»   » ಬಿಗ್ ಬಾಸ್ ಫೈನಲ್ ಗೆ ಗುರುಪ್ರಸಾದ್ ಹೋಗ್ತಾರಾ?

ಬಿಗ್ ಬಾಸ್ ಫೈನಲ್ ಗೆ ಗುರುಪ್ರಸಾದ್ ಹೋಗ್ತಾರಾ?

Posted By:
Subscribe to Filmibeat Kannada

ಒಂದೇ ಸಲ ಮನೆಯಿಂದ ಇಬ್ಬರು ಹೊರಬಿದ್ದ ಮೇಲೆ ಬಿಗ್ ಬಾಸ್ ಮನೆಯ ವಾತಾವರಣವೇ ಬದಲಾಗಿದೆ. ರಾಕ್ ಸ್ಟಾರ್ ರೋಹಿತ್ ಪಟೇಲ್ ಹಾಗೂ ರೋಮ್ಯಾಂಟಿಕ್ ಸ್ಟಾರ್ ಸಂತೋಷ್ ಮನೆಯಿಂದ ಹೊರಬಿದ್ದ ಮೇಲೆ ಮನೆಯಲ್ಲಿ ಉಳಿದ ಸದಸ್ಯರಲ್ಲಿ ಕೊಂಚ ಅಳುಕು ಮನೆಮಾಡಿದೆ.

ಎಪ್ಪತ್ತನೇ ದಿನ ಇದೇ ವಿಚಾರವಾಗಿ ಗುರುಪ್ರಸಾದ್ ಅವರು ಅಕುಲ್ ಜೊತೆ ಚರ್ಚಿಸಿದರು. ಇಂಪಾರ್ಟೆಂಟ್ ವಿಕೆಟ್ ಉರುಳಿಸಿದ್ದೀನಿ ಎಂದರು. ಅವರು ರೋಹಿತ್ ಬಗ್ಗೆ ಮಾತನಾಡುತ್ತಾ, ಸುಮ್ಮನೆ ಇಲ್ಲಿ ಕೂತಿದ್ದ. ಆದಿಗೆ ಹೇಗೆ ಮುಹೂರ್ತನೋ ಇವನಿಗೂ ಅದೇ ರೀತಿ ಮಾಡಿದ್ದೀನಿ ಎಂದರು.

ಒಟ್ಟಾರೆಯಾಗಿ ರೋಹಿತ್ ಮನೆಯಿಂದ ಹೊರಹೋಗಲು ತಾನೇ ಕಾರಣ ಎಂಬುದನ್ನು ಗುರುಪ್ರಸಾದ್ ಘಂಟಾಘೋಷವಾಗಿ ಹೇಳಿಕೊಂಡರು. ಏನನ್ಮಧ್ಯೆ ಬಿಗ್ ಬಾಸ್ ಮನೆಯಲ್ಲಿ ಮಿಡಿ ನಾಗರವೊಂದು ಪ್ರತ್ಯಕ್ಷವಾಯಿತು. ಬಳಿಕ ಇದು ಗುರುಪ್ರಸಾದ್ ಕಿಡಿಗೇಡಿತನ ಎಂಬುದು ಗೊತ್ತಾಯಿತು. ಅವರು ಮಣ್ಣಿನಲ್ಲಿ ಮಾಡಿದ ನಾಗರ ಎಂಬುದು ಎಲ್ಲರೂ ಗೊತ್ತಾಯಿತು.

ಇನ್ನು ಉಳಿದಿರುವುದು ಮೂರೇ ವಾರ

ಇನ್ನು ಇರುವುದೇ ಮೂರು ವಾರ. ನಾಳೆ ನಾಮಿನೇಷನ್ ಇದೆ. ಈಗ ಮನೆಯಲ್ಲಿ ಇರುವುದು ಏಳೇ ಜನ. ಇರುವಷ್ಟು ದಿನ ಚೆನ್ನಾಗಿ ಎಂಟರ್ ಟೇನ್ ಮಾಡೋಣ. ಆದಷ್ಟು ದಿನ ಚೆನ್ನಾಗಿ ಕಳೆಯೋಣ ಎಂದರು ಸೃಜನ್. ಇದಕ್ಕೆ ಮನೆಯ ಸದಸ್ಯರು ತಲೆದೂಗಿದಾರಾದರೂ ದೀಪಿಕಾ ಮಾತ್ರ ಇದು ಯಾಕೋ ಅತಿಯಾಯಿತು ಎಂಬಂತೆ ಇದ್ದರು.

ಆಕ್ಟಿವಿಟಿ ಏರಿಯಾದಲ್ಲಿ ಹಗ್ಗ ಜಗ್ಗಾಟ

ಆಕ್ಟಿವಿಟಿ ಏರಿಯಾದಲ್ಲಿ ಕೆಸರುಗದ್ದೆ ತರಹ ಮಾಡಿದ್ದ ಜಾಗದಲ್ಲಿ ಒಬ್ಬರಿಗೊಬ್ಬರು ಬೆನ್ನು ಮಾಡಿ ನಿಂತು, ಅವರಿಬ್ಬರನ್ನೂ ಹಗ್ಗದಿಂದ ಬಂಧಿಸಲಾಗಿರುತ್ತದೆ. ಇಬ್ಬರೂ ಸ್ಪರ್ಧಿಗಳು ತಮ್ಮ ಎದುರಾಳಿಯನ್ನು ಸೀಮಾರೇಖೆಯತ್ತ ಎಳೆಯಬೇಕು. ಯಾರು ಮೊದಲು ಸೀಮಾರೇಖೆಯಿಂದ ಹೊರೆಗೆ ಎಳೆಯುತ್ತಾರೋ ಅವರು ಗೆದ್ದಂತೆ.

ಎಳೆಯರಾಜಾ ಆದ ಸೃಜನ್ ಲೋಕೇಶ್

ಕಡೆಗೆ ಈ ಹಗ್ಗಜಗ್ಗಾಟದಲ್ಲಿ ಗೆದ್ದದ್ದು ಸೃಜನ್ ಲೋಕೇಶ್. ಎಳೆಯುವುದರಲ್ಲಿ ಸೃಜನ್ ಬೆಸ್ಟ್, ಅದು ಕಾಲು ಆಗಿರಬಹುದು ಬೆನ್ನಾಗಿರಬಹುದು ಎಂದರು ತಮಾಷೆ ಮಾಡಿದರು ಅಕುಲ್. ಜೊತೆಗೆ ಅವರಿಗೆ ಎಳೆಯರಾಜಾ ಎಂಬ ಬಿರುದನ್ನು ಗುರುಪ್ರಸಾದ್ ಮತ್ತು ಅಕುಲ್ ನೀಡಿದರು.

ಗುರುಪ್ರಸಾದ್ ರನ್ನು ಉಳಿಸಿದ ಅಕುಲ್

ಈ ವಾರ ಮನೆಯ ಕ್ಯಾಪ್ಟನ್ ಆದ ಅಕುಲ್ ನಾಮಿನೇಷನ್ ಪ್ರಕ್ರಿಯೆಯಿಂದ ಸುರಕ್ಷಿತರಾಗಿದ್ದರು. ಅವರಿಗೆ ಬಿಗ್ ಬಾಸ್ ಒಂದು ವಿಶೇಷ ಅಧಿಕಾರವನ್ನೂ ಕೊಟ್ಟರು. ಮನೆಯ ಒಬ್ಬ ಸದಸ್ಯರನ್ನು ಸುರಕ್ಷಿತರಾಗಿಸಬೇಕು, ಯಾರನ್ನು ಮಾಡುತ್ತೀರಿ ಎಂದು ಕೇಳಿದಾಗ. ಅವರು ಗುರುಪ್ರಸಾದ್ ಅವರನ್ನು ಉಳಿಸುವುದಾಗಿ ಹೇಳಿದರು.

ಈ ಬಾರಿ ನಾಲ್ಕು ಮಂದಿ ನಾಮಿನೇಟ್

ನೇರವಾಗಿ ನಾಮಿನೇಶ್ ಆಗಿರುವ ಅನುಪಮಾನ ಅವರ ಹೆಸರು ಸೂಚಿಸುವಂತಿರಲಿಲ್ಲ. ಈ ವಾರ ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವ ಸದಸ್ಯರೆಂದರೆ. ಅನುಪಮಾ, ನೀತೂ, ದೀಪಿಕಾ, ಶ್ವೇತಾ ಹಾಗೂ ಸೃಜನ್. ಈ ನಾಲ್ಕು ಮಂದಿ ನಾಮಿನೇಟ್ ಆಗಿದ್ದಾರೆ.

ಅಕುಲ್ ಗೆ ಗುರುಪ್ರಸಾದ್ ಕೃತಜ್ಞತೆ

ತನ್ನನ್ನು ನಾಮಿನೇಷನ್ ನಿಂದ ಬಚಾವ್ ಮಾಡಿದ್ದಕ್ಕೆ ಅಕುಲ್ ಅವರಿಗೆ ಗುರುಪ್ರಸಾದ್ ಕೃತಜ್ಞತೆಗಳನ್ನು ತಿಳಿಸಿದರು. ಅಕುಲ್ ನೀನು ಮೆಚ್ಯೂರ್ಡ್ ಡಿಸಿಷನ್ ತೆಗೆದುಕೊಂಡಿದ್ದೀಯಾ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಆ ಶಾರದೆ ನಿನಗೆ ಒಳ್ಳೆಯದು ಮಾಡಲಿ ಎಂದರು.

ಗುರುಪ್ರಸಾದ್ ಫೈನಲ್ ಗೆ ಹೋಗ್ತಾರಾ?

ಗುರುಪ್ರಸಾದ್ ಡೈರೆಕ್ಟ್ ಫೈನಲ್ ಗೆ ಹೋಗುತ್ತಾರೆ. ಈ ವಾರ ನಾಮಿನೇಷನ್ ನಿಂದ ಬಚಾವ್ ಆಗಿದ್ದಾರೆ. ಮುಂದಿನ ವಾರ ಅವರು ಕ್ಯಾಪ್ಟನ್ ಆಗುತ್ತಾರೆ. ಇನ್ನು ಫೈನಲ್ ಗೆ ಹೋಗುವುದು ಖಚಿತ ಎಂದು ಮನೆಯ ಸದಸ್ಯರು ಮಾತನಾಡಿಕೊಂಡರು.

ಓಎಲ್ಎಕ್ಸ್ ಸೈಟ್ ಟು ಡಾನ್ಸ್ ವಿಶೇಷ ಟಾಸ್ಕ್

ಓಎಲ್ಎಕ್ಸ್ ಸೈಟ್ ಟು ಡಾನ್ಸ್ ಎಂಬ ವಿಶೇಷ ಟಾಸ್ಕ್ ನ್ನು ಕೊಟ್ಟ ಬಿಗ್ ಬಾಸ್. ಆ ಟಾಸ್ಕ್ ಪ್ರಕಾರ ಪ್ರತಿಯೊಬ್ಬರೂ ನೃತ್ಯ ಮಾಡಬೇಕು. ಛತ್ರಿ, ಕುರ್ಚಿ,ಮೊಬೈಲ್, ಮಕ್ಕಳ ಉಪಕರಣ, ಕ್ರೀಡಾ ಉಪಕರಣಗಳು ಹೀಗೆ ಓಎಲ್ಎಕ್ಸ್ ನಲ್ಲಿ ಖರೀದಿಸಿ ನೃತ್ಯ ಮಾಡಬೇಕು. ಇದಕ್ಕಾಗಿ ಅವರು ವೀಕ್ಷಕರಲ್ಲಿ ತಮ್ಮ ಬಳಿ ಇರುವ ವಸ್ತುಗಳನ್ನು ಓಎಲ್ಎಕ್ಸ್ ನಲ್ಲಿ ಮಾರುವಂತೆ ವಿನಂತಿಸಿಕೊಂಡರು.

ಗುರುಪ್ರಸಾದ್ ಛತ್ರಿ ಡಾನ್ಸ್

ಗುರುಪ್ರಸಾದ್ ಅವರು ಛತ್ರಿಗೆ ಬೇಡಿಕೆ ಇಟ್ಟರು, ಸೃಜನ್ ಅವರು ಕುರ್ಚಿ ಬೇಕು ಎಂದರು, ಅನುಪಮಾ ಅವರು ಮೊಬೈಲ್, ಅಕುಲ್ ಅವರು ಸೈಕಲ್, ಶ್ವೇತಾ ಪುಸ್ತಕಗಳನ್ನು ಕೇಳಿದರು, ನೀತೂ ಅವರು ಲ್ಯಾಪ್ ಟಾಪ್ ಕೇಳಿದರು.

ಗಾಯದ ಮೇಲೆ ಬರೆಎಳೆದ ಬಿಗ್ ಬಾಸ್

ಒಂದೇ ಸಲಹಕ್ಕೆ ಇಬ್ಬರು ಮನೆಯಿಂದ ಹೊರಹೋಗಿದ್ದು ಮನೆಯ ವಾತಾವರಣವನ್ನು ಬದಲಾಯಿಸಿದೆ. ಈಗ ಎಲ್ಲರೂ ನಾಮಿನೇಟ್ ಆಗಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಮನೆಯಿಂದ ಹೊರಹೋಗಬೇಕಾದರೆ ಈಜುಕೊಳದಲ್ಲಿ ಇಳಿದು ಪಲ್ಟಿ ಹೊಡೆಯುವ ಶಿಕ್ಷೆಯನ್ನು ಸಂತೋಷ್ ಕೊಟ್ತಿದ್ದರು. ಸೃಜನ್ ಅವರಿಗೆ ಕೊಟ್ಟಿದ್ದ ಶಿಕ್ಷೆ ಮುಕ್ತಾಯವಾಗಿದೆ.

English summary
House members were asked to nominate the participants for the next round of elimination. Anupama was again directly nominated for elimination as per the decision last week. Akul got the special power to save one candidate from nomination. He chose to save Guruprasad. At the end of voting, all the participants apart from Guruprasad and Akul were nominated.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada