»   » 'ಬಿಗ್ ಬಾಸ್-3'; ಈ ವಾರ ಔಟ್ ಆಗುವವರು ಯಾರು?

'ಬಿಗ್ ಬಾಸ್-3'; ಈ ವಾರ ಔಟ್ ಆಗುವವರು ಯಾರು?

Posted By:
Subscribe to Filmibeat Kannada

ಕನ್ನಡ ಕಿರುತೆರೆ ಪ್ರಿಯರು ಕಾತರದಿಂದ ಕಾಯುತ್ತಿದ್ದ 'ಬಿಗ್ ಬಾಸ್-3' ಕಾರ್ಯಕ್ರಮ ಶುರುವಾಗಿದೆ. ಮೊದಲ ದಿನ ಕೊಂಚ ಹುಚ್ಚಾಟ, ಕಿತ್ತಾಟದ ಜೊತೆಗೆ ನಾಮಿನೇಷನ್ ಟೆನ್ಷನ್ ಕೂಡ ಸ್ಪರ್ಧಿಗಳಿಗೆ ಎದುರಾಯ್ತು.

ಮೊದಲ ವಾರದ ಕ್ಯಾಪ್ಟನ್ ಆಗಿರುವ ನಟಿ ಶೃತಿಗೆ 'ಬಿಗ್ ಬಾಸ್' ಮನೆಯಲ್ಲಿ ಸಕಲ ಸೌಲಭ್ಯಗಳು ಲಭಿಸಿವೆ. 'ಬಿಗ್ ಬಾಸ್' ಅಪ್ಪಣೆಯಂತೆ ಮನೆ ಕೆಲಸಕ್ಕೆ ಸ್ಪರ್ಧಿಗಳನ್ನ ಗುಂಪುಗಳಾಗಿ ವಿಂಗಡನೆ ಮಾಡಿದ ನಂತರ ನಾಮಿನೇಷನ್ ಪ್ರಕ್ರಿಯೆ ಆರಂಭವಾಯ್ತು. [ನಟಿ ಪೂಜಾ ಗಾಂಧಿಯಿಂದ ರೊಚ್ಚಿಗೆದ್ದ ಹುಚ್ಚ ವೆಂಕಟ್.!]

'ಬಿಗ್ ಬಾಸ್' ಮನೆಯಿಂದ ಆಚೆ ಹಾಕಲು ಬಯಸುವ ಇಬ್ಬರು ಸ್ಪರ್ಧಿಗಳ ಹೆಸರನ್ನು ಪ್ರತಿಯೊಬ್ಬರು ಸೂಚಿಸಬೇಕು. ಅಚ್ಚರಿಯಂದ್ರೆ, ಎರಡು ರಿಯಾಲಿಟಿ ಶೋಗಳನ್ನ ಗೆದ್ದು ಕನ್ನಡಿಗರ ಮನೆ ಮನ ಗೆದ್ದಿರುವ ಸುನಾಮಿ ಕಿಟ್ಟಿ ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದಾರೆ.

ಯಾರ್ಯಾರು, ಯಾರ್ಯಾರನ್ನ ನಾಮಿನೇಟ್ ಮಾಡಿದ್ರು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ........

ನೇಹಾ ಗೌಡಗೆ ಮಾಧುರಿ ಕಂಡ್ರೆ ಆಗಲ್ಲ.!

ಯಾರೊಟ್ಟಿಗೂ ಹೆಚ್ಚು ಮಾತನಾಡದ ಗಗನಸಖಿ ನೇಹಾ ಗೌಡ, ಅದೇ ಕಾರಣ ಕೊಟ್ಟು ನಟಿ ಮಾಧುರಿ ಇಟಗಿ ಮತ್ತು ಗಾಯಕ ರವಿ ಮುರೂರು ರವರನ್ನ ನಾಮಿನೇಟ್ ಮಾಡಿದರು.

ಅಯ್ಯಪ್ಪನಿಗೆ ನಾನ್-ವೆಜ್ ಪ್ರಾಬ್ಲಂ.!

ಕಿರುತೆರೆ ನಟಿ ಕೃತಿಕಾ ಮತ್ತು ಗಾಯಕ ರವಿ ಮುರೂರು ಸಸ್ಯಹಾರಿ. ಆದ್ದರಿಂದ ''ನಮಗೆ ನಾನ್ ವೆಜ್ ಸೇವಿಸಲು ಸಮಸ್ಯೆ ಆಗಬಹುದು'' ಅನ್ನುವ ನೆಪವೊಡ್ಡಿ ಈ ಇಬ್ಬರನ್ನ ಕ್ರಿಕೆಟರ್ ಅಯ್ಯಪ್ಪ ನಾಮಿನೇಟ್ ಮಾಡಿದರು.

ರೆಹಮಾನ್ ಗೆ ಹುಚ್ಚ ವೆಂಕಟ್ ಕಂಡ್ರೆ ಭಯ

ಹುಚ್ಚ ವೆಂಕಟ್ ರಿಂದ ಮನೆಯಲ್ಲಿರುವ ಹೆಣ್ಮಕ್ಕಳಿಗೆ ತೊಂದರೆ ಆಗಬಹುದು ಅನ್ನುವ ಕಾರಣಕ್ಕೆ ರೆಹಮಾನ್, ಹುಚ್ಚ ವೆಂಕಟ್ ಮತ್ತು ಸುನಾಮಿ ಕಿಟ್ಟಿಯನ್ನ ನಾಮಿನೇಟ್ ಮಾಡಿದರು.

ಭಾವನೆ ಬೆಳಗೆರೆ

''ನಟಿ ಮಾಧುರಿ ಇಟಗಿ ಮತ್ತು ಕೃತಿಕಾ ಅಷ್ಟು ಮಾತನಾಡುವುದಿಲ್ಲ, ಅವರ ಪರಿಚಯ ನನಗೆ ಆಗಿಲ್ಲ'' ಅಂತ ಕಾರಣ ನೀಡಿ ಇಬ್ಬರನ್ನ ನಾಮಿನೇಟ್ ಮಾಡಿದರು ಭಾವನಾ ಬೆಳಗೆರೆ.

ಚಂದನ್

ಸುನಾಮಿ ಕಿಟ್ಟಿ ಮತ್ತು ರವಿ ಮುರೂರುರನ್ನ ಕಿರುತೆರೆ ನಟ ಚಂದನ್ ನಾಮಿನೇಟ್ ಮಾಡಿದರು.

ಪೂಜಾ ಗಾಂಧಿ ಕನ್ನಡ ಮಾತನಾಡುವುದಿಲ್ಲ.!

ನಟಿ ಪೂಜಾ ಗಾಂಧಿ ಕನ್ನಡ ಮಾತನಾಡುವುದಿಲ್ಲ ಅಂತ ಹೇಳಿ ರವಿ ಮುರೂರು, ಪೂಜಾ ಗಾಂಧಿ ಮತ್ತು ಜಯಶ್ರೀ ರನ್ನ ನಾಮಿನೇಟ್ ಮಾಡಿದರು.

ಪೂಜಾ ಗಾಂಧಿ

ಪೂಜಾ ಗಾಂಧಿ ನಾಮಿನೇಷನ್ - ಹುಚ್ಚ ವೆಂಕಟ್, ಕೃತಿಕಾ

ಹುಚ್ಚ ವೆಂಕಟ್ ಹುಚ್ಚಾಟ.!

''ಎಲ್ಲರೂ ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ನಾನು ಯಾರನ್ನೂ ನಾಮಿನೇಟ್ ಮಾಡುವುದಿಲ್ಲ. ನನ್ನ ಬಲವಂತ ಮಾಡುವ ಹಾಗಿಲ್ಲ'' ಅಂತ ಮೊದಲ ಎದ್ದು ಹೋದ ಹುಚ್ಚ ವೆಂಕಟ್, ನಂತರ ನೇಹ ಗೌಡ ಮತ್ತು ಸುನಾಮಿ ಕಿಟ್ಟಿಯನ್ನ ನಾಮಿನೇಟ್ ಮಾಡಿದರು.

ಮಾಧುರಿ ಇಟಗಿ

ಸುನಾಮಿ ಕಿಟ್ಟಿ ಮತ್ತು ಆರ್.ಜೆ.ನೇತ್ರ ಮನೆಯಿಂದ ಹೋಗಬೇಕು ಅಂತ ನಟಿ ಮಾಧುರಿ ಇಟಗಿ ಇಬ್ಬರ ಹೆಸರನ್ನ ಪಿಕ್ ಮಾಡಿದರು.

ಜಯಶ್ರೀ

ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀ ಪಿಕ್ ಮಾಡಿದ ಹೆಸರುಗಳು - ಕೃತಿಕಾ ಮತ್ತು ರವಿ ಮುರೂರು.

ಮಾಸ್ಟರ್ ಆನಂದ್

ಗಾಯಕ ರವಿ ಮುರೂರು ಮತ್ತು ನೇಹ ಗೌಡ ಹೆಸರನ್ನ ಮಾಸ್ಟರ್ ಆನಂದ್ ಹೇಳಿದರು.

ಸುನಾಮಿ ಕಿಟ್ಟಿ

ಸುನಾಮಿ ಕಿಟ್ಟಿ ನಾಮಿನೇಟ್ ಮಾಡಿದ್ದು ಮಾಧುರಿ ಇಟಗಿ ಮತ್ತು ಅಯ್ಯಪ್ಪ ರವರನ್ನ.

ಆರ್.ಜೆ.ನೇತ್ರ

ಕೃತಿಕಾ ಮತ್ತು ಮಾಧುರಿ ಇಟಗಿ ರವರನ್ನ ಆರ್.ಜೆ.ನೇತ್ರ ನಾಮಿನೇಟ್ ಮಾಡಿದರು.

ಕೃತಿಕಾ

ಕೃತಿಕಾ ನಾಮಿನೇಷನ್ - ಅಯ್ಯಪ್ಪ ಮತ್ತು ಜಯಶ್ರೀ

ಶೃತಿ

ಸುನಾಮಿ ಕಿಟ್ಟಿ ಮತ್ತು ಜಯಶ್ರೀ ರವರನ್ನ ನಟಿ ಶೃತಿ ನಾಮಿನೇಟ್ ಮಾಡಿದರು.

ಇವರನ್ನ ನೀವೇ ಉಳಿಸಬೇಕು.!

ಸುನಾಮಿ ಕಿಟ್ಟಿ, ರವಿ ಮುರೂರು, ಕೃತಿಕಾ ಮತ್ತು ಮಾಧುರಿ ಇಟಗಿ ಪೈಕಿ ನಿಮ್ಮ ಫೇವರಿಟ್ ಯಾರೋ, ಅವರ ಪರ ಎಸ್.ಎಂ.ಎಸ್ ಮಾಡಿ, ಅವರನ್ನ ಮನೆಯಲ್ಲಿ ಉಳಿಸಿಕೊಳ್ಳಿ..

ಈ ವಾರ ಔಟ್ ಆಗುವುದು ಯಾರು, ಊಹಿಸಿ...

ಈ ನಾಲ್ವರ ಪೈಕಿ ಮೊದಲ ವಾರ ಔಟ್ ಆಗುವವರು ಯಾರು ಅನ್ನೋದನ್ನ ನೀವು ಊಹಿಸಿ, ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮಗೆ ತಿಳಿಸಿ....

English summary
Tsunami Kitty, Singer Ravi Muroor, Kruthika and Actress Madhuri Itagi have nominated for the first week elimination. Check who nominated whom on Day 1 in Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada