For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಯಲ್ಲಿ ಪಶ್ಚಾತ್ತಾಪ ಪಟ್ಟ ಕೃತಿಕಾ, ಪೂಜಾ ಗಾಂಧಿ

  By Harshitha
  |

  ಕಿರುತೆರೆಯ ಜನಪ್ರಿಯ 'ಬಿಗ್ ಬಾಸ್' ಕಾರ್ಯಕ್ರಮದ ಮೂರನೇ ಆವೃತ್ತಿ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಮೊದಲನೇ ವಾರದ Luxury Budget ಟಾಸ್ಕ್ ನ ಪ್ರಯುಕ್ತ 'ಬಿಗ್ ಬಾಸ್' ಮನೆಯ ಸದಸ್ಯರಿಗೆಲ್ಲಾ ಒಂದು ಟಾಸ್ಕ್ ನೀಡಲಾಗಿತ್ತು.

  ಅದರ ಪರಿಣಾಮ, ಜೀವನದಲ್ಲಿ ತಾವು ಮಾಡಿರುವ ಮತ್ತು ಇದುವರೆಗೂ ಯಾರೊಂದಿಗೂ ಹಂಚಿಕೊಳ್ಳುವುದಕ್ಕೆ ಸಾಧ್ಯವಾಗದ ಒಂದು ತಪ್ಪನ್ನ 'ಬಿಗ್ ಬಾಸ್' ಮನೆಯ ಇನ್ನೊಬ್ಬ ನಂಬಿಕಸ್ಥ ಸದಸ್ಯರ ಮುಂದೆ ತಮ್ಮ ಮನದಾಳವನ್ನ ಬಿಚ್ಚಿಡಬೇಕು. [ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್! ]

  ಇದಕ್ಕಾಗಿ ಒಂದು ದಿನವಿಡೀ ಕಾಲಾವಕಾಶ ಕೂಡ ನೀಡಲಾಗಿತ್ತು. ಹಿಂದು ಮುಂದು ಯೋಚಿಸಿ, ನಟಿ ಪೂಜಾ ಗಾಂಧಿ, ಹುಚ್ಚ ವೆಂಕಟ್ ಮತ್ತು ಕಿರುತೆರೆ ನಟಿ ಕೃತಿಕಾ ತಮ್ಮ ಜೀವನದ ಕಹಿ ಘಟನೆಗಳನ್ನ ತೆರೆದಿಟ್ಟರು.

  'ಬಿಗ್ ಬಾಸ್-3' ಮನೆಯಲ್ಲಿ ಮೂರನೇ ದಿನ ಏನೇನೆಲ್ಲಾ ಆಯ್ತು ಅನ್ನೋದನ್ನ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕಿಸುತ್ತಾ ಹೋಗಿ.....

  ಚಂದನ್ ಮುಂದೆ ತಪ್ಪೊಪ್ಪಿಕೊಂಡ ಹುಚ್ಚ ವೆಂಕಟ್.!

  ಚಂದನ್ ಮುಂದೆ ತಪ್ಪೊಪ್ಪಿಕೊಂಡ ಹುಚ್ಚ ವೆಂಕಟ್.!

  ತಮ್ಮ ಜೀವನದಲ್ಲಿ ತಾವು ಮಾಡಿದ ತಪ್ಪನ್ನ ನಟ ಚಂದನ್ ಮುಂದೆ ಹುಚ್ಚ ವೆಂಕಟ್ ಒಪ್ಪಿಕೊಂಡರು. ಹುಚ್ಚ ವೆಂಕಟ್ ಡಿಪ್ಲೋಮಾ ಇಂಜಿನಿಯರಿಂಗ್ ನಲ್ಲಿ ಫೇಲ್ ಆಗಿದ್ದರು. ತಮ್ಮ ತಂದೆಯ ಮುಂದೆ ಇದನ್ನ ಒಪ್ಪಿಕೊಳ್ಳುವುದಕ್ಕೆ ಹುಚ್ಚ ವೆಂಕಟ್ ಗೆ ಆಗ್ಲಿಲ್ಲವಂತೆ. ''ನಾನು ಅವತ್ತು ನಿಜ ಹೇಳಿದ್ರೆ, ನನ್ನ ತಂದೆ ಸತ್ಹೋಗ್ತಿದ್ರು. ಅವರ ಕಣ್ಣಲ್ಲಿ ನೀರು ಬರುವುದು ನನಗೆ ಇಷ್ಟ ಇಲ್ಲ. ಅದಕ್ಕೆ ಹೇಳ್ಲಿಲ್ಲ. ಇದುವರೆಗೂ ನಾನು ದುಡಿಯುತ್ತಿರುವುದು ನನ್ನ ತಂದೆ-ತಾಯಿಗಾಗಿ. ಆಮೇಲೆ ಸಮಾಜಕ್ಕಾಗಿ'' ಅಂತ ಹುಚ್ಚ ವೆಂಕಟ್ ತಮ್ಮ ಮನದಾಳವನ್ನ ಹೇಳಿದರು.

  ಕೃತಿಕಾ ಲವ್ ಸ್ಟೋರಿ

  ಕೃತಿಕಾ ಲವ್ ಸ್ಟೋರಿ

  'ರಾಧಾ ಕಲ್ಯಾಣ' ಧಾರಾವಾಹಿಯಿಂದ ಜನರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಕೃತಿಕಾ ತಮ್ಮ ಟ್ರ್ಯಾಜಿಡಿ ಲವ್ ಸ್ಟೋರಿಯನ್ನ ಬಿಚ್ಚಿಟ್ಟರು. ತಾಯಿ ಮಾತನ್ನ ಕೇಳದೆ ರಿಲೇಶನ್ ಶಿಪ್ ನಲ್ಲಿದ್ದು ತಪ್ಪು ಮಾಡಿದೆ ಅಂತ ನಟಿ ಶೃತಿ ಮುಂದೆ ಕಣ್ಣೀರಿಟ್ಟರು.

  ಕಣ್ಣೀರಿಟ್ಟ ನಟಿ ಕೃತಿಕಾ

  ಕಣ್ಣೀರಿಟ್ಟ ನಟಿ ಕೃತಿಕಾ

  ''ಅಮ್ಮ ನನ್ನ ಮೇಲೆ ನಂಬಿಕೆ ಇಟ್ಟು ಬೆಂಗಳೂರಿಗೆ ಕಳುಹಿಸಿದರು. ಮೊದಮೊದಲು ನನ್ನ ಅವರ ಸಂಬಂಧ ಅಣ್ಣ-ತಂಗಿಯಂತೆ ಇತ್ತು. ಆಮೇಲೆ ಅದು ಪ್ರೀತಿಯಾಗಿ ಬದಲಾಯ್ತು. ಅವರು ಡಿವೋರ್ಸಿ. ಅವರಿಗೂ ನನಗೂ 17-18 ವರ್ಷ ಅಂತರ ಇದೆ. ಪ್ರೀತಿಯಾದ ತಕ್ಷಣ ನಾನು ಅಮ್ಮನಿಗೆ ತಿಳಿಸಿದೆ. ಅವರಿಗೆ ಇಷ್ಟವಾಗಲಿಲ್ಲ. ಬೇಡ ಅಂದ್ರು. ಆದರೂ ನಾನು ಕೇಳ್ಲಿಲ್ಲ. ಅದಾದ ಬಳಿಕ ಒಂದು-ಒಂದುವರೆ ವರ್ಷ ನಾನು ಅವರೊಂದಿಗೆ ರಿಲೇಶನ್ ಶಿಪ್ ನಲ್ಲಿದ್ದೆ. ಅದು ಅಮ್ಮನಿಗೆ ಹೇಳದೇ. ಇದು ನಾನು ಮಾಡಿದ ತಪ್ಪು. ನಂತರ ಅದು ಬ್ರೇಕಪ್ ಆಗಿ ನಾನು ಡಿಪ್ರೆಸ್ ಆಗಿದ್ದೆ. ಇದನ್ನ ಇದುವರೆಗೂ ನಾನು ಅಮ್ಮನಿಗೆ ಹೇಳುವುದಕ್ಕೆ ಆಗ್ಲಿಲ್ಲ. ಈಗ ನಾನು ನನ್ನ ಅಮ್ಮನಿಗೆ ಸಾರಿ ಕೇಳ್ತೀನಿ.'' ಅಂತ ಹೇಳ್ತಾ ಕೃತಿಕಾ ಭಾವುಕರಾದರು.

  ಎಮೋಷನಲ್ ಆದ ಪೂಜಾ ಗಾಂಧಿ

  ಎಮೋಷನಲ್ ಆದ ಪೂಜಾ ಗಾಂಧಿ

  ನಟಿ ಪೂಜಾ ಗಾಂಧಿ ಕೂಡ ತಮ್ಮ ನಿಶ್ಚಿತಾರ್ಥ ಮುರಿದು ಬಿದ್ದ ಕಥೆಯನ್ನ ನಟ ಚಂದನ್ ಮುಂದೆ ಬಿಚ್ಚಿಟ್ಟರು. ''ಅವರು ಡಿವೋರ್ಸಿ. ಕೆಲ ಸ್ನೇಹಿತರಿಂದ ನನಗೆ ಅವರ ಪರಿಚಯವಾಯ್ತು. 6-8 ತಿಂಗಳು ಫ್ರೆಂಡ್ ಶಿಪ್ ನಲ್ಲಿದ್ವಿ. ನನ್ನ ಇತರೆ ಸ್ನೇಹಿತರಿಗೆ, ಫ್ಯಾಮಿಲಿಗೆ ನಾನು ಇವರೊಂದಿಗೆ ನಿಶ್ಚಿತಾರ್ಥ ಮಾಡಿಕೊಳ್ಳುವುದು ಇಷ್ಟವಿರಲಿಲ್ಲ. ಆದರೂ ನಾನು ಯಾರ ಮಾತನ್ನ ಕೇಳದೆ ಮಾಡಿಕೊಂಡೆ. ಅವರು ನನ್ನ ಜೊತೆ ತುಂಬಾ ಮಿಸ್ ಬಿಹೇವ್ ಮಾಡಿದ್ದಾರೆ. ನನಗೆ ತುಂಬಾ ಬೇಜಾರ್ ಆಯ್ತು. ಹೀಗಾಗಿ I Called it off. ನಾನು ಎಂಗೇಜ್ ಆಗ್ಬಾರ್ದಿತ್ತು. ಅಪ್ಪ-ಅಮ್ಮನ ಮಾತು ಕೇಳ್ಬೇಕಿತ್ತು. ಅವರಿಗೆ ನಾನು ಸಾರಿ ಕೇಳ್ತೀನಿ'' ಅಂತ ಪೂಜಾ ಗಾಂಧಿ ಕಣ್ಣೀರಿಟ್ಟರು. ['ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ]

  ಟಿವಿ 9 ರೆಹಮಾನ್

  ಟಿವಿ 9 ರೆಹಮಾನ್

  ಟಿವಿ 9 ರೆಹಮಾನ್ ಕೂಡ ತಮ್ಮ ತಂದೆ ಮೇಲೆ ಕೈಮಾಡಿದ ಘಟನೆಯನ್ನ ಹೇಳಿ ತಪ್ಪೊಪ್ಪಿಕೊಂಡರು.

  ಜಯಶ್ರೀ-ರವಿ ಮುರೂರು ಗಲಾಟೆ

  ಜಯಶ್ರೀ-ರವಿ ಮುರೂರು ಗಲಾಟೆ

  ತಪ್ಪೊಪ್ಪಿಗೆ ನಡುವೆ ಮಾಡೆಲ್ ಕಮ್ ಡ್ಯಾನ್ಸರ್ ಜಯಶ್ರೀ ಕೂಡ ಕ್ಯಾತೆ ತೆಗೆದರು. ನಾಮಿನೇಷನ್ ಬಗ್ಗೆ ರವಿ ಮುರೂರು ಮತ್ತು ಕೃತಿಕಾ ತಮಾಷೆ ಮಾಡಿಕೊಳ್ಳುತ್ತಿದ್ದಾಗ ಜಯಶ್ರೀ ಮತ್ತು ರವಿ ನಡುವೆ ಮಾತಿನ ಚಕಮಕಿ ನಡೆಯಿತು.

  ಅತ್ತ ಜಯಶ್ರೀ

  ಅತ್ತ ಜಯಶ್ರೀ

  ''ಕನ್ನಡ ಬಂದ್ರೂ ಮಾತನಾಡುವುದಕ್ಕೆ ಬರಲ್ಲ'' ಅಂತ ಹೇಳಿದಾಗ ಜಯಶ್ರೀ ಬೇಸರಗೊಂಡು ಅಳುವುದಕ್ಕೆ ಶುರುಮಾಡಿದರು.

  ಎಲ್ಲರನ್ನ ನಗೆಗಡಲಲ್ಲಿ ತೇಲಿಸಿದ ಮಾಸ್ಟರ್ ಆನಂದ್

  ಎಲ್ಲರನ್ನ ನಗೆಗಡಲಲ್ಲಿ ತೇಲಿಸಿದ ಮಾಸ್ಟರ್ ಆನಂದ್

  'ರಂಗಿ ತರಂಗ' ಚಿತ್ರವನ್ನ 'ರಿಂಗ್ ಟೋನ್ ರಂಗ', 'ಪುಟ್ಟಣ್ಣ ಕಣಗಾಲ್'ರನ್ನ 'ಪುಟಾಣಿ ಕಣಗಾಲ್', 'ತಾಯಿ ಇಲ್ಲದ ತವರು' ಚಿತ್ರವನ್ನ 'ನಾಯಿ ಇಲ್ಲದ ಉಗುರು' ಅಂತ ಮಾಡಿ ಮಾಸ್ಟರ್ ಆನಂದ್, ಪೂಜಾ ಗಾಂಧಿ ಮತ್ತು ಅಯ್ಯಪ್ಪ 'ಬಿಗ್ ಬಾಸ್' ಮನೆ ಸದಸ್ಯರಿಗೆ ಸಖತ್ ಮನರಂಜನೆ ನೀಡಿದರು.

  ಚಂದನ್ ಹುಡುಗೀರ ತರಹ ಅಂತೆ.!

  ಚಂದನ್ ಹುಡುಗೀರ ತರಹ ಅಂತೆ.!

  ''ನಾನು ಹುಡುಗರ ಜೊತೆ ಮಾತ್ರ ಲೆವೆಲ್ ತೋರಿಸ್ತೀನಿ. ಹುಡುಗಿಯರ ಜೊತೆ ನೀಟಾಗಿ ಮಾತನಾಡುತ್ತೇನೆ.'' ಅಂತ ಹುಚ್ಚ ವೆಂಕಟ್ ಹೇಳಿದಾಗ ಚಂದನ್, ''ಮತ್ತೆ ನನ್ನ ಜೊತೆ ಚೆನ್ನಾಗಿ ಮಾತನಾಡುತ್ತೀರಲ್ಲಾ'' ಅಂತ ಕೇಳಿದರು. ಅದಕ್ಕೆ ಹುಚ್ಚ ವೆಂಕಟ್ ''ನೀನು ಹುಡುಗೀರ್ ತರಹನೇ'' ಅಂದುಬಿಟ್ಟರು.! ಆಗ, ಚಂದನ್ ಗೆ ಹೇಗೆ ರಿಯಾಕ್ಟ್ ಮಾಡಬೇಕೋ ಗೊತ್ತಾಗಲಿಲ್ಲ.

  English summary
  Kannada Actress Pooja Gandhi, Small Screen Actress Kruthika spoke about their relationship which affected their life in Bigg Boss Kannada 3 reality show. Read the article to know what all happened in Day 3 of Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X