»   » 'ಬಿಗ್ ಬಾಸ್' ಮನೆಯಲ್ಲಿ ರಾಜಕೀಯ ದೊಂಬರಾಟ

'ಬಿಗ್ ಬಾಸ್' ಮನೆಯಲ್ಲಿ ರಾಜಕೀಯ ದೊಂಬರಾಟ

Posted By:
Subscribe to Filmibeat Kannada

ಜಗಳ ಮಾಡುವುದಕ್ಕೆ ಹುಚ್ಚ ವೆಂಕಟ್ ಒಬ್ಬರೇ ಬೇಕಾಗಿಲ್ಲ. ಹುಚ್ಚ ವೆಂಕಟ್ ಇಲ್ಲದೇ ಇದ್ದರೂ, 'ಬಿಗ್ ಬಾಸ್' ಮನೆಯಲ್ಲಿ ಕಿರಿಕಿರಿ ತಪ್ಪಿಲ್ಲ.

'ಬಿಗ್ ಬಾಸ್' ನೀಡಿದ 'ಮನೆ ರಾಜಕೀಯ' ಟಾಸ್ಕ್ ನಿಂದಾಗಿ 'ಬಿಗ್ ಬಾಸ್' ಮನೆ ಇಬ್ಭಾಗವಾಗಿದೆ. ಟಾಸ್ಕ್ ಗೆಲ್ಲಲು ಪ್ರತಿಪಕ್ಷದ ಸದಸ್ಯರ ಮೇಲೆ ಗಾಳ ಹಾಕುವುದಕ್ಕೆ ಮೈಂಡ್ ಗೇಮ್ ಶುರುವಾಗಿದೆ. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಎಂದಿನಂತೆ ಕೃತಿಕಾ ಹಳೆಯದ್ದನ್ನೆಲ್ಲಾ ಕೆದಕಿ ರಂಪಾಟ ಶುರುಮಾಡಿದ್ರೆ, ರೆಹಮಾನ್-ಚಂದನ್-ಆನಂದ್ ನಡುವೆ ಮಾತಿನ ಚಕಮಕಿ ನಡೆಯಿತು. 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನಿನ್ನೆ ಆದ ರಾಜಕೀಯ ದೊಂಬರಾಟದ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಡ್ಯಾನ್ಸ್ ಮಗ ಡ್ಯಾನ್ಸ್ ಎರಡನೇ ಹಂತ

ಡ್ಯಾನ್ಸ್ ಮಗ ಡ್ಯಾನ್ಸ್ ಎರಡನೇ ಹಂತದ ಟಾಸ್ಕ್ ಪ್ರಕಾರ, ಈ ಬಾರಿ ಜೋಡಿಯಾಗಿ ಯುಗಳ ಗೀತೆಗಳಿಗೆ ಮನೆ ಸದಸ್ಯರು ಡ್ಯುಯೆಟ್ ಪರ್ಫಾಮೆನ್ಸ್ ನೀಡ್ಬೇಕಿತ್ತು. [ಹುಚ್ಚ ವೆಂಕಟ್ ವಿಷಯಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಮಾತಿನ ಚಕಮಕಿ]

ಮನೆ ರಾಜಕೀಯ

'ಮನೆ ರಾಜಕೀಯ' ಎನ್ನುವ Luxury Budget ಟಾಸ್ಕ್ ನ 'ಬಿಗ್ ಬಾಸ್' ಈ ವಾರ ಮನೆ ಸದಸ್ಯರಿಗೆ ನೀಡಿದರು. ಅದರಂತೆ ಪ್ರಾಮಾಣಿಕ ಕಾರ್ಯ ಪಕ್ಷದ ಮುಖಂಡನಾಗಿ ರೆಹಮಾನ್ ಆಯ್ಕೆ ಆದರೆ, ಸತ್ಯ ಪಕ್ಷದ ಮುಖಂಡನಾಗಿ ಮಾಸ್ಟರ್ ಆನಂದ್ ಸೆಲೆಕ್ಟ್ ಆದರು. ['ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!]

ಟಾಸ್ಕ್ ನಲ್ಲಿ ಗೆಲ್ಲುವವರಿಗೆ ಬಂಪರ್.!

'ಮನೆ ರಾಜಕೀಯ' ಟಾಸ್ಕ್ ನಲ್ಲಿ ರೆಹಮಾನ್ ಮತ್ತು ಆನಂದ್ ರಲ್ಲಿ ಯಾರು ಗೆಲ್ಲುತ್ತಾರೋ, ಅವರು ಮುಂದಿನ ವಾರದ ನಾಮಿನೇಷನ್ ನಿಂದ ಸೇಫ್ ಆಗಿರುತ್ತಾರೆ. ಟಾಸ್ಕ್ ನಲ್ಲಿ ಸೋತವರು ನೇರವಾಗಿ ನಾಮಿನೇಟ್ ಆಗುತ್ತಾರೆ. [ಅವಕಾಶವಾದಿ ನೇತ್ರ-ಅಯ್ಯಪ್ಪ ಮಧ್ಯೆ 'ಬಿಗ್ ಬಾಸ್' ಮನೆಯಲ್ಲಿ ವಾರ್.!]

ಯಾರ ಪರ ಇದ್ದಾರೆ ನೇತ್ರ.!

ರೆಹಮಾನ್ ನೇತೃತ್ವದ ಪ್ರಾಮಾಣಿಕ ಕಾರ್ಯ ಪಕ್ಷಕ್ಕೆ ಆರ್.ಜೆ ನೇತ್ರ ಸೇರ್ಪಡೆಗೊಂಡಿದ್ದು ಎಲ್ಲರಿಗೂ ಆಶ್ಚರ್ಯವಾಯ್ತು. ''ನೇತ್ರ ನಮ್ಮ ಕ್ಯಾಂಡಿಡೇಟ್. ಮುಂದೆ ಶಿಫ್ಟ್ ಆಗುವುದಕ್ಕೆ ಅಲ್ಲಿ ಹೋದರೋ, ಏನೋ ನೋಡೋಣ'' ಅಂತ ಸತ್ಯ ಪಕ್ಷದ ಮುಖಂಡ ಮಾಸ್ಟರ್ ಆನಂದ್ ಲೆಕ್ಕ ಹಾಕುತ್ತಿದ್ದರು.

'ಬಿಗ್ ಬಾಸ್'ಗೆ ರೆಹಮಾನ್ ಚಾಲೆಂಜ್.!

''ಎರಡೂ ಪಕ್ಷದಲ್ಲಿ ಐವರು ಸದಸ್ಯರಿದ್ದಾರೆ. ನಾವೆಲ್ಲಾ ಈಗಿರುವಂತೆಯೇ ಇದ್ದರೆ Tie ಆಗುತ್ತೆ. ಯಾರೂ ಗೆದ್ದಂತೆ ಆಗಲ್ಲ. ಆಗ ಯಾರೂ ನಾಮಿನೇಟ್ ಆಗಲ್ಲ. ಆಗ 'ಬಿಗ್ ಬಾಸ್' ಏನ್ ಮಾಡ್ತಾರೆ ನೋಡೋಣ'' ಅಂತ ರೆಹಮಾನ್ ಹೇಳ್ತಿದ್ರು.

ಕಿಟ್ಟಿಗೆ ಚಂದನ್-ರೆಹಮಾನ್ ಗಾಳ

ಆನಂದ್ ಪಕ್ಷದಲ್ಲಿರುವ ಸುನಾಮಿ ಕಿಟ್ಟಿಗೆ ಪ್ರಾಮಾಣಿಕ ಕಾರ್ಯ ಪಕ್ಷದ ಚಂದನ್ ಮತ್ತು ರೆಹಮಾನ್ ಗಾಳ ಹಾಕುವುದಕ್ಕೆ ಯತ್ನಿಸಿದರು.

ನೇಹಾಗೆ ಕಿಟ್ಟಿ ಗಾಳ

ಇತ್ತ ನೇಹಾ ಗೌಡ ತಮ್ಮ ಪಕ್ಷಕ್ಕೆ ಸೇರಬೇಕು ಅಂತ ಕಿಟ್ಟಿ ಪ್ರಯತ್ನ ಪಡುತ್ತಿದ್ದರು.

'ಬಿಗ್ ಬಾಸ್' ಅಧಿವೇಶನ.!

ಸುನಾಮಿ ಕಿಟ್ಟಿ, ರವಿ, ಭಾವನಾ ಬೆಳಗೆರೆ, ಪೂಜಾ ಗಾಂಧಿ ಮಾಸ್ಟರ್ ಆನಂದ್ ನೇತೃತ್ವದ ಸತ್ಯ ಪಕ್ಷ ಸೇರಿದರೆ ಅಯ್ಯಪ್ಪ, ಚಂದನ್, ನೇಹಾ ಗೌಡ, ನೇತ್ರ ಮತ್ತು ಕೃತಿಕಾ ರೆಹಮಾನ್ ಮುಂದಾಳತ್ವದ ಪ್ರಾಮಾಣಿಕ ಕಾರ್ಯ ಪಕ್ಷ ಸೇರ್ಪಡೆ ಆದರು. ಪಕ್ಷದ ಕಾರ್ಯ ಚಟುವಟಿಕೆ ಶುರುವಾದ ನಂತರ 'ಬಿಗ್ ಬಾಸ್' ವಿಶೇಷ ಅಧಿವೇಶನ ನಡೆಸುವಂತೆ ಆದೇಶ ನೀಡಿದರು. ಸ್ಪೀಕರ್ ಆಗಿ ನಟಿ ಶ್ರುತಿ ಆಯ್ಕೆ ಆದರು.

ಸೀಕ್ರೆಟ್ ಟಾಸ್ಕ್ ಬಗ್ಗೆ ಕೆದಕಿದ ಕೃತಿಕಾ

''ಕಿಟ್ಟಿ ಮೇಲೆ ನಾನು ಅಪವಾದ ಮಾಡ್ಬೇಕಿದ್ದ ಸೀಕ್ರೆಟ್ ಟಾಸ್ಕ್ ಆನಂದ್ ಗೆ ಗೊತ್ತಿತ್ತು. ಮನೆಯಲ್ಲಿ ಅದರಿಂದ ಅವಾಂತರ ಸೃಷ್ಟಿಯಾಗುತ್ತಿದ್ದರೂ, ಆನಂದ್ ಒಂದು ಮಾತನ್ನೂ ಆಡಲಿಲ್ಲ.'' ಅಂತ ಕೃತಿಕಾ ಆನಂದ್ ಮೇಲೆ ಆರೋಪ ಮಾಡಿದರು.

ಸ್ಪಷ್ಟನೆ ನೀಡಿದ ಆನಂದ್

''ಟಾಸ್ಕ್ ನ ಟಾಸ್ಕ್ ಆಗಿ ಮಾಡಿದಿದ್ರೆ ಯಾವುದೇ ಸಮಸ್ಯೆ ಆಗ್ತಿರ್ಲಿಲ್ಲ. ಕೃತಿಕಾ ಅಮ್ಮನ ಮೇಲೆ ಆಣೆ ಇಟ್ಟರು. ಟಾಸ್ಕ್ ನ ಈ ಲೆವೆಲ್ ಗೆ ತೆಗೆದುಕೊಂಡು ಹೋಗ್ತಿದ್ದಾರಲ್ಲ ಅಂತ ನಾನು ಮಾತನಾಡಲಿಲ್ಲ'' ಅಂತ ಆನಂದ್ ಸ್ಪಷ್ಟನೆ ನೀಡಿದರು.

English summary
Serial Actress Kruthika and Master Anand had an argument over Tsunami Kitty's issue. Read the article to know what all happened on Day 25 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada