»   » ಅಕುಲ್ ಗೆ ಚಡ್ಡಿ ಸರಿ ಮಾಡಿದ ನೀತೂ ಮೇಡಂ!

ಅಕುಲ್ ಗೆ ಚಡ್ಡಿ ಸರಿ ಮಾಡಿದ ನೀತೂ ಮೇಡಂ!

By: ಉದಯರವಿ
Subscribe to Filmibeat Kannada

ಒಂದು ತಿಂಗಳು ಈ ಮನೆಯಲ್ಲಿ ಕಳೆಯುವುದು ಹೇಗಪ್ಪಾ ಎಂದು ನನಗೆ ಗೊತ್ತಾಗಲಿಲ್ಲ. ಬಹುಶಃ ನೀವು ನನಗಾಗಿಯೇ ಬಂದಿದ್ದೀರಿ ಗುರುಗಳೇ ಎಂದರು ಗುರುಪ್ರಸಾದ್ ಬಗ್ಗೆ ಅಕುಲ್. ಈ ವಾರ ಬಿಗ್ ಬಾಸ್ ಕೊಟ್ಟ ಲಗ್ಜುರಿ ಬಜೆಟ್ ಟಾಸ್ಕ್ 'ತರ್ಲೆ ನನ್ ಮಕ್ಳು'.

ಬಿಗ್ ಬಾಸ್ ಮನೆ ಅಂಗನವಾಡಿಯಾಗಿ ಮಾರ್ಪಾಡಾಗುತ್ತದೆ. ಅಂದರೆ ಶಿಶುಪಾಲನಾ ಕೇಂದ್ರ. ಮನೆಯ ಕ್ಯಾಪ್ಟನ್ ಅಕುಲ್ ಸಹ ಟಾಸ್ಕ್ ನಲ್ಲಿ ಭಾಗವಹಿಸಬೇಕು. ಇಬ್ಬರು ಆಯಿಗಳಿರುತ್ತಾರೆ. ಉಳಿದ ಸದಸ್ಯರು ಮಕ್ಕಳ ತರಹ ನಟಿಸಬೇಕು.

ಮಕ್ಕಳಿಗೆ ಕೈತುತ್ತು ತಿನ್ನಿಸುವುದು. ಕಥೆಗಳನ್ನು ಹೇಳುವುದು, ಒಳ್ಳೆಯ ಬುದ್ಧಿವಾದ ಹೇಳುವುದು, ಅವರಿಗೆ ಬಟ್ಟೆ ಹಾಕುವುದು ಎಲ್ಲ ಕೆಲಸಗಳನ್ನೂ ಆಯಿಗಳು ಮಾಡಬೇಕು. ಆಯಿಗಳಾಗಿ ಶ್ವೇತಾ ಮತ್ತು ನೀತೂ ಎಂದು ಬಿಗ್ ಬಾಸ್ ತಿಳಿಸಿದರು. ಈಗ ಮಕ್ಕಳಾಟ ಶುರುವಾಯಿತು.

ಅಂಗನವಾಡಿಯ ತುಂಟ ಮಕ್ಕಳು

ಅನುಪಮಾ, ಗುರುಪ್ರಸಾದ್, ದೀಪಿಕಾ, ಅಕುಲ್ ಮತ್ತು ಸೃಜನ್ ತುಂಟಮಕ್ಕಳಾದರು. ಅಂಗನವಾಡಿಯ ವಿವರಗಳು ಹೀಗಿವೆ.. ಶಾಲೆಯ ಗಂಟೆ ಹೊಡೆದಾಗ ಶಾಲೆ ಆರಂಭವಾಗುತ್ತದೆ. ವೇಳಾಪಟ್ಟಿಯ ಪ್ರಕಾರ ಪಾಠಗಳನ್ನು ಮಾಡಬೇಕು. ಅಂಗನವಾಡಿಯ ಪ್ರಾಂಶುಪಾಲರು ನೀತೂ ಎಂದು ಬಿಗ್ ಬಾಸ್ ತಿಳಿಸಿದರು.

ಅಂಗನವಾಡಿಯ ಪ್ರಿನ್ಸಿಪಾಲ್ ನೀತೂ?

ಅಂಗವಾಡಿಗೂ ಒಬ್ಬ ಪ್ರಿನ್ಸಿಪಾಲ್ ಇರುತ್ತಾರೆ ಎಂಬುದು ಗೊತ್ತಾಗಿದ್ದೇ ಬಿಗ್ ಬಾಸ್ ಕಾರ್ಯಕ್ರಮದಲ್ಲಿ. ಇದು ಟಾಸ್ಕ್ ಆದಕಾರಣ ಈ ವಿಚಾರವನ್ನು ಸೀರಿಯಸ್ಸಾಗಿ ತೆಗೆದುಕೊಳ್ಳುವುದು ಅಷ್ಟು ಸರಿಯಲ್ಲ ಬಿಡಿ.

ತರ್ಲೆ ನನ್ನ ಮಕ್ಳ ಸಹವಾಹಸಕ್ಕೆ ಸುಸ್ತು

ಹಳ್ಳಿ ಮೇಷ್ಟ್ರೇ ಹಳ್ಳಿ ಮೇಷ್ಟ್ರೇ ಪಾಠ ಮಾಡಿ ಬನ್ನಿ ಎಂದು ಹಾಡು ಹೇಳುತ್ತಾ ಎಲ್ಲರೂ ಮಿಸ್ ರನ್ನು ಕರೆದರು. ಮಿಸ್ ನಿಮ್ಮನ್ನು ನೋಡುತ್ತಿದ್ದರೆ ಸಿಲ್ಕ್ ಸ್ಮಿತಾ ಜ್ಞಾಪಕಕ್ಕೆ ಬರ್ತಿದ್ದಾರೆ ಎಂದರು. ಒಟ್ಟಾರೆ ಅವರ ತರ್ಲೆಗಳನ್ನು ಶ್ವೇತಾ ಹಾಗೂ ನೀತೂ ನಿಭಾಯಿಸಲು ಪರದಾಡುವಂತಾಯಿತು.

ಸುಸು ಮಾಡಬೇಕು ಎಂದು ರಚ್ಚೆ ಹಿಡಿದ ಅಕುಲ್

ಸುಸು ಮಾಡಬೇಕು ಎಂದು ಅಕುಲ್ ರಚ್ಚೆ ಹಿಡಿದ. ಕಡೆಗೆ ಅವರನ್ನು ನೀತೂ ಮೇಡಂ ಬಾತ್ ರೂಮಿಗೆ ಕರೆದೊಯ್ದ ಸುಸು ಮಾಡಲು ಹೇಳಿದರು. ಅಯ್ಯೋ ನನಗೆ ಸುಸು ಮಾಡುವುದು ಗೊತ್ತಿಲ್ಲ ಟೀಚರ್ ಎಂದರು. ಒಟ್ಟಾರೆ ಅವರನ್ನು ಬಾತ್ ರೂಮಿನಿಂದ ಕರೆದುಕೊಂಡು ಬರುವಷ್ಟರಲ್ಲಿ ನೀತೂ ಮೇಡಂಗೆ ಸಾಕಪ್ಪಾ ಸಾಕು ಎನ್ನಿಸಿತ್ತು.

ಅಕುಲ್ ಗೆ ಚಡ್ಡಿ ಸರಿ ಮಾಡಿದ ನೀತೂ ಮೇಡಂ

ಅಕುಲ್ ಬಾಲಾಜಿ ಅಂತೂ ಸುಸು ಮಾಡಬೇಕು ಎಂದು ರಚ್ಚೆ ಹಿಡಿದು, ಬಟನ್ ಹೆಂಗೆ ತೆಗೆಯಬೇಕು ಎಂಬುದು ಗೊತ್ತಿಲ್ಲ ಟೀಚರ್ ಎಂದಾಗ ನೀತೂಗೆ ಏನು ಮಾಡಬೇಕೋ ದಿಕ್ಕುತೋಚದ ಪರಿಸ್ಥಿತಿ. ಕಡೆಗೆ ಚಡ್ಡಿ ಬಟನ್ ಹಾಕಿಕೊಳ್ಳದೆ ಅಕುಲ್ ಚಿಕ್ಕಮಕ್ಕಳಂತೆ ಬಂದರು. ಆಗ ಸ್ವತಃ ನೀತೂ ಅವರು ಚಡ್ಡಿ ಹಾಕಿದರು.

ಮಿಂಚೋ ಮಿಂಚೋ ನಕ್ಷತ್ರ

ಟ್ವಿಂಕಲ್ ಟ್ವಿಂಕಲ್ ಲಿಟ್ಲ್ ಸ್ಟಾರ್ ಹಾಡನ್ನು "ಮಿಂಚೋ ಮಿಂಚೋ ನಕ್ಷತ್ರ, ಬೇಗ ಬಾರೋ ನನ್ನತ್ರ, ಅಷ್ಟು ದೂರ ಏನ್ಮಾಡ್ತಿ ಬಂದು ಸೇರು ನನ್ನೊಡತಿ" ಎಂದು ಹಾಡಿದರು ಅನುಪಮಾ.

ಒಂದು ಎರಡು ಕಣ್ಣೆರಡು ಕುರುಡು

ಒಂದು ಎರಡು ಕಣ್ಣೆರಡು ಕುರುಡು, ಮೂರು ನಾಲ್ಕು ಬಾಯಿಗೆ ಮಣ್ಣಾಕು, ಐದು ಆರು ನಿನ್ನ ಡಕೋಟ ಕಾರು, ಏಳು ಎಂಟು ಕಿತ್ತೋಯ್ತ್ ನಂಟು, ಒಂಬತ್ತು ಹತ್ತು ಆ ತೂ ಆ ತೂ, ಒಂದರಿಂದ ಹತ್ತು ಈಗಿತ್ತು ಉಗಿಯುವ ಆಟವು ಮುಗಿದಿತ್ತು ಎಂದು ಒಂದು ಎರಡುನ್ನು ಸೃಜನ್ ಲೋಕೇಶ್ ಹೇಳಿದರು.

ಮುಗಿದ ತರ್ಲೆ ನನ್ ಮಕ್ಳ ಆಟ

ತರ್ಲೆ ನನ್ ಮಕ್ಳು ಮೊದಲ ಹಂತ ಮುಗಿದಿದೆ. ಬೆಳಗ್ಗೆ ಮತ್ತೆ ಆಟ ಆರಂಭವಾಗುತ್ತದೆ ಎಂದು ಬಿಗ್ ಬಾಸ್ ತಿಳಿಸಿದ್ದಾರೆ. ತರ್ಲೆ ನನ್ ಮಕ್ಳು ಟಾಸ್ಕ್ ನಿಂದ ನೀತೂ ಸುಸ್ತೋ ಸುಸ್ತು ಆಗಿದ್ದಾರೆ. ಪ್ಲೀಸ್ ಬಿಗ್ ಬಾಸ್ ನಮಗೂ ಯೂನಿಫಾರಂ ಕಳುಹಿಸಿ. ನಾವಿಬ್ಬರೂ ಮಕ್ಕಳಾಗುತ್ತೇ ಎಂದರು ಬಿಗ್ ಬಾಸ್ ಬಳಿ ವಿನಂತಿಸಿಕೊಂಡರು.

ಗುರುಪ್ರಸಾದ್ ಬಗ್ಗೆ ಗುಸುಗುಸು

ಗುರುಪ್ರಸಾದ್ ಬಗ್ಗೆ ಅನುಪಮಾ, ಶ್ವೇತಾ ಹಾಗೂ ಸೃಜನ್ ಅವರು ಪಿಸಪಿಸ ಎಂದು ಮಾತನಾಡಿಕೊಂಡರು. ಅವರು ಮನೆಗೆ ಬಂದಾಗ ಗ್ರೇಟ್ ರೆಸ್ಪೆಕ್ಟ್ ಇತ್ತು. ಆದರೆ ಹೋಗ್ತಾ ಹೋಗ್ತಾ ಅವರ ಬಗ್ಗೆ ಗೌರವ ಇಲ್ಲದಂತಾಗಿದೆ. ಅಯ್ಯೊ ಒಬ್ಬ ವ್ಯಕ್ತಿ ಹಿಂಗೂನಾ ಎಂದು ಅವರ ಬಗ್ಗೆ ಬೇಸರ ಬಂದುಬಿಟ್ಟಿದೆ ಎಂದರು ಅನುಪಮಾ. ಇದಕ್ಕೆಲ್ಲಾ ಒಂದೇ ಪರಿಹಾರ ಎಂದರೆ ಮುಖದಲ್ಲಿ ಸದಾ ನಗು ತುಂಬಿಕೊಂಡಿರುವುದು. ಅವರನ್ನು ಕಡೆಗಣಿಸುವುದು ಎಂದು ಅದಕ್ಕೆ ಪರಿಹಾರ ಸೂಚಿಸಿದರು ಸೃಜನ್.

ಗುರುಪ್ರಸಾದ್ ಗೆ ಪಾಠ ಕಲಿಸುವುದು ಹೇಗೆ?

ಗುರುಪ್ರಸಾದ್ ಅವರನ್ನು ಏನು ಮಾಡಬೇಕು ಎಂಬ ಬಗ್ಗೆ ಶ್ವೇತಾ ಹಾಗೂ ಸೃಜನ್ ಅವರು ರಗ್ಗು ಹೊದ್ದುಕೊಂಡೇ ಚರ್ಚಿಸಿದರು. ಆಗ ಸಮಯ ರಾತ್ರಿ ಮನೆಯ ದೀಪಗಳನ್ನು ಆರಿಸಲಾಗಿತ್ತು.

ಮಕ್ಕಳಾಟದ ಜೊತೆಗೆ ಅಸಲಿ ಆಟ

ಮನೆಯೊಂದು ಪಾಠಶಾಲೆಯಾಗಿ ಮಕ್ಕಳಾಟದ ಜೊತೆಗೆ ಅಸಲಿ ಆಟವೂ ನಡೆಯಿತು. ಈ ಶಾಲೆಯಲ್ಲಿ ಯಾರು ಎಷ್ಟು ಕಲೀತರೋ ಯಾರಿಗೆ ಎಷ್ಟು ಕಲಿಸಿದರೋ ಗೊತ್ತಾಗಲಿಲ್ಲ. ಒಟ್ಟಾರೆ ಎಲ್ಲರೂ ಮಕ್ಕಳಾಟವೋ ದೊಡ್ಡವರ ಆಟವೋ ಆಡುತ್ತಿದ್ದಾರೆ.

English summary
To commemorate the teacher's day in the Bigg Boss Kannada 2 house, participant were given a special kind of luxury budget task. The participant were given a chance to experience the work of a teacher who shape the character of children in schools.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada