»   » ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳು

ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳು

Posted By:
Subscribe to Filmibeat Kannada

ಸುವರ್ಣ ವಾಹಿನಿಯ 'ಬಿಗ್ ಬಾಸ್ ಸೀಸನ್ 2' ಶುರುವಾಗಿದೆ. ಮನೆಯಲ್ಲಿ ಮಹಿಳೆಯರು ಸಮಬಲದಲ್ಲಿದ್ದಾರೆ. ಅಂದರೆ ಮಹಿಳೆಯರಿಗೆ ಶೇ.50ರಷ್ಟು ಮೀಸಲಾತಿ ಕೊಟ್ಟಿದ್ದಾರೆ ಬಿಗ್ ಬಾಸ್. ಈ ಬಾರಿ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳು ಯಾರೆಂದು ನೋಡೋಣ ಬನ್ನಿ.

ಮನೆಯಲ್ಲಿ ಈ ಸಲ ಗ್ಲಾಮರ್ ಟಚ್ ಕೊಡಲು, ಕಣ್ಣೀರ ಕೋಡಿ ಹರಿಸಲು, ಮನೆ ಮಗಳಂತೆ ಕಾಣಲು, ಮುಗ್ಧವಾಗಿ ಕಾಣಲು, ಬೋಲ್ಡ್ ಆಗಿ ಮಾತನಾಡಲು ಹೀಗೆ ಹಲವಾರು ವ್ಯಕ್ತಿತ್ವವುಳ್ಳ ಸ್ಪರ್ಧಿಗಳು ಮನೆಯಲ್ಲಿದ್ದಾರೆ. ಜೊತೆಗೆ ಮನೆಯ ಹಿರಿಯ ಸದಸ್ಯೆ ಎಂದರೆ ಒನ್ ಅಂಡ್ ಓನ್ಲಿ ಶಕೀಲಾ. [ಬಹುತೇಕ ಸೀರಿಯಸ್ ಸ್ಪರ್ಧಿಗಳು ತಮಾಷೆನೇ ಅಲ್ಲ!]

ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳ ಕಿರುಪರಿಚಯ ಮಾಡಿಕೊಳ್ಳೋಣ ಬನ್ನಿ. ಅಂತಿಮವಾಗಿ ಯಾರು ಯಾರ ಮನಗೆಲ್ಲುತ್ತಾರೆ, ಎಷ್ಟು ದಿನ ಮನೆಯಲ್ಲಿ ಉಳಿಯುತ್ತಾರೆ ಎಂಬುದೇ ವಿಶೇಷ. ಸ್ಪರ್ಧಿಗಳ ಕಿರುಪರಿಚಯ ಸ್ಲೈಡ್ ನಲ್ಲಿ... ['ಬಿಗ್ ಬಾಸ್' ಮನೆಯ ಖತರ್ನಾಕ್ ಕಿಲಾಡಿಗಳು]

ಕಿರುತೆರೆಯ ದಂತದಗೊಂಬೆ ಅನುಪಮಾ ಭಟ್

ಈಟಿವಿ ಕನ್ನಡ ವಾಹಿನಿಯ 'ತಕಧಿಮಿತಾ ಡಾನ್ಸಿಂಗ್ ಸ್ಟಾರ್' ಹಾಗೂ ಉದಯ ಟಿವಿ 'ಕಿಚನ್ ತಾರೆ' ನಿರೂಪಕಿ, ಕಿರುತೆರೆಯ ದಂತದಗೊಂಬೆ ಅನುಪಮಾ ಭಟ್ ತಮ್ಮ ಮುಗ್ಧತೆಯಿಂದಲೇ ಎಲ್ಲರ ತನುಮನ ಗೆದ್ದ ಹುಡುಗಿ. ಡಾನ್ಸಿಂಗ್ ಸ್ಟಾರ್ ಗೆ ಬಂದ ಬಳಿಕ ಹತ್ತು ಕೆ.ಜಿ ತೂಕ ಇಳಿಸಿಕೊಂಡಿದ್ದರೂ ಡುಂಡು ಮಲ್ಲಿಗೆಯಂತೆಯೇ ಕಾಣುವ ಈಕೆ ಖ್ಯಾತ ಹಿನ್ನೆಲೆ ಗಾಯಕಿ ಅನುರಾಧಾ ಭಟ್ ಅವರ ಸೋದರಿ. " ಕುಂತಲಿ ಕೂರಂಗಿಲ್ಲ...ನಿಂತಲ್ಲಿ ನಿಲ್ಲಗಿಲ್ಲ...ಏನೇನೋ ಅಗ್ತೈತಲ್ಲಾ...ಹೇಳೋಕೆ ಮಾತೇ ಇಲ್ಲ...ಜುಂ ಜುಂ ಮಾಯಾ ಜುಂ ಜುಂ ಮಾಯ ಪ್ರಾಯ ಬಂದ್ರೆ ಏನಿದು ಮಾಯ..." ವೀರಮದಕರಿ ಚಿತ್ರದ ಹಾಡನ್ನು ಹಾಡಿ ತಂಗಿಗೆ ಶುಭ ಕೋರಿದರು.

ಯಾರಿಗುಂಟು ಯಾರಿಗಿಲ್ಲ ಶ್ವೇತಾ ಚೆಂಗಪ್ಪ

ಜೀ ಕನ್ನಡ ವಾಹಿನಿಯ 'ಯಾರಿಗುಂಟು ಯಾರಿಗಿಲ್ಲ' ಶೋ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ಟೈಟಲ್ ರೋಲ್ ಪೋಷಿಸಿ ಖ್ಯಾತರಾದವರು ಶ್ವೇತಾ ಚೆಂಗಪ್ಪ. ಇಡೀ ಕರ್ನಾಟಕ ಮಹಿಳೆಯರನ್ನ ಟೀವೀ ಮುಂದೆ ಕೂರಿಸಿದ ಕಲಾವಿದೆ. ಕಣ್ಣೀರನ್ನು ನೀರಿಗಿಂತ ಹೆಚ್ಚು ಸುರಿಸಿರುವ ಖ್ಯಾತಿ ಇವರದು. ಸುಮತಿ, ಕಾದಂಬರಿ, ಸುಕನ್ಯ, ಪುನರ್ಜನ್ಮ, ಅರುಂಧತಿ ಧಾರಾವಾಹಿಗಳಿಂದ ಮನೆಮಾತಾದವರು.

ಕನ್ನಡದ ಶೆರ್ಲಿನ್ ಚೋಪ್ರಾ ಅನಿತಾ ಭಟ್

ಮಾತಿನಲ್ಲೇ ಪಟಾಕಿ ಸಿಡಿಸುವ ಬೆಡಗಿ ಕನ್ನಡದ ಶೆರ್ಲಿನ್ ಚೋಪ್ರಾ ಅನಿತಾ ಭಟ್ ಬಿಗ್ ಬಾಸ್ ಮನೆಗೆ ಅಡಿಯಿಟ್ಟಿದ್ದಾರೆ. ಸೈಕೋ ಚಿತ್ರದ "ನಿನ್ನ ಪೂಜೆಗೆ ಬಂದೆ ಮಾದೇಶ್ವರ..." ಮೂಲಕ ಕನ್ನಡ ಬೆಳ್ಳಿಪರದೆಗೆ ಅಡಿಯಿಟ್ಟ ಬೆಡಗಿ. ಉತ್ತಮ ನಟನಾ ಕೌಶಲ್ಯ ಹಾಗೂ ಪ್ರೇಕ್ಷಕರ ಕಣ್ಣಿಗೆ ತಂಪೆರವ ಚೆಲುವು. ಸದ್ಯಕ್ಕೆ ಈಗವರು ಯೋಗರಾಜ್ ಭಟ್ ಅವರ ಪರಪಂಚ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ದಾಸ್ವಾಳ ಹಾಗೂ ರಾಜ್ ಬಹದ್ದೂರ್ ಚಿತ್ರಗಳಲ್ಲಿ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಕಣ್ಣು ಕುಕ್ಕುವ ದೇಹಸಿರಿಯಿಂದಲೇ ಎಲ್ಲರ ಗಮನಸೆಳೆದ ಬೆಡಗಿ.

ಎಲ್ಲರನ್ನೂ ನಾಚಿಸಲು ಬಂದಿದ್ದಾರೆ ನೀತೂ

ನಮಿತಾರನ್ನು ನಾಚಿಸುವಂತಹಾ ಮೈಮಾಟದ ಬೆಡಗಿ ನೀತೂ. ನಾಗತಿಹಳ್ಳಿ ಚಂದ್ರಶೇಖರ್ ಅವರ ಪುಣ್ಯ ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಅಡಿಯಿಟ್ಟ ನೀತೂ ಬಹಳ ಚಿತ್ರಗಳಲ್ಲಿ ಅಭಿನಯಿಸಿದರೂ ಪ್ರೇಕ್ಷಕರ ಮನವನ್ನು ಸಂಪೂರ್ಣವಾಗಿ ಗೆಲ್ಲಲು ಸಾಧ್ಯವಾಗಲಿಲ್ಲ. ಇತ್ತೀಚಿನ ಕ್ರೇಜಿಸ್ಟಾರ್ ಚಿತ್ರದಲ್ಲಿ ವೇಶ್ಯೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಯಲ್ಲಿ ಅವರು 'ಐಸ್ ಪೈಸ್' ಎಷ್ಟರ ಮಟ್ಟಿಗೆ ವರ್ಕ್ ಔಟ್ ಆಗುತ್ತದೋ ನೋಡಬೇಕು.

ಕೊಡಗಿನ ಬೆಡಗಿ 'ಬಿತ್ರಿ' ಹರ್ಷಿಕಾ ಪೂಣಚ್ಚ

ತಂಗಿಯ ಪಾತ್ರಗಳನ್ನು ಪೋಷಿಸುತ್ತಿದ್ದ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ಬದಲಾಗಿದ್ದಾರೆ. ಪಿಯುಸಿ ಚಿತ್ರದ ಮೂಲಕ ಬೆಳ್ಳಿತೆರೆಗೆ ಅಡಿಯಿಟ್ಟ ಹರ್ಷಿಕಾ ಬಳಿಕ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಜಾಕಿ, ತಮಸ್ಸು, ಬಿತ್ರಿ, ಕೇಸ್ ನಂಬರ್ 18/9 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಚಿಂಗಾರಿ ಬೆಡಗಿ ದೀಪಿಕಾ ಕಾಮಯ್ಯ

ಐದು ವರ್ಷಗಳ ಕಾಲ ರೂಪದರ್ಶಿಯಾಗಿ ಕ್ಯಾಟ್ ವಾಕ್ ಮಾಡಿದ ಬೆಡಗಿ ಚಿತ್ರರಂಗಕ್ಕೆ ಅಡಿಯಿಟ್ಟ ಬೆಡಗಿ. ದೀಪಿಕಾಗೆ ಚಿಂಗಾರಿ ಕನ್ನಡದ ಮೊದಲ ಚಿತ್ರ. ಆಟೋರಾಜ, ನೀನೆ ಬರಿ ನೀನೆ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ತಮಿಳು ಹಾಗೂ ಹಿಂದಿ ಚಿತ್ರಗಳಲ್ಲೂ ದೀಪಿಕಾ ಅಭಿನಯಿಸಿರುವುದು ವಿಶೇಷ.

ಮನೆಯ ಪ್ರಮುಖ ಆಕರ್ಷಣೆ ಶಕೀಲಾ

ತಮ್ಮ ವೃತ್ತಿಬದುಕಿನಲ್ಲಿ ಸಾಕಷ್ಟು ನೋವುಂಡ ತಾರೆ ಶಕೀಲಾ. ಈಗವರು ಬಿಗ್ ಬಾಸ್ ಗೆ ಅಡಿಯಿಟ್ಟಿರುವುದು ಹಲವರ ಎದೆನಡುಗಿಸಿದೆ. ಯಾರ ಯಾರ ಹೆಸರುಗಳು ಮನೆಯಲಿ ಬಹಿರಂಗವಾಗುತ್ತವೋ ಏನೋ ಎಂಬ ಕುತೂಹಲವಂತೂ ಇದ್ದೇ ಇದೆ. [ಶಕೀಲಾ ಆತ್ಮಕಥೆಯ ಕೆಲವು ಕಣ್ಣೀರ ಪುಟಗಳು]

English summary
Here is the list of women contestants of Bigg Boss Kannada 2 reality show. This time bigg boss given 50% reservation to women contestants. Anupama Bhat, Shwetha Chengappa, Anita Bhat, Harshika Poonacha, Neethu, Deepika Kamaiah and Shakeela are the women contestants in the house.
Please Wait while comments are loading...