»   » ಹುಚ್ಚ ವೆಂಕಟ್ ಶ್ರಮದಿಂದ 'ಬಿಗ್ ಬಾಸ್' ಮನೆ ಸದಸ್ಯರಿಗೆ ಬಂಪರ್.!

ಹುಚ್ಚ ವೆಂಕಟ್ ಶ್ರಮದಿಂದ 'ಬಿಗ್ ಬಾಸ್' ಮನೆ ಸದಸ್ಯರಿಗೆ ಬಂಪರ್.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಹುಚ್ಚ ವೆಂಕಟ್ ಆಟಕ್ಕುಂಟು ಲೆಕ್ಕಕ್ಕಿಲ್ಲ.! ಮೊದಲ ವಾರದ ಟಾಸ್ಕ್ ನಲ್ಲಿ ಸರಿಯಾಗಿ ಪಾಲ್ಗೊಳ್ಳದ ಹುಚ್ಚ ವೆಂಕಟ್ Luxury Budget ಮಿಸ್ ಆಗುವುದಕ್ಕೆ ಪ್ರಮುಖ ಕಾರಣಕರ್ತರಾಗಿದ್ರು.

ಈ ಬಾರಿ 'ಬದುಕು ಜಟಕಾ ಬಂಡಿ' ಟಾಸ್ಕ್ ನಲ್ಲೂ ಹುಚ್ಚ ವೆಂಕಟ್ ಭಾಗವಹಿಸುವುದಿಲ್ಲ ಅಂತಲೇ ಎಲ್ಲರೂ ಅಂದುಕೊಂಡಿದ್ದರು. ಆದ್ರೆ, ಎಲ್ಲರ ನಿರೀಕ್ಷೆಗೂ ಮೀರಿ ಹುಚ್ಚ ವೆಂಕಟ್ ಪರ್ಫಾಮ್ ಮಾಡಿಬಿಟ್ರು. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

'ಟಾಸ್ಕ್ ಮಾಡಲ್ಲ ಅಂತ ಎಲ್ಲರೂ ಮಾಡ್ತಿದ್ರು ಚೇಷ್ಟೆ. ಅಣ್ಣ ಗ್ರೌಂಡ್ ಗೆ ಬಂದ್ರೆ ಅಷ್ಟೆ. ಬೆನ್ನ ಹಿಂದೆ ಟಾಕ್ಸ್ ಎಲ್ಲಾ ಬ್ಯಾನ್ ಆಗ್ಬೇಕ್'..! ಯಾಕಂದ್ರೆ, ಈ ವಾರದ ಟಾಸ್ಕ್ ನಲ್ಲಿ ಗಮನಾರ್ಹ ಸಾಧನೆ ಮಾಡಿ, Luxury Budget ನಲ್ಲಿ 200 ಅಧಿಕ ಪಾಯಿಂಟ್ಸ್ ಗೆಲ್ಲುವುದಕ್ಕೆ ಕಾರಣ ಇದೇ 'ಮಾಣಿಕ್ ಬಾಷಾ' ಅಲಿಯಾಸ್ ಹುಚ್ಚ ವೆಂಕಟ್.!

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 11 ದಿನ ಏನೇನೆಲ್ಲಾ ಆಯ್ತು ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ........

ಬದುಕು ಜಟಕಾ ಬಂಡಿ ಕೊನೆಯ ಹಂತದ ಟಾಸ್ಕ್

ಸೂರಿನ ಮಹತ್ವವನ್ನು ತಿಳಿಯಲು 'ಬಿಗ್ ಬಾಸ್' 11 ನೇ ದಿನ ವಿಶೇಷ ಟಾಸ್ಕ್ ನೀಡಿದರು. ಟಾಸ್ಕ್ ಪ್ರಕಾರ, 200 ರೌಂಡ್ ಗಳಿಗೆ ಲಿವಿಂಗ್ ಏರಿಯಾ ಮತ್ತು ಅಡುಗೆ ಮನೆ. 400 ರೌಂಡ್ ಗಳು ಹಾಕಿದರೆ ಇಡೀ ಮನೆಯನ್ನ ಉಳಿಸಿಕೊಳ್ಳಬಹುದಿತ್ತು.

ಮಾಸ್ಟರ್ ಆನಂದ್ ಪವರ್.!

ಇದುವರೆಗೂ ಟಾಸ್ಕ್ ನಲ್ಲಿ ಭಾಗವಹಿಸದವರು ಈ ಬಾರಿ ಟಾಸ್ಕ್ ನಲ್ಲಿ ಭಾಗಿಯಾಗಬೇಕಿತ್ತು. ಮಾಸ್ಟರ್ ಆನಂದ್, ರವಿ ಮುರೂರು ಮತ್ತು ಭಾವನಾ ಬೆಳಗೆರೆ ಬಂಡಿ ಎಳೆಯುವುದಕ್ಕೆ ನಿಂತರು. ಒಂದು ರೌಂಡ್ ಗೆ ಭಾವನಾ ಬೆಳಗೆರೆ ಸುಸ್ತಾದರು. ನಿರೀಕ್ಷೆಗೂ ಮೀರಿ ಪರ್ಫಾಮೆನ್ಸ್ ಮಾಡಿದವರು ಮಾಸ್ಟರ್ ಆನಂದ್.

200 ರೌಂಡ್ ಮಾತ್ರ ಸಾಧ್ಯ

ಭಾವನಾ ಬೆಳಗೆರೆ ಮತ್ತು ನೇಹಾ ಗೌಡ ಬಂಡಿ ಎಳೆಯುವುದಕ್ಕೆ ಶಕ್ತರಿರಲಿಲ್ಲ. ರವಿ ಮುರೂರು ಮತ್ತು ಮಾಸ್ಟರ್ ಆನಂದ್ ಸೇರಿ 200 ರೌಂಡ್ ಹಾಕಿದರು. ಇದರಿಂದ ಲಿವಿಂಗ್ ಏರಿಯಾ ಮತ್ತು ಅಡುಗೆ ಮನೆಯನ್ನ ಉಳಿಸಿಕೊಂಡಂತೆ ಆಯ್ತು. ಟಾಸ್ಕ್ ಪೂರ್ಣಗೊಳ್ಳದ ಪರಿಣಾಮ, ಬೆಡ್ ರೂಮ್ ನಿಂದ ಎಲ್ಲರೂ ಹೊರಬರಬೇಕಾಯಿತು.

ಟಾಸ್ಕ್ ಸಂಪೂರ್ಣ

ಈ ವಾರದ 'ಬದುಕು ಜಟಕಾ ಬಂಡಿ' ಟಾಸ್ಕ್ ಮುಗೀತು. ಎಲ್ಲಾ ಸ್ಪರ್ಧಿಗಳು ಸೇರಿ 1000 ಪಾಯಿಂಟ್ಸ್ ಗಳಿಸಿದರು.

ಹುಚ್ಚ ವೆಂಕಟ್ ರಿಂದ ಬೋನಸ್

'ಬದುಕು ಜಟಕಾ ಬಂಡಿ' ಟಾಸ್ಕ್ ನಲ್ಲಿ ಗಮನಾರ್ಹ ಸಾಧನೆ ಮಾಡಿದ ಹುಚ್ಚ ವೆಂಕಟ್ ಗೆ ಭೇಷ್ ಅನ್ನುತ್ತಾ 'ಬಿಗ್ ಬಾಸ್' 200 ಎಕ್ಸ್ ಟ್ರಾ ಪಾಯಿಂಟ್ಸ್ ನೀಡಿದರು. ಇದರಿಂದ ಮನೆಯ ಎಲ್ಲಾ ಸದಸ್ಯರಿಗೆ ಬಂಪರ್ ಆಫರ್ ಸಿಕ್ಕಿದಷ್ಟೇ ಖುಷಿ ಆಯ್ತು.

ಲೈವ್ ಶೋ ನಲ್ಲಿ ಹುಚ್ಚ ವೆಂಕಟ್

ಮನರಂಜನೆ ಸಲುವಾಗಿ ಮಾಸ್ಟರ್ ಆನಂದ್ ಮತ್ತು ನೇಹಾ ಗೌಡ 'ಹುಚ್ಚ ವೆಂಕಟ್' ಲೈವ್ ಕಾಲರ್ ಶೋ ಮಾಡಿದರು. ವೀಕ್ಷಕರು ಕೇಳುವ ಪ್ರಶ್ನೆಗಳಿಗೆ ಹುಚ್ಚ ವೆಂಕಟ್ ಉತ್ತರಿಸಬೇಕಾಗಿತ್ತು.

ಹುಚ್ಚ ವೆಂಕಟ್ ಗಡ್ಡ-ಮೀಸೆ ಬಿಡುವುದು ಯಾಕೆ?

''ಮೊದಲು ನನಗೆ ಗಡ್ಡ ಮೀಸೆ ಇರ್ಲಿಲ್ಲ. ಯಾರೋ ಹೇಳಿದ್ರು ಉಲ್ಟಾ ಶೇವ್ ಮಾಡಿದ್ರೆ ಬರುತ್ತೆ ಅಂತ. ಮಾಡ್ದೆ. ಬಂತು. ಹಾಗೇ ಬಿಟ್ಟಿದ್ದೀನಿ'' - ಹುಚ್ಚ ವೆಂಕಟ್

ಹುಚ್ಚ ವೆಂಕಟ್ ಗೆ ಮಕ್ಕಳು ಇಲ್ವಾ?

''ಮೊದಲು ನನಗೆ ಹೆಂಡತಿಯರು ಎಷ್ಟು ಜನ ಅಂತ ಎಣಿಸುತ್ತೇನೆ. ಆಮೇಲೆ ಮಕ್ಕಳು'' - ಹುಚ್ಚ ವೆಂಕಟ್

ನೋವು ಹೇಳಿಕೊಂಡರೆ ಮಳೆ ಬರುತ್ತೆ.!

''ನಾನು ಹುಬ್ಬಳ್ಳಿಗೆ ಬಂದು ಅತ್ತು ಮಳೆ ಬರಿಸಬೇಕಾಗಿಲ್ಲ. ನಾನು ನೋವು ಹೇಳಿಕೊಂಡರೆ ಸಾಕು ಮಳೆ ಬರುತ್ತೆ'' - ಹುಚ್ಚ ವೆಂಕಟ್

English summary
For performing well in 'Baduku Jataka Bandi' task, Huccha Venkat gained 200 extra points in Luxury Budget. Read the article to know what all happened on Day 11 in Bigg Boss Kannada 3.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada