»   » 'ಭಲೇ ಜೋಡಿ' ನೇತ್ರ-ಚಂದನ.! ಅಯ್ಯಪ್ಪ ಅಯ್ಯಯ್ಯಪ್ಪೋ.!

'ಭಲೇ ಜೋಡಿ' ನೇತ್ರ-ಚಂದನ.! ಅಯ್ಯಪ್ಪ ಅಯ್ಯಯ್ಯಪ್ಪೋ.!

Posted By:
Subscribe to Filmibeat Kannada

ಎರಡು ವಾರಗಳ ಹಿಂದೆ 'ಬಿಗ್ ಬಾಸ್' ಆಳು-ಅರಸ ಟಾಸ್ಕ್ ನೀಡಿದಾಗ ಹಣೆ ಮೇಲೆ ಕುಂಕುಮ ಇಟ್ಟು, ತಲೆಗೆ ಜುಟ್ಟು ಕಟ್ಟಿಕೊಳ್ಳುವ ಬಗ್ಗೆ ನಟ ಚಂದನ್ ಸಿಡಿಮಿಡಿಗೊಂಡಿದ್ದರು.

''ನಾನು ಇಲ್ಲಿ ಕಾಮಿಡಿ ಪೀಸಾ. ನನ್ನ ಇಮೇಜ್ ಏನಾಗಬೇಡ'' ಅಂತ ಗುಡುಗಿದ್ದರು. ಆದ್ರೀಗ, ಅದೇ ಚಂದನ್ 'ಬಿಗ್ ಬಾಸ್' ಮನೆಯ ದಿ ಮೋಸ್ಟ್ ಬ್ಯೂಟಿಫುಲ್ ಹುಡುಗಿಯಾಗುವುದಕ್ಕೆ ನಿನ್ನೆ ಮಾಡಿದ ಕಸರತ್ತು ಅಷ್ಟಿಷ್ಟಲ್ಲ. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಹಣೆಗೆ ಬೊಟ್ಟು, ತುಟಿಗೆ ಕೆಂಪು ಲಿಪ್ ಸ್ಟಿಕ್, ಸ್ಟ್ರಾಪ್ ಟಾಪ್, ಸ್ಕರ್ಟ್ ತೊಟ್ಟು 'ಚಂದನ'ದ ಗೊಂಬೆಯಾದ ಚಂದನ್ ನಿನ್ನೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಕುಣಿದು ಕುಪ್ಪಳಿಸಿದರು. ಸಾಲದಕ್ಕೆ ನೇತ್ರ ಜೊತೆ 'ಭಲೇ ಜೋಡಿ' ಸವಾಲು ಗೆದ್ದರು.

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನಿನ್ನೆ ಏನೇನೆಲ್ಲಾ ಆಯ್ತು ಅಂತ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ....

'ಭಲೇ ಜೋಡಿ' ಟಾಸ್ಕ್

'ಬಿಗ್ ಬಾಸ್' ಮನೆಯಲ್ಲಿ ಪರಸ್ಪರ ಹೊಂದಾಣಿಕೆ ಮತ್ತು ಸಹಕಾರ ಭಾವ ಅರಿವು ಮೂಡಿಸುವ ಸಲುವಾಗಿ 'ಬಿಗ್ ಬಾಸ್' 'ಭಲೇ ಜೋಡಿ' ಸವಾಲು ನೀಡಿದರು. ['ಬಿಗ್ ಬಾಸ್' ಮನೆಯಲ್ಲಿ ಪ್ರಾಮಾಣಿಕ ಯಾರು? ಚಂದನ್ ಕಣ್ಣಲ್ಲಿ ನೀರು.!]

ಯಾರ್ಯಾರು ಜೋಡಿಗಳು?

'ಭಲೇ ಜೋಡಿ' ಟಾಸ್ಕ್ ಅನುಸಾರವಾಗಿ ಪೂಜಾ ಗಾಂಧಿ-ಕೃತಿಕಾ, ಆನಂದ್-ರೆಹಮಾನ್, ನೇಹಾ ಗೌಡ-ಭಾವನಾ, ನೇತ್ರ-ಚಂದನ್, ಕಿಟ್ಟಿ-ಅಯ್ಯಪ್ಪ ಜೋಡಿಗಳಾದರು. ನಿಯಮದ ಪ್ರಕಾರ ಜೋಡಿಗಳು ಒಂದಾಗಿರುವಂತೆ ಕೈಗೆ ಹಗ್ಗ ಕಟ್ಟಲಾಗಿತ್ತು ಹಾಗೂ ಒಬ್ಬರ ಕಣ್ಣಿಗೆ ಪಟ್ಟಿ ಕಟ್ಟಲಾಗಿತ್ತು. ['ಬಿಗ್ ಬಾಸ್' ಮನೆಯಲ್ಲಿ ಅಹಂಕಾರಿ ಯಾರು ಗೊತ್ತಾ?]

ಮೇಕಪ್ ಚಾಲೆಂಜ್.!

ಕಣ್ಣಿಗೆ ಪಟ್ಟಿ ಕಟ್ಟಿಕೊಂಡಿರುವವರು, ತಮ್ಮ ಪಾರ್ಟನರ್ ಗೆ ನಿಗದಿತ ಸಮಯದೊಳಗೆ ಮೇಕಪ್ ಮಾಡಬೇಕಿತ್ತು.

ಅಚ್ಚರಿ ಮೂಡಿಸಿದ ಚಂದನ್.!

'ಕಾಮಿಡಿ ಪೀಸ್ ಆಗಲು ಒಲ್ಲೆ' ಎಂದಿದ್ದ ಚಂದನ್, ಹೆಣ್ಣಿನ ಗೆಟಪ್ ಹಾಕಿದ್ದು ಎಲ್ಲರಿಗೂ ಆಶ್ಚರ್ಯವಾಯ್ತು. ಅಲ್ಲದೇ, ನೇತ್ರ ಜೊತೆ ಡ್ಯುಯೆಟ್ ಹಾಡಿಗೆ ಕುಣಿದು ಎಲ್ಲರ ಹೊಟ್ಟೆ ಹುಣ್ಣಾಗಿಸುವಂತೆ ನಲಿಸಿದರು.

ಅಯ್ಯಪ್ಪ-ಅಯ್ಯಯ್ಯಪ್ಪೋ

ಸ್ಕರ್ಟ್-ಟಾಪ್ ಧರಿಸಿದ ಅಯ್ಯಪ್ಪನನ್ನ ನೋಡಿ ವೀಕ್ಷಕರು ಅಯ್ಯಯ್ಯಪ್ಪೋ ಅಂದ್ರೆ ಆಶ್ಚರ್ಯವಿಲ್ಲ. ಕಿಟ್ಟಿ ಜೊತೆಗೆ ಅವರ ಡ್ಯಾನ್ಸ್ ಕೂಡ ಹಾಗೇ ಇತ್ತು.

ಸರ್ದಾರ್ ಆದ ಕೃತಿಕಾ

ಕೃತಿಕಾಗೆ ನಟಿ ಪೂಜಾ ಗಾಂಧಿ ಸರ್ದಾರ್ ತರಹ ಮೇಕಪ್ ಮಾಡಿದರು.

'ಗೌಡ' ಆದ ಭಾವನಾ

ಭಾವನಾ ಬೆಳಗೆರೆಗೆ ಮೀಸೆ ಬಳಿದು 'ಗೌಡ' ಗೆಟಪ್ ಹಾಕಿಸಿದರು ನೇಹಾ ಗೌಡ.

'ಭಲೇ ಜೋಡಿ' ಪಟ್ಟ ಯಾರಿಗೆ?

ಹೊಂದಾಣಿಕೆ ಮತ್ತು ಸಹಕಾರ ಆಧಾರದ ಮೇಲೆ ನಟಿ ಶ್ರುತಿ ನೇತ್ರ ಮತ್ತು ಚಂದನ್ ಗೆ 'ಭಲೇ ಜೋಡಿ' ಪಟ್ಟ ನೀಡಿದರು.

English summary
Kannada Actor Chandan and RJ Netra won 'Bhale Jodi' task given by Bigg Boss. Read the article to know what all happened on Day 30 in Bigg Boss Kannada 3.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X