For Quick Alerts
  ALLOW NOTIFICATIONS  
  For Daily Alerts

  ನಟ ಚಂದನ್ 'ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡಿದ್ದು ಯಾಕೆ?

  By Harshitha
  |

  'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಕಳೆದ ವಾರ 'ಆತ್ಮೀಯ'ನ ಜೊತೆ ಫೋನ್ ಬೂತ್ ನಲ್ಲಿ ಆಟವಾಡಿದ ಪರಿಣಾಮ ನಟ ಚಂದನ್ ಗೆ ತಲೆ ಬೋಳಿಸಿಕೊಳ್ಳುವ ಚಾಲೆಂಜ್ ಎದುರಾಯ್ತು.

  ನೇರ ನಾಮಿನೇಷನ್ ನಿಂದ ತಪ್ಪಿಸಿಕೊಳ್ಳುವ ಸಲುವಾಗಿ ನಟ ಚಂದನ್ ಹೆಡ್ ಶೇವ್ ಮಾಡಿಕೊಳ್ಳುವ ತೀರ್ಮಾನಕ್ಕೆ ಬಂದರು.

  ಇನ್ನೂ ನಟ ಚಂದನ್ ಬಗ್ಗೆ ಒಳ್ಳೆಯ ಅಭಿಪ್ರಾಯ ವ್ಯಕ್ತಪಡಿಸದ ನಟಿ ಪೂಜಾ ಗಾಂಧಿಗೆ, ಚಂದನ್ ತಲೆ ಶೇವ್ ಮಾಡುವ ಟಾಸ್ಕ್ ಬಿತ್ತು. ಆಗ ಇಬ್ಬರ ನಡುವೆ ನಡೆದ ಡ್ರಾಮಾ ಅಷ್ಠಿಷ್ಟಲ್ಲ. ['ಬಿಗ್ ಬಾಸ್'ಗಾಗಿ ತಲೆ ಬೋಳಿಸಿಕೊಂಡ ನಟ ಚಂದನ್.!]

  ಅಸಲಿಗೆ, ಚಂದನ್ ತಲೆ ಬೋಳಿಸಿಕೊಂಡಿದ್ದಾದರೂ ಯಾಕೆ? 'ಬಿಗ್ ಬಾಸ್' ನೀಡಿದ ಟಾಸ್ಕ್ ಏನು? ಪೂಜಾ ಗಾಂಧಿ ತಗಲಾಕೊಂಡಿದ್ದು ಹೇಗೆ? ಎನ್ನುವ ಪ್ರಶ್ನೆಗಳನ್ನ ಇಟ್ಕೊಂಡು ಕಿಚ್ಚ ಸುದೀಪ್ 'ವಾರದ ಕಥೆ ಕಿಚ್ಚ ಜೊತೆ' ಕಾರ್ಯಕ್ರಮದಲ್ಲಿ ಪಂಚಾಯತಿ ನಡೆಸಿದರು.

  ಅದರಲ್ಲಿ ಚಂದನ್ ಮತ್ತು ಪೂಜಾ ಗಾಂಧಿ ಏನು ಹೇಳಿದರು ಅಂತ ಕೆಳಗಿರುವ ಸ್ಲೈಡ್ ಗಳಲ್ಲಿ ಅವರ ಮಾತುಗಳಲ್ಲೇ ಓದಿ......

  'ಫೋನ್ ಬೂತ್' ಟಾಸ್ಕ್

  'ಫೋನ್ ಬೂತ್' ಟಾಸ್ಕ್

  ಆಂಗ್ಲ ಸಿನಿಮಾ 'ಫೋನ್ ಬೂತ್' ನಿಂದ ಪ್ರೇರಿತಗೊಂಡು 'ಬಿಗ್ ಬಾಸ್' ಕಳೆದ ವಾರ ಮನೆಯೊಳಗೆ ಫೋನ್ ಬೂತ್ ಫಿಕ್ಸ್ ಮಾಡಿದ್ರು. ಫೋನ್ ನಲ್ಲಿ ಮಾತನಾಡುತ್ತಿದ್ದ ಧ್ವನಿ 'ಬಿಗ್ ಬಾಸ್'ರದ್ದಲ್ಲ. ಫೋನ್ ಕಾಲ್ ಮಾಡಿದವರು, ಮನೆ ಸದಸ್ಯರಿಗೆ ಹೇಳುವ ಕೆಲಸ ಮಾಡಲೇಬೇಕು ಅಂತ 'ಬಿಗ್ ಬಾಸ್' ಹೇಳ್ಲಿಲ್ಲ. ಆದರೂ, ಮನೆಯ ಸದಸ್ಯರು 'ಆತ್ಮೀಯ'ನ ಮಾತುಗಳನ್ನ ತಪ್ಪದೆ ಪಾಲಿಸಿದರು.

  ಸುದೀಪ್ ನೀಡಿದ ಸ್ಪಷ್ಟನೆ

  ಸುದೀಪ್ ನೀಡಿದ ಸ್ಪಷ್ಟನೆ

  ''ಯಾರೋ ಮಾಡಿದ ಫೋನ್ ಗೆ ಇಷ್ಟೊಂದು ಗಂಭೀರವಾಗಿ ತೆಗೆದುಕೊಳ್ತೀರಾ ಅಂತ ನಾವು ಕೂಡ ಗಂಭೀರವಾಗಿ ಅಂದುಕೊಂಡಿರಲೇ ಇಲ್ಲ'' - ಸುದೀಪ್

  ಚಂದನ್ ತಲೆ ಬೋಳಿಸಿದ್ದು ಯಾಕೆ?

  ಚಂದನ್ ತಲೆ ಬೋಳಿಸಿದ್ದು ಯಾಕೆ?

  ''ಇದು biggest oppurtunity ನಂಗೆ. ಈ ಶೋಗೆ ನಾನು ಏನು ಕೊಡ್ತೀನಿ ಅನ್ನೋದನ್ನ ಮೊದಲು ಥಿಂಕ್ ಮಾಡುತ್ತಿರುತ್ತೇನೆ, ನನ್ನ ಕಡೆಯಿಂದ ಏನು ಸಾಧ್ಯ ಅಂತ. ಟಾಸ್ಕ್ ವಿಷಯಕ್ಕೆ ಬಂದ್ರೆ ನಾನು 100% ಕೊಡ್ತೀನಿ. ಅದಕ್ಕೆ ಹೆಡ್ ಶೇವ್ ಮಾಡಿಕೊಂಡೆ'' - ಚಂದನ್

  ಪೂಜಾ ಗಾಂಧಿ ಯಾಕೆ?

  ಪೂಜಾ ಗಾಂಧಿ ಯಾಕೆ?

  ''ಪೂಜಾ ಗಾಂಧಿ ನನ್ನನ್ನ ಹೇಟ್ ಮಾಡುವುದಕ್ಕೆ ಕಾರಣ ಏನು ಅನ್ನೋದು ನನಗೆ ಗೊತ್ತಾಗಬೇಕಿತ್ತು. ಆಮೇಲೆ ಅವರಿಗೆ realize ಆಗಿ ಕಣ್ಣಲ್ಲಿ ನೀರು ಬಂತು. I don't hate you ಚಂದನ್ ಅಂತ ಹೇಳಿದ್ರು. ಅಷ್ಟು ಸಾಕು ನನಗೆ'' - ಚಂದನ್

  ಪೂಜಾ ಗಾಂಧಿ ಮನಸ್ಸಲ್ಲಿ ಏನಿತ್ತು?

  ಪೂಜಾ ಗಾಂಧಿ ಮನಸ್ಸಲ್ಲಿ ಏನಿತ್ತು?

  ''ನನ್ನಿಂದ ಅವರು ಎವಿಕ್ಟ್ ಆಗುವುದು ಇಷ್ಟವಿರಲಿಲ್ಲ. ಅದಕ್ಕೆ ನಾನು ಮಾಡ್ತೀನಿ ಅಂತ ಹೆಡ್ ಶೇವ್ ಮಾಡ್ದೆ'' - ಪೂಜಾ ಗಾಂಧಿ

  ಸುಷ್ಮಾ ವೀರ್ ಹೇಳುವುದೇನು?

  ಸುಷ್ಮಾ ವೀರ್ ಹೇಳುವುದೇನು?

  ''ಪೂಜಾ ಗಾಂಧಿ ಮತ್ತು ಚಂದನ್ ನಡುವೆ ಇದು emotional war ಆಗಿತ್ತು. ಅದು ದೊಡ್ಡದಾಗಿದ್ದು ರೆಹಮಾನ್, ಅಯ್ಯಪ್ಪ ಮತ್ತು ಪೂಜಾ ಗಾಂಧಿ ನಡುವೆ'' - ಸುಷ್ಮಾ ವೀರ್

  ರೆಹಮಾನ್ ಅಭಿಪ್ರಾಯವೇನು?

  ರೆಹಮಾನ್ ಅಭಿಪ್ರಾಯವೇನು?

  ''ಕೆರಿಯರ್ ಇದೆ ಚಂದನ್ ಗೆ. ಎರಡ್ಮೂರು ಸಿನಿಮಾ ಸೈನ್ ಮಾಡಿದ್ದಾರೆ. ಹೆಡ್ ಶೇವ್ ಮಾಡೋದ್ರಿಂದ ಪ್ರಾಬ್ಲಂ ಆಗಬಾರದು ಅಂತ ಬೇಡ ಅಂತ ಹೇಳಿದ್ದೆ'' - ರೆಹಮಾನ್

  ಚಂದನ್ ಡ್ರಾಮಾ

  ಚಂದನ್ ಡ್ರಾಮಾ

  ''ನನಗೆ ಆಗಿರುವ ನೋವು ಪೂಜಾ ಗೆ ಗೊತ್ತಾಗಬೇಕು ಎನ್ನುವ ಕಾರಣಕ್ಕೆ ಬೇರೆಲ್ಲಾ ಪದಗಳನ್ನ ಉಪಯೋಗಿಸಿ, ಆಕ್ಟ್ ಮಾಡಿ, ಪೂಜಾ ಕೈಯಲ್ಲಿ ಹಠಕ್ಕೆ ಬಿದ್ದು ಮಾಡಿಸಿಕೊಂಡ ಅಂತ ನನಗೆ ಅನಿಸ್ತು'' - ಶ್ರುತಿ

  ಸುದೀಪ್ ಕೊಟ್ಟ ಪಂಚ್!

  ಸುದೀಪ್ ಕೊಟ್ಟ ಪಂಚ್!

  ''ನಾನು ತಲೆ ಬೋಳಿಸಿದ ಮೇಲೆ ಉದ್ಧಾರ ಆಗಿದ್ದು. ತಲೆ ಕೂದಲು ಬಿಟ್ಟಾಗ ಯಾರೂ ಕೆಲಸ ಕೊಡಲಿಲ್ಲ. ತಲೆ ಬೋಳಿಸಿದ ಮೇಲೆ ಸಿನಿಮಾಗಳು ಶುರುವಾಯ್ತು'' - ಸುದೀಪ್

  English summary
  Kannada Actor Chandan clarified as to why he agreed to shave his head in Bigg Boss House.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X