For Quick Alerts
  ALLOW NOTIFICATIONS  
  For Daily Alerts

  ಅಯ್ಯಪ್ಪಗೆ ಕಪಾಳ ಮೋಕ್ಷ ಮಾಡಬೇಕಂತೆ ಪೂಜಾ ಗಾಂಧಿ!

  By Harshitha
  |

  'ಮಳೆ ಹುಡುಗಿ' ನಟಿ ಪೂಜಾ ಗಾಂಧಿ ಮತ್ತು ಕ್ರಿಕೆಟರ್ ಅಯ್ಯಪ್ಪ ನಡುವೆ ಏನೇನೆಲ್ಲಾ ನಡೆದಿದೆ ಅನ್ನೋದನ್ನ ನೀವೆಲ್ಲಾ 'ಬಿಗ್ ಬಾಸ್' ಕಾರ್ಯಕ್ರಮದಲ್ಲಿ ನೋಡಿರ್ತೀರಾ.

  'ಬಿಗ್ ಬಾಸ್' ಮನೆಯಲ್ಲಿ ಗೌತಮಿ ಗೌಡ ಎಂಟ್ರಿ ಪಡೆದುಕೊಂಡ ನಂತರ ಅಯ್ಯಪ್ಪ ಗಮನ ಬದಲಾಗಿದ್ದನ್ನೂ ನೀವು ಗಮನಿಸಿರ್ತ್ತೀರಾ. ಇದೇ ವಿಚಾರವಾಗಿ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ರಂಪ-ರಾಮಾಯಣ ಕೂಡ ಆಗಿತ್ತು. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]

  'ಬಿಗ್ ಬಾಸ್' ನೀಡಿದ 'ಬೇತಾಳ ಟಾಸ್ಕ್'ನಲ್ಲಿ ಎಲ್ಲವೂ ಕ್ಲಿಯರ್ ಆಗಿದೆ ಅಂದುಕೊಂಡರೂ ಗೌತಮಿ ಜೊತೆ ಅಯ್ಯಪ್ಪ ವರ್ತನೆ ಮಾತ್ರ ಬದಲಾಗ್ಲಿಲ್ಲ. ಅಯ್ಯಪ್ಪ ಮತ್ತು ಪೂಜಾ ಗಾಂಧಿ 'ಜೋಡಿ ನಂಬರ್.1' ಪಟ್ಟ ಅಲಂಕರಿಸಿದರೂ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮಾತ್ರ ಶಮನ ಆಗಿಲ್ಲ.

  ಅದಕ್ಕೆ ''I just want to slap you so tightly'' ಅಂತ ಅಯ್ಯಪ್ಪಗೆ ಪೂಜಾ ಗಾಂಧಿ ಹೇಳಿದ್ದು. 'ಬಿಗ್ ಬಾಸ್' ಮನೆಯಲ್ಲಿ 83ನೇ ದಿನ ಏನಾಯ್ತು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

  ಗೌತಮಿ ಮತ್ತು ಅಯ್ಯಪ್ಪ ನಡುವಿನ ಸಂಭಾಷಣೆ!

  ಗೌತಮಿ ಮತ್ತು ಅಯ್ಯಪ್ಪ ನಡುವಿನ ಸಂಭಾಷಣೆ!

  ಗೌತಮಿ - ''ಯಾಕೆ ಮಾತನಾಡುತ್ತಿಲ್ಲ ನೀವಿಬ್ಬರು ಈಗ?''
  ಅಯ್ಯಪ್ಪ - ''ಅವಳು (ಪೂಜಾ ಗಾಂಧಿ) ಹೇಳಿದ್ಲಲ್ಲಾ ಟಾಸ್ಕ್ ನಲ್ಲೇ ಔಟ್ ಆಫ್ ಬೋರ್ಡ್ ಹೋಗ್ತಿರೋದು ಯಾರು ಅಂತ! ಅದಕ್ಕೆ ಥ್ಯಾಂಕ್ಸ್ ಹೇಳಿಬಿಟ್ಟು ಬಂದೆ'' [ಇದ್ದದ್ದು ಇಲ್ಲದ್ಹಂಗೆ, ಇಲ್ದದ್ದು ಕಂಡ್ಹಂಗೆ ಅಯ್ಯಪ್ಪಗೆ ಟಾಂಗ್ ಕೊಟ್ಟ ಶ್ರುತಿ]

  ಕಪಾಳ ಮೋಕ್ಷ ಮಾಡ್ಬೇಕು!

  ಕಪಾಳ ಮೋಕ್ಷ ಮಾಡ್ಬೇಕು!

  ಪೂಜಾ ಗಾಂಧಿ - ''ನೀನು ಆಕ್ಟ್ ಮಾಡುತ್ತಿರುವ ರೀತಿ ನಿಜವಾಗ್ಲೂ Its unbelievable. ನನಗೆ ಯಾಕೋ digest ಆಗ್ತಿಲ್ಲ. I just want to slap you so tightly''
  ಅಯ್ಯಪ್ಪ - ''ನಿನ್ನ ಲಕ್ ಟ್ರೈ ಮಾಡು''
  ಪೂಜಾ ಗಾಂಧಿ - ''ಹೌದಾ.?''

  ಪೂಜಾ ಗಾಂಧಿ ಹೇಳುವುದೇನು?

  ಪೂಜಾ ಗಾಂಧಿ ಹೇಳುವುದೇನು?

  ಪೂಜಾ ಗಾಂಧಿ - ''ನಾನು ಕರೆಕ್ಟ್ ಆಗಿ ಟಾಸ್ಕ್ ಮಾಡ್ತಿದ್ದೀನಿ. ನೀನು ನನಗೆ ಮೂರ್ನಾಲ್ಕು ಬಾರಿ ಅನವಶ್ಯಕವಾಗಿ ನೋಡೋದು ನನಗೆ ಇಷ್ಟ ಆಗ್ಲಿಲ್ಲ. ನಾನು 'ಜೋಕರ್' ಆಗಿ ಆಕ್ಟ್ ಮಾಡ್ತಿದ್ದೀನಿ. ನಿಮಗೆ ಅದು ಜೋಕ್ ಅಂತ ಅನಿಸ್ಲಿಲ್ಲ ಅಂದ್ರೆ ನಾನು ಏನ್ ಮಾಡ್ಲಿ?''

  ಅಯ್ಯಪ್ಪ ಉತ್ತರವೇನು?

  ಅಯ್ಯಪ್ಪ ಉತ್ತರವೇನು?

  ಅಯ್ಯಪ್ಪ - ''ಇವೆಲ್ಲಾ ಯಾರಿಗೆ ಹೇಳ್ತಿದ್ದೀಯಾ. ನಾನು ಕಿವಿ ಮೇಲೆ ಹೂ ಇಟ್ಕೊಂಡಿಲ್ಲ. ನೀನು ಈ ತರ ಯೋಚನೆ ಮಾಡಿದ್ರೆ, ನಾನು ಇನ್ನೊಂದು ಸ್ಟೆಪ್ ಮೇಲೆ ಹೋಗ್ಬೇಕಾಗತ್ತೆ. ಟಾಸ್ಕ್ ಬಿಟ್ಟು ಬೇರೆ ಯೋಚನೆ ಮಾಡಬೇಡ''
  ಪೂಜಾ ಗಾಂಧಿ - ''ಐ ಆಮ್ ನಾಟ್.!''

  ಲಕ್ಷುರಿ ಬಜೆಟ್ ವಿಷಯಕ್ಕೂ ಗಲಾಟೆ!

  ಲಕ್ಷುರಿ ಬಜೆಟ್ ವಿಷಯಕ್ಕೂ ಗಲಾಟೆ!

  ಪೂಜಾ ಗಾಂಧಿ - ''ಲಕ್ಷುರಿ ಬಜೆಟ್ ನಲ್ಲಿ ನಾನೇನು ತೆಗೆದುಕೊಳ್ಳೋದಿಲ್ಲ. ನನ್ನಿಂದ ಟಾಸ್ಕ್ ಗೆದ್ದಿದ್ದು. ನನಗೆ ಕಾಫಿ ಬೇಡ. ನಿನಗೆ ಕಾಫಿ ಬೇಕು ಅಂದ್ರೆ ಪೂರ್ತಿ ನೀನೇ ತಗೋ. ನನಗೇನೂ ಬೇಡ. ನೀನೂ ಕೂಡ ರಿಮೋಟ್ ಕಂಟ್ರೋಲ್.!''

  ಅಯ್ಯಪ್ಪ ತುಕಾಲಿ ಅಂತೆ!

  ಅಯ್ಯಪ್ಪ ತುಕಾಲಿ ಅಂತೆ!

  ಇಷ್ಟು ಸಾಲ್ದು ಅಂತ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ನಟಿ ಪೂಜಾ ಗಾಂಧಿ, ಅಯ್ಯಪ್ಪರನ್ನ 'ತುಕಾಲಿ' ಅಂತ ಕರೆದರು.

  ಪೂಜಾ ಗಾಂಧಿ ಮತ್ತು ಸುದೀಪ್ ನಡುವಿನ ಸಂಭಾಷಣೆ

  ಪೂಜಾ ಗಾಂಧಿ ಮತ್ತು ಸುದೀಪ್ ನಡುವಿನ ಸಂಭಾಷಣೆ

  ಪೂಜಾ ಗಾಂಧಿ - ''ಕನ್ನಡದಲ್ಲಿ ಈ ಬಾರಿ ಹೊಸ ಶಬ್ಧಗಳು ಕಲಿತ್ತಿದ್ದೇನೆ''
  ಸುದೀಪ್ - ''ಯಾವುದು?''
  ಪೂಜಾ ಗಾಂಧಿ - ''ತುಕಾಲಿ''
  ಸುದೀಪ್ - ''ತುಕಾಲಿ ಅಂದ್ರೆ ಏನು?''
  ಪೂಜಾ ಗಾಂಧಿ - ''ಇದು (ಅಯ್ಯಪ್ಪ ರವರನ್ನ ಬೆಟ್ಟು ಮಾಡಿ ತೋರಿಸುತ್ತಾ)''
  ಸುದೀಪ್ - ಹ್ಹಾ..ಹ್ಹಾ...

  ತುಕಾಲಿ ಯಾಕೆ?

  ತುಕಾಲಿ ಯಾಕೆ?

  ಪೂಜಾ ಗಾಂಧಿ - ''ಯಾಕಂದ್ರೆ, ಎಲ್ಲರೂ ಅವರನ್ನ ತುಕಾಲಿ..ತುಕಾಲಿ ಅಂತ ಕರೆಯುತ್ತಾರೆ. ನಾನು ಕೇಳ್ದೆ ಏನು ಹಾಗಂದ್ರೆ ಅಂತ. ಅದಕ್ಕೆ ಗೌತಮಿ ನನಗೆ ಹೇಳಿಕೊಟ್ಟರು ಹಾಗಂದ್ರೆ Useless ಅಂತ''

  English summary
  Kannada Actress Pooja Gandhi wants to slap Cricketer Aiyappa. Read the article to know what all happened on Day 83 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X