಯೇ ಎಂದು ಕುತೂಹಲದಿಂದ ನೋಡಿದರು.

    ಸದಸ್ಯರ ಕಿರುಚಾಟಕ್ಕೆ ಬೆವತು ಹೋದ ಗುರೂಜಿ

    ಸದಸ್ಯರ ಕಿರುಚಾಟಕ್ಕೆ ಬೆವತು ಹೋದ ಗುರೂಜಿ

    ಮನೆಯ ಸದಸ್ಯರು ಗುರೂಜಿ ಜಯ ಶ್ರೀನಿವಾಸನ್ ಅವರನ್ನು ಆದರದಿಂದ ಬರಮಾಡಿಕೊಂಡರು. ಅವರು ಎಲ್ಲರೊಂದಿಗೂ ಮಾತನಾಡುತ್ತಾ ಸಂಖ್ಯಾಶಾಸ್ತ್ರದ ಬಗ್ಗೆಯೂ ಹೇಳಿದರು. ಮನೆಯ ಸದಸ್ಯರ ಅರಚಾಟ, ಕಿತ್ತಾಟ ನೋಡಿ ಅವರು ಕ್ಷಣಕಾಲ ಬೆವತು ಹೋದರು. ನಿಧಾನಕ್ಕೆ ಮಾತನಾಡಿರಪ್ಪಾ. ನೀವು ಅಷ್ಟೆಲ್ಲಾ ಜೋರಾಗಿ ಮಾತನಾಡಿದರೆ ನನಗೆ ಮೈಯಲ್ಲಾ ಬೆವರುತ್ತದೆ ಎಂದರು.

    ಅಕುಲ್ ಗೆ ಅದೃಷ್ಟ ಇದೆ, ಆದರೆ

    ಅಕುಲ್ ಗೆ ಅದೃಷ್ಟ ಇದೆ, ಆದರೆ

    ಅವರು ಮನೆಯಲ್ಲಿ ಇದ್ದ ಸ್ವಲ್ಪ ಹೊತ್ತು ಎಲ್ಲರನ್ನೂ ರಂಜಿಸಿದರು. ಕೆಲವು ಅಭ್ಯರ್ಥಿಗಳ ಜನ್ಮದಿನಕ್ಕೆ ಅನುಗುಣವಾಗಿ ಅವರ ಭವಿಷ್ಯವನ್ನೂ ನುಡಿದರು. ಅಕುಲ್ ಬಾಲಾಜಿ ಅವರು ತಮ್ಮ ಅದೃಷ್ಟ ಸಂಖ್ಯೆ ಆರರ ಪಕ್ಕದ ನಾಲ್ಕು, ಐದು, ಮೂರನ್ನು ಚೆನ್ನಾಗಿ ನೋಡಿಕೊಂಡರೆ ಲಕ್ ಇದೆ ಎಂದರು.

    ಎರಡು ಮೂರು ಗಂಟೆಗಳ ಕಾಲ ಇದ್ದ ಗುರೂಜಿ

    ಎರಡು ಮೂರು ಗಂಟೆಗಳ ಕಾಲ ಇದ್ದ ಗುರೂಜಿ

    ಬಳಿಕ ಸುಜನ ಎಂದರು, ಅಲ್ಲೇ ಇದ್ದ ಸೃಜನ್, ಗುರುಗಳೇ ಸುಜನ ಅಲ್ಲ ಸೃಜನ್ ಅಂದರೆ ಕ್ರಿಯೇಟೀವ್ ಎಂದರ್ಥ ಎಂದು ನಮ್ಮ ಹೆಸರನ್ನು ಸ್ಪಷ್ಟಪಡಿಸಿದರು. ಅವರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದರು. ಮನೆಯಲ್ಲಿ ಅವರು ಎರಡು ಮೂರು ಗಂಟೆಗಳ ಕಾಲ ಇದ್ದು ಬಳಿಕ ನಿರ್ಗಮಿಸಿದರು.

    ಕೊನೆಯ ಐದು ಸ್ಪರ್ಧಿಗಳು ಯಾರು?

    ಕೊನೆಯ ಐದು ಸ್ಪರ್ಧಿಗಳು ಯಾರು?

    ಜಯ ಶ್ರೀನಿವಾಸನ್ ಅವರನ್ನು ಕನ್ಫೆಷನ್ ರೂಮಿಗೆ ಕರೆದ ಬಿಗ್ ಬಾಸ್ ಒಂದು ಪ್ರಶ್ನೆ ಕೇಳಿದರು. ನಿಮ್ಮ ಪ್ರಕಾರ ಕೊನೆಯ ಐದು ಸ್ಪರ್ಧಿಗಳು ಯಾರಾಗಿರುತ್ತಾರೆಂದು ಕೇಳಿದರು. ಅದಕ್ಕೆ ಅವರು ಕೊಟ್ಟ ಉತ್ತರ ಒಂದನೇ ನಂಬರ್ ನಲ್ಲಿ ಹುಟ್ಟಿರುವ ಸೃಜನ್, ಅಕುಲ್, ರೋಹಿತ್ ಮತ್ತು ಗುರುಪ್ರಸಾದ್. ಇನ್ನೊಬ್ಬರು ಯಾರಾಗಬಹುದು ಎಂಬ ಬಗ್ಗೆ ತಮಗೂ ಖಚಿತವಾಗುತ್ತಿಲ್ಲ ಎಂದರು.

    ಗುರುಪ್ರಸಾದ್ ಬಗ್ಗೆ ಮತ್ತೆ ಕಸಿವಿಸಿ

    ಗುರುಪ್ರಸಾದ್ ಬಗ್ಗೆ ಮತ್ತೆ ಕಸಿವಿಸಿ

    ಬಳಿಕ ಅವರು ಹೊರಟು ಹೋದ ಮೇಲೆ ಅವರೊಂದಿಗೆ ಗುರುಪ್ರಸಾದ್ ನಡೆದುಕೊಂಡಿದ್ದು ಸರಿಇಲ್ಲ ಎಂದು ಮನೆಯ ಸದಸ್ಯರು ಮಾತನಾಡಿಕೊಂಡರು. ಒಟ್ಟಾರೆ ಜಯ ಶ್ರೀನಿವಾಸನ್ ಅವರ ಎಂಟ್ರಿ ಮನೆಯ ಸದಸ್ಯರಿಗೆ ಒಂದು ಭಿನ್ನ ಅನುಭವವಂತೂ ಕೊಟ್ಟಿದೆ.

    English summary
    Bigg Boss is going through all the twists and turns this season. The one who is king of the house for a moment becomes the most unwanted the other moment. The drama house has always been unpredictable and uncertain, but, the Bigg Boss has solution for everything. So, for this season Guruji Jaya Srinivasan entered the house of mystery.
    Saturday, September 6, 2014, 17:04
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X