»   » ಬಿಗ್ ಬಾಸ್ ಮನೆಗೆ ಮತ್ತೆ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ

ಬಿಗ್ ಬಾಸ್ ಮನೆಗೆ ಮತ್ತೆ ವೈಲ್ಡ್ ಕಾರ್ಡ್ ಸ್ಪರ್ಧಿ ಎಂಟ್ರಿ

By: * ಜೇಮ್ಸ್ ಮಾರ್ಟಿನ್
Subscribe to Filmibeat Kannada

ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ಸ್ಪರ್ಧಿ ನಟಿ ನೀತೂ ಶೆಟ್ಟಿ ಅವರು ಮನೆಯಿಂದ ಹೊರ ನಡೆದಿದ್ದು, ರಹಸ್ಯ ಕೋಣೆ ಸೇರಿದ್ದಾರೆ. ಈ ಟ್ವಿಸ್ಟ್ ಜೊತೆಗೆ ಭಾನುವಾರದ ಕಾರ್ಯಕ್ರಮದಲ್ಲಿ ಮತ್ತೊಬ್ಬ ಸ್ಪರ್ಧಿ ವೈಲ್ಡ್ ಕಾರ್ಡ್ ಎಂಟ್ರಿ ಕೊಡುತ್ತಿದ್ದಾರೆ.

ಸೃಜನ್ ಅವರಿಂದ ನೇರವಾಗಿ ನಾಮಿನೇಟ್ ಆಗಿ ಹಠಾತ್ ಆಗಿ ಮನೆಯಿಂದ ಹೊರ ಬಿದ್ದ ಹರ್ಷಿಕಾ ಪೂಣಚ್ಚ ಅವರನ್ನು ಮತ್ತೆ ಬಿಗ್ ಬಾಸ್ ಮನೆಗೆ ಕರೆಸಿಕೊಳ್ಳಲಾಗಿದೆ. ಪ್ರೇಕ್ಷಕರು, ಹರ್ಷಿಕಾ ಅಭಿಮಾನಿಗಳಿಂದ ಹರ್ಷಿಕಾ ಪುನರ್ ಪ್ರವೇಶಕ್ಕೆ ಭಾರಿ ಒತ್ತಡ ಬಂದ ಕಾರಣ ಈ ನಿರ್ಣಯವನ್ನು ಬಿಗ್ ಬಾಸ್ ತಂಡ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ಆದರೆ, ಹರ್ಷಿಕಾ ಪೂಣಚ್ಚ ಅವರು ಇನ್ನೂ ಎಷ್ಟು ಕಾಲ ಮನೆಯಲ್ಲಿ ಇರುತ್ತಾರೆ ಎಂಬುದರ ಬಗ್ಗೆ ಇನ್ನೂ ಸ್ಪಷ್ಟವಾಗಿಲ್ಲ.ಸುವರ್ಣ ವಾಹಿನಿಯ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 2 ಸ್ಪರ್ಧಿ ನಟಿ ನೀತೂ ಶೆಟ್ಟಿ ಅವರು ಮನೆಯಿಂದ ಹೊರ ನಡೆದಿದ್ದಾರೆ. ಆದರೆ, ನೀತೂ ಎಲಿಮಿನೇಟ್ ಆಗಿಲ್ಲ.

ಐದನೇ ವಾರ ಮನೆಯಿಂದ ಹೊರಬಿದ್ದ ಐದನೇ ಸ್ಪರ್ಧಿಯಾಗಿ ನೀತು ಎಲ್ಲರಿಗೂ 'ಬೈ' ಹೇಳಿ ಹೋಗಿದ್ದೇನೋ ನಿಜ. ಆದರೆ, ಮನೆಯಿಂದ ನಿರೂಪಕ ಕಿಚ್ಚ ಸುದೀಪ್ ಇರುವೆಡೆಗೆ ನೀತೂ ಅವರನ್ನು ಕಳುಹಿಸದೆ ರಹಸ್ಯ ಕೋಣೆಯಲ್ಲಿ ಅವರನ್ನು ಇರಿಸಲಾಗಿದೆ.[ಮನೆಯಿಂದ ನೀತೂ ಹೊರಕ್ಕೆ..ಆದರೆ ]

ಎಲ್ಲರ ಬಗ್ಗೆ ತಿಳಿದು ಕೊಂಡಿರುವ ಹರ್ಷಿಕಾ ಮತ್ತೆ ಎಂಟ್ರಿ ಕೊಡುತ್ತಿದ್ದಾರೆ. ಹೀಗಾಗಿ ಉಳಿದ ಸ್ಪರ್ಧಿಗಳು ಬೆಚ್ಚುವಂಥ ಸರದಿ ಈಗ ಉಂಟಾಗಿದೆ. ಹರ್ಷಿಕಾ ಹಾಗೂ ನೀತೂ ಕೈಗೆ ಬಿಗ್ ಬಾಸ್ ನೀಡಿರುವ ಅಸ್ತ್ರ ಹೇಗೆ ಬಳಕೆಯಾಗಲಿದೆ? ಸತ್ಯ ಅರಿತು ಹರ್ಷಿಕಾ ಹಾಗೂ ನೀತೂ ಸ್ಪರ್ಧೆಯಲ್ಲಿ ಹೇಗೆ ಮುಂದುವರೆಯಲಿದ್ದಾರೆ ಕಾದು ನೋಡಬೇಕಿದೆ.

Bigg Boss Kannada 2

ಈ ನಡುವೆ ಮಠ ಗುರುಪ್ರಸಾದ್ ಅವರು ಬಿಗ್ ಬಾಸ್ ಮನೆಯಲ್ಲಿ ಹೊಸ ಚಿತ್ರದ ಮುಹೂರ್ತ ಮಾಡಿ ಚಿತ್ರದ ಮೊದಲ ಶಾಟ್ ಚಿತ್ರೀಕರಿಸಿದ್ದಾರೆ. ಜೈಲಿನಲ್ಲಿ ಪ್ರೇಮಕಥೆ ಹೆಣೆಯಲು ಹೊರಟಿರುವ ಗುರು ಅವರು ಆದಿಯನ್ನು ಹೀರೋ ಮಾಡಿಕೊಂಡಿದ್ದಾರೆ. ಗುರುಪ್ರಸಾದ್ ಅವರ ಕಾರ್ಯ ವೈಖರಿ ಕಂಡು ಸ್ವತಃ ಸುದೀಪ್ ಕೂಡಾ ಅಚ್ಚರಿಪಟ್ಟಿದ್ದಾರೆ. ಅದರೆ, ಅಸಲಿ ಅಚ್ಚರಿ ಪಡುವಂಥ ವಿಷ್ಯಗಳು ಇನ್ನಷ್ಟು ಬಾಕಿ ಇವೆ. ಕಾರಣ, ಅಸಲಿ ಆಟ ಈಗ ಶುರುವಾಗಿದೆ.

English summary
Bigg Boss Kannada 2:There is good news for the fans of actress Harshika Poonacha who was earlier eliminated from the Bigg Boss house. She will make a re-entry to the celebrity house today. 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada