»   » 'ಬಿಗ್ ಬಾಸ್ ಕನ್ನಡ 2' ಮೊದಲ ವಾರದ ಹಿನ್ನೋಟ

'ಬಿಗ್ ಬಾಸ್ ಕನ್ನಡ 2' ಮೊದಲ ವಾರದ ಹಿನ್ನೋಟ

By: ಉದಯರವಿ
Subscribe to Filmibeat Kannada

ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ಎನ್ನಿಸಿಕೊಂಡಿರುವ 'ಬಿಗ್ ಬಾಸ್' ಎರಡನೇ ಆವೃತ್ತಿ ಮೊದಲ ಸೀಸನನ್ನು ಅನುಕರಿಸುವಂತಿದ್ದರೂ ಈ ಬಾರಿಯ ಶೋನಲ್ಲಿರುವ ಸ್ಪರ್ಧಿಗಳು ಪ್ರಮುಖ ಆಕರ್ಷಣೆಯಾಗಿದ್ದಾರೆ. ಇಲ್ಲಿದೆ ನೋಡಿ 'ಬಿಗ್ ಬಾಸ್ 2' ವಾರದ ಹಿನ್ನೋಟ.

ಮೊದಲ ದಿನ ಸ್ಪರ್ಧಿಗಳು ಇಡೀ ದಿನ ಜೋಡಿಯಾಗಿ ಇರುವಂತೆ ಟಾಸ್ಕ್ ನೀಡಲಾಗಿತ್ತು. ಈ ಟಾಸ್ಕ್ ಸ್ವಲ್ಪ ಕಷ್ಟವೆನಿಸಿದರೂ ಹಾಸ್ಯಭರಿತವಾಗಿತ್ತು ಮತ್ತು ಅದು ಪರಸ್ಪರರು ಅರ್ಥೈಸಿಕೊಂಡು ಬಾಂಧವ್ಯ ಬೆಸೆಯಲು ಅನುಕೂಲವಾಯಿತು. [ಮೊದಲ ವಾರ ಸಾಕಷ್ಟು ಮೋಜು, ಭೀತಿ, ಕಣ್ಣೀರು]

ಎರಡು ಮತ್ತು ಮೂರನೇ ದಿನ ಮನರಂಜನೆ ತುಂಬಿ ತುಳುಕುತ್ತಿತ್ತು. 'ಬಿಗ್ ಬಾಸ್ ತುಲಾಭಾರ ಸೇವೆ' ಟಾಸ್ಕ್ ನಲ್ಲಿ ಸ್ಪರ್ಧಿಗಳು ಜೋಡಿ ಜೋಡಿಯಾಗಿ ತಕ್ಕಡಿಯ ಒಂದೆಡೆ ಕುಳಿತು ಇನ್ನೊಂದೆಡೆ ಅವರ ಲಗೇಜ್ ಗಳನ್ನು ಇಟ್ಟು ತಕ್ಕಡಿಯು ಸಮತೂಕ ತೂಗುವಂತೆ ನೋಡಿಕೊಳ್ಳಬೇಕಾಗಿತ್ತು.

ಶ್ವೇತಾ ಚೆಂಗಪ್ಪ ಬೆರಳಿಗೆ ಗಾಯ

ಅದು ಯಾವುದೇ ಕಾರಣಕ್ಕೂ ಅಸಮತೋಲನಾಗಿ ನೆಲಕ್ಕೆ ತಾಗದಂತೆ ನೋಡಿಕೊಳ್ಳಬೇಕಾಗಿತ್ತು. ಸ್ಪರ್ಧಿಗಳು ನೀಡಿದ ಟಾಸ್ಕನ್ನು ಚಾಚೂ ತಪ್ಪದೇ ನಿರ್ವಹಿಸಲು ರಾತ್ರಿ ಪೂರ್ತಿ ಎಚ್ಚರವಾಗಿರಬೇಕಿತ್ತು. ಆದರೆ ಈ ಟಾಸ್ಕ್ ನಲ್ಲಿ ಶ್ವೇತಾ ಚೆಂಗಪ್ಪ ತಮ್ಮ ಬೆರಳಿಗೆ ಗಾಯ ಮಾಡಿಕೊಂಡರು.

ಕ್ಯಾಪ್ಟನ್ ಆಗಿ ಆಯ್ಕೆಯಾದ ಸೃಜನ್

ನಾಲ್ಕನೇ ದಿನ ಸ್ಪರ್ಧಿಗಳು ಅವರ ಮೊದಲ ನಾಯಕನನ್ನು ಆಯ್ಕೆ ಮಾಡಲು ವೋಟ್ ಮಾಡಿದರು. ಅವರು ಸೃಜನ್ ಮತ್ತು ಹರ್ಷಿಕಾರ ನಡುವೆ ಒಬ್ಬರನ್ನು ಆಯ್ಕೆ ಮಾಡಬೇಕಾಗಿತ್ತು. ಹೆಚ್ಚು ಜನರು ಸೃಜನ್ ಗೆ ವೋಟ್ ಮಾಡಿ ಕ್ಯಾಪ್ಟನ್ ಪಟ್ಟಕ್ಕೆ ಆಯ್ಕೆ ಮಾಡಿದರು.

ಶಕೀಲಾರ ಕನ್ನಡ ಮೇಷ್ಟ್ರು ಅಕುಲ್

ಬಿಗ್ ಬಾಸ್ ಮನೆಯ ಐಷಾರಾಮಿ ಬದುಕನ್ನು ಕ್ಯಾಪ್ಟನ್ ಅನುಭವಿಸಲು ಅವಕಾಶ ನೀಡಿತು. ಶಕೀಲಾರಿಗೆ ಕನ್ನಡ ಕಲಿಸುವ ಮೇಷ್ಟ್ರಾಗಿ ಅಕುಲ್ ಗೆ ಜವಾಬ್ದಾರಿ ನೀಡಲಾಯಿತು.

ಪ್ರಥಮ ಸ್ಥಾನಕ್ಕೆ ಅರ್ಹರಾದ ಶಕೀಲಾ

ಐದನೇ ದಿನಕ್ಕೆ ಸ್ಪರ್ಧಿಗಳು ತಮ್ಮ ಜೀವನದಲ್ಲಿ ತಾವು ಮಾಡಿದ ಸಾಧನೆಗಳನ್ನು ಒರೆಗೆ ಹಚ್ಚಿ ನೋಡಿ ತಮಗೆ ರೇಟಿಂಗ್ ನೀಡಿಕೊಳ್ಳಬೇಕಾಗಿತ್ತು, ಎಲ್ಲರೂ ಒಕ್ಕೊರಲಿನಿಂದ ಶಕೀಲಾ ಪ್ರಥಮ ಸ್ಥಾನಕ್ಕೆ ಅರ್ಹಳೆಂದು ಒಪ್ಪಿದರು.

ಮಧ್ಯರಾತ್ರಿವರೆಗೂ ಸೃಜನ್ ಗೆ ಶಿಕ್ಷೆ

ಅಲ್ಲದೆ ಮುಖ್ಯವಾಗಿ ಬಿಗ್ ಬಾಸ್ ಮನೆಯ ನಿಯಮಗಳನ್ನು ಉಲ್ಲಂಘಿಸಿದ್ದಕ್ಕೆ ಕ್ಯಾಪ್ಟನ್ ಸೃಜನ್ ಗೆ ಶಿಕ್ಷೆಯನ್ನು ವಿಧಿಸಲಾಯಿತು. ಸೃಜನ್ ಮಧ್ಯರಾತ್ರಿಯವರೆಗೂ ಪಂಜರದಲ್ಲಿಯೇ ಇರಬೇಕಾಯಿತು. ಇದು ಈ ಆವೃತ್ತಿಯ ಮೊದಲ ಶಿಕ್ಷೆಯಾಗಿರುತ್ತದೆ.

English summary
What happened in Bigg Boss Kannada season 2 in this week? Here is the Bigg Boss Kannada 2 first week flashback. Read the weekly synopsis. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada