»   » ಅಂತೂ ಇಂತೂ 'ತಂಬೂರಿ ಪೆಟ್ಟಿ' ಕೃತಿಕಾ ಔಟ್ ಆದ್ರಪ್ಪಾ!

ಅಂತೂ ಇಂತೂ 'ತಂಬೂರಿ ಪೆಟ್ಟಿ' ಕೃತಿಕಾ ಔಟ್ ಆದ್ರಪ್ಪಾ!

Posted By:
Subscribe to Filmibeat Kannada

ಕಡೆಗೂ 'ಬಿಗ್ ಬಾಸ್-3' ವೀಕ್ಷಕರು ಕಾಯುತ್ತಿದ್ದ ಘಳಿಗೆ ಬಂದು ಬಿಟ್ಟಿದೆ. 'ಬಿಗ್ ಬಾಸ್' ಮನೆಯ 'ಡ್ರಾಮಾ ಕ್ವೀನ್' ಅಂತಲೇ ಖ್ಯಾತಿ ಗಳಿಸಿದ್ದ 'ರಾಧಾ ಕಲ್ಯಾಣ' ಖ್ಯಾತಿಯ ಕೃತಿಕಾ ಈ ವಾರ ಎಲಿಮಿನೇಟ್ ಆದರು.

ಕಿರುತೆರೆ ನಟಿಯಾಗಿರುವ ನಟಿ ಕೃತಿಕಾಗೆ ಫ್ಯಾನ್ ಫಾಲೋವರ್ಸ್ ಕಡಿಮೆ. ನಟಿ ಪೂಜಾ ಗಾಂಧಿ, ನಟಿ ಶ್ರುತಿ, ಮಾಸ್ಟರ್ ಆನಂದ್ ಮತ್ತು ಸುನಾಮಿ ಕಿಟ್ಟಿಗೆ ಹೋಲಿಸಿದರೆ ಜನಪ್ರಿಯತೆಯಲ್ಲೂ ಕೃತಿಕಾ ಕೊಂಚ ಹಿಂದೆ. ['ಬಿಗ್ ಬಾಸ್ ಅಲ್ಲ ಫ್ಲಾಪ್ ಬಾಸ್ ಡೌನ್ ಡೌನ್' ಅಂತಾವ್ರೆ ವೀಕ್ಷಕರು!]

kruthika

ವೀಕ್ಷಕರಿಂದ ಕಡಿಮೆ ಎಸ್.ಎಂ.ಎಸ್ ಪಡೆದ ನಟಿ ಕೃತಿಕಾ ಈ ವಾರ 'ಬಿಗ್ ಬಾಸ್' ಮನೆಯಿಂದ ಗೇಟ್ ಪಾಸ್ ಪಡೆದರು. ಅಲ್ಲಿಗೆ, ವಾರಗಳಿಂದ ಕೃತಿಕಾ ಔಟ್ ಆಗ್ಬೇಕು ಅಂತ ಸಾಮಾಜಿಕ ಜಾಲಾತಾಣಗಳಲ್ಲಿ ಬೊಬ್ಬೆ ಇಡುತ್ತಿದ್ದ ವೀಕ್ಷಕರು ನಿಟ್ಟುಸಿರು ಬಿಟ್ಟಿದ್ದಾರೆ. ['ಕೃತಿಕಾ ಕೊಡೋ ಟಾರ್ಚರ್ ಹೆಂಗ್ ಗುರು ತಡೆಯೋದು?!']

ವೀಕ್ಷಕರ ಎಸ್.ಎಂ.ಎಸ್ ಕೃಪಾಕಟಾಕ್ಷದಿಂದ ಏಳನೇ ಬಾರಿ ಸುನಾಮಿ ಕಿಟ್ಟಿ ಸೇಫ್ ಆದರು. ಹಾಗೇ, ನಟಿ ಶ್ರುತಿ, ಪೂಜಾ ಗಾಂಧಿ, ಮಾಸ್ಟರ್ ಆನಂದ್ ಕೂಡ ಬಚಾವ್ ಆದರು.

English summary
Kannada Serial Actress Kruthika is eliminated from Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada