»   » ಹರ್ಷಿಕಾ ಪಾಲಿಗೆ ವಿಲನ್ ಆದ ಸೃಜನ್ ಲೋಕೇಶ್

ಹರ್ಷಿಕಾ ಪಾಲಿಗೆ ವಿಲನ್ ಆದ ಸೃಜನ್ ಲೋಕೇಶ್

Posted By:
Subscribe to Filmibeat Kannada

ಈ ಬಾರಿ 'ಬಿಗ್ ಬಾಸ್' ಮನೆಯಿಂದ ಯಾರು ಹೊರಬೀಳುತ್ತಾರೆ ಎಂಬ ಬಗ್ಗೆ ಬಹುತೇಕರು ಆರ್ ಜೆ ರೋಹಿತ್ ಪಟೇಲ್ ಗ್ಯಾರಂಟಿ ಎಂದು ತಮ್ಮಷ್ಟಕ್ಕೆ ತಾವು ಮನಸ್ಸಿನಲ್ಲಿ ಅಂದುಕೊಂಡಿದ್ದರು. ಆದರೆ ಮನೆಯಲ್ಲಿ ನಡೆದದ್ದೇ ಬೇರೆ, ಆಗಿದ್ದೇ ಬೇರೆ.

ಈ ವಾರದ ಕಿಚ್ಚಿನ ಕಥೆ ಕಿಚ್ಚನ ಜೊತೆ ಸ್ವಲ್ಪ ಸೀರಿಯಸ್ಸಾಗಿಯೇ ಇತ್ತು. ಮನೆಯ ಯಾವೊಬ್ಬ ಸದಸ್ಯರ ಮುಖದಲ್ಲೂ ನಗು ಬಲವಂತವಾಗಿ ಉಕ್ಕಿಬರುತ್ತಿತ್ತು. ಸುದೀಪ್ ಆಗಾಗ ನಗಿಸಲು ಪ್ರಯತ್ನಿಸಿದರೂ ಎಲ್ಲರೂ ಗಂಭೀರ ವದನರಾಗಿಯೇ ಕಂಡುಬಂದರು.

ಸುದೀಪ್ ಮಾತನಾಡುತ್ತಾ ಕನಸಿನ ಬಗ್ಗೆ ಒಂದೆರಡು ಮಾತುಗಳನ್ನು ಹೇಳಿದರು. ಬಡವರಿಗೆ ದುಡ್ಡು ಮಾಡುವಂತಹ ಕನಸು, ಶ್ರೀಮಂತರಿಗೆ ಹೆಸರು ಮಾಡುವ ಕನಸು, ಹೆಸರು ಮಾಡಿರುವವರಿಗೆ ಅಧಿಕಾರದ ಕನಸು, ಅಧಿಕಾರದಲ್ಲಿರುವವರಿಗೆ ನೆಮ್ಮದಿಯಾಗಿ ಜೀವನ ನಡೆಸುವ ಕನಸು.

ಕಿಚ್ಚನ ಪ್ರಕಾರ ಯಾವುದು ನಿಜವಾದ ಕನಸು?

ಪ್ರತಿಯೊಬ್ಬರಿಗೂ ಅವರದೇ ಅದಂತಹ ಕನಸುಗಳೀರುತ್ತವೆ. ಆದರೆ ನಿದ್ದೆಯಲ್ಲಿ ಕಾಣುವ ಕನಸು ನಿಜವಾದ ಕನಸಲ್ಲ. ನಿದ್ದೆ ಮಾಡಕ್ಕೂ ಬಿಡದೆ ಕಾಡುವಂತಹ ಕನಸೇ ನಿಜವಾದ ಕನಸು ಎಂದರು. ಬಳಿಕ ಈ ಬಾರಿ ಮನೆಯಿಂದ ಯಾರು ಹೊರಗೆ ಯಾರು ಒಳಗೆ ಎಂಬ ಬಗ್ಗೆ ಹೇಳಿದರು.

ಮನೆಯಲ್ಲಿ ಈಗ ಹನ್ನೆರಡನೇ ಜನ

ಬಿಗ್ ಬಾಸ್ ಕನಸು ಕಂಡು ನಿದ್ದೆ ಕೆಡಕ್ಕೇ ಎಂದು ಬಂದಂತಹ ಹದಿನಾಲ್ಕು ಮಂದಿಯಲ್ಲಿ ಹದಿಮೂರು ಆಗಿದ್ದಾರೆ. ಇಂದು ಹನ್ನೆರಡು ಆಗುತ್ತಾರೆ ಎಂದರು ಸುದೀಪ್ ತಮ್ಮದೇ ಶೈಲಿಯಲ್ಲಿ ಹೇಳುತ್ತಿದ್ದರೆ ಈ ಬಾರಿ ನಾಮಿನೇಟ್ ಆಗಿದ್ದ ಅಕುಲ್, ರೋಹಿತ್ ಹಾಗೂ ಹರ್ಷಿಕಾ ಎದೆ ಢವಢವ ಎನ್ನುತ್ತಿದ್ದನ್ನು ಅವರ ಮುಖ ಚಹರೆಯಲ್ಲಿ ಕಾಣುತ್ತಿತ್ತು.

ಕಣ್ಣೀರ ಕೋಡಿ ಹರಿಸಿದ ಹರ್ಷಿಕಾ

ತುಂಬಾ ಬೇಜಾರಾಯಿತು. ಎರಡನೇ ವಾರಕ್ಕೆ ನಾಮಿನೇಟ್ ಆಗ್ತೀನಿ ಎಂದು ಗೊತ್ತಿರಲಿಲ್ಲ ಎಂದು ಹರ್ಷಿಕಾ ಬೇಸರಿಸಿಕೊಂಡರು. ಹರ್ಷಿಕಾ ಅವರನ್ನು ಡೈರೆಕ್ಟ್ ಆಗಿ ನಾಮಿನೇಟ್ ಮಾಡಿದ್ದ ಸೃಜನ್ ಅವರು ಶನಿವಾರ ಅದಕ್ಕೆ ಸೂಕ್ತ ಕಾರಣ ಕೊಡ್ತಿನಿ ಎಂದಿದ್ದರು. ಅವರು ಏನು ಹೇಳಬಹುದು ಎಂದು ಎಲ್ಲರೂ ಕುತೂಹಲದಿಂದ ಕಾಯುತ್ತಿದ್ದರು.

ಇಂಗ್ಲಿಷ್ ಭಾಷೆಗೆ ಕಡಿವಾಣ ಹಾಕಲು ಸೂಚನೆ

ಶುದ್ಧವಾದ ಕನ್ನಡ ಮಾತಾಡಿ ಎಂದು ಎಲ್ಲೂ ಹೇಳಿಲ್ಲ, ನಿಮ್ಮ ಭಾಷೆಯಲ್ಲಿ ಹೆಚ್ಚಾಗಿ ಕನ್ನಡ ಬಳಕೆ ಇರಲಿ ಎಂದು ಹೇಳಿದ್ದೆವು. ದೀಪಿಕಾ, ನೀತೂ ಇಬ್ಬರೂ ಹೆಚ್ಚಾಗಿ ಇಂಗ್ಲಿಷ್ ನಲ್ಲೇ ಮಾತನಾಡುತ್ತಿರುವ ಬಗ್ಗೆ ಒಂದು ಸಣ್ಣ ಆಕ್ಷೇಪ ಜೊತೆಗೆ ಸಲಹೆಯನ್ನೂ ನೀಡಿದರು. ಸಣ್ಣ ಪುಟ್ಟದಕ್ಕೂ ಇಂಗ್ಲಿಷ್ ನಲ್ಲೇ ಮಾತನಾಡುವ ಬಗ್ಗೆ ಆಕ್ಷೇಪ ಸುದೀಪ್ ವ್ತಕ್ತಪಡಿಸಿದರು. ಆದಿ ಸಹ ಇಂಗ್ಲಿಷನ್ನು ಕಡಿಮೆ ಮಾಡಿ ಎಂಬ ಸಲಹೆ ನೀಡಿದರು.

ಮಯೂರ್ ಪಟೇಲ್ ಗೆ ಸುದೀಪ್ ಸಂದೇಶ

ಈ ವಾರವೂ ಮಯೂರ್ ಅವರನ್ನು ನೀವು ಮನೆಯಲ್ಲಿ ಇದ್ದೀರಾ ಎಂದು ಕೇಳಿದರು ಸುದೀಪ್, ನೀವು ಹೀಗೆ ಸುಮ್ಮನೆ ಮನೆಯಲ್ಲಿ ಇದ್ದರೆ ಆಗಲ್ಲ ಎಂದು ಅವರನ್ನು ಎಚ್ಚರಿಸಿದರು. ಮುಂದೆಯೂ ನೀವು ಹೀಗೇ ಇದ್ದರೆ ಮನೆಯಲ್ಲಿ ಉಳಿಗಾಲವಿಲ್ಲ ಎಂಬ ಸಂದೇಶವನ್ನು ಅವರಿಗೆ ಬಹಳ ಜಾಣ್ಮೆಯಿಂದ ರವಾನಿಸಿದರು.

ಸಂತೋಷ್ ಗೆ ಬುದ್ಧಿವಾದ ಹೇಳಿದ ಸುದೀಪ್

ರೋಹಿತ್ ಪಟೇಲ್ ಅವರನ್ನು ಹೇಗೆಂದರೆ ಹಾಗೆ ಮಾತನಾಡುವುದು, ಅವರನ್ನು ಕೀಟಲೆ ಮಾಡುವುದು, ಗೋಳುಹೊಯ್ದುಕೊಳ್ಳುವುದು, ಅವರ ಬಗ್ಗೆ ಕಾಮೆಂಟ್ ಮಾಡುವ ಬಗ್ಗೆ ಸಂತೋಷ್ ಅವರನ್ನು ಸುದೀಪ್ ಆ ರೀತಿ ಮಾಡುವುದು ಸರಿಯಲ್ಲ ಎಂದು ಬುದ್ಧಿವಾದ ಹೇಳಿದರು. ಇದಕ್ಕೆ ಇಬ್ಬರೂ ಆಲಿಂಗಿಸಿಕೊಂಡು ಇನ್ನು ಮುಂದೆ ಆ ರೀತಿ ಆಗಲ್ಲ ಎಂಬಂತೆ ತೋರಿಸಿದರು.

ಆದಿಯ ಮಾತಿನ ಬಗ್ಗೆ ಸುದೀಪ್ ಬೇಸರ

ಸಿಟ್ಟು ಎಲ್ಲರಿಗೂ ಬಂದೇ ಬರುತ್ತದೆ, ಆದರೆ ಅನ್ನವನ್ನು ಅವರ ಮುಖಕ್ಕೆ ಬಿಸಾಕಿ ಎಂದ ಆದಿ ಲೋಕೇಶ್ ಅವರ ಮಾತಿನ ಬಗ್ಗೆ ಪ್ರಸ್ತಾಪಿಸಿ ಅವರ ಮಾತುಗಳು ಹೇಗೆ ಬೇರೆಯವರ ಮನಸ್ಸಿನಲ್ಲಿ ನಾಟಿ ಘಾಸಿಯುಂಟು ಮಾಡುತ್ತವೆ ಎಂಬುದನ್ನು ನೆನಪಿಸಿದರು. ಇದಕ್ಕೆ ಆದಿ ಸಾರಿ ಕೇಳಿದ್ದೂ ಆಯಿತು.

ಹರ್ಷಿಕಾ ತಲೆ ಸುತ್ತಿ ಬೀಳಲು ಕಾರಣ?

ಎಲ್ಲರೂ ಅಂದುಕೊಂಡಿದ್ದದ್ದು ರೋಹಿತ್ ಪಟೇಲ್ ಮನೆಯಿಂದ ಹೋಗುತ್ತಾರೆ ಎಂದು. ಆದರೆ ಅಂದುಕೊಂಡಂತೆ ಆಗಲಿಲ್ಲ. ಆಗಿದ್ದೇ ಬೇರೆ. ಹರ್ಷಿಕಾ ಮನೆಯಲ್ಲಿ ಪ್ರಜ್ಞೆ ತಪ್ಪಿದ್ದ ಬಗ್ಗೆ ಶಕೀಲಾ ಮಾತನಾಡುತ್ತಾ, ಶನಿವಾರ ಎಂಬ ಟೆನ್ಷನ್ ನಲ್ಲಿ ಅವರಿಗೆ ಸ್ವಲ್ಪ ತಲೆ ಸುತ್ತು ಬಂತು. ಇದಕ್ಕೆ ಕಾರಣ ಈ ಬಾರಿ ಅವರು ಮನೆಯಿಂದ ಹೊರಹೋಗಲು ನಾಮಿನೇಟ್ ಆಗಿರುವುದು. ಇದರಿಂದ ಅವರು ಸಾಕಷ್ಟು ಒತ್ತಡವನ್ನೂ ಅನುಭವಿಸುತ್ತಿದ್ದರು ಎಂದರು.

ಸೃಜನ್ ಲೋಕೇಶ್ ಕೊಟ್ಟ ಕಾರಣ

ಹರ್ಷಿಕಾ ಅವರನ್ನು ಡೈರೆಕ್ಟ್ ಆಗಿ ನಾಮಿನೇಟ್ ಮಾಡಿದರೆ ಅವರು ಸೇವ್ ಆಗುತ್ತಾರೆ ಎಂಬ ಉದ್ದೇಶದಿಂದ ಅವರನ್ನು ನಾನು ಡೈರೆಕ್ಟ್ ಆಗಿ ನಾಮಿನೇಟ್ ಮಾಡಿದೆ ಎಂದು ಸೃಜನ್ ಲೋಕೇಶ್ ಅವರು ತಮ್ಮ ಮನದಾಳದ ಅಭಿಪ್ರಾಯವನ್ನು ಹೇಳಿದರು.

ಹರ್ಷಿಕಾ ಅವರಿಗೆ ಒಮ್ಮೆಲೆ ಶಾಕ್

ಮನೆಯಲ್ಲಿ ಇಬ್ಬರಲ್ಲಿ ರೋಹಿತ್ ಹಾಗೂ ಹರ್ಷಿಕಾ ಯಾರು ಇರಬೇಕು ಎಂದು ಕೇಳಿದಾಗ ಬಹುತೇಕರು ಹರ್ಷಿಕಾ ಎಂದೇ ಸುದೀಪ್ ಅವರಿಗೆ ತಿಳಿಸಿದರು. ಸ್ವತಃ ಹರ್ಷಿಕಾ ಅವರನ್ನು ಕೇಳಿದಾಗ ನನಗೆ ಈ ಮನೆ ಬಿಟ್ಟು ಹೋಗಕ್ಕೆ ಇಷ್ಟ ಇಲ್ಲ ಎಂದರು. ಎಲ್ಲರೂ ಕನಸುಗಳನ್ನು ಕಟ್ಟಿಕೊಂಡೇ ಈ ಮನೆಗೆ ಬಂದಿರೋದು. ಮನೆಯಲ್ಲಿ ಸೇಫ್ ಆಗಿ ಇರುವವರು ಆರ್ ಜೆ ರೋಹಿತ್ ಎಂದು ಸುದೀಪ್ ಅವರು ಹೇಳಿದಾಗ ಹರ್ಷಿಕಾ ಅವರಿಗೆ ಒಮ್ಮೆಲೆ ಶಾಕ್ ಆಯಿತು.

ಇದು ಯಾವುದೂ ತಮಾಷೇನೆ ಅಲ್ಲ

ಬಳಿಕ ಸುದೀಪ್ ಅವರು ಮಾತನಾಡುತ್ತಾ, ಇಲ್ಲಿ ಆಗೋದೆ ಬೇರೆ, ಅಂದುಕೊಳ್ಳುವುದೇ ಬೇರೆ ಎಂದರು. ಇದು ಯಾವುದೂ ತಮಾಷೇನೆ ಅಲ್ಲ ಎಂದು ಹೇಳಿದರು. ತಾನು ಮನೆಯಿಂದ ಹೊರಬಿದ್ದ ಬಗ್ಗೆ ಹರ್ಷಿಕಾ ತುಂಬಾ ಬೇಸರದಲ್ಲಿದ್ದರು.

ತಪ್ಪು ಮಾಡಿದೆ ಎಂಬ ಭಾವನೆಯಲ್ಲಿ ಸೃಜನ್

ಸೃಜನ್ ಲೋಕೇಶ್ ಅವರು ಮನೆಯಲ್ಲಿ ಒಬ್ಬರೇ ಕುಳಿತಿದ್ದರು. ತಾನು ತಪ್ಪು ಮಾಡಿದೆ ಎಂಬ ಭಾವ ಅವರನ್ನು ಕಾಡುತ್ತಿತ್ತು. ಅವರ ಜೊತೆಗೂ ಹರ್ಷಿಕಾ ಏನೂ ಮಾತನಾಡದೆ ಮನೆಯಿಂದ ಹೊರಬಂದರು.

ನಾಮಿನೇಷನ್ ಪ್ರಕ್ರಿಯೆಯಿಂದ ಶಕೀಲಾ ಹೊರಗೆ

ಈ ವಾರದ ನಾಮಿನೇಷನ್ ಪ್ರಕ್ರಿಯೆಯಿಂದ ಶಕೀಲಾ ಅವರು ಹೊರ ಉಳಿದರು. ಸೃಜನ್ ಅವರು ಮೌನಕ್ಕೆ ಶರಣಾಗಿದ್ದರು. ಅವರು ಹಾಗೂ ಹರ್ಷಿಕಾ ನಡುವೆ ಒಂದೇ ಒಂದು ಮಾತುಕತೆಯೂ ನಡೆಯಲಿಲ್ಲ. ಇಬ್ಬರ ನಡುವಿನ ಅಂತರವನ್ನು ಕಡಿಮೆ ಮಾಡುವ ಪ್ರಯತ್ನವನ್ನೂ ಯಾರೂ ಮಾಡಲೂ ಇಲ್ಲ.

ಹರ್ಷಿಕಾ ಪಾಲಿಗೆ ವಿಲನ್ ಎನ್ನಿಸಿಕೊಂಡರು ಸೃಜನ್

ಯಾರು ಏನು ಲೆಕ್ಕ ಹಾಕಿದರೂ ಬಿಗ್ ಬಾಸ್ ಲೆಕ್ಕಾಚಾರ ಬೇರೆಯೇ ಆಗಿರುತ್ತದೆ ಎಂದು ಸುದೀಪ್ ತಿಳಿಸಿದರು. ಯಾರಿಗೆ ಫ್ಯಾನ್ ಫೇರ್ ಎಷ್ಟೇ ಇರಬಹುದು, ಆದರೆ ವೀಕ್ಷಕರ ತೀರ್ಮಾನವೇ ಅಂತಿಮ ಎಂದು ಸುದೀಪ್ ಹೇಳಿ ಫುಲ್ ಸ್ಟಾರ್ ಇಟ್ಟರು. ಕಡೆಗೆ ಹರ್ಷಿಕಾ ಪಾಲಿಗೆ ವಿಲನ್ ಎನ್ನಿಸಿಕೊಂಡರು ಸೃಜನ್ ಲೋಕೇಶ್.

English summary
In the second week of Bigg Boss Kannada 2 saw another heroine bid a tearful adieu to her housemates. Harshika Poonacha eliminated from BBK2, her exit came as a big shock to everyone, especially to Srujan Lokesh. Here is the Kichchina Kathe Kichchana Jothe highlights.
Please Wait while comments are loading...