For Quick Alerts
  ALLOW NOTIFICATIONS  
  For Daily Alerts

  ಕಿಚ್ಚಿರದ 'ಕಿಚ್ಚಿನ ಕಥೆ ಕಿಚ್ಚನ ಜತೆ' ಎಪಿಸೋಡು

  By ಜೇಮ್ಸ್ ಮಾರ್ಟಿನ್
  |

  ಕನ್ನಡ ಟಿವಿ ಜಗತ್ತಿನ ಅತಿದೊಡ್ಡ ರಿಯಾಲಿಟಿ ಶೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬಿಗ್ ಬಾಸ್ ನ ಎರಡನೆ ಸರಣಿಯ ಮೊದಲ ಎಲಿಮಿನೇಷನ್ ಮುಗಿದಿದೆ. ವಾರದ ಕಥೆ ಕಿಚ್ಚನ ಜತೆ ಈಗ 'ಕಿಚ್ಚಿನ ಕಥೆ ಕಿಚ್ಚನ ಜೊತೆ' ಎಂದು ಬದಲಾಗಿದೆ. ಈ ಟಿವಿಯಿಂದ ಈ ಜನಪ್ರಿಯ ಶೋ ಸುವರ್ಣ ವಾಹಿನಿ ತೆಕ್ಕೆಗೆ ಬಿದ್ದು ಒಂದು ವಾರ ಹಾಗೂ ಹೀಗೂ ಓಡಿದೆ.

  ಎಂದಿನಂತೆ ಪ್ರೇಕ್ಷಕರು ವಾರಾಂತ್ಯದಲ್ಲಿ ಬರುವ ಕಿಚ್ಚನ ನೋಡಲು ಪ್ರೇಕ್ಷಕರು ಕಾದು ಕುಳಿತು ಮನರಂಜನೆ ಅನುಭವಿಸಿದ್ದಾರೆ. ತಮಾಷೇನೆ ಅಲ್ಲ ಎಂದು ಸೀರಿಯಸ್ ವಾಯ್ಸ್ ನಲ್ಲಿ ಬಂದ ಸುದೀಪ್ 'ಹುಚ್ಚ' ಚಿತ್ರ ಕಿಚ್ಚ ಪದದ ಅರ್ಥ ಹುಡುಕುವಿಕೆಯಂತೆ ಕಿಚ್ಚು ಪದದ ಅರ್ಥ ವಿವರಿಸುತ್ತಾ 'ಕಿಚ್ಚಿನ ಕಥೆ ಕಿಚ್ಚನ ಜೊತೆ' ಶೋ ಆರಂಭಿಸಿ ಬಿಟ್ಟರು.[ಎಲಿಮಿನೇಷನ್ ಮೊದ್ಲೆ ಲೀಕ್ ಆಗಿತ್ತೇಕೆ?]

  ಭಾನುವಾರದ ಎಪಿಸೋಡಿನ ಅತಿಥಿ ಕನಸುಗಾರ ರವಿಚಂದ್ರನ್ ಎಂಬುದು ಈಗಾಗಲೇ ತಿಳಿದ ವಿಷಯ. ಇದರ ಜತೆಗೆ ಈ ವಾರ ಎಲಿಮಿನೇಟ್ ಆದ ಮೊದಲ ಸ್ಪರ್ಧಿ ಅನಿತಾ ಭಟ್ ಎಂಬುದು ಕೂಡಾ ನೀವು ಓದಿರುತ್ತೀರಿ. ಈಗ ಬಿಗ್ ಬಾಸ್ ನ ಮೊದಲ ವಾರದ ಕೊನೆ ದಿನದ ಮುಖ್ಯಾಂಶಗಳು ಹಾಗೂ ಕಿಚ್ಚಿರದ 'ಕಿಚ್ಚಿನ ಕಥೆ ಕಿಚ್ಚನ ಜೊತೆಯಲ್ಲಿ' ಏನಾಯಿತು ಎಂಬುದನ್ನು ನೋಡೋಣ....ಕಳೆದೆರಡು ದಿನಗಳ ಆಡಿಯೋ ವಿಡಿಯೋ ಝಲಕ್ ನೋಡಿಕೊಂಡು ಬರೋಣ ಎಂದು ಸುದೀಪ್ ಶೋ ಮುಂದುವರೆಸಿದರು.

  ಸಂತು ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಎಂದ ಶ್ವೇತಾ

  ಸಂತು ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಎಂದ ಶ್ವೇತಾ

  ಸಂತು ನಿನ್ನೆ ನಿನ್ನೆಗೆ ನಾಳೆ ನಾಳೆಗೆ ಎಂದ ಶ್ವೇತಾ. ಕಸ ಅಲ್ಲಿ ಬಿದ್ದಿದೆ.ಕೂದಲು ಅಲ್ಲಿದೆ ಎಂದು ಅವರು ಹೀಗೆ ಹೇಳಿ ಇವರು ಹೀಗೆ ಹೇಳಿದರು ಎಂದು ಅವರಿವರ ಮಾತುಗಳನ್ನು ಹರಡುವುದಿಲ್ಲ ಎಂದು ಸಂತೋಷ್ ಗೆ ಕಿವಿಮಾತು ಹೇಳಿದರು. ಇನ್ಮುಂದೆ ನಾವು ನಮ್ಮ ಕೆಲ್ಸವನ್ನು ನಾವು ಮಾಡಿಕೊಂಡು ಹೋಗುತ್ತೇವೆ ಎಂದ ಶ್ವೇತಾಗೆ ಅನುಪಮ ಭಟ್ ಸಾಥ್ ನೀಡಿದರು. ಇದೆಲ್ಲವೂ ನಡೆದಿದ್ದು ಬೆಳಗ್ಗೆ 9 ಗಂಟೆಗೆ ವಾಷ್ ರೂಮ್ ನಲ್ಲಿ

  ಲಯ, ರೋಹಿತ್, ಆದಿ ಮಾತುಕತೆ

  ಲಯ, ರೋಹಿತ್, ಆದಿ ಮಾತುಕತೆ

  ಆದಷ್ಟು ನಾನು ನ್ಯಾಚುರಲ್ ಆಗಿ ಇರೋಕೆ ಇಷ್ಟ ಪಡುತ್ತೇನೆ ಎಂದ ಆರ್ ಜೆ ರೋಹಿತ್ ಗೆ ಆದಿ ಲೋಕೇಶ್ ಕಿವಿಮಾತು. ಹುಟ್ಟಿದಾಗ ಅಮ್ಮ ಅಪ್ಪ ಜತೆಗಿರುತ್ತಾರೆ. ನಾವು ಬೆಳೆದಂತೆ ಸ್ನೇಹಿತರನ್ನು ನಾವು ಆಯ್ಕೆ ಅಮಡಿಕೊಳ್ಳುತ್ತೇವೆ. ಇಲ್ಲಿ ಕೂಡಾ ನಿಮ್ಗೆ ಚಾಯ್ಸ್ ಇಲ್ಲ. ಇರುವವರ ಜತೆ ಬೆರೆತುಕೊಂಡು ಹೋಗಿ ಎನ್ನುತ್ತಾರೆ.

  ಶಕೀಲಾಗೆ ಬಹುಪರಾಕ್ ಎಂದ ಬಿಗ್ ಬಾಸ್

  ಶಕೀಲಾಗೆ ಬಹುಪರಾಕ್ ಎಂದ ಬಿಗ್ ಬಾಸ್

  ಶಕೀಲಾ ನೀವು ಕನ್ನಡ ಕಲಿಯುವ ಪ್ರಯತ್ನಕ್ಕೆ ಬಿಗ್ ಬಾಸ್ ಶ್ಲಾಘಿಸುತ್ತಾರೆ ಎಂದು ಹೇಳಿ ಕಳಿಸುತ್ತಾರೆ. ಆದರೆ, ಕನ್ಫೆಷನ್ ರೂಮಿನಿಂದ ಹೊರಗೆ ಬಂದ ಶಕೀಲಾ ಅಳುವಂತೆ ನಾಟಕ ಮಾಡುತ್ತಾರೆ. ನನಗೆ ಗೊತ್ತಿಲ್ಲ, ಅಕುಲ್ ಹೇಳಿಕೊಟ್ಟಂತೆ ನಟಿಸಿದೆ ಎಂದು ಶಕೀಲಾ ಸತ್ಯ ಹೊರ ಹಾಕಿದಾಗ ಎಲ್ಲರೂ ನಗೆ ಗಡಲಲ್ಲಿ ಮುಳುಗುತ್ತಾರೆ. ಈ ಮಧ್ಯೆ ಲಯ ಹೇರ್ ಸ್ಟೈಲ್ ಜಾರಿಯಲ್ಲಿರುತ್ತದೆ. ಈ ಬಾರಿ ಸೃಜನ್ ಕೈಯಲ್ಲಿ ಬಾಚಣಿಗೆ ಇರುತ್ತದೆ.

  ಕಿಚ್ಚನ ಪ್ರತಿಯೊಬ್ಬರು ಅನುಭವ ಹಂಚಿಕೊಂಡ್ರು

  ಕಿಚ್ಚನ ಪ್ರತಿಯೊಬ್ಬರು ಅನುಭವ ಹಂಚಿಕೊಂಡ್ರು

  ಬಿಗ್ ಬಾಸ್ ಸೀಸನ್ 2 ನಲ್ಲೂ ಅದೇ ಮೊದಲ ಸೀಸನ್ ನಂತೆ ಎಲ್ಲವೂ ಸಾಗಿದ್ದು ಹೊಸ ತನ ಏನೂ ಕಾಣಿಸಲಿಲ್ಲ. ಒಂದು ವಾರದ ಅನುಭವವನ್ನು ಹಂಚಿಕೊಂಡ ಸ್ಪರ್ಧಿಗಳು ಕೃತಕ ನಗೆ ಹೊತ್ತು ಕಿಚ್ಚನ ಮುಂದೆ 'ನಮ್ಮ ಸಂಸಾರ ಆನಂದ ಸಾಗರ' ಎಂದು ಹಾಡಿದಂತೆ ಇತ್ತು.

  ದೀಪಿಕಾ ನಗು ಬಗ್ಗೆ ಮಿಮಿಕ್ರಿ ಮಾತ್ರ ಮಸ್ತ್ ಆಗಿತ್ತು

  ದೀಪಿಕಾ ನಗು ಬಗ್ಗೆ ಮಿಮಿಕ್ರಿ ಮಾತ್ರ ಮಸ್ತ್ ಆಗಿತ್ತು

  ದೀಪಿಕಾ ನಗು ಬಗ್ಗೆ ಸೃಜನ್ ಲೋಕೇಶ್ ಮಿಮಿಕ್ರಿ ಮಾತ್ರ ಮಸ್ತ್ ಆಗಿತ್ತು. ದೀಪಿಕಾ ಮಾತ್ರ ನನಗೆ ಇಲ್ಲಿ ಅಡ್ಜೆಸ್ಟ್ ಆಗಲು ಇನ್ನೂ ಕೊಂಚ ಕಾಲ ಬೇಕು. ಮನೆಯನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ಒಪ್ಪಿಕೊಂಡರು. ನಂತರ ಮಾತನಾಡಿದ ಶಕೀಲಾ ಕೂಡಾ ದೀಪಿಕಾ ಮಾತಿಗೆ ದನಿಗೂಡಿಸಿದರು.

  ಬಿಗ್ ಬಾಸ್ ಗೆ ಮರ್ಯಾದೆ ಕೊಡಿ ಎಂದ ಕಿಚ್ಚ

  ಬಿಗ್ ಬಾಸ್ ಗೆ ಮರ್ಯಾದೆ ಕೊಡಿ ಎಂದ ಕಿಚ್ಚ

  ಅಕುಲ್ ಪ್ರಶಂಸಿಸಿ ಕಾಲೆಳೆದ ಕಿಚ್ಚ. 6 ಕೋಟಿ ಕನ್ನಡಿಗರು ಕಾರ್ಯಕ್ರಮ ನೋಡುತ್ತಿದ್ದಾರೆ. ಕಂಟೆಂಟ್ ಇಲ್ಲ ಅಂಥ ಏನೇನೋ ಮಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಬಗ್ಗೆ ಮಾಡಿದ ಕಾಮೆಂಟ್ ಬಗ್ಗೆ ಕಿಚ್ಚ ಸುದೀಪ್ ಬೇಸರ. ಅಕುಲ್ ಕ್ಷಮೆಯಾಚನೆ.

  ಬಿಗ್ ಬಾಸ್ ಇಲ್ಲಿ ನನ್ನನ್ನು ಸೇರಿದಂತೆ ಎಲ್ಲರಿಗೂ ಬಿಗ್ ಬಾಸ್ ಸೋ ಎಲ್ಲರೂ ಮರ್ಯಾದೆ ಕೊಟ್ಟು ನಡೆದುಕೊಳ್ಳಿ. ಇಲ್ಲಿಗೆ ನೀವು ಸ್ವ ಇಚ್ಛೆಯಿಂದ ಬಂದಿದ್ದೀರಿ ಎಂದು ನಂಬುತ್ತೇನೆ ಎಂದು ಸುದೀಪ್ ಹೇಳಿದರು.

  ಎಲ್ಲರಿಗೂ ಒಂದೊಂದು ಗಿಫ್ಟ್ ಹಂಚಿದ ಕಿಚ್ಚ

  ಎಲ್ಲರಿಗೂ ಒಂದೊಂದು ಗಿಫ್ಟ್ ಹಂಚಿದ ಕಿಚ್ಚ

  ಎಲ್ಲರಿಗೂ ಒಂದೊಂದು ವಿಶಿಷ್ಟ ಗಿಫ್ಟ್ ಕಳಿಸಿದ ಕಿಚ್ಚ, ಎಲ್ಲರಿಗೂ ಹಂಚಿದ ಆದಿ ಲೋಕೇಶ್

  ಚಿಕ್ಕಮಗಳೂರು ಎಸ್ಸೆಂಎಸ್ ಕಥೆಯೇನು?

  ಚಿಕ್ಕಮಗಳೂರು ಎಸ್ಸೆಂಎಸ್ ಕಥೆಯೇನು?

  ಲಯ ಅವರ ಚಿಕ್ಕಮಗಳೂರು ಎಸ್ಸೆಂಎಸ್ ಕಥೆಯೇನು? ಎಂದು ಸೃಜನ್ ಗೆ ಕೇಳಿದ ಸುದೀಪ್. ಫುಲ್ ಸತ್ಯವನ್ನು ಬಚ್ಚಿಟ್ಟರೂ ಕಥೆ ಹೇಳಿದ ಸೃಜನ್. ಲಯ ತಮ್ಮ ಪತ್ನಿಗೆ ಕಾಲ್ ಮಾಡಿದ್ದರು ಕಾಲ್ ಕಟ್ ಮಾಡಲು ಮರೆತು ಬಿಟ್ಟರು. ನಾವು ಅಲ್ಲಿ ಮಾತನಾಡಿದ ಎಲ್ಲಾ ನಾನ್ ವೆಜ್ ಸಂಭಾಷಣೆ ಅವರ ಪತ್ನಿ ಕೇಳಿಸಿಕೊಂಡರು ಎಂದು ಸೃಜನ್ ಹೇಳಿದರು.

  ಇಷ್ಟವಾದವರ ಜತೆ ಮಾತ್ರ ಇದ್ದಾರೆ

  ಇಷ್ಟವಾದವರ ಜತೆ ಮಾತ್ರ ಇದ್ದಾರೆ

  ಆಟಗಳು ಆಡುತ್ತಿದ್ದಾರೆ ಅನ್ನಿಸುತ್ತಿಲ್ಲ. ಇಷ್ಟವಾದವರ ಜತೆ ಮಾತ್ರ ಇದ್ದಾರೆ ಅನ್ನಿಸುತ್ತಿದೆ. ಗ್ರೂಪಿಸಂ ಶುರುವಾಗಿದೆ ಎನ್ನಲಾಗುವುದಿಲ್ಲ ಎಂದು ಮಯೂರ್ ಪಟೇಲ್ ಹೇಳಿಕೆ

  ಶಕೀಲಾಗೆ ಮರ್ಯಾದೆ ಕೊಡಪ್ಪ ಡಾರ್ಲಿಂಗ್

  ಶಕೀಲಾಗೆ ಮರ್ಯಾದೆ ಕೊಡಪ್ಪ ಡಾರ್ಲಿಂಗ್

  ಶಕೀಲಾಗೆ ಮರ್ಯಾದೆ ಕೊಡಪ್ಪ ಡಾರ್ಲಿಂಗ್ ಎಂದು ಆರ್ ಜೆ ರೋಹಿತ್ ಗೆ ಸುದೀಪ್ ಕಿವಿಮಾತು. ನಿಮ್ಮ ಬಗ್ಗೆ ನನ್ಗೆ ಗೊತ್ತು. ಜನಕ್ಕೆ ಗೊತ್ತಿಲ್ಲ. ಹೀಗಾಗಿ ಎಚ್ಚರದಿಂದ ಮಾತನಾಡಿ ಎಂದು ರೋಹಿತ್ ಗೆ ಸುದೀಪ್ ಹೇಳಿದ ಬೆನ್ನಲ್ಲೇ ಯು ಆರ್ ಸೇಫ್ ಅಂದರು

  ಹೊರಡುವ ಮುನ್ನ ರೋಹಿತ್ ಗೆ ಶಿಕ್ಷೆ

  ಹೊರಡುವ ಮುನ್ನ ರೋಹಿತ್ ಗೆ ಶಿಕ್ಷೆ

  ಬಿಗ್ ಬಾಸ್ ಆದೇಶದಂತೆ ಮನೆಯಿಂದ ಹೊರ ಬೀಳುವ ವೇಳೆ ಅನಿತಾ ಭಟ್ ತನ್ನ ಅಧಿಕಾರ ಬಳಸಿ ಮನೆಯ ಎಲ್ಲಾ ಪಾತ್ರೆಗಳನ್ನು ತೊಳೆಯಲು ರೋಹಿತ್ ರನ್ನು ನಾಮಿನೇಟ್ ಮಾಡಿದರು.

  English summary
  Bigg Boss Kannada season 2 Elimination Day 'Kicchina kathe Kichchana jote' Episode highlights. In the first week four members like Shakeela, Santhosh, RJ Rohith and Anita Bhat were nominated for elimination. Of the four contestants Anita Bhatt has been eliminated.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X