»   » 'ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ

'ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ

Posted By:
Subscribe to Filmibeat Kannada

ಮಳೆ ಹುಡುಗಿ ನಟಿ ಪೂಜಾ ಗಾಂಧಿ 'ಬಿಗ್ ಬಾಸ್' ಮನೆಯಲ್ಲಿ ಎರಡನೇ ದಿನವೇ ಕಣ್ಣೀರಧಾರೆ ಸುರಿಸಿದ್ದಾರೆ. ಮೊದಲನೇ ದಿನ ಹುಚ್ಚ ವೆಂಕಟ್ ಜೊತೆ ಮಾತಿನ ಸಮರ ನಡೆಸಿದ ಪೂಜಾ ಗಾಂಧಿ, ನಿನ್ನೆ ಬಿಕ್ಕಿ ಬಿಕ್ಕಿ ಅತ್ತುಬಿಟ್ಟರು.

ಅಚಾನಕ್ಕಾಗಿ ಮುರಿದ ಟೇಬಲ್ ಮತ್ತು ಗಾಜಿನ ಶೋ ಪೀಸ್ ನಿಂದಾಗಿ ಶಿಕ್ಷೆಗೆ ಗುರಿಯಾದ ಪೂಜಾ ಗಾಂಧಿ ಕಣ್ಣೀರಿಟ್ಟರು. ಸಾಲದಕ್ಕೆ, ಅಮ್ಮನನ್ನ ಮಿಸ್ ಮಾಡಿಕೊಂಡು ಕಣ್ಣಾಲಿಗಳನ್ನ ಒದ್ದೆ ಮಾಡಿಕೊಂಡರು. [ವೆಂಕಟ್ ಹುಚ್ಚನ್ನು ಕೆರಳಿಸಿದ ಪೂಜಾಗಾಂಧಿ ಮಿನಿ ಸ್ಕರ್ಟ್!]

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಎರಡನೇ ದಿನ ಏನೇನಾಯ್ತು ಅನ್ನೋದರ ಕಂಪ್ಲೀಟ್ ಡೀಟೇಲ್ಸ್ ಕೊಡ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ........

ಮನರಂಜನೆ ನೀಡುವ ಕೆಲಸ ಪೂಜಾ ಗಾಂಧಿಯದ್ದು.!

ಮನೆ ಕೆಲಸದ ವಿಚಾರವಾಗಿ ಸ್ಪರ್ಧಿಗಳನ್ನೆಲ್ಲಾ ವಿವಿಧ ಗುಂಪುಗಳಾಗಿ ವಿಂಗಡನೆ ಮಾಡಲಾಗಿತ್ತು. ಅದರಲ್ಲಿ ಪೂಜಾ ಗಾಂಧಿ ಮನರಂಜನೆ ಟೀಮ್ ನಲ್ಲಿದ್ದರು. ಅದರ ಸಲುವಾಗಿ 'ಅಭಿನೇತ್ರಿ' ಕಲ್ಪನಾ ಆದ ಪೂಜಾ ಗಾಂಧಿ, ಮಾಸ್ಟರ್ ಆನಂದ್ ಜೊತೆ ಸೊಂಟ ಕುಲುಕಿಸುವುದಕ್ಕೆ ನಿಂತರು.

ಕೂತಲ್ಲೇ ಟೇಬಲ್ ಮುರಿದು ಬಿತ್ತು.!

'ತಮ್ ನಂ...ತಮ್ ನಂ' ಹಾಡು ಶುರುವಾಗುವ ಮುನ್ನವೇ ಗಾರ್ಡನ್ ಏರಿಯಾದಲ್ಲಿ ಪೂಜಾ ಗಾಂಧಿ ಕುಳಿತಿದ್ದ ಟೇಬಲ್ ಮುರಿದು ಹೋಯ್ತು.

ಡ್ಯಾನ್ಸ್ ಮಾಡುವಾಗ ಗ್ಲಾಸ್ ಪೀಸ್ ಪೀಸ್.!

ಮನರಂಜನೆ ನೀಡುವ ಸಲುವಾಗಿ 'ತಮ್ ನಂ....ತಮ್ ನಂ...' ಹಾಡಿಗೆ ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್ ಡ್ಯಾನ್ಸ್ ಮಾಡುತ್ತಿರುವಾಗ ಅಚಾನಕ್ಕಾಗಿ ಗ್ಲಾಸ್ ಶೋ ಪೀಸ್ ಕೂಡ ಕೆಳಗೆ ಬಿದ್ದು ಪೀಸ್ ಪೀಸ್ ಆಯ್ತು.

ಇಬ್ಬರಿಗೂ ಶಿಕ್ಷೆ ಆಯ್ತು.!

'ಬಿಗ್ ಬಾಸ್' ಮನೆಯ ಎರಡು ಸಾಮಾನು ಮುರಿದು ಹೋದ ಪರಿಣಾಮ 'ಬಿಗ್ ಬಾಸ್' ಶಿಕ್ಷೆ ವಿಧಿಸಿದರು. ಅದರ ಪರಿಣಾಮ ಗಾರ್ಡನ್ ಏರಿಯಾದಲ್ಲಿ ಎರಡು ಕೈಗಳನ್ನ ಮೇಲಕ್ಕೆ ಎತ್ತಿ, ಬಾಲ್ ಹಿಡಿದು ಪೂಜಾ ಗಾಂಧಿ ನಿಲ್ಲಬೇಕಾಯ್ತು.

ಮನೆ ಒಳಗೆ ಮಾಸ್ಟರ್ ಆನಂದ್

ಗ್ಲಾಸ್ ಒಡೆದ ಜಾಗದಲ್ಲಿ ಕುಕಿಂಗ್ ಪ್ಯಾನ್ ಹಿಡಿದು ಮಾಸ್ಟರ್ ಆನಂದ್ ನಿಂತುಕೊಂಡರು.

ಗಳಗಳನೆ ಅತ್ತ ಪೂಜಾ ಗಾಂಧಿ

ಶಿಕ್ಷೆ ಆಗಿದ್ದಕ್ಕೆ ನಟಿ ಪೂಜಾ ಗಾಂಧಿ ಗಳಗಳನೆ ಅತ್ತುಬಿಟ್ಟರು. ''ನಾನು ಮನೆಗೆ ಹೋಗ್ತೀನಿ. ಇಲ್ಲಿ ಇರಲ್ಲ. ದಯವಿಟ್ಟು ನನ್ನ ಮನೆಗೆ ಕಳುಹಿಸಿ'' ಅಂತ ಗೊಳೋ ಅನ್ನುತ್ತಿದ್ದರು ಪೂಜಾ ಗಾಂಧಿ. ['ಬಿಗ್ ಬಾಸ್' ಇಂದಿನ ಸಂಚಿಕೆ; ಗಳಗಳನೆ ಅಳುವ ಪೂಜಾ ಗಾಂಧಿ]

ಟಾಸ್ಕ್ ಶುರುವಾಯ್ತು.!

ಮನೆಯಲ್ಲಿ ಶಾಂತಿ ಹಾಗು ಸಮಾಧಾನ ಸಂದೇಶ ಸಾರುವ ಸಲುವಾಗಿ 'ಬಿಗ್ ಬಾಸ್' ಎಲ್ಲಾ ಸದಸ್ಯರಿಗೆ ಟಾಸ್ಕ್ ನೀಡಿದರು. ಅದರಂತೆ ಕ್ಯಾಪ್ಟನ್ ಖಾವಿ ಬಟ್ಟೆ ಧರಿಸಿದರು. ಮಿಕ್ಕೆಲ್ಲಾ ಸದಸ್ಯರು ಬಿಳಿ ಬಟ್ಟೆ ಧರಿಸಿದರು.

ಟಾಸ್ಕ್ ಏನು?

'ಬಿಗ್ ಬಾಸ್' ನೀಡಿದ ಟಾಸ್ಕ್ ಪ್ರಕಾರ, ಬೆಳಗ್ಗೆ ಎದ್ದ ಕೂಡಲೆ ಎಲ್ಲರೂ 15 ನಿಮಿಷ ಧ್ಯಾನ ಮಾಡಬೇಕು. ಮನೆಯ ಮುಂಭಾಗ ರಂಗೋಲಿ ಬಿಟ್ಟು, ಅದಕ್ಕೆ ಹೂವಿನಿಂದ ಅಲಂಕರಿಸಬೇಕು. ಸಂಗೀತ ಕೇಳಿಸಿದ ತಕ್ಷಣ ಎಲ್ಲರೂ ಗಾರ್ಡನ್ ಏರಿಯಾಗೆ ಬಂದು ರಿದಮಿಕ್ ಡ್ಯಾನ್ಸ್ ಮಾಡಬೇಕು.

ದೇವರ ಬಗ್ಗೆ ಅನುಭವ

ದೇವರ ಬಗ್ಗೆ ತಮ್ಮ ಜೀವನದಲ್ಲಿ ಆಗಿರುವ ಅನುಭವನ್ನ ಎಲ್ಲರೂ ಹಂಚಿಕೊಳ್ಳುವ ಅವಕಾಶವನ್ನು 'ಬಿಗ್ ಬಾಸ್' ಮಾಡಿಕೊಟ್ಟರು. ಅದರಲ್ಲಿ ಹುಚ್ಚ ವೆಂಕಟ್ ತಮ್ಮ ತಂದೆ-ತಾಯಿ ಬಗ್ಗೆ ಹೇಳಿದ್ರೆ, ಭಾವನಾ ಬೆಳಗೆರೆ ತಮ್ಮ ಜೀವನದಲ್ಲಾದ ಒಂದು ಘಟನೆಯನ್ನ ವಿವರಿಸಿದರು. ದೇವರ ಬಗ್ಗೆ ಮಾಸ್ಟರ್ ಆನಂದ್, ರೆಹಮಾನ್ ಮತ್ತು ಹುಚ್ಚ ವೆಂಕಟ್ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು.

English summary
Kannada Actress Pooja Gandhi cried in Bigg Boss Kannada 3 reality show, as she was punished. Read the article to know what all happened in Day 2 of Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada