»   » ವೆಂಕಟ್ ಹುಚ್ಚಾಟ ಶುರು; 'ಬಿಗ್ ಬಾಸ್' ಇಂದಿನ ಸಂಚಿಕೆ ಮಿಸ್ ಮಾಡ್ಬೇಡಿ.!

ವೆಂಕಟ್ ಹುಚ್ಚಾಟ ಶುರು; 'ಬಿಗ್ ಬಾಸ್' ಇಂದಿನ ಸಂಚಿಕೆ ಮಿಸ್ ಮಾಡ್ಬೇಡಿ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಶುರುವಾಗಿದ್ದಾಯ್ತು. ಇಂದಿನಿಂದ ಪ್ರತಿದಿನ ರಾತ್ರಿ 9 ಗಂಟೆಗೆ 'ಬಿಗ್ ಬಾಸ್' ಪ್ರಸಾರವಾಗಲಿದೆ. ಮೊದಲನೇ ಸಂಚಿಕೆ ಪ್ರಸಾರವಾಗುವುದಕ್ಕೆ ಇನ್ನು ಕೆಲವೇ ಗಂಟೆಗಳು ಬಾಕಿ.

'ಬಿಗ್ ಬಾಸ್' ಮನೆಯಲ್ಲಿ ಮೊದಲನೇ ದಿನ ಏನೇನೆಲ್ಲಾ ಆಯ್ತು ಅನ್ನೋದನ್ನ ಈ ಸಂಚಿಕೆಯಲ್ಲಿ ತೋರಿಸಲಾಗುತ್ತೆ. ಇದರಲ್ಲಿನ ಮೇನ್ ಅಟ್ರ್ಯಾಕ್ಷನ್ ಯಾರು ಅಂದ್ರೆ, ಬೇರಾರು ಅಲ್ಲ ನಿಮ್ಮೆಲ್ಲರ ಪ್ರೀತಿಯ 'ಹುಚ್ಚ ವೆಂಕಟ್'.! [ಎಡಗಾಲಿಟ್ಟು 'ಬಿಗ್ ಬಾಸ್' ಮನೆಗೆ ಅಂದರ್ ಆದ ಹುಚ್ಚ ವೆಂಕಟ್]

Bigg Boss Kannada 3 day 1 sneak peek : Huccha Venkat proposes to Jayashree

ಹೌದು, 'ಬಿಗ್ ಬಾಸ್' ಮನೆಯಲ್ಲೂ ಹುಚ್ಚಾಟಕ್ಕೆ ಹುಚ್ಚ ವೆಂಕಟ್ ನಾಂದಿ ಹಾಡಿದ್ದಾರೆ. ನಿನ್ನೆಯಷ್ಟೇ ಪ್ರಸಾರವಾದ ಸಂಚಿಕೆಯಲ್ಲಿ 'ಬಿಗ್ ಬಾಸ್' ಮನೆಗೆ ಎಂಟ್ರಿಯಾಗುತ್ತಿದ್ದಂತೆ ಮಾಡೆಲ್ ಕಮ್ ಕಥಕ್ ನೃತ್ಯಗಾರ್ತಿ ಜಯಶ್ರೀ, ಕೆಂಪು ಗುಲಾಬಿಗಳಿದ್ದ ಹೂಗುಚ್ಛವನ್ನ ಹುಚ್ಚ ವೆಂಕಟ್ ಗೆ ನೀಡಿದ್ದರು.

ಇದರಿಂದ ಹುಚ್ಚ ವೆಂಕಟ್ ಗೆ ಅದೇನಾಯ್ತೋ ಗೊತ್ತಿಲ್ಲ, ಬೆಳಗ್ಗೆ ಎದ್ದ ನಂತರ ಜಯಶ್ರೀಗೆ ಪ್ರಪೋಸ್ ಮಾಡಿದ್ದಾರೆ. ಜೊತೆಗೆ, ''ಕಾವೇರಿ....'' ಹಾಡನ್ನೂ ಹಾಡಿದ್ದಾರೆ. ಇದನ್ನೆಲ್ಲಾ ನೋಡಿ, ಜಯಶ್ರೀ ''ಅಯ್ಯಯ್ಯೋ....''ಅಂತ ತಲೆ ಮೇಲೆ ಕೈಹೊತ್ತುಕೊಂಡಿದ್ದಾರೆ. [ಹುಚ್ಚನ ಕಂಡು ಕಿಚ್ಚ ಕೂಡಾ ಸೈಲಂಟ್, ವೆಂಕಟ್ ಟ್ರೆಂಡಿಂಗ್]

ಇಷ್ಟೇ ಅಲ್ಲ, ಮಹಿಳೆಯರಿಗೆಲ್ಲಾ ಬಿಂದಿ ಹಂಚಿದ್ದಾರಂತೆ ಹುಚ್ಚ ವೆಂಕಟ್. ಜೊತೆಗೆ ತಮ್ಮ 'ಎಕ್ಕಡ'ವನ್ನ ಯಾರಿಗೋ ಕೊಟ್ಟಿದ್ದಾರಂತೆ.!!! [ಕನ್ನಡ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಎಲ್ಲವೂ ಸರಿ ಇದ್ಯಾ?]

ಇಷ್ಟೆಲ್ಲಾ ಹುಚ್ಚಾಟ ಇವತ್ತಿನ 'ಬಿಗ್ ಬಾಸ್' ಸಂಚಿಕೆಯಲ್ಲಿದೆ. ನೋಡೋಕೆ ನಿಮಗೆ ಆಸಕ್ತಿ ಇದ್ದರೆ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿ ಟ್ಯೂನ್ ಮಾಡಿ.....

English summary
YouTube Star Huccha Venkat has proposed to Model cum Dancer Jayashree in Bigg Boss Kannada 3. This episode will telecast today at 9 pm in Colors Kannada Channel. Don't miss to watch.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada