»   » ಸುಷ್ಮಾ ವೀರ್ ಗೆ ಕೃತಿಕಾ ಕೊಟ್ಟ ಡಮ್ಮರ್ ಗೊಟ್ಟ.!

ಸುಷ್ಮಾ ವೀರ್ ಗೆ ಕೃತಿಕಾ ಕೊಟ್ಟ ಡಮ್ಮರ್ ಗೊಟ್ಟ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಿಂದ ಈ ವಾರ ನಟಿ ಕೃತಿಕಾ ಔಟ್ ಆದರು. 'ಬಿಗ್ ಬಾಸ್' ಮನೆಯಿಂದ ಹೊರಬರುವ ಮುನ್ನ ನಟಿ ಕೃತಿಕಾಗೆ ಒಂದು ವಿಶೇಷ ಅಧಿಕಾರ ಲಭಿಸಿತ್ತು.

ಮುಂದಿನ ವಾರದ ಎಲಿಮಿನೇಷನ್ ಪ್ರಕ್ರಿಯೆಗೆ ಒಬ್ಬ ಸದಸ್ಯರನ್ನ ನೇರವಾಗಿ ನಾಮಿನೇಟ್ ಮಾಡುವ ಅಧಿಕಾರ ಕೃತಿಕಾಗೆ ಸಿಕ್ತು. ಈ ಅಧಿಕಾರವನ್ನ ಸದುಪಯೋಗ ಪಡಿಸಿಕೊಂಡ ನಟಿ ಕೃತಿಕಾ ಹಿಂದು ಮುಂದು ನೋಡದೆ ನಟಿ ಸುಷ್ಮಾ ವೀರ್ ರನ್ನ ಆಯ್ಕೆ ಮಾಡಿದರು.

kruthika-sushma-veer

ಅದರ ಪರಿಣಾಮ, ಮುಂದಿನ ವಾರದ ಎಲಿಮಿನೇಷನ್ ಗೆ ಸುಷ್ಮಾ ನೇರವಾಗಿ ನಾಮಿನೇಟ್ ಆಗಿದ್ದಾರೆ. 'ಬಿಗ್ ಬಾಸ್' ಮನೆಯೊಳಗೆ ಕಾಲಿಟ್ಟಾಗಿನಿಂದಲೂ ನಟಿ ಸುಷ್ಮಾ ವೀರ್ ಗೂ, ನಟಿ ಕೃತಿಕಾಗೂ ಅಷ್ಟಕಷ್ಟೆ. [ಅಂತೂ ಇಂತೂ 'ತಂಬೂರಿ ಪೆಟ್ಟಿ' ಕೃತಿಕಾ ಔಟ್ ಆದ್ರಪ್ಪಾ!]

ಟಾಸ್ಕ್ ವಿಚಾರವಾಗಿ ಇಬ್ಬರ ನಡುವೆ ಆಗಾಗ ಮಾತಿನ ಚಕಮಕಿ ನಡೆಯುತ್ತಲೇ ಇತ್ತು. ಎಲ್ಲದರಿಂದ ಬೇಸೆತ್ತಿದ್ದ ಕೃತಿಕಾ ಹೊರ ಹೋಗುವ ಮುನ್ನ ಸುಷ್ಮಾ ವೀರ್ ಗೆ ಡಮ್ಮರ್ ಗೊಟ್ಟ ಕೊಟ್ಟು ಹೋಗಿದ್ದಾರೆ.!

English summary
Before leaving the house, Kannada Serial Actress Kruthika nominated Sushma Veer for next week elimination in Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada