»   » ಮೊದಲ ವಾರ ಸಾಕಷ್ಟು ಮೋಜು, ಭೀತಿ, ಕಣ್ಣೀರು

ಮೊದಲ ವಾರ ಸಾಕಷ್ಟು ಮೋಜು, ಭೀತಿ, ಕಣ್ಣೀರು

By: ಉದಯರವಿ
Subscribe to Filmibeat Kannada

ಕಳೆದ ಜೂನ್ 29 ರಂದು ಪ್ರಾರಂಭವಾದ 'ಬಿಗ್ ಬಾಸ್' ಕಾರ್ಯಕ್ರಮದ ದ್ವಿತೀಯ ಆವೃತ್ತಿಯು ಯಶಸ್ವಿಯಾಗಿ ಒಂದು ವಾರ ಪೂರೈಸಿದ್ದು ಸಾಕಷ್ಟು ಮನೋರಂಜನೆಯನ್ನು ಹೊತ್ತು ತಂದಿದೆ. ಒಂದಷ್ಟು ಕಣ್ಣೀರು, ಸ್ವಲ್ಪ ಭಯದೊಂದಿಗೆ ಕೆಲವೊಂದು ಟಾಸ್ಕ್ ಗಳು ಸ್ಪರ್ಧಿಗಳ ನೈಜ ಗುಣ- ಸ್ವಭಾವಗಳನ್ನು ತಿಳಿದುಕೊಳ್ಳಲು ಅನುವುಮಾಡಿಕೊಟ್ಟವು.

ಅದ್ದೂರಿಯಾಗಿ ಆರಂಭಗೊಂಡ ಕಾರ್ಯಕ್ರಮ ಸಾಕಷ್ಟು ಊಹಾಪೋಹಗಳಿಗೆ ತೆರೆ ಎಳೆದಂತೆ ಸ್ಪರ್ಧಿಗಳ ಹೆಸರನ್ನು ಅನಾವರಣಗೊಳಿಸಲಾಯಿತು. ಸೂಪರ್ ಸ್ಟಾರ್, ನಿರೂಪಕ, ಕಿಚ್ಚ ಸುದೀಪ್ ಎಲ್ಲ 14 ಸ್ಪರ್ಧಿಗಳನ್ನು ಸ್ವಾಗತಿಸಿ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳನ್ನು ಬಂಧಿತರನ್ನಾಗಿಸಿದರು.[ಅನಿತಾ ಭಟ್ 'ಎಲಿಮಿನೇಷನ್' ಮೊದ್ಲೆ ಲೀಕ್ ಆಗಿತ್ತೇಕೆ?]

ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಪಯಣ ಸಾಗಿದೆ. ಹಾಟ್ ಸೀಟ್ ಕೂಡಾ ರಿಸರ್ವ ಆಗಿದೆ. ಮುಂಬರುವ ದಿನಗಳಲ್ಲಿ ಸಾಕಷ್ಟು ತಿರುವುಗಳನ್ನು ಪಡೆಯುತ್ತಾ ಸಾಗುವ ನಿರೀಕ್ಷೆ ಮೂಡಿಸಿದೆ. ಇಲ್ಲಿದೆ ನೋಡಿ ಮೊದಲ ವಾರದ ವಾರೆ ನೋಟ. [ಕಿಚ್ಚಿರದ 'ಕಿಚ್ಚಿನ ಕಥೆ ಕಿಚ್ಚನ ಜತೆ' ಎಪಿಸೋಡು]

ಮೊದಲ ದಿನವೇ ನಾಮಿನೇಟ್ ಆದ ಶಕೀಲಾ

ಈಗಾಗಲೇ ಒಂದು ವಾರದಿಂದ ಎಲ್ಲ ಸ್ಪರ್ಧಿಗಳು ಪರಸ್ಪರರನ್ನು ಅರ್ಥೈಸಿಕೊಂಡು ಸ್ನೇಹದಿಂದಿರಲು ಪ್ರಾರಂಭಿಸಿದ್ದಾರೆ. ಜನಪ್ರಿಯ ಸ್ಪರ್ಧಿ ಶಕೀಲಾ ಕನ್ನಡ ಭಾಷೆ ತಿಳಿದಿಲ್ಲ ಎಂದು ಅವರನ್ನು ಮೊದಲನೇ ವಾರವೇ ಮನೆಯ ಸದಸ್ಯರು ಎಲಿಮಿನೇಷನ್ ಗೆ ಆಯ್ಕೆ ಮಾಡಿದ್ದು, ಆದರೆ ಈಗ ಅವರು ಇಂಗ್ಲಿಷ್ ನಲ್ಲಿಯೇ ಎಲ್ಲರೊಂದಿಗೆ ಮಾತನಾಡುತ್ತಿದ್ದಾರೆ ಮತ್ತು ಅದಕ್ಕೆ ತಕ್ಕ ತರ್ಜುಮೆ ಕೂಡಾ ಹಿಂದೆ ಸಾಗುತ್ತಿದೆ.

ಮೂರು ಟಾಸ್ಕ್ ಗಳು ಮುಗಿದಿವೆ ಇನ್ನೂ 97 ಇವೆ

ಈ ಆವೃತ್ತಿಯಲ್ಲಿ 100 ಟಾಸ್ಕ್ ಗಳನ್ನು ಯೋಜಿಸಿದ್ದು, ಅದರಲ್ಲಿ 3 ಟಾಸ್ಕ್ ಗಳು ಮೊದಲ ವಾರಕ್ಕೆ ಪೂರ್ಣಗೊಂಡಿವೆ. ಕೆಲವೊಂದನ್ನು ನಿಭಾಯಿಸಿ ಪೂರ್ಣಗೊಳಿಸಿದರೆ ಇತರರು ಕಳೆದುಕೊಂಡರು. ಈ ಟಾಸ್ಕ್ ಗಳು, ಸ್ಪರ್ಧಿಗಳು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಸಹಾಯ ಮಾಡಿದವು. ಇವೆಲ್ಲದರೊಂದಿಗೆ ಮೊದಲನೇ ವಾರ ಮೊದಲ ಎಲಿಮಿನೇಷನ್ ಗಾಗಿ ನಾಮಿನೇಷನ್ ಪ್ರಕ್ರಿಯೇ ಕೂಡಾ ನಡೆಯಿತು.

ಮನೆಯಿಂದ ನಿರ್ಗಮಿಸಿದ ಅನಿತಾ ಭಟ್

ಮೊದಲ ವಾರವೇ ನಾಮಿನೇಟ್ ಆದವರು ಸಂತೋಷ, ಶಕೀಲಾ, ಅನಿತಾ ಭಟ್, ಮತ್ತು ಆರ್.ಜೆ.ರೋಹಿತ್. ಈ ವಾರಾಂತ್ಯದಲ್ಲಿ ಪ್ರಥಮ ಸ್ಪರ್ಧಿಯಾಗಿ ಅನಿತಾ ಭಟ್ ಬಿಗ್ ಬಾಸ್ ಮನೆಯಿಂದ ನಿರ್ಗಮಿದರು.

ಸಂಚಿಕೆಯ ಮೊದಲ ಸೆಲೆಬ್ರಿಟಿ ಕ್ರೇಜಿಸ್ಟಾರ್

ನಿರೂಪಕ, ಕಿಚ್ಚ ಸುದೀಪ್ ಕಾರ್ಯಕ್ರಮಕ್ಕೆ ಸಾಕಷ್ಟು ಮೆರುಗನ್ನು ತುಂಬುತ್ತಿದ್ದಾರೆ. ಈ ವಾರಾಂತ್ಯದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಆಗಮಿಸಿದರು. ದಕ್ಷಿಣ ಭಾರತದ ಎಲ್ಲರ ಅಚ್ಚುಮೆಚ್ಚಿನ ಪ್ರೀತಿಯ ನಟ ರವಿಚಂದ್ರನ್ ಬಿಗ್ ಬಾಸ್ ಮನೆಗೆ ಇದೇ ಜುಲೈ 6 ರಂದು ವಿಶೇಷ ಅತಿಥಿಯಾಗಿ ಆಗಮಿಸಿ ವಾರಾಂತ್ಯದ ಸಂಚಿಕೆಯಲ್ಲಿ ಕಾಣಿಸಿಕೊಂಡರು.

ಮುಂದಿನ ದಿನಗಳಲ್ಲಿ ಸಾಕಷ್ಟು ಮನರಂಜನೆ

ಬಿಗ್ ಬಾಸ್ ಸೆಲೆಬ್ರಿಟಿಗಳ ನೈಜ ಗುಣಗಳನ್ನು ಅಭಿಮಾನಿಗಳಿಗೆ ಕಣ್ತುಂಬಿಸುವ, ಮನೋರಂಜನೆಯ ಮಹಾಪೂರವನ್ನೇ ಹರಿಸುವ ಕಿರುತೆರೆಯ ಏಕೈಕ ರಿಯಾಲಿಟಿ ಶೋ ಆಗಿದೆ. ಮನೆಯೊಳಗೆ ನಡೆಯುವ ಈ ನಾಟಕ ಮುಂಬರುವ ವಾರಗಳಲ್ಲಿ ಕಾರ್ಯಕ್ರಮಕ್ಕೆ ಸಾಕಷ್ಟು ಮೆರುಗನ್ನು ನೀಡಲಿದೆ.

English summary
Bigg Boss Kannada 2 first week filled with fun, fear, tear. Here is the weekly round-up of BBK2. In this season total 100 tasks are planned, until now inmates had finished only 3 tasks.
Please Wait while comments are loading...