For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯ 'ದರಿದ್ರ ಲಕ್ಷ್ಮಿ' ಅಂತೆ ನಟಿ ಶ್ರುತಿ!

  By Harshitha
  |

  ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಮೊಮ್ಮಗಳು, ಗಾಯಕಿ ಬಿ.ಜಯಶ್ರೀ ಮಗಳು ನಟಿ ಸುಷ್ಮಾ ವೀರ್ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಾಗಿನಿಂದಲೂ 'ಬಿಗ್ ಬಾಸ್' ಮನೆಯಲ್ಲಿ ಒಂದಲ್ಲಾ ಒಂದು ರಾದ್ಧಾಂತ ನಡೆಯುತ್ತಲೇ ಇದೆ.

  ನಟಿ ಶ್ರುತಿ ಮತ್ತು ಸುಷ್ಮಾ ವೀರ್ ನಡುವೆ ಎಲ್ಲವೂ ಸರಿ ಇಲ್ಲ. ಹೀಗಿರುವಾಗಲೇ, 'ಚೇರ್ ವಾರ್' ಟಾಸ್ಕ್ ನಲ್ಲಿ ಸುಷ್ಮಾ ತಂಡದ ವಿರುದ್ಧ ಸೋತ ಪರಿಣಾಮ ತಮ್ಮ ತಂಡ ನೇರವಾಗಿ ನಾಮಿನೇಟ್ ಆಗಿರುವುದಕ್ಕೆ ನಟಿ ಶ್ರುತಿ ಬೇಸರಗೊಂಡಿದ್ದಾರೆ. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]

  ''ಮನೆಗೆ ಬಂದಾಗ ಗೃಹ ಲಕ್ಷ್ಮಿ ಅಂತಿದ್ರು ಈಗ ದರಿದ್ರ ಲಕ್ಷ್ಮಿ ಆಗ್ಬಿಟ್ಟಿದ್ದೀನಿ'' ಅಂತ ಭಾವನಾ ಬೆಳಗೆರೆ ಬಳಿ ನಟಿ ಶ್ರುತಿ ತಮ್ಮ ಅಳಲು ತೋಡಿಕೊಂಡರು.

  'ಚೇರ್ ವಾರ್' ಟಾಸ್ಕ್ ಮುಗಿದ ಬಳಿಕ 'ಬಿಗ್ ಬಾಸ್' ಮನೆಯಲ್ಲಿ ಆದ ಬೆಳವಣಿಗೆಯ ಸಂಪೂರ್ಣ ಚಿತ್ರಣ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ......

  'ಚೇರ್ ವಾರ್' ಟಾಸ್ಕ್ ಗೆದ್ದ ಸುಷ್ಮಾ ತಂಡ

  'ಚೇರ್ ವಾರ್' ಟಾಸ್ಕ್ ಗೆದ್ದ ಸುಷ್ಮಾ ತಂಡ

  ಕುರ್ಚಿ ಮೇಲೆ ಅತಿ ಹೆಚ್ಚು ಕಾಲ ಕೂತಿದ್ದ ಸುಷ್ಮಾ ವೀರ್ ತಂಡ 'ಚೇರ್ ವಾರ್' ಟಾಸ್ಕ್ ಗೆದ್ದರು. ಆದ ಪರಿಣಾಮ, ಸುಷ್ಮಾ ವೀರ್, ಅಯ್ಯಪ್ಪ, ಚಂದನ್, ರೆಹಮಾನ್, ಗೌತಮಿ ಮತ್ತು ಭಾವನಾ ಬೆಳಗೆರೆ ಮುಂದಿನ ವಾರದ ನಾಮಿನೇಷನ್ ನಿಂದ ಸೇಫ್ ಆದರು. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್! ವೀಕ್ಷಕರ ಅಭಿಪ್ರಾಯವೇನು?]

  ನೇರವಾಗಿ ನಾಮಿನೇಟ್ ಆದ ಶ್ರುತಿ ತಂಡ

  ನೇರವಾಗಿ ನಾಮಿನೇಟ್ ಆದ ಶ್ರುತಿ ತಂಡ

  ಒಂದ್ಕಡೆ ಶ್ರುತಿ ಮತ್ತು ತಂಡ 'ಚೇರ್ ವಾರ್' ಟಾಸ್ಕ್ ಸೋತರು. ಇನ್ನೊಂದ್ಕಡೆ 'ನೇರ ನಾಮಿನೇಷನ್' ಸವಾಲು ಸ್ವೀಕರಿಸಿದ ಕಾರಣ ನಟಿ ಶ್ರುತಿ, ಮಾಸ್ಟರ್ ಆನಂದ್, ಪೂಜಾ ಗಾಂಧಿ, ಕೃತಿಕಾ, ಸುನಾಮಿ ಕಿಟ್ಟಿ ಮತ್ತು ಮಿತ್ರ ಮುಂದಿನ ವಾರಕ್ಕೆ ನೇರವಾಗಿ ನಾಮಿನೇಟ್ ಆದರು. ['ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!]

   ಶ್ರುತಿ ಕಿವಿ ಹಿಂಡಿದ ಸುಷ್ಮಾ

  ಶ್ರುತಿ ಕಿವಿ ಹಿಂಡಿದ ಸುಷ್ಮಾ

  'ಚೇರ್ ವಾರ್' ಟಾಸ್ಕ್ ನಂತರ ನಟಿ ಶ್ರುತಿ ಮತ್ತು ಸುಷ್ಮಾ ನಡುವೆ ನಡೆದ ಸಂಭಾಷಣೆ ಇಲ್ಲಿದೆ.

  ಸುಷ್ಮಾ - ''ಕೇಳಿಕೊಳ್ಳುವುದಕ್ಕೆ ಬರಲ್ವಾ ನಿಂಗೆ. ಊರೆಲ್ಲಾ ಮಾತನಾಡುತ್ತೀಯಾ. ಅದು ಇದು ನ್ಯಾಯ ನೀತಿ ಎಲ್ಲಾ ಮಾತನಾಡುತ್ತೀಯಾ. ಕ್ಯಾಪ್ಟನ್ ಹೇಳಿದ ಹಾಗೆ ಕೇಳಿ ಅಂತ ಹೇಳುವುದಕ್ಕೆ ಬರಲ್ವಾ. ನೀನು ಮಾಡಲೇಬೇಕು ಅಂತ ಹೇಳಿದ್ರೆ ಕೇಳಲ್ವಾ''

  ಶ್ರುತಿ - ''ಪೂಜಾ ಮತ್ತು ಆನಂದ್ ನನ್ನ ಮಾತೇ ಕೇಳ್ಲಿಲ್ಲ'' ['ಅಮ್ಮ' ಶ್ರುತಿ ಬಗ್ಗೆ ಗರಂ ಆಗಿರುವ 'ಅಕ್ಕ' ಸುಷ್ಮಾ]

  ಬೇರೆ ಎಲ್ಲರೂ ಕೇಳಿದ್ರಾ?

  ಬೇರೆ ಎಲ್ಲರೂ ಕೇಳಿದ್ರಾ?

  ಸುಷ್ಮಾ - ''ಬೇರೆ ಎಲ್ಲಾ ನಿನ್ನ ಮಾತನ್ನ ಕೇಳಿಬಿಟ್ರಾ?''

  ಶ್ರುತಿ - ''ಮಧ್ಯಾಹ್ನದ ಹೊತ್ತಿಗೆ ಮಿತ್ರ ಬಂದ್ರು. ನಮ್ ಟೀಮ್ ನಲ್ಲಿ ಏನ್ ಡಿಸ್ಕಷನ್ ನಡೀತಿದೆ ಅಂತ ನಿನಗೆ ಏನು ಗೊತ್ತು?''

  ಸುಷ್ಮಾ - ''ನಾನು ಹೇಳ್ತಾಯಿರೋದು ನನ್ನ ಕಣ್ಣಿಗೆ ಕಂಡಿದ್ದು. ಏನೇ ಆದರೂ ಟೀಮ್ ನ ಬಿಟ್ಟುಕೊಡಬಾರದು''

  ತೀರ್ಮಾನ ಬದಲಾಗಿದ್ದು ಹೇಗೆ?

  ತೀರ್ಮಾನ ಬದಲಾಗಿದ್ದು ಹೇಗೆ?

  ಶ್ರುತಿ - ''ಎಲ್ಲಾ ತೀರ್ಮಾನ ಮಾಡಿಕೊಂಡಿದ್ವಿ. ಒಬ್ಬರಿಗೊಬ್ಬರು ಸ್ಟ್ರಾಂಗ್ ಆಗಿ ಇದ್ವಿ. ತೀರ್ಮಾನ ಬೆಳಗ್ಗೆ ಬದಲಾಗಿದ್ದು. ನನಗೆ ಇದು ಸರಿ ಅನಿಸ್ತಾಯಿಲ್ಲ ಅಂತ ಹೇಳ್ದೆ. ನನಗೆ ಅಪೋಸ್ ಮಾಡಿದರು. ಮಾನ ಮರ್ಯಾದೆ ಹಾಳಾಗುತ್ತೆ ಅಂತ ಅಪೋಸ್ ಮಾಡಿದರು''

   'ದರಿದ್ರ ಲಕ್ಷ್ಮಿ'

  'ದರಿದ್ರ ಲಕ್ಷ್ಮಿ'

  ಭಾವನಾ ಬೆಳಗೆರೆ ಮತ್ತು ನಟಿ ಶ್ರುತಿ ನಡುವೆ ನಡೆದ ಸಂಭಾಷಣೆ ಇಲ್ಲಿದೆ.

  ಶ್ರುತಿ - ''ಮನೆ ಅಂತೂ ತುಂಬ ಕೆಟ್ಹೋಗ್ಬಿಟ್ಟಿದೆ. ಮನೆ ತರಹ ಇತ್ತು ಇದು. ಎಲ್ಲರ ಮನಸ್ಸು ಒಡೆದು ಹೋಗ್ತಿದೆ. ಒಬ್ಬೊಬ್ಬರು ಒಂದೊಂಥರ ಆಗ್ಬಿಟ್ಟಿದ್ದಾರೆ.

  ಮನೆಗೆ ಬಂದಾಗ ಗೃಹ ಲಕ್ಷ್ಮಿ ಅಂತಿದ್ರು ಈಗ ದರಿದ್ರ ಲಕ್ಷ್ಮಿ ಆಗ್ಬಿಟ್ಟಿದ್ದೀನಿ''.

   ಭಾವನಾ ಏನು ಹೇಳ್ತಾರೆ?

  ಭಾವನಾ ಏನು ಹೇಳ್ತಾರೆ?

  ಭಾವನಾ - ''ಒಬ್ಬೊಬ್ಬರಿಗೆ ಒಂದೊಂಥರಾ ಫೀಲ್ ಆಗೋ ತರಹ ಆಗ್ತಿದೆ. ಎಷ್ಟೊಂದು ನೆಗೆಟಿವ್ ಥಿಂಕಿಂಗ್ ಕಣ್ತೆರೆಸಿದೆ ಗೊತ್ತಾ ನಮಗೆ ಅವರು ಬಂದ ಮೇಲೆ. ನನಗಂತೂ ಆಗಿದೆ''.

  ಶ್ರುತಿ - ''ಸುಮ್ನೆ ಕೂತ್ಕೊಳಮ್ಮ. ನನಗಂತೂ ಆಗಿಲ್ಲ ಆ ತರಹ''

  English summary
  Kannada Actress Shruthi is annoyed with Kannada Actress Sushma Veer. Read the article to know what happened between Sushma and Shruthi after 'Chair War' task in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X