»   » ಬಿಗ್ ಬಾಸ್ ಮನೆಯ ಅಡುಗೆ ಕೋಣೆಗೆ ಬೀಗ

ಬಿಗ್ ಬಾಸ್ ಮನೆಯ ಅಡುಗೆ ಕೋಣೆಗೆ ಬೀಗ

By: ಉದಯರವಿ
Subscribe to Filmibeat Kannada

ಬಿಗ್ ಬಾಸ್ ಮನೆಯಲ್ಲಿ ಅಸಲಿ ಆಟ ಈಗ ಶುರುವಾಗಿದೆ. ಕಳೆದ ಹದಿಮೂರು ವಾರಗಳಿಂದ ಬಿಗ್ ಬಾಸ್ ಮನೆಯ ಎಲ್ಲಾ ಐಶಾರಾಮಿ ಸೌಲಭ್ಯಗಳನ್ನು ಅನುಭವಿಸಿದ ಮನೆಯ ಸದಸ್ಯರು ಈಗ ಒಂದೊಂದೇ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಗ್ರ್ಯಾಂಡ್ ಫಿನಾಲೆಗೆ ಇನ್ನು ಉಳಿದಿರುವುದು ಕೇವಲ ಮೂರೇ ದಿನಗಳು. ಬಾತ್ ರೂಮು, ಬೆಡ ರೂಮು ಬಂದ್ ಆದ ಮೇಲೆ ಇದೀಗ ಅಡುಗೆ ಮನೆಗೂ ಬಿಗ್ ಬಾಸ್ ಬೀಗ ಜಡಿದಿದ್ದಾರೆ. ಇದೇ ಸಂದರ್ಭದಲ್ಲಿ ಬಿಗ್ ಬಾಸ್ ಮನೆಯ ಸದಸ್ಯರಿಗೆ ವಿಶೇಷ ಟಾಸ್ಕ್ ನೀಡಿದರು ಅದುವೇ 'ಸತ್ಯ ದರ್ಶನ'.

ಈ ಟಾಸ್ಕ್ ಪ್ರಕಾರ ಶ್ವೇತಾ ಚೆಂಗಪ್ಪ ಅವರಿಗೆ ಮನೆಯಲ್ಲಿ ನಡೆದ ಕೆಲವು ವಿಡಿಯೋಗಳನ್ನು ತೋರಿಸಲಾಯಿತು. ಇದಕ್ಕಾಗಿ ಉಳಿದ ಸದಸ್ಯರು ಕಾಲುಗಳ ಅಡಿಯಿಂದ ಕೈಗಳನ್ನು ತೂರಿಸಿ ಕಿವಿಗಳನ್ನು ಹಿಡಿದುಕೊಳ್ಳವ ಶಿಕ್ಷೆ ಅನುಭವಿಸಬೇಕಾಯಿತು. ಆಗ ಶ್ವೇತಾ ಅವರು ವಿಡಿಯೋವನ್ನು ಎಂಜಾಯ್ ಮಾಡಿದರು. ತೊಂಬತ್ತಮೂರನೇ ದಿನದ ಹೈಲೈಟ್ಸ್.

ವಿಡಿಯೋ ಕ್ಲಿಪ್ಪಿಂಗ್ ನೋಡಲು ಉಳಿದವರಿಗೆ ಶಿಕ್ಷೆ

ಅದರಂತೆ ಎಲ್ಲರೂ ಕಾಲುಗಳ ಅಡಿಯಿಂದ ಕೈಗಳನ್ನು ತೂರಿಸಿ ಎರಡೂ ಕಿವಿಗಳನ್ನು ಹಿಡಿದುಕೊಂಡರು. ಶ್ವೇತಾ ಅವರ ತಾಯಿ ಬಂದಿದ್ದ ವಿಡಿಯೋ ಕ್ಲಿಪ್ಪಿಂಗ್, ಆದಿ ಮತ್ತು ನೀತೂ ಅವರು ಶ್ವೇತಾ ಅವರ ಬಗ್ಗೆ ಮಾತನಾಡಿಕೊಂಡಿದ್ದು, ಟಾಸ್ಕ್ ಒಂದರ ವಿಡಿಯೋ ಕ್ಲಿಪ್ಪಿಂಗ್ ತೋರಿಸಲಾಯಿತು.

ಮದ್ದೂರು ವಡೆ ಆಸೆಗೆ ಬಿಗ್ ಬಾಸ್ ತಣ್ಣೀರು

ಮನೆಯಲ್ಲಿ ಎಲ್ಲರೂ ಮದ್ದೂರು ವಡೆ ತಿನ್ನಬೇಕು ಎಂದು ಬಯಸಿದರು. ಆದರೆ ಬಿಗ್ ಬಾಸ್ ಅವರೆಲ್ಲರ ಆಸೆಗೆ ತಣ್ಣೀರೆರಚಿ ಅಡುಗೆ ಮನೆಗೇ ಬೀಗ ಜಡಿದರು. ಬಿಗ್ ಬಾಸ್ ಇದು ಮೂಲಸೌಲಭ್ಯ. ಇದನ್ನು ನಾನು ಖಂಡಿಸುತ್ತೇವೆ ಎಂದು ಎಲ್ಲರೂ ಹೇಳಿದರು. ಆದರೂ ಮನೆಯ ಸರಳುಗಳಿಂದ ತೂರಿ ಟಿಶ್ಯೂ ಪೇಪರ್ ತೆಗೆದುಕೊಂಡು ಬಂದರು ಸೃಜನ್.

ಅಡುಗೆ ಮನೆಗೆ ಪ್ರವೇಶ ನಿಷಿದ್ಧ

ಕಿಚನ್ ಏರಿಯಾದಲ್ಲಿರುವ ಯಾವುದೇ ವಸ್ತುಗಳನ್ನು ಮುಟ್ಟುವಂತಿಲ್ಲ. ಒಂದು ವೇಳೆ ಹಾಗೇನಾದರೂ ಮಾಡಿದರೆ ಕೊನೆಯ ದಿನಗಳ ಮೇಲೆ ವ್ಯತಿರಿಕ್ತ ಪರಿಣಾಮಗಳಾಗುತ್ತವೆ ಎಂದು ಎಚ್ಚರಿಸಿದರು. ಅದರಂತೆ ಅಲ್ಲಿಂದ ತಂದ ವಸ್ತುಗಳನ್ನು ಅಲ್ಲೇ ಇಡಬೇಕು ಎಂದು ಆದೇಶಿಸಿದರು. ಸೃಜನ್ ಮತ್ತು ಅಕುಲ್ ಅವರಿಗೂ ವಿಶೇಷ ಎಚ್ಚರಿಕೆ ನೀಡಲಾಯಿತು.

ಏಕದಿನದ ಟಾಸ್ಕ್ ಸ್ವಾಭಿಮಾನಕ್ಕೆ ಸಲಾಮ್

ಏತನ್ಮಧ್ಯೆ ಬಿಗ್ ಬಾಸ್ ಏಕ ದಿನದ ಟಾಸ್ಕ್ ನೀಡಿದರು. ಅದುವೇ 'ಸ್ವಾಭಿಮಾನಕ್ಕೆ ಸಲಾಮ್'. ಎಲ್ಲರೂ ತಮ್ಮ ಸ್ವಾಭಿಮಾನವನ್ನು ಬಿಂಬಿಸುವ ಬಾವುಟಗಳನ್ನು ತಯಾರಿಸಬೇಕು. ಅದು ಹೇಗೆ ತನ್ನ ಸ್ವಾಭಿಮಾನಕ್ಕೆ ಪ್ರತೀಕ ಎಂಬುದನ್ನು ಹೇಳಬೇಕು ಎಂದು ಹೇಳಿದರು.

ಎಲ್ಲರ ಕೈಯಲ್ಲೂ ಬಣ್ಣದ ಬಾವುಟ

ಎಲ್ಲರೂ ತಮ್ಮ ತಮ್ಮ ಬಾವುಟದ ಬಗ್ಗೆ ಉದ್ದುದ್ದ ಭಾಷಣ ಬಿಗಿದರು. ತನ್ನ ಬಾವುಟದ ಬಗ್ಗೆ ಶ್ವೇತಾ ಅವರು ಮಾತನಾಡುತ್ತಾ, ನನ್ನ ಹೃದಯದಲ್ಲಿರುವುದು ನಮ್ಮ ಕುಟುಂಬ, ನನ್ನ ಪತಿ ಹಾಗೂ ಸೃಜನ್ ಮತ್ತವರ ಪತ್ನಿ ಗ್ರೀಷ್ಮಾ ಎಂದರು.

ಶ್ವೇತಾ ಬಾವುಟ ಸೋಫಾಗೆ ಟಚ್

ಬಾವುಟವನ್ನು ಸದಾ ತಮ್ಮ ಜೊತೆಗೆ ಇಟ್ಟುಕೊಂಡಿರಬೇಕು. ಕೆಳಗೆ ಇಡುವಂತಿಲ್ಲ. ತಲೆಯಿಂದ ಮೇಲೇ ಇರುವಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು. ಮುಂಜಾನೆ ಹೊತ್ತಿಗೆ ಶ್ವೇತಾ ಅವರ ಧ್ವಜಸ್ತಂಭ ಸೋಫಾಗೆ ತಾಕುತ್ತಿತ್ತು. ಉಳಿದವರು ಅದನ್ನು ಹಾಗೆಯೇ ಹಿಡಿದು ಮಲಗಿದ್ದರು. ಈ ಟಾಸ್ಕ್ ನಲ್ಲಿ ಗೆದ್ದವರಿಗೆ ಬಿಗ್ ಬಾಸ್ ವಿಶೇಷ ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.

English summary
The finale of the Bigg Boss Kannada 2 is just a few days away. The four finalists are fighting for the coveted prize. To make life more difficult for the contestants, the Kitchen area of the house was blocked and sealed.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada