For Quick Alerts
  ALLOW NOTIFICATIONS  
  For Daily Alerts

  ''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!

  By Harshitha
  |

  ಹುಚ್ಚ ವೆಂಕಟ್ ಅಹಂಕಾರಿನಾ.? ಈ ಪ್ರಶ್ನೆಗೆ ಬೇರೆಯವರು ಉತ್ತರ ಕೊಡೋದಕ್ಕೂ ಮುನ್ನ ಖುದ್ದು ಹುಚ್ಚ ವೆಂಕಟ್ ''ನಾನು ಅಹಂಕಾರಿ'' ಅಂತ ತಮಗೆ ತಾವೇ ವೋಟ್ ಮಾಡಿಕೊಂಡರು.

  ''ನಾನ್ ಹೇಳಿದ ಹಾಗೇ ಕೇಳ್ಬೇಕ್. ನಾನು ಮಾತನಾಡುವಾಗ ಬೇರೆಯವರೆಲ್ಲಾ ಸೈಲೆಂಟ್ ಆಗಿ ಇರ್ಬೇಕ್..'' ಅಂತ ದೌಲತ್ ತೋರಿಸುವ ಹುಚ್ಚ ವೆಂಕಟ್ ನಿನ್ನೆ ಇನ್ನೊಂದು ವಿವಾದಕ್ಕೆ ನಾಂದಿ ಹಾಡಿದರು. ['ಬಿಗ್ ಬಾಸ್' ಮನೆಯ ಎಲ್ಲಾ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ]

  ಮೊದಲಿನಿಂದಲೂ ಹುಚ್ಚ ವೆಂಕಟ್ ಗೆ ಹೆಣ್ಮಕ್ಕಳು ತುಂಡು ಬಟ್ಟೆ ಹಾಕುವುದು ಇಷ್ಟ ಇಲ್ಲ. 'ಬಿಗ್ ಬಾಸ್' ಮನೆಗೆ ಕಾಲಿಟ್ಟಾಗಿನಿಂದಲೂ, ಹುಚ್ಚ ವೆಂಕಟ್ ಗೂ ಮನೆಯ ಹೆಣ್ಮಕ್ಕಳಿಗೆ ಇದೇ ವಿಷಯವಾಗಿ ಜಟಾಪಟಿ ನಡೆಯುತ್ತಲೇ ಇದೆ. ನಿನ್ನೆ ಆ ಜಟಾಪಟಿ ಅತಿರೇಕಕ್ಕೆ ಹೋಯ್ತು.

  ''ಅಶ್ಲೀಲವಾಗಿ ಬಟ್ಟೆ ಧರಿಸುವ ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಅಂತ ಹೇಳಿ ಹೆಣ್ಮಕ್ಕಳ ಕೆಂಗಣ್ಣಿಗೆ ಹುಚ್ಚ ವೆಂಕಟ್ ಗುರಿಯಾದರು. ಅಷ್ಟಕ್ಕೂ ನಿನ್ನೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಆಗಿದ್ದೇನು ಅನ್ನೋದನ್ನ ವಿವರವಾಗಿ ಹೇಳ್ತೀವಿ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸುತ್ತಾ ಹೋಗಿ.....

  'ಬಿಗ್ ಬಾಸ್' ನೀಡಿದ ಆದೇಶ ಏನು?

  'ಬಿಗ್ ಬಾಸ್' ನೀಡಿದ ಆದೇಶ ಏನು?

  'ಬಿಗ್ ಬಾಸ್' ಮನೆಯ ಸದಸ್ಯರ ಪೈಕಿ ಯಾರಿಗೆ ಹೆಚ್ಚು ಅಹಂಕಾರ ಇದೆ ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ಎಲ್ಲಾ ಸದಸ್ಯರು ಮೂರು ಹೆಸರನ್ನ ತಿಳಿಸುವಂತೆ ಆದೇಶಿಸಿದರು. ['ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲಾ' ಮಾಡ್ತಿರೋದು ಏನು?]

  ಹುಚ್ಚ ವೆಂಕಟ್ ಗೆ ಅತಿ ಹೆಚ್ಚು ವೋಟ್..!

  ಹುಚ್ಚ ವೆಂಕಟ್ ಗೆ ಅತಿ ಹೆಚ್ಚು ವೋಟ್..!

  'ಬಿಗ್ ಬಾಸ್' ಮನೆಯ ಬಹುತೇಕ ಎಲ್ಲಾ ಸದಸ್ಯರು ಹುಚ್ಚ ವೆಂಕಟ್ ಹೆಸರನ್ನ 'ಅಹಂಕಾರಿ' ಲಿಸ್ಟ್ ಗೆ ಸೇರಿಸಿದರು. [ಮಾಸ್ಟರ್ ಆನಂದ್ ಗೆ ಬಾಯಿಗೆ ಬಂದಂತೆ ಬೈದ ಹುಚ್ಚ ವೆಂಕಟ್! ]

  ಹುಚ್ಚ ವೆಂಕಟ್ ನ 'ಅಹಂಕಾರಿ' ಅಂದೋರು ಯಾರ್ಯಾರು?

  ಹುಚ್ಚ ವೆಂಕಟ್ ನ 'ಅಹಂಕಾರಿ' ಅಂದೋರು ಯಾರ್ಯಾರು?

  ಜಯಶ್ರೀ ರಾಮಯ್ಯ, ರೆಹಮಾನ್, ಚಂದನ್, ಕೃತಿಕಾ, ಕಿಟ್ಟಿ, ನೇಹಾ ಗೌಡ, ಮಾಧುರಿ ಇಟಗಿ, ಮಾಸ್ಟರ್ ಆನಂದ್ ಮತ್ತು ನೇತ್ರ 'ಹುಚ್ಚ ವೆಂಕಟ್' ಹೆಸರನ್ನ ಹೇಳಿದರು.!

  'ನಾನೇ ಅಹಂಕಾರಿ' ಎಂದ ಹುಚ್ಚ ವೆಂಕಟ್.!

  'ನಾನೇ ಅಹಂಕಾರಿ' ಎಂದ ಹುಚ್ಚ ವೆಂಕಟ್.!

  ವಿಚಿತ್ರ ಅಂದ್ರೆ ಖುದ್ದು ಹುಚ್ಚ ವೆಂಕಟ್ ತಮ್ಮ ಹೆಸರನ್ನೇ ಹೇಳಿ, ''ನಾನೇ ಅಹಂಕಾರಿ'' ಅಂತ 'ಬಿಗ್ ಬಾಸ್'ಗೆ ತಿಳಿಸಿದರು.

  ನಂತ್ರ ಸಿಕ್ಕಿದ್ದು ಟ್ವಿಸ್ಟ್..!

  ನಂತ್ರ ಸಿಕ್ಕಿದ್ದು ಟ್ವಿಸ್ಟ್..!

  ಹುಚ್ಚ ವೆಂಕಟ್, ಚಂದನ್ ಮತ್ತು ಕೃತಿಕಾಗೆ ಹೆಚ್ಚು ವೋಟ್ ಗಳು ಲಭಿಸಿದ್ದವು. ತಾವು ಅಹಂಕಾರಿ ಅಲ್ಲ ಅಂತ 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೆ ಈ ಮೂವರು ಮನವರಿಕೆ ಮಾಡಬೇಕಿತ್ತು. ಮನವರಿಕೆ ಮಾಡಲು ಹೋಗಿ ಹುಚ್ಚ ವೆಂಕಟ್ ಅವಾಂತರ ಸೃಷ್ಟಿಸಿದರು.

   ಜಯಶ್ರೀ ಕಾಲಿಗೆ ಬಿದ್ದ ಹುಚ್ಚ ವೆಂಕಟ್.!

  ಜಯಶ್ರೀ ಕಾಲಿಗೆ ಬಿದ್ದ ಹುಚ್ಚ ವೆಂಕಟ್.!

  ''ನಾನು ಅಹಂಕಾರಿ ಅಲ್ಲ. ನಾನು ಹೆಣ್ಮಕ್ಕಳನ್ನ ತುಂಬಾ ಗೌರವಿಸುತ್ತೇನೆ. ಹೆಣ್ಮಕ್ಕಳ ಕಾಲಿಗೆ ನಾನು ಬೀಳುವುದಕ್ಕೆ ಸಿದ್ಧ'' ಅಂತ ಹೇಳ್ತಾ, ಪಕ್ಕದಲ್ಲೇ ಇದ್ದೇ ಜಯಶ್ರೀ ಕಾಲಿಗೆ ಹುಚ್ಚ ವೆಂಕಟ್ ಬಿದ್ದರು.

  ಹೊರಗಡೆ ನೋಡಿಕೊಳ್ತೀನಿ

  ಹೊರಗಡೆ ನೋಡಿಕೊಳ್ತೀನಿ

  ''ನಾನು ಹೆಣ್ಮಕ್ಕಳನ್ನ ಗೌರವಿಸುತ್ತೇನೆ. ಆದ್ರೆ, ಹೆಣ್ಮಕ್ಕಳು Vulgar ಆಗಿ ಡ್ರೆಸ್ ಹಾಕಿಕೊಳ್ಳುವುದು, ಸಿಗರೇಟ್ ಸೇದುವುದು, ಸ್ಲೀವ್ ಲೆಸ್ ಡ್ರೆಸ್, ಮಿನಿ ಡ್ರೆಸ್ ತೊಡುವುದು ನಂಗಿಷ್ಟ ಇಲ್ಲ. ಇಲ್ಲಿ ಯಾರೂ ಹಾಗೇ ಇರೋ ಹಾಗಿಲ್ಲ. ಅದಕ್ಕಾಗಿ ನಾನು ಕಾಲಿಗೆ ಬೀಳೋಕೂ ರೆಡಿ. ಇಲ್ಲಾಂದ್ರೆ ಹೊರಗಡೆ ನಾನು ನೋಡಿಕೊಳ್ತೀನಿ'' ಅಂತ ಹುಚ್ಚ ವೆಂಕಟ್ ಹೇಳಿದರು.

  ಇದು ಅತಿ ಆಯ್ತು.!

  ಇದು ಅತಿ ಆಯ್ತು.!

  ''ಉಡುಗೆ-ತೊಡುಗೆ ನಮ್ಮ ಇಷ್ಟ. ಕೇಳುವುದಕ್ಕೆ ಇವರು ಯಾರು. ಇವರನ್ನ ಹ್ಯಾಂಡಲ್ ಮಾಡೋಕೆ ನಮ್ಮ ಕೈಯಲ್ಲಿ ಆಗಲ್ಲ. ನೀವೇ ಹ್ಯಾಂಡಲ್ ಮಾಡ್ಬೇಕು ಬಿಗ್ ಬಾಸ್'' ಅಂತ ನಟಿ ಪೂಜಾ ಗಾಂಧಿ ಕ್ಯಾಮರಾ ಬಳಿ ಕೇಳಿಕೊಂಡರು.

  ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ.!

  ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ.!

  ''ನಾನು ಚಪ್ಪಲಿಕ್ಕಿಂತ ಕೀಳು. ನಮ್ಮ ಸಂಸ್ಕೃತಿಗೆ ಅವಮಾನ ಮಾಡಿದ್ರೆ ನನಗೆ ಆಗಲ್ಲ. ಹೆಣ್ಮಕ್ಕಳು ಸಂಸ್ಕೃತಿಗೆ ಬೆಲೆ ಕೊಡ್ಬೇಕ್. ಇಲ್ಲಾಂದ್ರೆ ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಅಂತ ಹುಚ್ಚ ವೆಂಕಟ್ ಅಬ್ಬರಿಸಿದರು.

  ಹೆಣ್ಮಕ್ಕಳು ಶಾಕ್.!

  ಹೆಣ್ಮಕ್ಕಳು ಶಾಕ್.!

  ಹುಚ್ಚ ವೆಂಕಟ್ ರವರ ವಾರ್ನಿಂಗ್ ಕೇಳಿ 'ಬಿಗ್ ಬಾಸ್' ಮನೆಯ ಎಲ್ಲಾ ಹೆಣ್ಮಕ್ಕಳು ಶಾಕ್ ಆದರು. ಅವರೊಂದಿಗೆ ವಾದ ಮಾಡದಿರುವುದೇ ಲೇಸು ಅಂತ ಎಲ್ಲರೂ ಸುಮ್ಮನಾಗ್ಬಿಟ್ಟರು.

  ವಿಡಿಯೋ ನೋಡಿ...

  'ಬಿಗ್ ಬಾಸ್' ಮನೆಯಲ್ಲಿ 4ನೇ ದಿನ ಆದ ರಾದ್ಧಾಂತವನ್ನ ಈ ವಿಡಿಯೋದಲ್ಲಿ ನೋಡಿ....

  English summary
  Annoyed YouTube Star Huccha Venkat warned that he will chop women leg, if they do not respect Kannada Culture in Bigg Boss House. Read to know more details about what happened in Day 4 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X