»   » ಅವಕಾಶವಾದಿ ನೇತ್ರ-ಅಯ್ಯಪ್ಪ ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ವಾರ್.!

ಅವಕಾಶವಾದಿ ನೇತ್ರ-ಅಯ್ಯಪ್ಪ ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ವಾರ್.!

Posted By:
Subscribe to Filmibeat Kannada

ನಾಮಿನೇಷನ್ ನಿಂದ ಸೇಫ್ ಆಗ್ಬೇಕು ಅನ್ನುವ ಕಾರಣಕ್ಕೆ 'ಬದುಕು ಜಟಕಾ ಬಂಡಿ' ಟಾಸ್ಕ್ ನ ಅರ್ಧಕ್ಕೆ ನಿಲ್ಲಿಸಿದ ಆರ್.ಜೆ ನೇತ್ರ 'ಅವಕಾಶವಾದಿ' ಅಂತ 'ಬಿಗ್ ಬಾಸ್' ಮನೆಯಲ್ಲಿ ಇರುವವರೆಲ್ಲರೂ ಅಭಿಪ್ರಾಯ ಪಟ್ಟರು. ಅದರಂತೆ 'ಅವಕಾಶವಾದಿ' ಸಾಲಿನಲ್ಲಿ ಆರ್.ಜೆ. ನೇತ್ರಗೆ ನಂಬರ್ 1 ಸ್ಥಾನ ನೀಡಿದರು.

ಇದಕ್ಕೆ ರಾಂ ಒಪ್ಪದ ನೇತ್ರ, 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಕೊನೆಯವರೆಗೂ ಉಳಿದುಕೊಳ್ಳಲು ಅಯ್ಯಪ್ಪ ಚಾಲಾಕಿಯಾಗಿ ಆಟವಾಡುತ್ತಿದ್ದಾರೆ. ಅವರೇ ಅವಕಾಶವಾದಿ ಅಂತ ವಾದಕ್ಕೆ ಇಳಿದರು. ['ಬಿಗ್ ಬಾಸ್' ಮನೆಯಲ್ಲಿ ಆರ್.ಜೆ.ನೇತ್ರ ಡಬಲ್ ಗೇಮ್.!]

'ಬಿಗ್ ಬಾಸ್' ಮನೆಯಲ್ಲಿರುವ ಸದಸ್ಯರ ವ್ಯಕ್ತಿತ್ವದ ಕುರಿತಾಗಿ 'ಬಿಗ್ ಬಾಸ್' ನೀಡಿದ ಈ ವಿಶೇಷ ಚಟುವಟಿಕೆಯಿಂದ ನಿನ್ನೆ 'ದೊಡ್ಮನೆ'ಯಲ್ಲಿ ಸಣ್ಣದಾಗಿ ಕಿಡಿ ಹತ್ತಿಕೊಂಡಿದೆ. 23ನೇ ದಿನ 'ಬಿಗ್ ಬಾಸ್' ಮನೆಯಲ್ಲಿ ಏನೇನೆಲ್ಲಾ ಆಯ್ತು ಅಂತ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

ಡ್ಯಾನ್ಸ್ ಮಗ ಡ್ಯಾನ್ಸ್ ನಡಿಯುತ್ತಲೇ ಇದೆ.!

'ಬಿಗ್ ಬಾಸ್' ಮನೆಯ ಪ್ರತಿ ಸದಸ್ಯರಿಗೂ ನೀಡಿರುವ ಹಾಡು ಪ್ಲೇ ಆದ ತಕ್ಷಣ, ಲಿವಿಂಗ್ ಏರಿಯಾಗೆ ಬಂದು ಡ್ಯಾನ್ಸ್ ಮಾಡಬೇಕು. ಎರಡನೇ ದಿನವೂ ಈ ಟಾಸ್ಕ್ ಮುಂದುವರಿಯಿತು. [ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ]

ವಿಶೇಷ ಚಟುವಟಿಕೆ

'ಬಿಗ್ ಬಾಸ್' ನೀಡುವ ವ್ಯಕ್ತಿತ್ವದ ಅನುಗುಣವಾಗಿ ಮನೆ ಸದಸ್ಯರು ಅವರಿಗೆ ಸೂಕ್ತ ಎನಿಸುವ ಸ್ಥಾನದಲ್ಲಿ ನಿಲ್ಲಬೇಕು. ಕನ್ ಫೆಶನ್ ರೂಮ್ ನಲ್ಲಿರುವವರು 'ಬಿಗ್ ಬಾಸ್' ಸೂಚಿಸಿರುವ ವ್ಯಕ್ತಿತ್ವ ಯಾವುದು ಅಂತ ಊಹಿಸಬೇಕು.

ಅವಕಾಶವಾದಿ ಯಾರು?

'ಅವಕಾಶವಾದಿ' ಪದಕ್ಕೆ ಅರ್ಥ ಗೊತ್ತಿಲ್ಲದೇ ಮೊದಲನೇ ಸ್ಥಾನದಲ್ಲಿ ಕಿಟ್ಟಿ ನಿಂತುಕೊಂಡರು. ನಂತರ ಅದಕ್ಕೆ ತಾವು ಸೂಕ್ತ ಅಲ್ಲ ಅಂತ ಗೊತ್ತಾದ ನಂತರ ಕೃತಿಕಾನ ಕೆಳಗಿ ಇಳಿಸಿ 7ನೇ ಸ್ಥಾನದಲ್ಲಿ ನಿಂತರು.

ಪೂಜಾ ಗಾಂಧಿ ಹೇಳಿದ್ದೇನು?

''ಅವಕಾಶ ಸಿಗುತ್ತೆ ಅಂತ ನಾನು ಯಾವತ್ತೂ ಏನೂ ಮಾಡಿಲ್ಲ. ನಾನು ಚಿತ್ರರಂಗದಲ್ಲಿ ಹೇಗೆ ಬೆಳೆದಿದ್ದೇನೆ ಅಂತ ಎಲ್ಲರಿಗೂ ಗೊತ್ತು. ನನಗೆ 11ನೇ ಸ್ಥಾನ ಬೇಕು'' ಅಂತ ರವಿ ಮುರೂರು ರವರನ್ನ ಕೆಳಗೆ ಇಳಿಸಿ ಪೂಜಾ ಗಾಂಧಿ 11ನೇ ಸ್ಥಾನ ಆಯ್ಕೆ ಮಾಡಿಕೊಂಡರು.

ನೇತ್ರಗೆ ಮೊದಲನೇ ಸ್ಥಾನ.!

ಎಲ್ಲಾ ಸದಸ್ಯರ ನಡುವೆ ಸಣ್ಣ ಜಟಾಪಟಿ ಆದ ಬಳಿಕ ಮಾಸ್ಟರ್ ಆನಂದ್ ಬೇರೆ ದಾರಿಯಿಲ್ಲದೆ 2ನೇ ಸ್ಥಾನದಲ್ಲಿ ನಿಂತರು. ಕನ್ ಫೆಶನ್ ರೂಮ್ ನಲ್ಲಿ ನೇತ್ರಗೆ ಎಲ್ಲರೂ ಮೊದಲನೇ ಸ್ಥಾನ ಫಿಕ್ಸ್ ಮಾಡಿದರು.

ನೇತ್ರ-ಅಯ್ಯಪ್ಪ ನಡುವೆ ವಾರ್.!

''ನಾಮಿನೇಷನ್ ವಿಚಾರವಾಗಿ ಅಯ್ಯಪ್ಪ ಎಲ್ಲರನ್ನೂ Influence ಮಾಡ್ತಾರೆ. ಅದಕ್ಕೆ ಅಯ್ಯಪ್ಪ ಅವಕಾಶವಾದಿ. ಅವರಿಗೆ ಮೊದಲ ಸ್ಥಾನ ನೀಡಬೇಕು'' ಅಂತ ನೇತ್ರ ಪಟ್ಟುಹಿಡಿದರು.

ಫೇಕ್ ಮಾಡ್ತಿದ್ದಾರಾ ನೇತ್ರ?

''ಬೇರೆಯವರನ್ನ ಕೇಳ್ಕೊಂಡು ಅವರು ಹೀಗೆ ಹೇಳ್ತಿದ್ದಾರೆ. ನಾನು ಯಾವತ್ತೂ ಅವರಿಗೆ influence ಮಾಡಿಲ್ಲ. ಇದರಲ್ಲೇ ಗೊತ್ತಾಗುತ್ತೆ ಅವರು ಫೇಕ್'' ಅಂತ ನೇತ್ರ ವಿರುದ್ಧ ಅಯ್ಯಪ್ಪ ವಾಕ್ಸಮರ ಶುರುಮಾಡಿದರು.

ಬಗ್ಗದ-ಜಗ್ಗದ ನೇತ್ರ.!

ತಮ್ಮ ಸ್ಥಾನವನ್ನ ಬಿಟ್ಟುಕೊಡುವುದಿಲ್ಲ ಅಂತ ಅಯ್ಯಪ್ಪ ಒಂದ್ಕಡೆ, ಇನ್ನೊಂದ್ಕಡೆ ಮೊದಲನೇ ಸ್ಥಾನಕ್ಕೆ ತಾವು ಸೂಕ್ತ ಅಲ್ಲ ಅಂತ ನೇತ್ರ ವಾದ ಮಾಡಿದ್ರಿಂದ 'ಅವಕಾಶವಾದಿ' ಚಟುವಟಿಕೆ ಅರ್ಧಕ್ಕೆ ನಿಂತುಹೋಯ್ತು.

ಪ್ರತಿಭಾವಂತ ಯಾರು?

'ಅವಕಾಶವಾದಿ' ನಂತರ 'ಬಿಗ್ ಬಾಸ್' ನೀಡಿದ ವ್ಯಕ್ತಿತ್ವ 'ಪ್ರತಿಭಾವಂತ'. ಮನೆಯವರೆಲ್ಲರ ಸಮ್ಮತಿಯಿಂದ ಮಾಸ್ಟರ್ ಆನಂದ್ ಗೆ ಮೊದಲನೇ ಸ್ಥಾನ ಸಿಕ್ತು.

ಕಚ್ಚಾಡಿದ ನೇಹಾ, ಕೃತಿಕಾ, ಕಿಟ್ಟಿ

ಇತರರಿಗೆ ಹೋಲಿಸಿ ತಾವು ನಿಂತಿರುವ ಸ್ಥಾನ ಸೂಕ್ತ ಇಲ್ಲ ಅಂತ ನೇಹಾ ಗೌಡ, ನೇತ್ರ, ಕೃತಿಕಾ, ಕಿಟ್ಟಿ ಪರಸ್ಪರ ಕಚ್ಚಾಡಿಕೊಂಡರು.

ಕಿಟ್ಟಿ ಡ್ಯಾನ್ಸಿಂಗ್ ಸ್ಟಾರ್ ಗೆದ್ದಿದ್ದು ಹೇಗೆ?

''ನಾನು ಡ್ಯಾನ್ಸಿಂಗ್ ಸ್ಟಾರ್ ನಿಂದ ಹೊರಗಡೆ ಬಂದಿದ್ದಕ್ಕೆ ಕಿಟ್ಟಿ ಗೆಲ್ಲುವುದಕ್ಕೆ ಸಾಧ್ಯವಾಗಿದ್ದು'' ಅಂತ ಚಂದನ್ ಹೇಳ್ತಿದ್ರು.

English summary
RJ Netra and Cricketer Aiyappa had an argument over who is opportunist in Bigg Boss Kannada 3 reality show. Read the article to know what all happened on Day 23 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada