»   » ಬಿಗ್ ಬಾಸ್ ನಲ್ಲಿ ನಡೀತಿದೆಯಾ ಕಣ್ಣಾಮುಚ್ಚಾಲೆ?

ಬಿಗ್ ಬಾಸ್ ನಲ್ಲಿ ನಡೀತಿದೆಯಾ ಕಣ್ಣಾಮುಚ್ಚಾಲೆ?

By: ಉದಯರವಿ
Subscribe to Filmibeat Kannada

'ಬಿಗ್ ಬಾಸ್' ಮನೆಯಿಂದ ಅನಿತಾ ಭಟ್ ಹೊರನಡೆದ ಬಳಿಕ ಈಗ ಮನೆಯಲ್ಲಿ ಉಳಿದಿರುವುದು ಹದಿಮೂರು ಮಂದಿ ಮಾತ್ರ. ಒಂದು ವಾರ ಕಳೆದು ಎರಡನೇ ವಾರಕ್ಕೆ ಅಡಿಯಿಟ್ಟಿದ್ದರೂ ಇನ್ನೂ ಒಬ್ಬರ ನಡುವೆ ಒಬ್ಬರಿಗೆ ಹೊಂದಾಣಿಕೆ ಸಮಸ್ಯೆ ಕಾಡುತ್ತಿದೆ.

ಬಿಗ್ ಬಾಸ್ ಏಳು ಹಾಗೂ ಎಂಟನೇ ದಿನ ಏನು ನಡೀತು ಎಂಬ ಬಗ್ಗೆ ದೃಷ್ಟಿ ಹರಿಸೋಣ ಬನ್ನಿ. ಮನೆಯಲ್ಲಿರುವ ಎಲ್ಲರೂ ನನಗೆ ಅಕ್ಕತಂಗಿಯರಲ್ಲ ಒಂದು ಕ್ಯಾಂಡಿ ಕ್ರಷ್ ಸಹ ಇದೆ ಎಂದು ಸಂತೋಷ್ ಅಂದಾಗ. ಎಲ್ಲರೂ ಯಾರದು ಎಂದು ಸಂತೋಷ್ ರನ್ನು ಪುಸಲಾಯಿಸಿದರು.

ಬಹುಶಃ ಅನು ಇರಬೇಕು ಎಂದಾಗ ಸಂತೋಷ್ ಹೆಸರು ಹೇಳುವಂತಿಲ್ಲ ಎಂದರು. ಅದು ನನ್ನ ಮನಸ್ಸಿನಲ್ಲೇ ಇರಲಿ ಎಂದು ತಪ್ಪಿಸಿಕೊಂಡರು. ಇನ್ನೊಂದು ಕಡೆ ಶಕೀಲಾ ಅವರು ದೀಪಿಕಾ ಜೊತೆ ಮಾತನಾಡುತ್ತಾ, ಅನಿತಾ ಅವರಿಗೆ ತುಂಬಾ ವಯಸ್ಸಾಗಿದೆ. ತಮ್ಮ ಮಗಳಿಗೆ ನ್ಯಾಯ ಒದಗಿಸಲು ಆಗಲಿಲ್ಲ.

ಅನಿತಾ ಅವರಿಗೆ 27 ಅಲ್ಲ 37 ವರ್ಷ ವಯಸ್ಸು. ಅವರ ಕಣ್ಣ ಕೆಳಗೆ ಗೆರೆಯೂ ಕಾಣಿಸುತ್ತಿದೆ. ಅವರಿಗೆ 16 ವರ್ಷ ವಯಸ್ಸಿನ ಮಗಳೂ ಇದ್ದಾಳೆ ಎಂದು ಇಬ್ಬರೂ ಪಿಸಪಿಸ ಎಂದು ಮಾತನಾಡಿಕೊಂಡರು.

ರೋಹಿತ್ ಗೆ ಅಹಂ ಜಾಸ್ತಿ ಎಂದ ಸಂತೋಷ್

ಹುಡುಗಿಯರು ಹಾವುಗಳಿದ್ದಂತೆ. ಅರ್ಧ ದಿನ ಮೇಕಪ್ ನಲ್ಲೇ ಕಳೆಯುತ್ತಾರೆ. ಏನೋ ಹೆಚ್ಚಾಗಿ ಕೆಲಸ ಮಾಡುತ್ತಿರುವುದಾಗಿ ಪೂಸಿ ಹೊಡೆಯುತ್ತಾರೆ ಎಂದರು ಶಕೀಲಾ ಹುಡುಗಿಯ ಬಗ್ಗೆ ಕಂಪ್ಲೇಂಟ್ ಮಾಡಿದರು. ನಾನು ಎಲಿಮಿನೇಟ್ ಆಗಿಲ್ಲ ಎಂಬ ಅಹಂ ರೋಹಿತ್ ಗೆ ಎಂದು ಸಂತೋಷ್ ಹೇಳಿದರು.

ನಾಮಿನೇಶನ್ ನಿಂದ ಹೊರಗುಳಿದ ಸೃಜನ್

ಸೃಜನ್ ಮನೆಯ ಕ್ಯಾಪ್ಟನ್ ಆಗಿರುವ ಕಾರಣ ಈ ವಾರ ನಾಮಿನೇಷನ್ ಪ್ರಕ್ರಿಯೆಯಿಂದ ಹೊರಗೆ ಉಳಿದರು. ಸೃಜನ್ ಸೂಚಿಸುವ ಒಬ್ಬರು ಮನೆಯಿಂದ ನೇರವಾಗಿ ನಾಮಿನೇಟ್ ಆಗಿ ಹೊರಹೋಗಲು ಕಾರಣರಾಗುತ್ತಾರೆ ಎಂದು ಬಿಗ್ ಬಾಸ್ ಹೇಳಿದರು.

ನೇರವಾಗಿ ನಾಮಿನೇಟ್ ಆದ ಹರ್ಷಿಕಾ

ಅದರಂತೆ ಹರ್ಷಿಕಾ ಹೆಸರನ್ನು ಸೂಚಿಸಿದರು ಸೃಜನ್. ಅವರು ಮುಂಬರುವ ದಿನಗಳಲ್ಲಿ ಮನೆಯ ಕೆಲಸಗಳನ್ನು ನಿಭಾಯಿಸಲು ಸಾಧ್ಯವಾಗದೆ ಇರಬಹುದು ಎಂಬ ಕಾರಣಕ್ಕೆ ಅವರ ಹೆಸರನ್ನು ಸೂಚಿಸುತ್ತಿದ್ದೇನೆ ಎಂಬ ವಿವರಣೆಯನ್ನೂ ನೀಡಿದರು.

ಮನೆಯಲ್ಲಿ ರೋಹಿತ್ ಬಗ್ಗೆ ವಿರೋಧ

ಸೃಜನ್ ನೇರವಾಗಿ ನಾಮಿನೇಟ್ ಮಾಡಿದ್ದಕ್ಕೆ ಹರ್ಷಿಕಾ ಬಿಕ್ಕಿಬಿಕ್ಕಿ ಅಳುತ್ತಿದ್ದರು. ಮನೆಯ ಬಹುತೇಕ ಮಂದಿ ರೋಹಿತ್ ಅವರನ್ನೇ ನಾಮಿನೇಟ್ ಮಾಡಿದರು.
ಕ್ಯಾಮೆರಾ ಮುಂದೆ ಕಣ್ಣು ಹೊಡೆದು ನನಗೆ ಈ ಮನೆ ಬಿಟ್ಟು ಬರಕ್ಕೆ ಇಷ್ಟ ಇಲ್ಲ ಎಂದರು ಹರ್ಷಿಕಾ ಹೇಳಿಕೊಂಡರು.

ಹರ್ಷಿಕಾ, ರೋಹಿತ್, ಅಕುಲ್ ನಾಮಿನೇಟ್

ಈ ವಾರ ನಾಮಿನೇಟ್ ಆದವರು ಮೂರು ಮಂದಿ. ಹರ್ಷಿಕಾ, ರೋಹಿತ್, ಅಕುಲ್. ನನಗೆ ಬಕೆಟ್ ಹಿಡಿಯಕ್ಕೆ ಬರಲ್ಲ. ನ್ಯಾಚುರಲಿ ನನಗೆ ಅಳುವುದಕ್ಕೆ ಬರಲ್ಲ. ಎಲ್ಲಾ ಕೆಲಸ ಮಾಡುತ್ತಿದ್ದೇನೆ. ಆದರೂ ಅಟಿಟ್ಯೂಡ್ ಸರಿ ಇರಲ್ಲ ಎನ್ನುತ್ತಿದ್ದಾರೆ. ನನಗೆ ನಾಟಕ ಮಾಡಲು ಬರಲ್ಲ. ಒಂದಂತೂ ಅರ್ಥವಾಗಿದೆ ಪಾತ್ರೆ ತೊಳೆಯುವುದು ತುಂಬಾ ಕಷ್ಟ ಎಂಬುದು ಎಂದು ತನ್ನಷ್ಟಕ್ಕೆ ತಾನೇ ರೋಹಿತ್ ಹೇಳಿಕೊಂಡರು.

ಹುಡುಗಿಯರ ಮನಗೆಲ್ಲುತ್ತಿರುವ ಆದಿ ಲೋಕೇಶ್

ಆದಿ ಲೋಕೇಶ್ ತುಂಬ ಬದಲಾಗಿದ್ದಾನೆ. ಹುಡುಗಿಯರ ಬಳಿ ತುಂಬಾ ಚೆನ್ನಾಗಿ ನಡೆದುಕೊಳ್ಳುತ್ತಿದ್ದಾನೆ. ಅವನನ್ನು ನೋಡಿದಾಗ ಏನೋ ಅಂದುಕೊಂಡಿದ್ದೆ ಆದರೆ ಅವರ ವ್ಯಕ್ತಿತ್ವ ತುಂಬಾ ಬದಲಾಗಿದೆ ಎಂದು ಹರ್ಷಿಕಾ, ದೀಪಿಕಾ ಹಾಗೂ ನೀತೂ ಮಾತನಾಡಿಕೊಂಡರು. ಆದಿ ಲೋಕೇಶ್ ಎಂದರೆ ಭಯ ಬೀಳುತ್ತಿದ್ದವರು ಈಗ ಅವರಿಗೆ ಹತ್ತಿರವಾಗುತ್ತಿರುವುದು ಮನೆಯಲ್ಲಿ ಹೊಸ ಬೆಳವಣಿಗೆ.

English summary
Bigg Boss Kannada 2, day 7 and 8 highlights. Srujan Lokesh directly nominated BBK2 inmate Harshika Poonacha in the second week of the show. After Anita Bhat eliminated this time three members viz Harshika, Rohit and Akul nominated.
Please Wait while comments are loading...