»   » ಗುರುಪ್ರಸಾದ್ ಮುಡಿಗೆ ಜಳಕ ಮಾಡದ ಕೊಳಕ ಪ್ರಶಸ್ತಿ

ಗುರುಪ್ರಸಾದ್ ಮುಡಿಗೆ ಜಳಕ ಮಾಡದ ಕೊಳಕ ಪ್ರಶಸ್ತಿ

Posted By:
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಪಟ್ಟಕ್ಕಾಗಿ ಹಗಲು ರಾತ್ರಿ ಮನೆಯ ಸದಸ್ಯರು ಕಂಬ ಹಿಡಿದು ನಿಲ್ಲುವ ಹೋರಾಟವನ್ನು ಮುಂದುವರೆಸಿದರು. ಮಧ್ಯರಾತ್ರಿ ಮೂರು ಗಂಟೆಯಾದರೂ ಕಂಬ ಹಿಡಿದೇ ನಿಂತ ಮನೆಯ ಸದಸ್ಯರು ಜಪ್ಪಯ್ಯ ಎಂದರೂ ಕಂಬ ಬಿಟ್ಟು ಇಳಿಯಲ್ಲಿಲ್ಲ.

ಟಾಸ್ಕ್ ನ ನಿಭಾಯಿಸುತ್ತಿರುವ ಅನುಪಮಾ ಅವರ ಕೈಯಲ್ಲಿ ಸೃಜನ್ ಶೂ ಲೇಸ್ ಕಟ್ಟಿಸಿಕೊಂಡ ಎಂದು ಕ್ಯಾತೆ ತೆಗೆದರು ಅಕುಲ್ ಬಾಲಾಜಿ. ಸೃಜನ್ ರೂಲ್ ಬ್ರೇಕ್ ಮಾಡಿದ ಎಂದು ಅವರು ಮಧ್ಯರಾತ್ರಿಯಲ್ಲಿ ಸ್ವಲ್ಪ ಗದ್ದಲ ಎಬ್ಬಿಸಿದರು.

ಬಳಿಕ ತಾವು ಹಾಗೆ ಮಾಡಲು ಕಾರಣ ಏನಿತ್ತು ಎಂಬುದನ್ನೂ ಹೇಳಿದರು. ಎಲ್ಲರಿಗೂ ನಿದ್ದೆ ಬರುತ್ತಿತ್ತು, ಅದರಿಂದ ಹೊರಬರಲು ತಾವು ಇಲ್ಲದ ಜಗಳ ಮಾಡಬೇಕಾಯಿತು ಎಂದರು. ಎಪ್ಪತ್ತನಾಲ್ಕನೇ ದಿನ ಕೆಲವು ರೋಚಕ ಬೆಳವಣಿಗೆಗಳು ಮನೆಯಲ್ಲಿ ನಡೆದವು.

ಕಂಬದಿಂದ ಉರುಳಿದ ಒಂದೊಂದೇ ವಿಕೆಟ್

ಮುಂಜಾನೆ 4 ಗಂಟೆಯಾದರೂ ಯಾರೂ ಜಪ್ಪಯ್ಯ ಅನ್ನಲಿಲ್ಲ. ಸಮಯ 4.30ಕ್ಕೆ ಸರಿಯಾಗಿ ದೀಪಿಕಾ ಕಾಮಯ್ಯ ಇನ್ನು ತಮ್ಮಿಂದಾಗದು ಎಂದು ಕಂಬ ಬಿಟು ಇಳಿದರು. ಮುಂಜಾನೆ 7 ಗಂಟೆಗೆ ಇನ್ನು ತಮ್ಮ ಕೈಯಲ್ಲಿ ಆಗಲ್ಲ ಎಂದು ನೀತೂ ಸಹ ಕಂಬ ಬಿಟ್ಟು ಇಳಿದರು.

ಕುಂಟುತ್ತಾ ನಡೆದಾಡಿದ ದೀಪಿಕಾ, ನೀತೂ

ಬಿಗ್ ಬಾಸ್ ಪ್ಲೀಸ್ ಡಾಕ್ಟರ್ ಅವರನ್ನು ಮೀಟ್ ಬೇಕು ಎಂದರು. ತಮ್ಮ ಕಾಲಿಗೆ ಚಿಕಿತ್ಸೆ ನೀಡಲು ವಿನಂತಿಸಿಕೊಂಡರು ನೀತೂ ವಿನಂತಿಸಿಕೊಂಡರು. ನೆಲದ ಮೇಲೆ ಕಾಲು ಇಡಕ್ಕೆ ಆಗುತ್ತಿಲ್ಲ ಎಂದು ನೀತೂ, ದೀಪಿಕಾ ಕುಂಟುಕೊಂಡೇ ನಡೆದಾಡಿದರು.

ಕೊನೆಯವರೆಗೂ ಸ್ಪರ್ಧೆಯಲ್ಲಿ ಮೂವರು

ಇದು ಟಫೆಸ್ಟ್ ಟಾಸ್ಕ್ ಎಂದ ಗುರುಪ್ರಸಾದ್ ಬಣ್ಣಿಸಿದರು. ಸಮಯ ಸರಿಯುತ್ತಿದ್ದಂತೆ ಒಬ್ಬೊಬ್ಬರಾಗಿ ಕಂಬದಿಂದ ಕೆಳಗೆ ಜಿಗಿದರು. ಕಡೆಯವರೆಗೂ ಕಂಬ ಹಿಡಿದುಕೊಂಡೇ ನಿಂತಿದ್ದವರು ಅಕುಲ್ ಬಾಲಾಜಿ, ಸೃಜನ್ ಲೋಕೇಶ್ ಹಾಗೂ ಶ್ವೇತಾ ಚೆಂಗಪ್ಪ.

ಕಡೆಗೆ ಆಟ ಬಿಟ್ಟುಕೊಟ್ಟ ಅಕುಲ್, ಸೃಜನ್

ಕಡೆಗೆ ಆಟ ಬಿಟ್ಟುಕೊಟ್ಟ ಅಕುಲ್ ಬಾಲಾಜಿ ಕಂಬದಿಂದ ಜಿಗಿದರು. ಕಡೆಗೆ ಸೃಜನ್ ಅವರೂ ಕಂಬದಿಂದ ಜಿಗಿದು ಶ್ವೇತಾ ಚೆಂಗಪ್ಪ ಅವರಿಗೆ ಆಟವನ್ನು ಕ್ಯಾಪ್ಟನ್ಸಿಯನ್ನು ಬಿಟ್ಟುಕೊಟ್ಟರು. ಇಬ್ಬರೂ ಮಾನವೀಯತೆ ಮೆರೆದು ಆಟವನ್ನು ಬಿಟ್ಟುಕೊಡುವ ಮೂಲಕ ಸ್ಪರ್ಧೆಯಲ್ಲಿ ಶ್ವೇತಾ ಅವರನ್ನು ಗೆಲ್ಲಿಸಿದರು.

ಬಿಗ್ ಬಾಸ್ ಮನೆಯ ದೊಡ್ಡ ಮಂದಿ ಸ್ಪರ್ಧೆ

ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಪ್ರಶಸ್ತಿ ಪ್ರಧಾನ ಸಮಾರಂಭ ಅದುವೇ "ಬಿಗ್ ಬಾಸ್ ಮನೆಯ ದೊಡ್ಡ ಮಂದಿ" ಏರ್ಪಡಿಸಿದರು. ಅದಕ್ಕೂ ಮುನ್ನ ನಾನು ಮೂರ್ಛೆ ಬೀಳುವವರೆಗೂ ನಿಂತುಕೊಳ್ಳುತ್ತಿದ್ದೆ. ಆದರೆ ಅಕುಲ್ ಬಾಲಾಜಿ ಮತ್ತು ಉಳಿದವರು ಏನೋ ಚರ್ಚಿಸುತ್ತಿದ್ದರಿಂದ ನಾನು ನನ್ನ ಸಾಮರ್ಥ್ಯ ಪರೀಕ್ಷಿಸಲೇಬೇಕಾಗಿತ್ತು ಎಂದು ಹೇಳಿದರು ಸೃಜನ್.

ಹೊಸ ಕ್ಯಾಪ್ಟನ್ ಆಗಿ ಶ್ವೇತಾ ಚೆಂಗಪ್ಪ ಆಯ್ಕೆ

ಅಕುಲ್ ಬಾಲಾಜಿ ಸಹ ಈಗಾಗಲೆ ತಾನು ಕ್ಯಾಪ್ಟನ್ ಆಗಿದ್ದೇನೆ. ಮತ್ತೊಮ್ಮೆ ಕ್ಯಾಪ್ಟನ್ ಪಟ್ಟ ತಮಗೆ ಬೇಕಾಗಿಲ್ಲ. ಮುಖ್ಯವಾಗಿ ಶ್ವೇತಾ ಚೆಂಗಪ್ಪ ಅವರಿಗೆ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ. ಒಬ್ಬ ಮಹಿಳೆಗೆ ತಾವು ಈ ಪಟ್ಟವನ್ನು ಬಿಟ್ಟುಕೊಡುತ್ತಿರುವುದಾಗಿ ಹೇಳಿಕೊಂಡರು.

ಗುರುಗೆ ಜಳಕ ಮಾಡದ ಕೊಳಕ ಪ್ರಶಸ್ತಿ

ಚೆಂದುಳ್ಳಿ ಚೆಲುವೆ ಪ್ರಶಸ್ತಿ ಶ್ವೇತಾ ಚೆಂಗಪ್ಪ ಪಾಲಾದರೆ, ಕೋಲ್ಗೇಟ್ ಮೋಹಕ ನಗು ಪ್ರಶಸ್ತಿ ನೀತೂ ಶೆಟ್ಟಿ ಕೊರಳಿಗೆ ಬಿತ್ತು. ಫಾಗ್ ಜಳಕ ಮಾಡದ ಕೊಳಕ ಪ್ರಶಸ್ತಿಯನ್ನು ಪಡೆದರು ಗುರುಪ್ರಸಾದ್. ಈ ಮನೆಗೆ ಬಂದಾಗಿನಿಂದ ಬಹುಶಃ ಮೂರು ನಾಲ್ಕು ಸಲ ಸ್ನಾನ ಮಾಡಿರಬೇಕು ಅಷ್ಟೇ ಎಂದು ಪ್ರಶಸ್ತಿಯನ್ನು ಸ್ವೀಕರಿಸಿದ ಗುರು ಹೇಳಿದರು.

ಡ್ರಾಮಾ ಕ್ವೀನ್ ಪ್ರಶಸ್ತಿತೆ ಭಾಜನರಾದ ಶ್ವೇತಾ

ಬಳಿಕ ಸೋಪ್ ಹಾಕ್ಕೊಳ್ಳೋ ಮೈ ಉಜ್ಜಿಕೊಳ್ಳೋ ಬಾಗ್ಲಾಕಿಕೊಂಡು ಸ್ನಾನನೇ ಮಾಡ್ಕೊಳ್ಳೋ... ಪೌಡ್ರ್ ಹಾಕ್ಕೊಳ್ಳೋ ತಲೆ ಬಾಚ್ಕೊಳ್ಳೋ ಎಂಬ ಹಾಡಿಗೆ ಶ್ವೇತಾ ಚೆಂಗಪ್ಪ ಜೊತೆ ಗುರು ನರ್ತಿಸಿದರು. ಇನ್ನೊಂದು ಪ್ರಶಸ್ತಿ ಊಸರವಳ್ಳಿ ಅವಾರ್ಡ್ ಸಹ ಗುರುಪ್ರಸಾದ್ ಪಾಲಾಯಿತು. ಡ್ರಾಮಾ ಕ್ವೀನ್ ಪ್ರಸಸ್ತಿ ಶ್ವೇತಾ ಚೆಂಗಪ್ಪ. ಮೂಗು ತೂರ್ಸೋ ಮಹರಾಯ ಪ್ರಶಸ್ತಿ ಸಹ ಪಡೆದರು ಗುರುಪ್ರಸಾದ್.

English summary
The quest for the post of house captain took a very tiring turn for the participants. While Guruprasad gave up very early, the rest kept on with the task. It was one of the most difficult task given so far and the participants were soon facing lot of stress and pain in the legs. Bigg Boss Kannada 2 day 75 highlights.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada