For Quick Alerts
  ALLOW NOTIFICATIONS  
  For Daily Alerts

  ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ

  By Harshitha
  |

  ಒಂದ್ಕಾಲದಲ್ಲಿ ನಟಿ ಶ್ರುತಿ ಅಳುಮುಂಜಿ ಅಂತಲೇ ಹೆಸರುವಾಸಿ. ಮಹಿಳಾ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದ ಶ್ರುತಿ, ನಟನೆ ಜೊತೆಗೆ ತಮ್ಮ ಅಳುವಿನಿಂದ ಹೆಂಗಳೆಯರ ಮನಗೆದ್ದಿದ್ದರು.

  ನಿಜಜೀವನದಲ್ಲಿ ಯಾವುದೇ ಸಮಸ್ಯೆ ಎದುರಾದರೂ, ಶಾಂತ ಚಿತ್ತದಿಂದಲೇ ಪ್ರತಿಕ್ರಿಯೆ ನೀಡುತ್ತಿದ್ದ ಶ್ರುತಿ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಯಾಕೋ ಕೊಂಚ ಗರಂ ಆದ ಹಾಗೆ ಕಂಡು ಬಂದರು. ['ಬಿಗ್ ಬಾಸ್' ಮನೆಯ ಎಲ್ಲಾ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ]

  'ಬಿಗ್ ಬಾಸ್-3' ಮನೆಯ ಸದಸ್ಯರು ಮೊದಲ ವಾರದ ಕ್ಯಾಪ್ಟನ್ ಆಗಿ ನಟಿ ಶ್ರುತಿ ಅವರನ್ನ ಆಯ್ಕೆ ಮಾಡಿದ್ದರು. ಅದರಂತೆ ಮನೆಯ ಎಲ್ಲಾ ಕೆಲಸಗಳನ್ನ, ಎಲ್ಲಾ ಸದಸ್ಯರು ಮಾಡುವಂತೆ ನೋಡಿಕೊಳ್ಳುವ ಜವಾಬ್ದಾರಿ ನಟಿ ಶ್ರುತಿಯದ್ದು.

  ಮೂರು ದಿನ 'ಬಿಗ್ ಬಾಸ್' ಮನೆಯ ಎಲ್ಲಾ ಕೆಲಸಗಳು ಸುಸೂತ್ರವಾಗಿ ನಡೆಯಿತು. ಆದ್ರೆ ನಿನ್ನೆ ಮನೆಯಲ್ಲಿ ಯಾರೂ, ಯಾವ ಕೆಲಸವನ್ನೂ ನೆಟ್ಟಗೆ ಮಾಡ್ಲಿಲ್ಲ. ಇದನ್ನ ಕೇಳೋಕೆ ಮೀಟಿಂಗ್ ಮಾಡಿದಾಗ ನಟಿ ಶ್ರುತಿ ಮತ್ತು ಮಾಸ್ಟರ್ ಆನಂದ್ ನಡುವೆ ಮಾತಿನ ಸಮರ ನಡೆಯಿತು. ಮುಂದೆ ಓದಿ.....

  ಮನೆ ಕೆಲಸ ಯಾರೂ ಮಾಡಿಲ್ಲ.!

  ಮನೆ ಕೆಲಸ ಯಾರೂ ಮಾಡಿಲ್ಲ.!

  ಅಡುಗೆ ಟೀಮ್, ಮನೆ ಸ್ವಚ್ಛ ಮಾಡುವ ಟೀಮ್ ಮತ್ತು ಮನರಂಜನೆ ಟೀಮ್ ನಲ್ಲಿರುವ ಸದಸ್ಯರು ನಿನ್ನೆ ಯಾವ ಕೆಲಸವನ್ನೂ ಸರಿಯಾಗಿ ಮಾಡಿಲ್ಲ ಅಂತ ಕ್ಯಾಪ್ಟನ್ ಶ್ರುತಿ ಮಾತಿಗಿಳಿದರು. ['ಬಿಗ್ ಬಾಸ್' ಮನೆಯಲ್ಲಿ ಅಹಂಕಾರಿ ಯಾರು ಗೊತ್ತಾ?]

  ವಾಗ್ವಾದ ಶುರು ಮಾಡಿದ ಮಾಸ್ಟರ್ ಆನಂದ್

  ವಾಗ್ವಾದ ಶುರು ಮಾಡಿದ ಮಾಸ್ಟರ್ ಆನಂದ್

  ಮನೆಯ ಯಾವ ಸದಸ್ಯರಿಗೂ ಸರಿಯಾಗಿ ನಿದ್ದೆ ಆಗಿಲ್ಲ. ಹೀಗಾಗಿ ಯಾರೂ ಕೆಲಸ ಸರಿಯಾಗಿ ಮಾಡುವುದಕ್ಕೆ ಆಗ್ಲಿಲ್ಲ ಅಂತ ಶ್ರುತಿ ಜೊತೆ ಮಾಸ್ಟರ್ ಆನಂದ್ ವಾಗ್ವಾದ ಶುರು ಮಾಡಿದರು. [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]

  ಹುಚ್ಚ ವೆಂಕಟ್ ರಿಂದ ಮೂಡ್ ಆಫ್.!

  ಹುಚ್ಚ ವೆಂಕಟ್ ರಿಂದ ಮೂಡ್ ಆಫ್.!

  ಮನರಂಜನೆ ನೀಡುವ ಸಲುವಾಗಿ ಹುಚ್ಚ ವೆಂಕಟ್ ಅನುಕರಣೆ ಮಾಡುವುದಕ್ಕೆ ಹೋಗಿ, ಅವರಿಂದ ಬಾಯಿಗೆ ಬಂದಂತೆ ಬೈಯಿಸಿಕೊಂಡ ಬಳಿಕ ಮಾಸ್ಟರ್ ಆನಂದ್ ಮೂಡ್ ಆಫ್ ಆಗಿತ್ತು. ಹೀಗಾಗಿ ಯಾವ ಕೆಲಸವನ್ನೂ ಮಾಡ್ಲಿಲ್ಲ ಅಂತ ಸಬೂಬು ಹೇಳಿದರು. [ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್! ]

  ಮಾತು ಅರ್ಧಕ್ಕೆ ನಿಲ್ಲಿಸಿ ಹೋದ ಶ್ರುತಿ

  ಮಾತು ಅರ್ಧಕ್ಕೆ ನಿಲ್ಲಿಸಿ ಹೋದ ಶ್ರುತಿ

  ಮಾಸ್ಟರ್ ಆನಂದ್ ಮಾತುಗಳಿಂದ ಕೊಂಚ ಗರಂ ಆದ ನಟಿ ಶ್ರುತಿ, ತಮ್ಮ ಮಾತನ್ನ ಅರ್ಧಕ್ಕೆ ನಿಲ್ಲಿಸಿ ಎದ್ದುಹೋದರು.

  ಶಾಂತಿ-ಕಾಂತಿ ಟಾಸ್ಕ್ ಸೋತ ಮನೆ ಸದಸ್ಯರು

  ಶಾಂತಿ-ಕಾಂತಿ ಟಾಸ್ಕ್ ಸೋತ ಮನೆ ಸದಸ್ಯರು

  ಮೊದಲ ವಾರ ಮನೆಯ ಎಲ್ಲಾ ಸದಸ್ಯರಿಗೆ 'ಬಿಗ್ ಬಾಸ್' ನೀಡಿದ ಶಾಂತಿ ಕಾಂತಿ ಟಾಸ್ಕ್ ಮುಗಿಯಿತು. ಟಾಸ್ಕ್ ನಲ್ಲಿ ಎಲ್ಲಾ ಸದಸ್ಯರು ಪಾಲ್ಗೊಳ್ಳದ ಕಾರಣ Luxury Budget ಮಿಸ್ ಆಯ್ತು.

  ಹುಚ್ಚ ವೆಂಕಟ್ ಮೇಲೆ ಕೋಪ.!

  ಹುಚ್ಚ ವೆಂಕಟ್ ಮೇಲೆ ಕೋಪ.!

  'ಬಿಗ್ ಬಾಸ್' ನೀಡಿದ ಟಾಸ್ಕ್ ನಲ್ಲಿ ಹುಚ್ಚ ವೆಂಕಟ್ ಪಾಲ್ಗೊಳ್ಳಲಿಲ್ಲ. ಧ್ಯಾನದಲ್ಲಿ ಭಾಗಿಯಾಗಲಿಲ್ಲ. ಹೀಗಾಗಿ ಟಾಸ್ಕ್ ಗೆಲ್ಲಲಿಲ್ಲ ಅಂತ ಕೆಲವರು ಬೇಸರ ವ್ಯಕ್ತಪಡಿಸಿದರು.

  ಹೆಣ್ಮಕ್ಕಳೇ ಗ್ರೇಟ್ ಎಂದ ಹುಚ್ಚ ವೆಂಕಟ್

  ಹೆಣ್ಮಕ್ಕಳೇ ಗ್ರೇಟ್ ಎಂದ ಹುಚ್ಚ ವೆಂಕಟ್

  ''ನಾವು ಗಂಡಸರು ವೇಸ್ಟ್. ವೇಸ್ಟ್ ಬಾಡಿ ಅಂದ್ರೆ ಗಂಡಸರು. ಹೆಣ್ಮಕ್ಕಳೇ ಗ್ರೇಟ್'' ಅಂತ ಹುಚ್ಚ ವೆಂಕಟ್ ಡೈಲಾಗ್ ಹೊಡೀತಿದ್ರು.

  English summary
  Kannada Actress Shruthi and Master Anand had an argument over Housekeeping issue in Bigg Boss house. Read to know more details about what all happened in Day 4 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X