»   » ಬಿಗ್ ಬಾಸ್ ನಿಂದ ಹೊರಬಿದ್ದ ಸಂತೋಷ್ ಹೇಳಿದ್ದೇನು?

ಬಿಗ್ ಬಾಸ್ ನಿಂದ ಹೊರಬಿದ್ದ ಸಂತೋಷ್ ಹೇಳಿದ್ದೇನು?

Posted By:
Subscribe to Filmibeat Kannada

ಪ್ರತಿ ಸಲವೂ ನಾಮಿನೇಟ್ ಆಗಿ ಮನೆಯಲ್ಲೇ ಉಳಿದು ಎಲ್ಲರಿಗೂ ಅಚ್ಚರಿ ಮೂಡಿಸುತ್ತಾ ನಾಮಿನೇಟೆಡ್ ಸ್ಟಾರ್ ಎನ್ನಿಸಿಕೊಂಡಿದ್ದ ಆರ್ ಜೆ ರೋಹಿತ್ ಪಟೇಲ್ ಅವರು ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ.

ಈ ಬಾರಿ ನೀವು ಕೇಳರಿಯದ ಟ್ವಿಸ್ಟ್ ಕಾದಿದೆ ಎಂದು ಹೇಳಿದ ಸುದೀಪ್ ಅವರು ಈ ಬಾರಿ ನಾಮಿನೇಟ್ ಆಗಿದ್ದ ರೋಹಿತ್, ಸಂತೋಷ್ ಹಾಗೂ ಅನುಪಮಾ ಭಟ್ ಅವರಲ್ಲಿ ಇಬ್ಬರನ್ನು ಮನೆಗೆ ಕಳುಹಿಸಿದರು. ಇನ್ನು ಮನೆಯಲ್ಲಿ ಉಳಿದಿರುವುದು ಏಳು ಜನ ಹಾಗೂ ಕೇವಲ ನಾಲ್ಕು ವಾರಗಳು ಮಾತ್ರ.

ಬಜರ್ ಒತ್ತಿದಾಗಲೆಲ್ಲಾ ಈಜುಕೊಳದ ನೀರಿನಲ್ಲಿ ಮುಳುಗಿ ಪಲ್ಟಿ ಹೊಡೆಯಬೇಕು. ಈ ಶಿಕ್ಷೆಯನ್ನು ಸಂತೋಷ್ ಮನೆಯಿಂದ ಹೊರಹೋದಾಗ ಸೃಜನ್ ಅವರಿಗೆ ಕೊಟ್ಟಿದ್ದಾರೆ. ಈ ಬಾರಿ ಇಬ್ಬರು ಒಟ್ಟಿಗೆ ಮನೆಯಿಂದ ಹೊರಬಿದ್ದಿರುವುದು ವಿಶೇಷ. ರಾಕ್ ಸ್ಟಾರ್ ಹಾಗೂ ರೊಮ್ಯಾಂಟಿಕ್ ಸ್ಟಾರ್ ಮನೆಯಿಂದ ಹೊರಬಿದ್ದ ಮೇಲೆ ಹೇಳಿದ್ದೇನು?

ಸಂತೋಷ್ ಕಣ್ಣಾಲಿಗಳು ತುಂಬಿ ಬಂದವು

"ಸಖತ್ ಸಂಡೇ ವಿತ್ ಸುದೀಪ್" ಜೊತೆ ಮಾತನಾಡುತ್ತಿದ್ದ ಸಂತೋಷ್ ಆಗಾಗ ಭಾವುಕರಾಗುತ್ತಿದ್ದರು. ಮನೆಯಲ್ಲಿದ್ದ ದಿನಗಳನ್ನು ನೆನಪಿಸಿಕೊಳ್ಳುತ್ತಿದ್ದ ಅವರ ಕಣ್ಣಾಲಿಗಳು ತುಂಬಿ ಬರುತ್ತಿದ್ದವು. ಅಕುಲ್ ಬಾಲಾಜಿ ಮತ್ತು ಸಂತೋಷ್ ನಡುವಿನ ಇಷ್ಟು ದಿನದ ಕೆಲವು ಘಟನೆಗಳನ್ನು ತೋರಿಸಿದಾಗ ಅವರು ಮಗುವಿನಂತೆ ಅತ್ತರು.

ಮಿರ್ಚಿ ಕುರ್ಚಿಯಲ್ಲಿ ಸಂತೋಷ್ ಉತ್ತರಗಳು

ದೀಪಿಕಾ ಅವರು ನಿಮ್ಮ ಕ್ಯಾಂಡಿಕ್ರಷ್ ಹೌದಾ ಅಲ್ಲವೇ ಎಂದು ಕೇಳಿದಾಗ ಇಲ್ಲ ಎಂದರು. ಆದರೆ ಅವರ ಉತ್ತರ ಸುಳ್ಳು ಎಂಬುದನ್ನು 'ಮಿರ್ಚಿ ಕುರ್ಚಿ'ಯಲ್ಲಿ ಸಾಬೀತಾಯಿತು. ಒಂದು ಕುರ್ಚಿ ಮೇಲೆ ಕೂರಿಸಿ ಅವರನ್ನು ಅವರ ಕೈಗಳನ್ನು ಲಾಕ್ ಮಾಡಿ ಪ್ರಶ್ನೆಗಳನ್ನು ಕೇಳಲಾಯಿತು. ಉತ್ತರ ಸುಳ್ಳಾದರೆ ಕೆಂಪು ದೀಪ ಹೊತ್ತಿಕೊಳ್ಳುತ್ತಿತ್ತು. ಹಸಿರು ದೀಪ ಬೆಳಗಿದಾಗ ಸಂತೋಷ್ ಕೊಟ್ಟಂತಹ ಉತ್ತರ ಸರಿ ಎಂದು ಭಾವಿಸಲಾಗಿತ್ತು.

ಬಿಗ್ ಬಾಸ್ ಮನೆಯ ಗಂಡು ತಾಯಿ ಸಂತೋಷ್

ಒಟ್ಟಾರೆಯಾಗಿ ಬಿಗ್ ಬಾಸ್ ಮನೆಯಲ್ಲಿದ್ದಂತಹ ಗಂಡು ತಾಯಿ ಸಂತೋಷ್ ಅವರದು ಹೆಣ್ಣಿನ ಮನಸ್ಸು ಎಂಬುದು ವೇದಿಕೆಯಲ್ಲಿ ಗೊತ್ತಾಯಿತು. ಒಟ್ಟಾರೆಯಾಗಿ ಎಪ್ಪತ್ತು ದಿನದ ಪಯಣವನ್ನು ಸಂತೋಷ್ ಹಾಗೂ ರೋಹಿತ್ ಇಬ್ಬರೂ ಮುಗಿಸಿದ್ದಾರೆ.

ಡವ್ ಇಷ್ಟವಾಗದೇ ಇರೋವವರಿಗೆ ನಾನು ಇಷ್ಟ ಆಗ್ತೀನಿ

ಹತ್ತು ವಾರ ಹೇಗಿತ್ತು ರೋಹಿತ್ ಅವರೇ ಎಂದು ಸುದೀಪ್ ಕೇಳಿದಾಗ, ಯಾರ್ಯಾರಿಗೆ ಡವ್ ಇಷ್ಟ ಆಗೋಲ್ಲವೋ ಅವರಿಗೆಲ್ಲಾ ನಾನು ಇಷ್ಟ ಆಗ್ತೀನಿ ಎಂದರು ರೋಹಿತ್. 'ಮಿರ್ಚಿ ಕುರ್ಚಿ' ಮೇಲೆ ಕೂರಿಸಿ ಪ್ರಶ್ನೆಗಳನ್ನು ಕೇಳಿದರು. ಅದಕ್ಕೆಲ್ಲಾ ಅವರು ಒಳ್ಳೆಯ ಉತ್ತರ ಕೊಟ್ಟರು.

ಪಂಚ್ ಕೊಟ್ಟು ಆದಿಯನ್ನು ಅಪ್ಪಿದ ಸಂತೋಷ್

ಸಂತೋಷ್ ಅವರು ಮನೆಯ ಸದಸ್ಯರ ಬಗ್ಗೆ ಮಾತನಾಡುತ್ತಾ, ನನ್ನ ಕ್ರೀಡಾ ಮನೋಭಾವನ್ನು ಅಂಡರ್ ಎಸ್ಟಿಮೇಟ್ ಮಾಡಿದ್ದಕ್ಕೆ ಆದಿ ಲೋಕೇಶ್ ಗೆ ಒಂದು ಪಂಚ್ ಎಂದು ಅವರ ಭಾವಚಿತ್ರಕ್ಕೆ ಹೊಡೆದರು ಕೊಟ್ಟರು ಆದಿಗೆ. ಬಳಿಕ ನನಗೆ ಒಳ್ಳೆಯ ಗೆಳೆಯರಾದಿರಿ ಎಂದು ಅಪ್ಪಿಕೊಂಡರು.

ಶಕೀಲಾಗೂ 'ಪಂಚ್' ಕಜ್ಜಾಯ

ನೀವು ಬಂದಿದ್ದು ಹೋಗಿದ್ದು ಮೋಡಗಳು ಸರಿದಾಡಿದಂತಿದ್ದವು. ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಕ್ಕೆ ಒಂದು ಪಂಚ್ ಎಂದು ಶಕೀಲಾ ಅವರಿಗೆ ಕೊಟ್ಟರು. ಲಯೇಂದ್ರ ಅವರನ್ನು ಅಪ್ಪಿಕೊಂಡರು. ಗರ್ಭಿಣಿ ಪಾತ್ರ ಮಾಡಿದಾಗ ಅದನ್ನು ನೀವು ತೆಗೆದುಕೊಳ್ಳಲಿಲ್ಲ. ಅದಕ್ಕೆ ಎಂದು ಕೆನ್ನೆಗೆ ಕಜ್ಜಾಯ ಕೊಟ್ಟರು. ನನ್ನನ್ನು ನಾಮಿನೇಟ್ ಮಾಡಿ ಆಚೆಗೆ ಕಳುಹಿಸಿದ್ದಕ್ಕೆ ಎಂದು ಶ್ವೇತಾ ಅವರನ್ನು ಅಪ್ಪಿಕಂಡರು.

ಗುರುಪ್ರಸಾದ್ ನೀವು ತುಂಬಾ ತಲೆಕೆಡಿಸಿಕೊಳ್ಳಬೇಡಿ

ನಿಮ್ಮನ್ನು ಒಮ್ಮೆ ನಾಮಿನೇಟ್ ಮಾಡಿದ್ದೆ. ಆದರೆ ನಿಮ್ಮನ್ನು ಮಿಸ್ ಮಾಡಿಕೊಂಡೆ ಎಂದು ಮಯೂರ್ ರನ್ನು ಅಪ್ಪಿಕೊಂಡರು. ಗುರುಪ್ರಸಾದ್ ಅವರು ತುಂಬಾ ತಲೆಕೆಡಿಸಿಕೊಳ್ಳುತ್ತಿದ್ದಾರೆ. ನಿಮಗೆ ನೀವು ಕೆಟ್ಟ ಹೆಸರು ತೆಗೆದುಕೊಳ್ಳುತ್ತಿದ್ದೀರಾ. ನಿಮ್ಮಲ್ಲಿ ಒಳ್ಳೆಯ ಉತ್ಸಾಹ ಇದೆ ಎಂದರು.

ಪಂಚ್ ಕೊಡಲು ಹೋಗಿ ದೀಪಿಕಾರನ್ನು ಅಪ್ಪಿಕೊಂಡ

ನನ್ನನ್ನು ತುಂಬಾ ಅಂಡರ್ ಎಸ್ಟಿಮೇಟೇಡ್ ಮಾಡಿದ್ದಾರೆ. ಅದಕ್ಕಾಗಿ ಎಂದು ಹೊಡೆಯಲು ಹೋಗಿ ದೀಪಿಕಾ ಅವರ ಭಾವಚಿತ್ರವನ್ನು ಅಪ್ಪಿಕೊಂಡರು. ಮುಖವಾಡ ಕಳಚಿ ನೀವು ಬಿಗ್ ಬಾಸ್ ಗೆದ್ದರು ಸೋತರು ನಿಜಕ್ಕೂ ನನಗೆ ನೋವಾಗುತ್ತದೆ ಎಂದು ಸೃಜನ್ ಬಗ್ಗೆ ಹೇಳಿದರು. ಅವರಿಗೂ ಪಂಚ್ ಕೊಟ್ಟರು. ನೀತೂ ಹಾಗೂ ಅನುಪಮಾ ಭಟ್ ಅವರಿಗೂ ಒಂದೊಂದು ಪಂಚ್ ಕೊಟ್ಟರು.

English summary
For the first time in the Bigg Boss Kannada 2, two of the contestants were eliminated on the same day. On Saturday, Santhosh and Rohit were eliminated from the house. Santosh got very emotional when he was shown a compilation of his friendship with Deepika inside the house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada