For Quick Alerts
  ALLOW NOTIFICATIONS  
  For Daily Alerts

  ಹುಚ್ಚ ವೆಂಕಟ್ ಗೆ 2ನೇ ಹೆಂಡತಿ ಆಗ್ತಾರಾ ಜಯಶ್ರೀ?

  By Harshitha
  |

  ಡ್ಯಾನ್ಸರ್ ಕಮ್ ಮಾಡೆಲ್ ಜಯಶ್ರೀ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಸರ್ವೈವ್ ಆಗಲು ಏನೆಲ್ಲಾ ಗಿಮಿಕ್ ಮಾಡ್ಬೇಕೋ ಎಲ್ಲಾ ಮಾಡ್ತಿದ್ದಾರೆ. ಮನೆಗೆ ಕಾಲಿಡುತ್ತಿದ್ದಂತೆ, ಯೂಟ್ಯೂಬ್ ಸ್ಟಾರ್ ಹುಚ್ಚ ವೆಂಕಟ್ ಗೆ ಕೆಂಪು ಗುಲಾಬಿ ಹೂಗುಚ್ಛ ನೀಡಿ 'ಅಣ್ಣ' ಎಂದು ಕರೆದದ್ದು ಇದೇ ಜಯಶ್ರೀ.

  ಆದ್ರೂ, ಆಗಾಗ ಹುಚ್ಚ ವೆಂಕಟ್ ಕಾಲೆಳೆಯುವ ಸಲುವಾಗಿ 'ಪ್ರಪೋಸ್' ಮಾಡುತ್ತಲೇ ಇರುತ್ತಾರೆ. ನಿನ್ನೆ ಆಗಿದ್ದು ಇದೇ. ಈ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿರುವ ಜಯಶ್ರೀ, ಹೇಗಾದ್ರೂ ವೀಕ್ಷಕರ ಗಮನ ಸೆಳೆಯಬೇಕು ಅನ್ನುವ ಸಲುವಾಗಿ ಮತ್ತೆ ಹುಚ್ಚ ವೆಂಕಟ್ ಹಿಂದೆ ಬಿದ್ದರು. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

  ಹುಚ್ಚ ವೆಂಕಟ್ ಗೆ ಪ್ರಪೋಸ್ ಮಾಡಿ, ಅವರ ಇಂದಿರಾನಗರದ ಮನೆಯನ್ನ ತಮ್ಮ ಹೆಸರಿಗೆ ಬರೆದುಕೊಡುವಂತೆ ಕೇಳಿದರು. 'ಬಿಗ್ ಬಾಸ್' ಮನೆಯಲ್ಲಿ 12 ನೇ ದಿನ ಏನೇನೆಲ್ಲಾ ಆಯ್ತು ಅಂತ ತಿಳಿದುಕೊಳ್ಳಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

  ಸೀರೆ ಉಟ್ಟಿದ್ದ ಜಯಶ್ರೀ

  ಸೀರೆ ಉಟ್ಟಿದ್ದ ಜಯಶ್ರೀ

  'ಬದುಕು ಜಟಕಾ ಬಂಡಿ' ಟಾಸ್ಕ್ ಗಾಗಿ 'ಬಿಗ್ ಬಾಸ್' ನೀಡಿದ್ದ ಸೀರೆಯನ್ನೇ ತೊಟ್ಟು ಜಯಶ್ರೀ ಓಡಾಡುತ್ತಿದ್ದರು. ಅದನ್ನ ನೋಡಿದ ಹುಚ್ಚ ವೆಂಕಟ್, ''ಯಾಕ್ರೀ...ಇನ್ನೂ ಇದೇ ಸೀರೆಯಲ್ಲೇ ಇದ್ದೀರಾ. ಹೀಗೆ ಸೀರೆಯಲ್ಲೇ ಇರಿ. ಚೆನ್ನಾಗಿ ಕಾಣ್ತೀರಾ. ಯಾರಾದ್ರೂ ಒಳ್ಳೆ ಗಂಡು ಹುಡುಕೋಣ'' ಅಂದ್ರು. ಅವರ ಸಂಭಾಷಣೆಯ ಮುಂದುವರಿದ ಭಾಗಕ್ಕಾಗಿ ಮುಂದಿನ ಸ್ಲೈಡ್ ಕ್ಲಿಕ್ ಮಾಡಿ...

  ['ಬಿಗ್ ಬಾಸ್' ಮನೆಯಲ್ಲಿ ಹುಚ್ಚ ವೆಂಕಟ್ ಹೊಸ ಲವ್ ಸ್ಟೋರಿ.!]

  2 ನೇ ಹೆಂಡತಿ ಆಗ್ತೀರಾ?

  2 ನೇ ಹೆಂಡತಿ ಆಗ್ತೀರಾ?

  ಜಯಶ್ರೀ - ''ಯಾಕೆ ನೀವೇ ಇಲ್ವಾ''
  ಹುಚ್ಚ ವೆಂಕಟ್ - ''ನಾನಾ..? ಇ ಆಮ್ ಆಲ್ರೆಡಿ ಎಂಗೇಜ್ಡ್. ನಂಗೆ ಎರಡನೇ ಹೆಂಡತಿ ಆಗ್ತೀರಾ?''

  ಆಸ್ತಿ ನಂಗೆ ಕೊಡ್ಬೇಕು

  ಆಸ್ತಿ ನಂಗೆ ಕೊಡ್ಬೇಕು

  ಜಯಶ್ರೀ - ''ಹಾಗಾದ್ರೆ, ಪ್ರಾಪರ್ಟಿ ಎಲ್ಲಾ ನನ್ನ ಹೆಸರಿಗೆ ಬರೀತೀರಾ. ಇಂದಿರಾನಗರದಲ್ಲಿರುವ ಮನೆಯನ್ನ ನಂಗೆ ಕೊಟ್ರೆ, ನಾನು ಸೆಟ್ಲ್ ಆಗ್ಬಿಡ್ತೀನಿ''
  ಹುಚ್ಚ ವೆಂಕಟ್ - ''ಅದು ಬಾಡಿಗೆ ಮನೆ''

  ಪ್ರಪೋಸ್ ಮಾಡಿದ ಜಯಶ್ರೀ

  ಪ್ರಪೋಸ್ ಮಾಡಿದ ಜಯಶ್ರೀ

  ಜಯಶ್ರೀ - ''ನಿಮ್ಮ ತಂದೆಗೆ ನಾನು ಸೊಸೆ ಆಗ್ಬಹುದಾ?''
  ಹುಚ್ಚ ವೆಂಕಟ್ - ''ದಿನಾ ಸೀರೆ ಉಟ್ಕೊಳ್ತೀರಾ?''
  ಜಯಶ್ರೀ - ''ಜನ ಸೊಂಟ ನೋಡ್ತಾರೆ. ಚೂಡಿದಾರ್ ಹಾಕೊಳ್ತೀನಿ''
  ಹುಚ್ಚ ವೆಂಕಟ್ ''ಮನೆಯಿಂದ ಆಚೆ ಹೋದ್ಮೇಲೆ ಮದುವೆ ಅರೇಂಜ್ಮೆಂಟ್ ಮಾಡಿಕೊಳ್ಳಿ''

  ಇದೆಲ್ಲಾ ಗಿಮಿಕ್.!

  ಇದೆಲ್ಲಾ ಗಿಮಿಕ್.!

  ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀಗೂ ಗೊತ್ತಿದೆ ಹುಚ್ಚ ವೆಂಕಟ್ ಟಿ.ಆರ್.ಪಿ ಪೀಸ್ ಅಂತ. ಈ ವಾರ ಅವರು ನಾಮಿನೇಟ್ ಅಗಿದ್ದಾರೆ. ಜನರು ಅವರ ಪರವಾಗಿ ವೋಟ್ ಹಾಕಲಿ ಅಂತ ಹೀಗೆಲ್ಲಾ ಮಾಡ್ತಿದ್ದಾರೆ ಅಷ್ಟೆ.!

  ಅಯ್ಯಪ್ಪ ಮೇಲೆ ಜಯಶ್ರೀಗೆ ಕಣ್ಣು

  ಅಯ್ಯಪ್ಪ ಮೇಲೆ ಜಯಶ್ರೀಗೆ ಕಣ್ಣು

  ಕ್ರಿಕೆಟರ್ ಅಯ್ಯಪ್ಪ ಜೊತೆ ಜಯಶ್ರೀ ಸದಾ ಮಾತನಾಡುತ್ತಿರುತ್ತಾರೆ. ಇಬ್ಬರ ಮಧ್ಯೆ ಸಂಥಿಂಗ್ ಸಂಥಿಂಗ್ ಇದೆ ಅಂತ ಮನೆಯಲ್ಲಿ ಗುಸುಗುಸು ಶುರುವಾಗಿದೆ. ಈ ಮಧ್ಯೆ ಜಯಶ್ರೀ ''ಅವರಿಗೆ 36 ವರ್ಷ ಅಂತ ಗೊತ್ತಿರ್ಲಿಲ್ಲ. ಅಷ್ಟು ವಯಸ್ಸಾದ ಹಾಗೆ ಅವರು ಕಾಣೋದೇ ಇಲ್ಲ. ತುಂಬಾ ಯಂಗ್ ಆಗಿ ಕಾಣ್ತಾರೆ'' ಅಂತ ಹೇಳ್ತಿದ್ರು.

  ನೇತ್ರ ಹೇಳಿದ್ದೂ ಅದೇ.!

  ನೇತ್ರ ಹೇಳಿದ್ದೂ ಅದೇ.!

  ''ನಿಮ್ಮಿಬ್ಬರ ಮಧ್ಯೆ ಏನಿದೆ ಅಂತ ಗೊತ್ತಿಲ್ಲ. ಆದ್ರೆ ಏನಾದರೂ ಆಗುವುದಕ್ಕೆ ಮುಂಚೆ ಮುಂಚೆ ನಿಮ್ಮ ನಡುವೆ 11-12 ವರ್ಷ ಗ್ಯಾಪ್ ಇದೆ ಅಂತ ನೆನಪಲ್ಲಿ ಇಟ್ಕೋ'' ಅಂತ ಜಯಶ್ರೀಗೆ ಕಿವಿ ಮಾತು ಹೇಳಿದರು ಆರ್.ಜೆ ನೇತ್ರ.

  ಬ್ರೇಕಪ್ ಕಥೆ ಬಿಚ್ಚಿಟ್ಟ ಜಯಶ್ರೀ

  ಬ್ರೇಕಪ್ ಕಥೆ ಬಿಚ್ಚಿಟ್ಟ ಜಯಶ್ರೀ

  ಅಯ್ಯಪ್ಪ ಮತ್ತು ತಮ್ಮ ನಡುವೆ ಏನಿಲ್ಲ ಅಂತ ಹೇಳ್ತಾ, ಜಯಶ್ರೀ ತಮ್ಮ ನಿಜ ಜೀವನದ ಬ್ರೇಕಪ್ ಕಥೆಯನ್ನ ನೇತ್ರ ಮುಂದೆ ಬಿಚ್ಚಿಟ್ಟರು.

  ದ್ವಾಪರಯುಗದಲ್ಲಿದ್ದಾರಂತೆ ಹುಚ್ಚ ವೆಂಕಟ್.!

  ದ್ವಾಪರಯುಗದಲ್ಲಿದ್ದಾರಂತೆ ಹುಚ್ಚ ವೆಂಕಟ್.!

  ಇಂದಿರಾನಗರದಲ್ಲಿರುವುದು ಬಾಡಿಗೆ ಮನೆ ಅಂತ ಹುಚ್ಚ ವೆಂಕಟ್ ಹೇಳಿದ್ದೇ ತಡ ಜಯಶ್ರೀ ಕನ್ಫ್ಯೂಸ್ ಆಗ್ಬಿಟ್ಟರು. ಈ ಬಗ್ಗೆ ನೇತ್ರ ಬಳಿ, ''ಅವರಪ್ಪ ಕೋಟ್ಯಾಧಿಪತಿ ಅಂತ ಹೇಳ್ತಿದ್ದರು. ಇಂದಿರಾನಗರದ ಮನೆ ಬರೆದುಕೊಡಿ ಅಂತ ಕೇಳ್ದೆ. ಅದು ಬಾಡಿಗೆ ಮನೆ ಅನ್ಬಿಡೋದಾ. ಇನ್ನೂ ದ್ವಾಪರಯುಗದಲ್ಲೇ ಇದ್ದಾರೆ ಬಾಸು'' ಅಂತ ಜಯಶ್ರೀ ಹೇಳಿದ್ರು.

  ಕ್ಯಾಪ್ಟನ್ ಆದ ಆನಂದ್

  ಕ್ಯಾಪ್ಟನ್ ಆದ ಆನಂದ್

  ಈ ವಾರ ಮನೆಯ ಕ್ಯಾಪ್ಟನ್ ಆಗಿ ಮಾಸ್ಟರ್ ಆನಂದ್ ಆಯ್ಕೆ ಆದರು.

  English summary
  Model cum Dancer Jayashree proposed Huccha Venkat for the second time in Bigg Boss house. Read the article to know what all happened on Day 12 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X