»   » 'ಬಿಗ್ ಬಾಸ್' ಮನೆಯ ಖತರ್ನಾಕ್ ಕಿಲಾಡಿಗಳು

'ಬಿಗ್ ಬಾಸ್' ಮನೆಯ ಖತರ್ನಾಕ್ ಕಿಲಾಡಿಗಳು

Posted By:
Subscribe to Filmibeat Kannada

ಬಿಗ್ ಬಾಸ್ ಅಸಲಿ ಆಟ ಈಗ ಶುರುವಾಗಿದೆ. ಮೊದಲ ದಿನವೇ ನಾಮಿನೇಷನ್ ಪ್ರತಿಕ್ರಿಯೆ ಶುರುವಾಗಲಿದ್ದು, ಯಾರೆಲ್ಲಾ ನಾಮಿನೇಟ್ ಆಗುತ್ತಾರೆ ಎಂಬ ಭಯ ಸ್ಪರ್ಧಿಗಳನ್ನು ಕಾಡುತ್ತಿದೆ. ಸೋಮವಾರ (ಜೂ.30) ರಾತ್ರಿ 8ಗಂಟೆಗೆ ಆರಂಭವಾಗುವ ಮೊದಲ ದಿನದ ಪ್ರಮುಖ ಘಟ್ಟದ ನಾಮಿನೇಷನ್ ರೌಂಡ್.

ಈ ಸಲ ಮನೆಯಲ್ಲಿ ಪುರುಷರ ನಡುವೆ ಸಖತ್ ಕಾಂಪಿಟೇಷನ್ ನಿರೀಕ್ಷಿಸಲಾಗಿದೆ. ಏಕೆಂದರೆ ಮನೆಯಲ್ಲಿರುವ ಬಹುತೇಕ ಪುರುಷರು ಕಿರುತೆರೆಯ ನೀರು ಕುಡಿದವರು. ಇನ್ನೂ ಕೆಲವರು ಮಾತಿನ ಮಲ್ಲರು. ಇರುವುದರಲ್ಲಿ ಸ್ವಲ್ಪ ಡಲ್ ಆಗಿ ಕಾಣುತ್ತಿರುವವರೆಂದರೆ ಲಯೇಂದ್ರ (ಲಯ ಕೋಕಿಲ). [ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳು]

ಬಿಗ್ ಬಾಸ್ ಮನೆಯಲ್ಲಿ ಪ್ರಮುಖ ಆಕರ್ಷಣೆಯ ಪುರುಷ ಸ್ಪರ್ಧಿಗಳೆಂದರೆ ಅಕುಲ್ ಬಾಲಾಜಿ ಹಾಗೂ ಸೃಜನ್ ಲೋಕೇಶ್. ಇವರಿಬ್ಬರೂ ಶೋ ನಿರೂಪಕ ಸುದೀಪ್ ಅವರಿಗೆ ಪರಮಾಪ್ತರಾಗಿರುವ ಕಾರಣ ಈಗಲೇ ಇಬ್ಬರಲ್ಲಿ ಒಬ್ಬರಿಗೆ ಬಿಗ್ ಬಾಸ್ ಕಿರೀಟ ಗ್ಯಾರಂಟಿ ಎಂಬ ಮಾತುಗಳು ಕೇಳಿಬರುತ್ತಿವೆ. ಮನೆಯಲ್ಲಿರುವ ಸ್ಪರ್ಧಿಗಳ ಕಿರುಪರಿಚಯ ಮಾಡಿಕೊಳ್ಳೋಣ ಬನ್ನಿ...

ಬಿಗ್ ಬಾಸ್ ನಲ್ಲಿ ಜಾಲಿಬಾಯ್ ಸಂತೋಷ್

ಕನ್ನಡ ಚಿತ್ರರಂಗದಲ್ಲಿ ಜಾಲಿ ಬಾಯ್ ಎಂದೇ ಖ್ಯಾತರಾದವರು ಸಂತೋಷ್. 'ನೂರು ಜನ್ಮಕು' ಚಿತ್ರದಿಂದ ಖ್ಯಾತರಾದವರು. ಆರೇಳು ಚಿತ್ರಗಳಲ್ಲಿ ಅಭಿನಯಿಸಿದ್ದರೂ ಪ್ರೇಕ್ಷಕರಿಗೆ ಇನ್ನೂ ಅಷ್ಟಾಗಿ ಹತ್ತಿರವಾಗದ ನಟ. ಬಿಗ್ ಬಾಸ್ ಮನೆಯಲ್ಲಿ ಏನೆಲ್ಲಾ ಮಾಡಿ ಹತ್ತಿರವಾಗುತ್ತಾರೋ ನೋಡಬೇಕು. ಎಲ್ಲರೊಂದಿಗೆ ಬೆರೆಯುವ ಸ್ನೇಹಜೀವಿ

ಅಪೂರ್ವ ಕಲಾವಿದ ಲಯ ಕೋಕಿಲ

ನೋಡಲು ಹೆಚ್ಚುಕಡಿಮೆ ಸಾಧು ಕೋಕಿಲ ಅವರಂತೆಯೇ ಕಾಣುವ ಲಯೇಂದ್ರ ಅವರನ್ನು ಲಯ ಕೋಕಿಲ ಎಂದೇ ಗುರುತಿಸುತ್ತಾರೆ. ಸದಾ ಜಾಲಿಯಾಗಿರುವ ಲಯೇಂದ್ರ, ಮನೆಗೆ ಅಡಿಯಿಟ್ಟ ಮೇಲೆ ಸ್ವಲ್ಪ ಡಲ್ ಆಗಿ ಕಾಣುತ್ತಿದ್ದರು. ಮುಂದೇನು ಮಾಡುತ್ತಾರೋ ಎಂದು ಕಾದುನೋಡಬೇಕು. ದೇವ್ರಾಣೆ ಚಿತ್ರದ `ಮೈ ನೇಮ್ ಈಸ್ ಚಿಟ್ಟೆ ಸ್ವಾಮಿ...' ಹಾಡು ನೆನಪಿರಬೇಕಲ್ಲವೇ, ಆ ಚಿತ್ರದ ಸಂಗೀತ ನಿರ್ದೇಶಕ ಲಯ ಕೋಕಿಲ.

ರೇಡಿಯೋ ರಾಕ್ ಸ್ಟಾರ್ ಆರ್ ಜೆ ರೋಹಿತ್

ಮಾತಲ್ಲೇ ಎಲ್ಲರ ಟೈಮ್ ಪಾಸ್ ಮಾಡಿಸುವ ಬಿಗ್ ಎಫ್ ಎಂ 92.7 ಆರ್ ಜೆ ರೋಹಿತ್ ಮನೆಗೆ ಅಡಿಯಿಟ್ಟಿರುವುದು ಶ್ರೋತೃಗಳಿಗೆ ಕೊಂಚ ನಿರಾಸೆಯಾಗಬಹುದೇನೋ. ಆದರೆ ಕಿರುತೆರೆ ವೀಕ್ಷಕರಿಗೆ ಮಾತ್ರ ಮಾತಿನ ಮಲ್ಲನ ಮೋಡಿ ನೋಡುವ ಅವಕಾಶ ಸಿಕ್ಕಿದೆ.

ಕನಸು ಹೊತ್ತು ಬಂದಿರುವ ಮಯೂರ್ ಪಟೇಲ್

ಒಬ್ಬ ಸ್ನೇಹಿತನಾಗಿ ಬಿಗ್ ಬಾಸ್ ಗೆ ಹೋಗು ಎನ್ನುತ್ತೇನೆ. ಆದರೆ ಒಬ್ಬ ತಂದೆಯಾಗಿ ಬೇಡ ಎನ್ನುತ್ತಿದೆ ಎಂದು ಮದನ್ ಪಟೇಲ್ ತಮ್ಮ ಮಗನ ಬಗ್ಗೆ ಹೇಳಿದರು. ಆದರೆ ಮಯೂರ್ ಪಟೇಲ್ ಮಾತ್ರ ಎಲ್ಲರ ಮನಗೆಲ್ಲುತ್ತೇನೆ ಎಂಬ ವಿಶ್ವಾಸದಲ್ಲಿದ್ದಾರೆ. ಚಿತ್ರರಂಗದಲ್ಲಿ ಅವರು ಆರಕ್ಕಲ್ಲಾ ಮೂರಕ್ಕೂ ಏರಲಿಲ್ಲ ಎಂಬುದು ಅಷ್ಟೇ ಸತ್ಯ.

'ಬಿಡ್ಡ' ಆದಿ ಲೋಕೇಶ್ ಎಲ್ಲರ ಮನಗೆಲ್ತಾರಾ?

ತಮ್ಮ ಖಳನಟನ ಪಾತ್ರಗಳ ಮೂಲಕ ತೆರೆಯ ಮೇಲೆ ಬ್ಯಾಡ್ ಬಾಯ್ ಎನ್ನಿಸಿಕೊಂಡವರು ಆದಿ ಲೋಕೇಶ್. ಆದರೆ ಆಫ್ ಸ್ರ್ಕೀನ್ ನಲ್ಲಿ ಅವರ ಬಗ್ಗೆ ಅಷ್ಟಾಗಿ ಯಾರಿಗೂ ಗೊತ್ತಿಲ್ಲ. ನಾನು ಇರೋದೆ ಹೀಗೆ. ಹೆಚ್ಚಾಗಿ ಮಾತನಾಡಲ್ಲ. ಒಂದು ಕಣ್ಣೋಟವೇ ಸಾಕು. ಜನ ಅದನ್ನು ತಪ್ಪಾಗಿ ಅರ್ಥ ಮಾಡಿಕೊಳ್ಳುವ ಸಂದರ್ಭಗಳೇ ಹೆಚ್ಚು ಎನ್ನುವ ಆದಿಗೆ ಹೆಂಗೆಳೆಯರೇ ಫ್ಯಾನ್ಸ್ ಅಂತೆ.

ಅಕುಲ್ ಬಾಲಾಜಿ ಆಟ ಆಡ್ತಾರಾ?

ಎಲ್ಲರಿಗೂ ಆಟ ಆಡಿಸುವ ಅಕುಲ್ ಬಾಲಾಜಿ ಈ ಬಾರಿ ಬಿಗ್ ಬಾಸ್ ಮನೆಯಲ್ಲಿ ಆಟ ಆಡ್ತಾರಾ? ಬೇರೆಯವರ ಕಾಲು ಎಳೀತಾರೋ ಅಥವಾ ಬೇರೆಯವರು ಇವರ ಕಾಲು ಎಳೀತಾರೋ ಎಂಬುದನ್ನು ನೋಡಬೇಕು.

ಬಿಗ್ ಸರ್ಪ್ರೈ ಸೃಜನ್ ಲೋಕೇಶ್

ಬಿಗ್ ಬಾಸ್ ಮನೆಯ ಬಿಗ್ ಸರ್ಪ್ರೈಸ್ ಸೃಜನ್ ಲೋಕೇಶ್. ನಮ್ಮ ತಂದೆಯವರು ಇಂದು ನನ್ನ ಜೊತೆಗಿಲ್ಲ. ಆದರೆ ಅವರು ನನ್ನ ಮನಸ್ಸಿನಲ್ಲಿ ಇನ್ನೂ ಜೀವಂತವಾಗಿದ್ದಾರೆ. ವ್ಯಕ್ತಿ ಇಲ್ಲದೇ ಇದ್ದರೂ ಅವರ ವ್ಯಕ್ತಿತ್ವ ತಮ್ಮೊಂದಿಗೆ ಸದಾ ಇದೆ ಎನ್ನುವ ಸೃಜನ್ ಲೋಕೇಶ್ ಮೊದಲ ದಿನವೇ ಎಲ್ಲರ ಫೇವರಿಟ್ ಆಗಿದ್ದಾರೆ. ಸೃಜನ್ ಗೆ ಕಿರುತೆರೆ ಅಭಿಮಾನಿಗಳೂ ಹೆಚ್ಚು. ತಮ್ಮೊಂದಿಗೆ ತಾವು ಕಳೆಯಲು ಇದು ಸೂಕ್ತ ವೇದಿಕೆ ಎನ್ನುವ ಸೃಜನ್ ಏನೆಲ್ಲಾ ಮಾಡುತ್ತಾರೋ ನೋಡಬೇಕು.

English summary
Here is the list of male inmates of Bigg Boss Kannada 2 reality show. All male inmates are well known celebrites in Karnataka. Actor Santosh, Laya Kokila, RJ Rohit, Mayur Patel, Aadi Lokesh, Akul Balaji and Srujan Lokesh.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada