»   » 'ಬಿಗ್ ಬಾಸ್' ಮನೆಯಲ್ಲಿ ಅಹಂಕಾರಿ ಯಾರು ಗೊತ್ತಾ?

'ಬಿಗ್ ಬಾಸ್' ಮನೆಯಲ್ಲಿ ಅಹಂಕಾರಿ ಯಾರು ಗೊತ್ತಾ?

Posted By:
Subscribe to Filmibeat Kannada

''ಎಲ್ಲರೂ ಹೊಂದುಕೊಂಡು ಹೋಗೋಣ ಅಂತ ಅಂದುಕೊಂಡರೆ, ಮನೆ ಒಗ್ಗಟ್ಟಾಗುತ್ತೆ. ನನ್ನ ಮಾತೇ ನಡೀಬೇಕು ಅಂತ ಅಹಂಕಾರ ತೋರಿಸಿದಾಗ ಮನೆ ಚೂರಾಗುತ್ತೆ.''

ಈ ಹಿನ್ನಲೆಯಲ್ಲಿ 'ಬಿಗ್ ಬಾಸ್-3' ಮನೆಯಲ್ಲಿ ಯಾರಿಗೆ ಹೆಚ್ಚು ಅಹಂಕಾರ ಇದೆ ಅಂತ ತಿಳಿದುಕೊಳ್ಳುವುದಕ್ಕೆ 'ಬಿಗ್ ಬಾಸ್' ಒಂದು ಟಾಸ್ಕ್ ಕೊಡುವುದಕ್ಕೆ ತೀರ್ಮಾನಿಸಿದರು. ['ಬಿಗ್ ಬಾಸ್' ಮನೆಯ ಎಲ್ಲಾ ತಾಜಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ]

ಅದರಂತೆ, 'ಬಿಗ್ ಬಾಸ್' ಮನೆಯ ಸದಸ್ಯರ ಪೈಕಿ ಯಾರಿಗೆ ಹೆಚ್ಚು ಅಹಂಕಾರ ಇದೆ ಅನ್ನೋದನ್ನ ತಿಳಿದುಕೊಳ್ಳುವುದಕ್ಕೆ ಎಲ್ಲಾ ಸದಸ್ಯರು ಮೂರು ಹೆಸರನ್ನ ತಿಳಿಸುವಂತೆ ಆದೇಶಿಸಿದರು.

ಎಲ್ಲರೂ 'ಅಹಂಕಾರಿ' ಅಂತ ಬೆಟ್ಟು ಮಾಡಿತೋರಿಸಿದ್ದು ಯಾರನ್ನ ಅಂತ ತಿಳಿದುಕೊಳ್ಳುವುದಕ್ಕೆ ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಜಯಶ್ರೀ

ಗಾಯಕ ರವಿ ಮುರೂರು, ಕಿರುತೆರೆ ನಟಿ ಕೃತಿಕಾ ಮತ್ತು ಹುಚ್ಚ ವೆಂಕಟ್ ಗೆ 'ನಾನು ಅನ್ನೋ ಅಹಂ' ಜಾಸ್ತಿ ಇದೆ ಅಂತ ಜಯಶ್ರೀ ಹೇಳಿದರು. ['ಬಿಗ್ ಬಾಸ್' ಮನೆಯಲ್ಲಿ 'ಇವರೆಲ್ಲಾ' ಮಾಡ್ತಿರೋದು ಏನು?]

ರೆಹಮಾನ್

ರೆಹಮಾನ್ ಹೇಳುವ ಪ್ರಕಾರ, ಚಂದನ್, ಕೃತಿಕಾ ಮತ್ತು ಹುಚ್ಚ ವೆಂಕಟ್ ಗೆ ಅಹಂಕಾರ ಇದೆ.

ಶೃತಿ

ಚಂದನ್, ಜಯಶ್ರೀ ಮತ್ತು ಸುನಾಮಿ ಕಿಟ್ಟಿ ಹೆಸರನ್ನ ಶೃತಿ ಹೇಳಿದರು.

ಚಂದನ್

ಹುಚ್ಚ ವೆಂಕಟ್, ಸುನಾಮಿ ಕಿಟ್ಟಿ ಮತ್ತು ಮಾಸ್ಟರ್ ಆನಂದ್ ಗೆ ಅಹಂಕಾರ ಇದೇ ಅನ್ನೋದು ಚಂದನ್ ಅಭಿಪ್ರಾಯ.

ಕೃತಿಕಾ

ನೇಹಾ ಗೌಡ, ಹುಚ್ಚ ವೆಂಕಟ್ ಮತ್ತು ಸುನಾಮಿ ಕಿಟ್ಟಿಗೆ EGO ಜಾಸ್ತಿ ಅಂತಾರೆ ಕೃತಿಕಾ.

ಸುನಾಮಿ ಕಿಟ್ಟಿ

ಚಂದನ್, ಮಾಧುರಿ ಇಟಗಿ ಮತ್ತು ಹುಚ್ಚ ವೆಂಕಟ್ ಹೆಸರನ್ನ ಸುನಾಮಿ ಕಿಟ್ಟಿ ಹೇಳಿದರು.

ಪೂಜಾ ಗಾಂಧಿ

ಪೂಜಾ ಗಾಂಧಿ ಪಿಕ್ ಮಾಡಿದ ಹೆಸರುಗಳು - ಕೃತಿಕಾ, ಜಯಶ್ರೀ ಮತ್ತು ಶೃತಿ

ರವಿ ಮುರೂರು

ಗಾಯಕ ರವಿ ಮುರೂರು ಅವರ ಆಯ್ಕೆ - ಜಯಶ್ರೀ, ಕೃತಿಕಾ, ಚಂದನ್

ನೇಹಾ ಗೌಡ

ಕೃತಿಕಾ, ಮಾಧುರಿ ಇಟಗಿ ಮತ್ತು ಹುಚ್ಚ ವೆಂಕಟ್ ಗೆ ಅಹಂಕಾರ ಹೆಚ್ಚು ಅಂತ ಹೇಳಿದರು ನೇಹಾ ಗೌಡ.

ಅಯ್ಯಪ್ಪ

ಅಯ್ಯಪ್ಪ 'ಬಿಗ್ ಬಾಸ್' ಗೆ ತಿಳಿಸಿದ ಹೆಸರುಗಳು - ಕೃತಿಕಾ, ಶೃತಿ ಮತ್ತು ಮಾಧುರಿ ಇಟಗಿ.

ಭಾವನಾ ಬೆಳಗೆರೆ

ಚಂದನ್, ಜಯಶ್ರೀ ಮತ್ತು ಅಯ್ಯಪ್ಪ ರವರಿಗೆ ಕೊಂಚ EGO ಇದೆ ಅಂತ ಹೇಳಿದ್ರು ಭಾವನಾ ಬೆಳಗೆರೆ.

ಮಾಧುರಿ ಇಟಗಿ

ಕೃತಿಕಾ, ನೇಹಾ ಗೌಡ ಮತ್ತು ಹುಚ್ಚ ವೆಂಕಟ್ - ಮಾಧುರಿ ಇಟಗಿ ಹೇಳಿದ ಹೆಸರುಗಳು.

ಮಾಸ್ಟರ್ ಆನಂದ್

ಕೃತಿಕಾ, ಮಾಧುರಿ ಮತ್ತು ಹುಚ್ಚ ವೆಂಕಟ್ ರನ್ನ 'ಅಹಂಕಾರಿ' ಲಿಸ್ಟ್ ಗೆ ಮಾಸ್ಟರ್ ಆನಂದ್ ಸೇರಿಸಿದರು.

ನೇತ್ರ

ಜಯಶ್ರೀ, ಕೃತಿಕಾ ಮತ್ತು ಹುಚ್ಚ ವೆಂಕಟ್ ಹೆಸರನ್ನ ಆರ್.ಜೆ.ನೇತ್ರ ಹೇಳಿದರು.

ಹುಚ್ಚ ವೆಂಕಟ್

''ನನಗೆ ಅಹಂಕಾರ ಇದೆ, ಹೀಗಾಗಿ ನನ್ನ ಹೆಸರೇ ಹೇಳುತ್ತೇನೆ'' ಅಂತ ಹುಚ್ಚ ವೆಂಕಟ್ ತಮ್ಮ ಹೆಸರಿನ ಜೊತೆ ಕೃತಿಕಾ ಮತ್ತು ಸುನಾಮಿ ಕಿಟ್ಟಿ ಹೆಸರನ್ನ ತೆಗೆದುಕೊಂಡರು. [''ಹೆಣ್ಮಕ್ಕಳ ಕಾಲು ಕತ್ತರಿಸ್ತೀನಿ'' ಎಂದ ಹುಚ್ಚ ವೆಂಕಟ್.!]

ಅತಿ ಹೆಚ್ಚು ವೋಟ್ ಲಭಿಸಿದ್ದು.!

ಚಂದನ್, ಹುಚ್ಚ ವೆಂಕಟ್ ಮತ್ತು ಕೃತಿಕಾಗೆ ಅತಿ ಹೆಚ್ಚು ವೋಟ್ ಲಭಿಸಿತ್ತು. 'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರಿಗೂ ತಾವು ಅಹಂಕಾರಿ ಅಲ್ಲ ಅಂತ ಮನವರಿಕೆ ಮಾಡುವ ಸಲುವಾಗಿ ಒಬ್ಬೊಬ್ಬರಿಗೂ 'ಬಿಗ್ ಬಾಸ್' 2 ಗಂಟೆ ಕಾಲಾವಕಾಶ ನೀಡಿದರು.

ಟಾಸ್ಕ್ ಗೆದ್ದ ಚಂದನ್.!

'ಬಿಗ್ ಬಾಸ್' ಮನೆಯ ಎಲ್ಲಾ ಸದಸ್ಯರೊಂದಿಗೆ ಮಾತನಾಡಿದ ಚಂದನ್ ಅನೇಕರ ಅಭಿಪ್ರಾಯವನ್ನ ಬದಲಿಸಿ ತಾವು ಅಹಂಕಾರಿ ಅಲ್ಲ ಅನ್ನೋದನ್ನ ಪ್ರೂವ್ ಮಾಡಿದರು. ಪರಿಣಾಮ ಅವರಿಗೆ ಬಿರಿಯಾನಿ ಲಭಿಸಿತು.

ವಿಡಿಯೋ ನೋಡಿ...

'ಬಿಗ್ ಬಾಸ್' ಮನೆಯಲ್ಲಿ 4 ನೇ ದಿನ ಏನೇನಾಯ್ತು ಅನ್ನೋದನ್ನ ಈ ವಿಡಿಯೋದಲ್ಲಿ ನೋಡಿ....

English summary
Kannada Actor Chandan, YouTube Star Huccha Venkat, Small Screen Actress Kruthika are voted as the most egoistic people in Bigg Boss house. Read to know more details about what all happened in Day 4 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada