For Quick Alerts
  ALLOW NOTIFICATIONS  
  For Daily Alerts

  ಯಾರೂ ಉಸಿರೆತ್ತಂಗಿಲ್ಲ ಈ ವಾರ ಸ್ಪರ್ಧಿಗಳೆಲ್ಲಾ ನಾಮಿನೇಟೆಡ್

  By Suneetha
  |

  ನೇರ ನಡೆ-ನುಡಿಯ ಖಡಕ್ ಸುಷ್ಮಾ ವೀರ್ ಬಿಗ್ ಬಾಸ್ ಮನೆಯಿಂದ ಆಚೆ ಬಂದಿದ್ದೇ ತಡ ಇದೀಗ ಮನೆಯ ಎಲ್ಲಾ ಸದಸ್ಯರು ನಾಮಿನೇಟ್ ಆಗಿದ್ದಾರೆ.

  ಇನ್ನು ಮನೆಯಲ್ಲಿ ಪ್ರತೀ ವಾರ ನಾಮಿನೇಶನ್ ಪ್ರಕ್ರಿಯೆ ನಡೆಯುವಾಗ ಮನೆಯ ಇತರ ಸದಸ್ಯರು ಒಬ್ಬೊಬ್ಬರಾಗಿ ಕನ್ಫೆಶನ್ ರೂಮಿಗೆ ಹೋಗಿ ತಮಗೆ ಆಗದವರ ಅಥವಾ ಅವರು ಬಿಗ್ ಮನೆಯಲ್ಲಿ ಇರಲು ಅರ್ಹರಲ್ಲ ಎಂದೆನಿಸಿದರೆ ಅವರ ಹೆಸರನ್ನು ನಾಮಿನೇಟ್ ಮಾಡಿ ಬರುತ್ತಿದ್ದರು.['ಬಿಗ್ ಬಾಸ್' ಮನೆಯಿಂದ ಸುಷ್ಮಾ ಔಟ್! ವೀಕ್ಷಕರ ಅಭಿಪ್ರಾಯವೇನು?]

  ಆದರೆ ನಿನ್ನೆಯ ಎಪಿಸೋಡ್ ಮಾತ್ರ ಈ ತರದ ನಾಮಿನೇಶನ್ ಗೆ ತದ್ವಿರುದ್ಧವಾಗಿತ್ತು. ಇನ್ನೇನು ಬಿಗ್ ಬಾಸ್ ಕಾರ್ಯಕ್ರಮ ಮೂರೇ ವಾರ ಬಾಕಿ ಇರುವುದರಿಂದ ದೊಡ್ಡಣ್ಣ ಒಂದು ಹೊಸ ಟ್ವಿಸ್ಟ್ ಮಾಡಿ ಎಲ್ಲರಿಗೂ ಶಾಕ್ ಟ್ರೀಟ್ ಮೆಂಟ್ ಕೊಟ್ಟರು.

  ಅಂದಹಾಗೆ ಮನೆಯ ಯಾವೊಬ್ಬ ಸದಸ್ಯರ ಅಭಿಪ್ರಾಯವನ್ನು ಕೇಳದೆ ಒಟ್ಟಾರೆ ಮನೆಯ ಎಲ್ಲಾ ಸದಸ್ಯರನ್ನು ನೇರವಾಗಿ ನಾಮಿನೇಟ್ ಮಾಡಿದರು. ಆದ್ದರಿಂದ ಮುಂದಿನ ವಾರಕ್ಕೆ ನಟಿ ಶ್ರುತಿ, ಆನಂದ್, ಗೌತಮಿ, ರೆಹಮಾನ್, ಸುನಾಮಿ ಕಿಟ್ಟಿ, ಚಂದನ್, ಅಯ್ಯಪ್ಪ ಮತ್ತು ಪೂಜಾ ಗಾಂಧಿ ಎಲ್ಲರೂ ದೊಡ್ಡಣ್ಣನ ಆದೇಶದಂತೆ ನೇರವಾಗಿ ನಾಮಿನೇಟ್ ಆಗಿದ್ದಾರೆ.[ಸುಷ್ಮಾ ವೀರ್ ರಿಂದ ರೆಹಮಾನ್ ಗೆ ಸಿಕ್ಕ 'ಬಿಗ್' ಗಿಫ್ಟ್!]

  ಒಟ್ನಲ್ಲಿ ಪ್ರತೀ ವಾರ ಇಬ್ಬರೋ ಮೂವರೋ ನಾಮಿನೇಟ್ ಆದಾಗ ಪ್ರೇಕ್ಷಕರಲ್ಲಿ ಸಾಮಾನ್ಯವಾಗಿ ಇರುವಂತಹ ಕುತೂಹಲಕ್ಕಿಂತ ಸ್ವಲ್ಪ ಜಾಸ್ತಿ ಕುತೂಹಲ ಈ ಬಾರಿ ಇದ್ದು, ಈ ಸಲ ಮನೆಯಲ್ಲಿರುವ ಎಲ್ಲಾ 8 ಜನರಲ್ಲಿ ಯಾರು ಮನೆಯಿಂದ ಹೊರ ಬೀಳುತ್ತಾರೆ ಎಂದು ಕಾದು ನೋಡಬೇಕು.

  English summary
  Just when there was a question who would be nominated this week for elimination, 'Big Boss' has nominated all the eight contestants for elimination this week.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X