»   » ತನ್ನಪ್ಪನಿಗೆ ವಿಷವಿಕ್ಕಿದ್ದು ಅವಳೇ ಎಂದ ಆದಿ ಲೋಕೇಶ್

ತನ್ನಪ್ಪನಿಗೆ ವಿಷವಿಕ್ಕಿದ್ದು ಅವಳೇ ಎಂದ ಆದಿ ಲೋಕೇಶ್

By: ಉದಯರವಿ
Subscribe to Filmibeat Kannada

"ಜಗವೇ ಒಂದು ರಣರಂಗ ಧೈರ್ಯ ಇರಲಿ ನಿನ್ನ ಸಂಗ..." ಎಂಬ ಹಾಡಿನೊಂದಿಗೆ ಬಿಗ್ ಬಾಸ್ ಒಂಭತ್ತನೇ ದಿನ ಆರಂಭವಾಯಿತು. ಈ ಬಾರಿ ಮನೆಯಲ್ಲಿ ಸ್ವಲ್ಪ ಗದ್ದಲ ಜೋರಾಗಿಯೇ ನಡೆಯಿತು. ಬಿಗ್ ಬಾಸ್ ಈ ವಾರದ ಲಗ್ಜುರಿ ಬಜೆಟ್ ಟಾಸ್ಕ್ ನೀಡಿದರು.

ಇನ್ನೊಂದು ಕಡೆ ಲಯ ಕೋಕಿಲ, ಮಯೂರ್ ಪಟೇಲ್ ಅವರು ಆದಿ ಲೋಕೇಶ್ ಅವರ ತಂದೆಯ ವಿಚಾರವನ್ನು ಪ್ರಸ್ತಾಪಿಸಿದರು. "ನಿಮ್ಮ ಡ್ಯಾಡಿಗೆ ಏನಾಗಿತ್ತೋ, ಹಾರ್ಟ್ ಅಟ್ಯಾಕಾ ಎಂದು ಕೇಳಿದರು ಮಯೂರ್ ಪಟೇಲ್. [ಬಿಗ್ ಬಾಸ್ ನಲ್ಲಿ ನಡೀತಿದೆಯಾ ಕಣ್ಣಾಮುಚ್ಚಾಲೆ?]

ಆಗ ಆದಿ ಮಾತನಾಡುತ್ತಾ, ಇಲ್ಲ ಹೀ ವಾಸ್ ಕಿಲ್ಲಡ್ ಎಂದರು. ಹೌದಾ ಎಂಬಂತೆ ಮಯೂರ್ ಅಚ್ಚರಿ ವ್ಯಕ್ತಪಡಿಸಿದರು. ಹೆಂಗೆ ಎಂದಾಗ ಅವರು ತಮ್ಮ ತಂದೆ ಮೈಸೂರು ಲೋಕೇಶ್ ಬಗ್ಗೆ ಹೇಳಿದ ಕಥೆ ತುಂಬ ಇಂಟರೆಸ್ಟಿಂಗ್ ಆಗಿದೆ ಓದಿ. [ಆದಿ ಲೋಕೇಶ್ ಅಸಲಿ ಬಣ್ಣ ಟಿವಿಯಲ್ಲಿ ಬಯಲು]

ಮೈಸೂರು ಲೋಕೇಶ್ ಗೆ ಅಫೇರ್ ಇತ್ತು

ಅವರಿಗೆ ಅಫೇರ್ ಇತ್ತ್ತು. ಅದು ಅಮ್ಮನಿಗೆ ಗೊತ್ತಾಯಿತು. ಆಗ ಅವರು ಎಲ್ಲಿ ಹೋದರೂ ಜೊತೆಗೆ ಹೋಗೋದು, ನನ್ನನ್ನು ನಮ್ಮ ಅಕ್ಕನನ್ನು ಕಳುಸುವುದು ಮಾಡುತ್ತಿದ್ದರು. ಆಗ ಅವಳು ಡಿಸೈಡ್ ಮಾಡಿದಳು ನನಗೂ ಸೇಫ್ಟಿ ಇರಲ್ಲ, ನನಗೆ ಸಿಗಬಾರದ್ದು ಇನ್ಯಾರಿಗೂ ಸಿಗಬಾರದು ಎಂದುಕೊಂಡು ನಮ್ಮಪ್ಪನ ಸಾವಿಗೆ ಕಾರಣರಾದರು ಎಂದರು.

ಡಿಂಗ್ರಿ ನಾಗರಾಜ್ ಹೆಂಡ್ತಿ ಎಂದ ಆದಿ

ಯಾರದು ಎಂದಾಗ ಡಿಂಗ್ರಿ ನಾಗರಾಜ್ ಹೆಂಡ್ತಿ ಎಂದರು. ಅದಕ್ಕೆ ಹ್ಞಾಂ ಡಬ್ಬಿಂಗ್ ಆರ್ಟಿಸ್ಟ್ ಎಂದು ಮಯೂರ್ ಉದ್ಗಾರ ತೆಗೆದರು. ನಮ್ಮ ಡ್ಯಾಡಿಯನ್ನು ಆಸ್ಪತ್ರೆಗೆ ಕರೆದೊಯ್ದು ನಾವಿಬ್ಬರೂ ಸಾಯೋಣ ಎಂಬಂತೆ ನಾಟಕ ಮಾಡಿದಳು. ನಮಗೆ ಈ ಪ್ರಪಂಚನೇ ಬೇಡ ಎಂದು ನಂಬಿಸಿ ಒಂದಷ್ಟು ಕವಿತೆಗಳನ್ನೆಲ್ಲಾ ಬರೆದಿದ್ದರು.

ತನ್ನಪ್ಪನಿಗೆ ವಿಷ ಹಾಕಿ ಸಾಯಿಸಿದಳು

ಈಯಪ್ಪ ನನ್ನ ತರಹನೇ ಸ್ವಲ್ಪ ಎಮೋಷನಲ್. ಆಗ ಚೆನ್ನಾಗಿ ಕುಡಿಸಿದ್ದಾಳೆ. ನೆಕ್ಸ್ಟ್ ಬಾಟ್ಲಿಗೆ ವಿಷ ಹಾಕಿದ್ದಳು. ಆಗ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಬಾಯಿಯನ್ನು ಅಗಲಿಸಿ ಅವರಿಗೆ ರಾಡ್ ಹಾಕಿ ಆಕ್ಸಿಜನ್ ಕೊಡಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಅದನ್ನು ತೆಗೆದ ಕೂಡಲೆ ಅವರು ಪ್ರಾಣ ಬಿಟ್ಟರು.

ಆದರೆ ಅವಳು ಮಾತ್ರ ಕುಡಿದಿರಲಿಲ್ಲ

ಅವಳೇನು ಮಾಡಿದ್ದಳೆಂದರೆ ಕುಡೀತಿನಿ ಎಂದು ಹೇಳಿ ಎಲ್ಲವನ್ನೂ ಎದೆ ಮೇಲೆ ಸುರಿದುಕೊಂಡಿದ್ದಳು. ಆಯಮ್ಮ ಎದೆಯಲ್ಲಾ ಬರ್ನ್ ಆಗಿತ್ತು. ಅವರು ಇನ್ನೂ ಬದುಕಿದ್ದಾರಾ ಎಂದು ಮಯೂರ್ ಕೇಳಿದ್ದಕ್ಕೆ. ಬಹುಶಃ 1999, 2000 ಇರಬೇಕು ಜಡ್ಜ್ ಮೆಂಟ್ ಆಗಬೇಕಿತ್ತು ಆಗ ಸತ್ತು ಹೋದಳು. ಆಗ ಆತ್ಮಹತ್ಯೆ ಮಾಡಿಕೊಂಡಳು. ಆತ್ಮಹತ್ಯೆ ಎಂದರೆ ಆಕೆಗೆ ಜಾಂಡೀಸ್ ಇತ್ತು. ಚೆನ್ನಾಗಿ ಕುಡಿದಳು ಸತ್ತಳು.

ತಮ್ಮ ತಾಯಿ ಈ ಮಟ್ಟಕ್ಕೆ ತಂದಿದ್ದಾರೆ

ಆಗ ಬಂಗಾರಪ್ಪ ಮುಖ್ಯಮಂತ್ರಿ ಆಗಿದ್ದರು, ರೇವಣ ಸಿದ್ದಯ್ಯ ಆಗ ಸಿಸಿಬಿಯಲ್ಲಿದ್ದರು. ಅವರೇ ಎಲ್ಲಾ ಬಗೆಹರಿಸಿದ್ದು. ನಮಗೆಲ್ಲಾ ಮುಖ ಎತ್ತಿಕೊಂಡು ಓಡಾಡಕ್ಕೆ ಆಗುತ್ತಿರಲಿಲ್ಲ. ಅದೆಲ್ಲವನ್ನೂ ನಮ್ಮ ತಾಯಿ ಫೇಸ್ ಮಾಡಿ ನಮ್ಮನ್ನು ಈ ಮಟ್ಟಕ್ಕೆ ತಂದಿದ್ದಾರೆ ಎಂದು ಆದಿ ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ರೋಹಿತ್ ಗೆ ಪಾತ್ರೆ ತೊಳೆಯುವ ಕೆಲಸದಿಂದ ಮುಕ್ತಿ

ಏತನ್ಮಧ್ಯೆ ಪಾತ್ರೆ ತೊಳೆಯುವ ಕೆಲಸದಿಂದ ರೋಹಿತ್ ಗೆ ಮುಕ್ತಿ ನೀಡಿದರು ಬಿಗ್ ಬಾಸ್. ಈ ವಾರದ ಲಗ್ಜುರಿ ಬಜೆಟ್ ಟಾಸ್ಕ್ ಹೆಸರು 'ಸಂಪತ್ತಿಗೆ ಸವಾಲ್'.
ಅದೃಷ್ಟವಂತರು ಹಾಗೂ ನತದೃಷ್ಟವಂತರ ನಡುವೆ ಈ ಆಟ.

ಸಂಪತ್ತಿಗೆ ಸವಾಲ್ ಲಗ್ಜುರಿ ಬಜೆಟ್ ಟಾಸ್ಕ್

ಅದೃಷ್ಟವಂತರು ಮನೆಯ ಯಾವ ಕೆಲಸ ಮಾಡದೆ ಆರಾಮವಾಗಿರಬಹುದು. ಬಿಗ್ ಬಾಸ್ ನೀಡುವ ಐಶಾರಾಮಿ ಊಟ ವಸತಿಗಳನ್ನು ಅನುಭವಿಸಬಹು. ಆದರೆ ನತದೃಷ್ಟರಿಗೆ ಈ ಎಲ್ಲಾ ಸೌಲಭ್ಯಗಳಿರುವುದಿಲ್ಲ. ಅವರು ಒಂಥರಾ ಅಬ್ಬೆಪಾರಿಗಳಿದ್ದಂತೆ. ಮನೆಯ ಹೊರಗೆ ಮಲಗುವುದು, ಅಲ್ಲೆ ಅಡುಗೆ, ಕೆಲಸದವರ ತರಹ ಇರಬೇಕು.

ಮಕ್ಕಳಾಟದಂತೆ ಸಾಗಿದ ಆಟ

ಅದೃಷ್ಟವಂತರ ತಂಡಕ್ಕೆ ಅಕುಲ್ ಲೀಡರ್ ಆದರೆ ನತದೃಷ್ಟವರಂತರ ಲೀಡರ್ ಆದಿ ಲೋಕೇಶ್. ಮನೆಯಲ್ಲಿ ಕೀಲಿ ಕೈಯನ್ನು ಕದಿಯುವ ಆಟ ಮುಂದುವರೆದಿತ್ತು. ಒಮ್ಮೆ ನತದೃಷ್ಟರು ಮೇಲುಗೈ ಸಾಧಿಸಿದರೆ ಇನ್ನೊಮ್ಮೆ ಅದೃಷ್ಟವಂತರು ಮೇಲುಗೈ ಸಾಧಿಸುತ್ತಿದ್ದರು. ಈ ಟಾಸ್ಕ್ ಒಂಥರಾ ಮಕ್ಕಳಾಟದಂತೆ ಮುಂದುವರೆದಿತ್ತು.

ಅರಚಾಟ ಕಿರುಚಾಟದಲ್ಲೇ ಕಳೆದ ದಿನ

ಕ್ಯಾಪ್ಟನ್ ಆಗಿ ಸೃಜನ್ ಎಲ್ಲವನ್ನೂ ಮೌನವಾಗಿ ಸಹಿಸಿಕೊಳ್ಳುವಂತಹ ಪರಿಸ್ಥಿತಿ. ಅರಚಾಟ ಕಿರುಚಾಟ ಮಾಡುವುದರಲ್ಲೇ ಟಾಸ್ಕ್ ಕಳೆದುಹೋಯಿತು. ಈ ಆಟದಲ್ಲಿ ಮಯೂರ್ ಪಟೇಲ್ ಬಿದ್ದು ಗಾಯ ಮಾಡಿಕೊಂಡರು. ಒಟ್ಟಾರೆಯಾಗಿ ಮಯೂರ್, ಲಯ, ದೀಪಿಕಾ, ಹರ್ಷಿಕಾ, ಶಕೀಲಾ ಎಲ್ಲರ ನೀರಸ ಪ್ರದರ್ಶನ ಮುಂದುವರೆದಿದೆ.

English summary
Bigg Boss Kannada 2, day 9 highlights. Aadhi Lokesh remembers his fathers death. He was killed, he'd love affair with Dingri Nagaraj wife, Aadhi said. This week Bigg Boss give luxury budget task called 'Sampattige Saval'.
Please Wait while comments are loading...