»   » ಅಯ್ಯಪ್ಪ ಹೊರನಡೆದ್ರು; ನಟಿ ಪೂಜಾ ಗಾಂಧಿ ಕಣ್ಣೀರು ಹಾಕಿದ್ರು

ಅಯ್ಯಪ್ಪ ಹೊರನಡೆದ್ರು; ನಟಿ ಪೂಜಾ ಗಾಂಧಿ ಕಣ್ಣೀರು ಹಾಕಿದ್ರು

Posted By:
Subscribe to Filmibeat Kannada

ಒಂದು ವಾರ ಸೀಕ್ರೆಟ್ ರೂಮ್ ನಲ್ಲಿದ್ದು, 'ಬಿಗ್ ಬಾಸ್' ಮನೆಗೆ ವಾಪಸ್ ಬಂದಮೇಲೆ ಅಯ್ಯಪ್ಪ ಜೊತೆಗೆ ನಟಿ ಪೂಜಾ ಗಾಂಧಿ ವರ್ತನೆ ಬದಲಾಗಬಹುದು ಎನ್ನುವ ಎಲ್ಲರ ಊಹೆ ತಲೆಕೆಳಗಾಯ್ತು.

ಕ್ರಿಕೆಟರ್ ಅಯ್ಯಪ್ಪ ಫ್ಲರ್ಟ್ ಮಾಡುತ್ತಿದ್ದಾರೆ ಅನ್ನೋದನ್ನ ಸೀಕ್ರೆಟ್ ರೂಮ್ ನಲ್ಲಿ ಕಣ್ಣಾರೆ ಕಂಡಿದ್ರೂ, ನಟಿ ಪೂಜಾ ಗಾಂಧಿ ಮನಸ್ಸಲ್ಲಿ ಮಾತ್ರ ಅಯ್ಯಪ್ಪಗೆ ಇದ್ದ 'ವಿಶೇಷ' ಸ್ಥಾನ ಬದಲಾಗ್ಲಿಲ್ಲ. [ಬಯಲಾದ ಅಯ್ಯಪ್ಪ ಪ್ರೇಮ ರಹಸ್ಯ ; ಕಣ್ಣೀರಿಟ್ಟ ಪೂಜಾ ಗಾಂಧಿ]

Bigg Boss Kannada 3 - Aiyappa evicted; Pooja Gandhi becomes emotional

ಈ ಗ್ಯಾಪ್ ನಲ್ಲಿ ಗೌತಮಿ ಗೌಡ ಎಂಟ್ರಿಕೊಟ್ಟಿದ್ರಿಂದ ಕ್ರಿಕೆಟರ್ ಅಯ್ಯಪ್ಪ ಬಗ್ಗೆ ಪೂಜಾ ಗಾಂಧಿ ಹೆಚ್ಚು ಪೊಸೆಸ್ಸಿವ್ ಆಗಿದ್ದನ್ನ ನೀವೆಲ್ಲಾ ನೋಡಿದ್ದೀರಾ. ನಿಜ ಜೀವನದಲ್ಲಿ ಅಯ್ಯಪ್ಪ ಎಂಗೇಜ್ ಆಗುವ ಹಂತಕ್ಕೆ ಬಂದಿದ್ದಾರೆ ಅಂತ ತಿಳಿದಿದ್ದರೂ, ಪೂಜಾ ಗಾಂಧಿ ಮಾತ್ರ ಅಯ್ಯಪ್ಪ ಜೊತೆ ಒಂದು ಕಪ್ ಕಾಫಿ ಕುಡಿಯುವ ಆಲೋಚನೆ ಕೈಬಿಟ್ಟಿಲ್ಲ. [ತಬ್ಬಿಕೊಂಡ್ರು, ಕಣ್ ಹೊಡೆದ್ರು, ಕೈ ಹಿಡಿದ್ರು ಅಯ್ಯಪ್ಪ-ಪೂಜಾ!]

ಫೈನಲ್ ನಲ್ಲಿ ಅಯ್ಯಪ್ಪ ಜೊತೆ ಇರಲೇಬೇಕು ಅಂತ ಕನಸು ಕಾಣುತ್ತಿದ್ದ ಪೂಜಾ ಗಾಂಧಿಗೆ ನಿನ್ನೆ ಬಿಗ್ ಶಾಕ್ ಸಿಕ್ತು. 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಕ್ರಿಕೆಟರ್ ಎನ್.ಸಿ.ಅಯ್ಯಪ್ಪ ಹೊರನಡೆದರು. ['ಜೋಡಿ ನಂ.1' ಆದ ಅಯ್ಯಪ್ಪ-ಪೂಜಾ; ಕಿಟ್ಟಿಗೆ ಕಿರಿಕಿರಿ, ಗೌತಮಿಗೆ ಪಿರಿಪಿರಿ!]

'ಇನಿಯ' ಬಿಟ್ಟು ಹೋಗುತ್ತಿರುವುದರಿಂದ ಬೇಸರಗೊಂಡ ಪೂಜಾ ಗಾಂಧಿ ಕಣ್ಣೀರು ಸುರಿಸಿದರು. ಅಯ್ಯಪ್ಪ ಜೊತೆ ಕುಳಿತು ಮಾತನಾಡುತ್ತಿದ್ದ ಕಟ್ಟೆ ಮೇಲೆ ಕುಳಿತು ಗೊಳೋ ಅಂತ ಅಳ್ತಿದ್ರು. ಪಾಪಾ...ಪೂಜಾ...

English summary
Pooja Gandhi becomes emotional as Ranaji Cricketer Aiyappa eliminated from Bigg Boss Kannada 3 reality show.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada