»   » ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!

ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!

Posted By:
Subscribe to Filmibeat Kannada

ಹುಚ್ಚ ವೆಂಕಟ್ ಹೇಗೆ ಅಂದ್ರೆ...ಯಾವಾಗ ಚೆನ್ನಾಗಿರ್ತಾರೆ, ಯಾವಾಗ ಗರಂ ಆಗ್ತಾರೆ ಅನ್ನೋದೇ ಗೊತ್ತಾಗೋಲ್ಲ. ಭಯದಿಂದ ಮಾತನಾಡಿದಾಗ ಖುಷಿಯಿಂದ ನಗ್ತಾರೆ. ಅಪ್ಪಿ-ತಪ್ಪಿ ವಾದಕ್ಕೆ ಇಳಿದುಬಿಟ್ಟರೆ ಮುಗಿದೇಹೋಯ್ತು.

'ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೀಗೆ ಅಂತ ಎಲ್ಲರಿಗೂ ಅನುಭವವಾಗಿದ್ದು ನಿನ್ನೆ. ಅದ್ರಲ್ಲೂ ಹುಚ್ಚ ವೆಂಕಟ್ ಅಬ್ಬರ ನೋಡಿ, ನಟಿ ಪೂಜಾ ಗಾಂಧಿ ಬೆದರಿ ಬೆವತು ನೀರಾದರು.

'ಬಿಗ್ ಬಾಸ್' ಮನೆಗೆ ಹುಚ್ಚ ವೆಂಕಟ್ ಎಂಟ್ರಿಕೊಟ್ಟಾಗಿನಿಂದಲೂ ಅವರೊಂದಿಗೆ ನಟಿ ಪೂಜಾ ಗಾಂಧಿ ಮಾತುಕತೆ ಅಷ್ಟಕಷ್ಟೆ. ಮನೆಯೊಳಗೆ ಕಾಲಿಡುತ್ತಿದ್ದಂತೆ ''ಎಲ್ಲಾ ಹೆಣ್ಮಕ್ಕಳು ಮೈತುಂಬಾ ಬಟ್ಟೆ ಹಾಕಿಕೊಳ್ಳಬೇಕು'' ಅಂತ ಸುಗ್ರೀವಾಜ್ಞೆ ಹೊರಡಿಸಿದ ಹುಚ್ಚ ವೆಂಕಟ್ ಕಂಡ್ರೆ ಪೂಜಾ ಗಾಂಧಿಗೆ ಆಗ್ಬರಲ್ಲ. ಹೀಗಿರುವಾಗಲೇ, ಇಬ್ಬರ ಮಧ್ಯೆ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ದೊಡ್ಡ ಫೈಟ್ ನಡೆಯಿತು. [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]

'ಬಿಗ್ ಬಾಸ್-3' ಕಾರ್ಯಕ್ರಮದ ಮೊದಲ ದಿನ ನಡೆದ ಕಾದಾಟದ ಕಥೆ ಹೇಳ್ತೀವಿ, ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

ಆರ್.ಜೆ.ನೇತ್ರಾಗೆ ಎರಡನೇ ಬಾರಿ ವಾರ್ನಿಂಗ್.!

'ಬಿಗ್ ಬಾಸ್-3' ಕಾರ್ಯಕ್ರಮದ ಮೊದಲ ದಿನ ಹಲವು ಘಟನೆಗಳಿಗೆ ಸಾಕ್ಷಿಯಾಯ್ತು. ಬೆಳಗ್ಗೆ ಎದ್ದ ಕೂಡಲೆ, ಆರ್.ಜೆ.ನೇತ್ರ ಹಾಕಿದ್ದ ಸ್ಲೀವ್ ಲೆಸ್ ಡ್ರೆಸ್ ನೋಡಿ ಹುಚ್ಚ ವೆಂಕಟ್ ವಾರ್ನಿಂಗ್ ಕೊಟ್ಟರು. 'ಇನ್ಮುಂದೆ ಮನೆಯಲ್ಲಿ ಸ್ಲೀವ್ ಲೆಸ್ ಡ್ರೆಸ್ ಹಾಕೋಹಾಗಿಲ್ಲ' ಅಂತ ಹುಚ್ಚ ವೆಂಕಟ್ ಹೇಳಿದರು. ಯಾಕ್ ಬೇಕು ಹುಚ್ಚ ವೆಂಕಟ್ ಸಹವಾಸ ಅಂತ ಕೆಲವೇ ಹೊತ್ತಿನಲ್ಲಿ ಆರ್.ಜೆ.ನೇತ್ರ ತಮ್ಮ ಉಡುಪು ಬದಲಾಯಿಸಿಕೊಂಡು ಬಂದರು. [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

ಇದು ಪೂಜಾ ಗಾಂಧಿಗೆ ಇಷ್ಟವಾಗ್ಲಿಲ್ಲ.!

''ನಮಗೆ ಬೇಕಾದ ಉಡುಪುಗಳನ್ನು ನಾವು ಧರಿಸುತ್ತೇವೆ. ಇನ್ನೊಬ್ಬರಿಗೆ ಆರ್ಡರ್ ಮಾಡುವುದು ಸರಿಯಲ್ಲ'' ಅಂತ ಪೂಜಾ ಗಾಂಧಿ ಈ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು.

ಜಗಳ ವೇದಿಕೆಯಾದ 'ಬಿಗ್ ಬಾಸ್' ಮನೆ

ನಾಮಿನೇಷನ್ ಆದ ಬಳಿಕ ತಿಳಿ ಕೆಂಪು ಬಣ್ಣದ ಶಾರ್ಟ್ ಡ್ರೆಸ್ ತೊಟ್ಟಿದ್ದರು ನಟಿ ಪೂಜಾ ಗಾಂಧಿ. ಇದನ್ನ ನೋಡಿದ ಹುಚ್ಚ ವೆಂಕಟ್ ಸುಮ್ಮನೆ ಕೂರಲಿಲ್ಲ. ''ಪೂಜಾ ಗಾಂಧಿ ಅವರೇ ಇನ್ಮೇಲೆ ಇಂತಹ ಬಟ್ಟೆಗಳನ್ನ ಹಾಕ್ಬೇಡಿ'' ಅಂತ ಹುಚ್ಚ ವೆಂಕಟ್ ಹೇಳಿದ್ರು.

ಅಣ್ಣ ಹೇಗಿರ್ಬೇಕೋ, ಹಾಗಿರ್ಬೇಕು.!

''ನಾನು ಯಾವ ಬಟ್ಟೆ ಬೇಕಾದರೂ ಹಾಕ್ತೀನಿ. ಅದು ನನ್ನ ಇಷ್ಟ. ನೀವು ನಮಗೆ ಅಣ್ಣ ಅಂತ ಹೇಳಿದ್ದೀವಿ. ಅಣ್ಣ ಹೇಗಿರ್ಬೇಕೋ, ಹಾಗಿರಬೇಕು. ಅಣ್ಣನ ಕಣ್ಣು ಕೆಳಗೆ ಹೋಗಬಾರದು'' ಅಂತ ಪೂಜಾ ಗಾಂಧಿ, ಹುಚ್ಚ ವೆಂಕಟ್ ಗೆ ತಿರುಗೇಟು ನೀಡಿದರು.

ಗರಂ ಆದ ಹುಚ್ಚ ವೆಂಕಟ್

ಪೂಜಾ ಗಾಂಧಿ ಹೇಳಿದ ಮಾತು ಕೇಳಿ ಹುಚ್ಚ ವೆಂಕಟ್ ಗರಂ ಆದರು. ''ಕ್ಯಾಮರಾ ಮುಂದೆ ಹೇಗಿರ್ಬೇಕೋ ಹಾಗಿರಿ. ನಿಮ್ಮ ಮನೆಯಲ್ಲಿ ನಿಮಗೆ ಇಷ್ಟ ಬಂದ ಹಾಗಿರಿ. ಔಟ್ ಆಫ್ ದಿ ಗೇಟ್ ಅಲ್ಲ. ಕ್ಯಾಮರಾ ಇದೆ. ಎಲ್ಲರೂ ನಿಮ್ಮನ್ನ ನೋಡ್ತಾರೆ. ನಾನು ಹೇಳ್ತಿರೋದು ಸರಿ ಅಂತ ಎಲ್ಲರೂ ಒಪ್ಪಿಕೊಳ್ಳುತ್ತಾರೆ. ಅಮೆರಿಕನ್ನರು ನನ್ನ ಫ್ಯಾನ್ಸ್. ನನ್ನಿಂದ ಅವರೆಲ್ಲಾ ಸೀರೆ, ಸಲ್ವಾರ್ ಹಾಕೋದು ಕಲ್ತಿದ್ದಾರೆ. I'm telling you in english because you can't understand kannada'' ಅಂತ ಏರುಧ್ವನಿಯಲ್ಲಿ ಹುಚ್ಚ ವೆಂಕಟ್ ಹೇಳಿದರು.

ಬೆದರಿದ ಪೂಜಾ ಗಾಂಧಿ

ಹುಚ್ಚ ವೆಂಕಟ್ ಏಕ್ದಂ 'ಹುಚ್ಚಾವತಾರ' ತಾಳಿದ್ದು ನೋಡಿ ಪೂಜಾ ಗಾಂಧಿ ತುಟಿ ಬಿಚ್ಚಲಿಲ್ಲ. ಸುಮ್ಮನೆ ಕೂತುಬಿಟ್ಟರು.

ಥರ್ಡ್ ಅಂಪೈರ್ ಆದ ರೆಹಮಾನ್.!

ಇಡೀ ಜಗಳಕ್ಕೆ ಸಾಕ್ಷಿಯಾಗಿದ್ದ ಟಿವಿ9 ಆಂಕರ್ ರೆಹಮಾನ್ ಹುಚ್ಚ ವೆಂಕಟ್ ರನ್ನ ಸ್ವಲ್ಪ ಕೂಲ್ ಮಾಡಿ ಜಗಳಕ್ಕೆ ಫುಲ್ ಸ್ಟಾಪ್ ಇಟ್ಟರು.

English summary
YouTube Star Huccha Venkat and Kannada Actress Pooja Gandhi had an argument over Women wearing Sensuous Dress in Bigg Boss House. Read to know more details about what happened in Day 1 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada