»   » 'ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!

'ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಸುಷ್ಮಾ ವೀರ್ ಎಂಟ್ರಿಕೊಟ್ಟಾಗಲೇ, ನಟಿ ಶ್ರುತಿ ಎದೆಯಲ್ಲಿ ಢವ ಢವ ಹೊಡೆಯಲು ಆರಂಭವಾಗಿದೆ ಅನ್ನುವ ಸೂಚನೆ ಎಲ್ಲರಿಗೂ ಸಿಕ್ಕಿತ್ತು.

ಅದರಂತೆ, ಬಂದ ಎರಡೇ ದಿನಗಳಲ್ಲಿ ನಟಿ ಶ್ರುತಿ ಮತ್ತು ಸುಷ್ಮಾ ನಡುವೆ 'ಬಿಗ್' ವಾರ್ ನಡೆದಿದೆ. ಆಲೂಗೆಡ್ಡೆ ಮ್ಯಾಟರ್ ನಿಂದ ಶುರುವಾದ ಮುನಿಸು, ಕಿಚ್ಚ ಸುದೀಪ್ ಎದುರಿಗೂ ಮುಂದುವರಿಯಿತು. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]

'ಬಿಗ್ ಬಾಸ್' ಮನೆಯಲ್ಲಿ ನಟಿ ಶ್ರುತಿ 'ಅಮ್ಮ'ನಾಗಿರುವ ಬಗ್ಗೆ ಬಾಕಿ ಸದಸ್ಯರು ಚಕಾರ ಎತ್ತಿದರು. 'ವಾರದ ಕಥೆ ಕಿಚ್ಚನ ಕಥೆ' ಕಾರ್ಯಕ್ರಮದಲ್ಲಿ ಸುಷ್ಮಾ ವೀರ್ ಮತ್ತು ನಟಿ ಶ್ರುತಿ ನಡುವಿನ ಕಿಚ್ಚಿನ ಕಹಾನಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಅಡುಗೆ ಮನೆಯಲ್ಲಿ ಶುರುವಾದ ಜಗಳ

ಮಿತ್ರ, ಸುಷ್ಮಾ ವೀರ್ ಮತ್ತು ಶ್ರುತಿ ಅಡುಗೆ ಮಾಡುತ್ತಿದ್ದರು. ಆಲೂಗಡ್ಡೆ ವಿಚಾರವಾಗಿ ಮಿತ್ರ ರವರು ಸುಷ್ಮಾರವರನ್ನ ಪ್ರಶ್ನೆ ಮಾಡಿದರು. ಇಬ್ಬರನ್ನ ನೋಡಿ ನಟಿ ಶ್ರುತಿ ಮತ್ತು ಕೃತಿಕಾ ನಕ್ಕರು. ಇದರಿಂದ ರೊಚ್ಚಿಗೆದ್ದ ಸುಷ್ಮಾ 'ಅಮ್ಮ' ಶ್ರುತಿಗೆ ಕ್ಲಾಸ್ ತೆಗೆದುಕೊಂಡರು. [ಶ್ರುತಿ ಅಮ್ಮ ಮನೆಯಲ್ಲಿ ಕುರಿ ಮಂದೆ ಸಾಕುತ್ತಿದ್ದಾರಂತೆ..!]

ಬೇಸರಗೊಂಡ ಸುಷ್ಮಾ ಶ್ರುತಿಗೆ ಹೇಳಿದ್ದೇನು?

''ನಿನ್ನ ಪಾಡಿಗೆ ನೀನು ಆರಾಮಾಗಿರು, ನನ್ನ ಮಾತನಾಡಿಸಬೇಡ. ನನಗೆ ಇದು ಸಿಟ್ಟಲ್ಲ. ಬಹಳ ಬೇಜಾರಾಗಿರುವುದು. ಮಿತ್ರ ನನ್ನ ಆಲೂಗೆಡ್ಡೆದು ಎರಡು ಸಲಿ ಕೇಳಿದಾಗ, ನೀನು ಮತ್ತು ನಿನ್ನ ಪುಟಾಣಿ ನಕ್ಕಿದ್ದು ನನಗೆ ಕಾಣಿಸ್ತು. ಶ್ರುತಿ ನಿನಗೆ ಚೆನ್ನಾಗಿ ಗೊತ್ತು ನಾನು ಎಲ್ಲಾ ಕಡೆ ನೋಡ್ತೀನಿ ಅಂತ. ಅದು ತಪ್ಪಿಲ್ಲ ಅಂದ್ರೆ, ನಿನ್ನ ಹಿಂದೆ ನಾನು ಹಾಗೆ ಮಾಡ್ತೀನಿ. ನಿನಗೆ ಹೇಗೆ ಅನಿಸುತ್ತೆ ನೋಡೋಣ. ನಿನಗೊಂದು ನ್ಯಾಯ. ನನಗೊಂದು ನ್ಯಾಯ ಆಗಲ್ಲ. ನಾನು ತಪ್ಪು ಮಾಡಿದೆ. ನಮ್ಮ ಮನೆಯವರು ಅಂತ ನಾನು ಅಂದುಕೊಂಡು ತಪ್ಪು ಮಾಡಿದೆ. ನಾನು ನಿನಗೆ ಅದೇ ನಕ್ಕಿದ್ರೆ, ನಿನಗೆ ಅದೇ ಒದೆ ಆಗುತ್ತೆ ಅನ್ನೋದು ಗೊತ್ತಿಲ್ವ?'' - ಸುಷ್ಮಾ ವೀರ್ ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್! ವೀಕ್ಷಕರ ಅಭಿಪ್ರಾಯವೇನು?]

ಕ್ಷಮೆಯಾಚಿಸಿದ ನಟಿ ಶ್ರುತಿ

''ನೀನು ಸಿಟ್ಕೋಬೇಡ. ನನಗೆ ಒಂಥರಾ ಬೇಜಾರ್ ಆಗ್ತಿರುತ್ತೆ. ತಪ್ಪಾದ್ರೆ ಸಾರಿ. ನನ್ನಿಂದ ನಿಮಗೆ ನೋವಾಗಿದ್ರೆ, ರಿಯಲಿ ಸಾರಿ'' - ಶ್ರುತಿ

ತಿದ್ದುಕೊಂಡೆ ಎಂದ ನಟಿ ಶ್ರುತಿ

ಗಲಾಟೆ ಬಳಿಕ ನಟಿ ಶ್ರುತಿ ಕಿಚ್ಚ ಸುದೀಪ್ ಬಳಿ ಹೇಳಿದ್ದು ಹೀಗೆ - ''ತುಂಬಾ ಸೀರಿಯಸ್ ಆಗಿ ಸುಷ್ಮಾ ಅಡ್ವೈಸ್ ತಗೊಂಡೆ. ನಾನು ಬದಲಾಗಿದ್ದೀನಿ. ಸುಷ್ಮಾಗೆ ಏನು ಇಷ್ಟ ಆಗಲ್ಲ ಅನ್ನೋದು ಅರ್ಥ ಮಾಡಿಕೊಂಡಿದ್ದೀನಿ. ಇನ್ಮುಂದೆ ಅವರಿಗೆ ನೋವಾಗದ ಹಾಗೆ ನಡೆದುಕೊಳ್ಳೋಕೆ ಪ್ರಯತ್ನ ಪಡುತ್ತಿದ್ದೇನೆ'' - ಶ್ರುತಿ

'ದೊಡ್ಡಮ್ಮ' ಆಗೋದು ಇಷ್ಟವಿಲ್ಲ!

''ದೊಡ್ದಮ್ಮ ಅನ್ನೋದು ನನಗೆ ಬೇಡ. Individual ಆಗಿ ಮನಸ್ಸು ಗೆಲ್ಲಬೇಕೆ ಹೊರತು ತಾಯಿ ಆಗಿ, ದೊಡ್ಡಮ್ಮನಾಗಿ ಅಲ್ಲ. ನನಗದು ಬರೋದಿಲ್ಲ. ಹಾಗಿದಿದ್ರೆ ನಾನು ಮದುವೆ ಆಗಿ, ನನ್ನ ಮಕ್ಕಳ ಜೊತೆ ಸೆಟ್ಲ್ ಆಗಿ ಇರ್ತಿದ್ದೆ'' - ಸುಷ್ಮಾ ವೀರ್

ಕುರಿ ಲೀಡರ್ ಯಾರು?

''ಕುರಿ ಮಂದೆನ ಲೀಡ್ ಮಾಡೋ ಲೀಡರ್ ಆಗ್ಬೇಡಿ'' ಅಂತ ಸುಷ್ಮಾ ವೀರ್ ಹೇಳಿದ ಮಾತಿಗೆ ಕಿಚ್ಚ ಸುದೀಪ್ ಮುಂದೆ ನಟಿ ಶ್ರುತಿ ತಿರುಗೇಟು ನೀಡಿದರು
''ಇಲ್ಲಿರುವವರು ಯಾರೂ ಕುರಿನೂ ಅಲ್ಲ. ನಾನು ಕುರಿ ಮಂದೆ ಕಾಯೋಳು ಅಲ್ಲ. ಆ ಮಾತನ್ನ ನಾನು ಒಪ್ಪೋದೂ ಇಲ್ಲ'' - ಶ್ರುತಿ

ಆರ್ಥ ಆಗ್ಲಿಲ್ಲ!

''ಅತಿ ವಿನಯಂ ದೂರ್ತ ಲಕ್ಷಣಂ ಅಂದ್ರೆ ನಾನು ವಿನಯವಾಗಿದ್ದೀನಿ ಅಂತಲೋ, ಬೇರೆಯವರು ವಿನಯವಾಗಿದ್ದಾರೆ ಅಂತಲೋ ಅರ್ಥ ಆಗ್ಲಿಲ್ಲ'' - ಶ್ರುತಿ

ಸುಷ್ಮಾ ವೀರ್ ತಿರುಗೇಟು

''ಸಿಕ್ಹಾಕೊಂಡಾಗ ಯಾವಾಗ ಏನು ಉತ್ತರ ಕೊಡ್ತಾರೆ ಅನ್ನೋದು ನಂಬೋಕೆ ಆಗಲ್ಲ. ಮಾತು ಪೂರ್ತಿ ಕೇಳಿದ್ಮೇಲೆ ಹ್ಹೂಂ ಅಕ್ಕ ಆಯ್ತು ಅಂದ್ರು. ಇದನ್ನೆಲ್ಲಾ ಹೇಳಿದವರು ಇವತ್ತು ಅರ್ಥ ಆಗಿಲ್ಲ ಅಂತಾರೆ. ಬಂದಿರುವುದು ಇಲ್ಲಿ ತಾಯಿ ಆಗೋಕ್ಕಲ್ಲ. ಗೇಮ್ ಆಡುವುದಕ್ಕೆ. ಗೇಮ್ ಆಡುವಾಗ ಕರೆಕ್ಟ್ ಆಗಿ ಆಡಬೇಕು. ನನಗೆ ಅವರ ಮೇಲೆ ನಂಬಿಕೆ ಕಡಿಮೆ ಆಯ್ತೆ ಹೊರತು ಜಾಸ್ತಿ ಆಗ್ಲಿಲ್ಲ'' ಸುಷ್ಮಾ ವೀರ್

ಆನಂದ್ ಹೇಳುವುದೇನು?

''ತಾಯಿ ಸ್ಥಾನ, ಅಕ್ಕನ ಸ್ಥಾನ, ಅಮ್ಮನ ಸ್ಥಾನ. ಅದನ್ನ ಅಷ್ಟು ಸುಲಭವಾಗಿ ಯಾರಿಗೂ ಕೊಡುವುದಕ್ಕೆ ಸಾಧ್ಯ ಇಲ್ಲ. ತುಂಬಾ ಕಷ್ಟ. ಬೇರೆಯವರು ಹಾಗೆ ನೋಡಿದಾಗ, ಯಾಕೆ ನೋಡ್ತಾರೆ ಅನ್ನೋದು ನನಗೆ ಒಂದು ಪ್ರಶ್ನೆ ಆಗಿ ಕಾಡುತ್ತೆ ಅಷ್ಟೆ'' - ಮಾಸ್ಟರ್ ಆನಂದ್

ರೆಹಮಾನ್ ಹೇಳಿದ್ದೇನು?

''ನನಗೆ ಅವರಲ್ಲಿ ಅಕ್ಕ ಕಾಣಿಸ್ತಾರೆ ಅದಕ್ಕೆ ನಾನು ಅವರನ್ನ ಅಕ್ಕ ಅಂತ ಕರೀತೀನಿ ಅಷ್ಟೆ. ಬಹುಶಃ ನಾವು ಈ ರೀತಿ ಕರಿಯೋದು ಅವರಿಗೆ ಬ್ಯಾರಿಕೇಡ್ ಆಗುತ್ತಿರಬಹುದೇನೋ ಅಂತ ಅನಿಸುತ್ತೆ'' - ರೆಹಮಾನ್

ಕೃತಿಕಾ ಏನಂತಾರೆ?

''ಶ್ರುತಿ ಅವರಲ್ಲಿ ನಾನು ತಾಯಿಯನ್ನ ನೋಡ್ತೀನಿ ಅದಕ್ಕೆ ಹಾಗೆ ಕರೀತೀನಿ. ಬೇರೆಯವರು ಯಾಕೆ ಕರಿಯೋದಿಲ್ಲ ಅದು ಅವರವರ ಒಪೀನಿಯನ್'' - ಕೃತಿಕಾ

ಚಂದನ್ ಅಭಿಪ್ರಾಯ...

''ಕಾಲಲ್ಲಿ ಮುಖ ಮುಟ್ಟುತ್ತಾರೆ ಅಂದಾಗ ನಾನು ಅವರಿಗೆ ಆ ಸ್ಥಾನ ಕೊಟ್ಟಿರೋದಕ್ಕೆ ಅವರು ಅದನ್ನ ಮಾಡಿದರು'' - ಚಂದನ್

ಅಯ್ಯಪ್ಪ ಏನು ಹೇಳಿದರು?

''ನಾವೇ ಅವರಿಗೆ ಆ ಸ್ಥಾನ ಕೊಟ್ಟು ಬಿಟ್ಟು ಅವರಿಗೆ ಓಪನ್ ಅಪ್ ಆಗುವುದಕ್ಕೆ ಆಗುತ್ತಿಲ್ಲ. ಏನಾದರೂ ಹೇಳಿದರೆ ಬೇಜಾರು ಮಾಡಿಕೊಳ್ಳುತ್ತಾರೆ ಅಂತ ಅವರಿಗೆ ಅವರೇ ಮುಖವಾಡ ಹಾಕೊಂಡಿದ್ದಾರೆ'' - ಅಯ್ಯಪ್ಪ

ಭಾವನಾ ಹೇಳುವುದೇನು?

''ಅವರಿಗೆ ಬ್ಯಾರಿಕೇಡ್ ಅಗಿದ್ಯೋ ಇಲ್ವೋ, ನಮಗಂತೂ ಆಗಿದೆ. ಹಿರಿಯರು ಅಂತ ಅವರನ್ನ ನಾವು ನೋಡಿ ನಮ್ಮ ತನವನ್ನ ನಾವು ಕಳ್ಕೊಂತಾಯಿದ್ದೀವಿ. ಕನ್ಫೆಶನ್ ರೂಮ್ ಒಳಗೆ ಹೋಗಿ ಕೂತ್ಕೊಂಡಾಗ ಅವರ Influence ಆಗುತ್ತೆ. ಬೇಡ ಇವಾಗ, ಮುಂದಿನ ವಾರ ನೋಡೋಣ ಅಂತ ಪ್ರತಿಯೊಬ್ಬರು ವಾಪಸ್ ಬಂದಿದ್ದೀವಿ''- ಭಾವನಾ ಬೆಳಗೆರೆ

ಮಿತ್ರ ಏನಂತಾರೆ?

''ನಾನು ಎಲ್ಲರನ್ನ ಚೆನ್ನಾಗಿ ನೋಡಿಕೊಳ್ತೀನಿ. ನನ್ನ ಬಗ್ಗೆ ಯಾರೂ ಚಕಾರ ಎತ್ತುವುದಿಲ್ಲ ಅನ್ನೋದು ಅವರ ಟ್ರಂಪ್ ಕಾರ್ಡ್ ಆಗಿರಬಹುದು. ಬಟ್ ಅಲ್ಲ ಅನ್ನೋ ಮಟ್ಟಿಗೆ ಅವರು ಇದ್ದಾರೆ'' - ಮಿತ್ರ

ಆಟದ ಚಾತುರ್ಯ ಗೊತ್ತಿದೆ!

''ನನಗೆ ಶ್ರುತಿ ಅವರ ಬಗ್ಗೆ ಗೊತ್ತಿದೆ. ಅವರು ಬ್ಯೂಟಿಫುಲ್ ಸೋಲ್. ಅದರ ಬಗ್ಗೆ ಎರಡು ಮಾತಿಲ್ಲ. ಆದ್ರೆ ಆಟಕ್ಕೆ ಅಂತ ನಿಂತರೆ ಅವರನ್ನ ಹಿಡಿಯೋ ಚಾತುರ್ಯ ಇದ್ಯಲ್ಲ. ಗೊತ್ತಿರೋರಿಗೆ ಬಿಟ್ರೆ ಬೇರೆಯವರಿಗೆ ಬಹಳ ಕಷ್ಟ'' - ಸುಷ್ಮಾ ವೀರ್

ತಂಬೂರಿ ಪೆಟ್ಟಿ ಕೃತಿಕಾ

''ಕೃತಿಕಾನ ನಾನು ತಂಬೂರಿ ಪೆಟ್ಟಿ ಅಂತ ಕರೀತಿನಿ. ಎಮೋಷನ್ಸ್ ನೂ ಫೇಕ್ ಮಾಡ್ತೀರಾ ಅಂದ್ರೆ ನಂಬಿಕೆಗೆ ಉಳಿಗಾಲ ಇಲ್ಲ. ನಾನು ಕುರಿ ಅಂತ ಹೇಳುವುದಕ್ಕೂ ಒಂದು ಅರ್ಥ ಇದೆ. You are a kid Kruthika'' - ಸುಷ್ಮಾ ವೀರ್

ಶ್ರುತಿ ಕೊಟ್ಟ ಪ್ರತಿಕ್ರಿಯೆ

''ನಾನು ಯಾರಿಗೂ, ಯಾವ ತರಹನೂ ಫೋರ್ಸ್ ಮಾಡಿಲ್ಲ. ನನ್ನ ಅಕ್ಕ ಅಂತ ಕರೀರಿ. ಅಮ್ಮ ಅಂತ ಕರೀರಿ ಅಂತ ನಾನು ಯಾರಿಗೂ ಹೇಳಿಲ್ಲ. ಅವರೆಲ್ಲರೂ ಅವರ ಮನಸ್ಸಲ್ಲಿ ಕೊಟ್ಟಿರುವ ಸ್ಥಾನ. ಅದನ್ನ ಇವತ್ತು ಕೂತ್ಕೊಂಡು ಅವರೇ ಮಾತನಾಡುತ್ತಿದ್ದಾರೆ. ಈವೆರಡಕ್ಕೂ ನಾನು ಕಾರಣ ಅಲ್ಲ. ನನಗೆ ತುಂಬಾ ಆಶ್ಚರ್ಯ ಆಗ್ತಿದೆ'' - ಶ್ರುತಿ

ಮತ್ತೆ ಕೆರಳಿದ ಸುಷ್ಮಾ ವೀರ್

''ಅವರವರೇ ಕಾರಣ ಅಂತಿದ್ಯಲ್ಲ ಹಾಗೆ ಹೇಳಬಾರದು. ತಪ್ಪು ಏನು ಅಂತ ಹುಡುಕೊಳ್ಳಿ. ನಿಮಗೆ ಆ ಸ್ಥಾನ ಇವತ್ತು ಮಿಸ್ ಆಗ್ತಿದೆ ಅಂದ್ರೆ ಎಲ್ಲಿ ತಪ್ಪಾಗಿದೆ ಅಂತ ನೀನು ಹುಡುಕೊಳ್ಳಬೇಕು. ಅದು ಬಿಟ್ಟು ಬೇರೆಯವರ ಮೇಲೆ ಯಾಕೆ ಹಾಕ್ತೀಯಾ. ನಿನಗೆ ಅರ್ಥ ಆದ್ರೆ ಓಕೆ. ಇಲ್ಲಾಂದ್ರೆ ನನಗೆ ಏನೂ ತೊಂದರೆ ಇಲ್ಲ'' - ಸುಷ್ಮಾ ವೀರ್

ಶ್ರುತಿ ಉತ್ತರ

''ನನ್ನ ಹಣೆ ಬರಹ. ನಾನು ನೋಡಿಕೊಳ್ತೀನಿ. ನೀನ್ಯಾಕೆ ಯೋಚನೆ ಮಾಡ್ತೀಯಾ. ನನಗೆ ಆಗದೆ ಇರುವ ತೊಂದರೆ ನಿನಗೂ ಬೇಡ'' - ಶ್ರುತಿ

    English summary
    Kannada Actress Sushma Veer and Shruthi had an heated argument during 'Varada Kathe Kicchana Jothe' session. Read the article to know what all happened between Sushma and Shruthi.

    ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada