»   » 'ಅಣ್ಣ-ತಂಗಿ' ಖ್ಯಾತಿಯ ರೆಹಮಾನ್ ಕಿವಿ ಹಿಂಡಿದ ಮಿತ್ರ

'ಅಣ್ಣ-ತಂಗಿ' ಖ್ಯಾತಿಯ ರೆಹಮಾನ್ ಕಿವಿ ಹಿಂಡಿದ ಮಿತ್ರ

Posted By:
Subscribe to Filmibeat Kannada

ಯಾರು ಏನೇ ಅಂದ್ರೂ ನಾವಿಬ್ಬರು ಅಣ್ಣ-ತಂಗಿನೇ ಅಂತ ಎಲ್ಲರ ಹತ್ರ ವಾದ ಮಾಡಿದ್ದ ರೆಹಮಾನ್ ಕಿವಿ ಹಿಂಡುವ ಕೆಲಸ ಮಾಡಿದ್ದಾರೆ ಕಾಮಿಡಿ ನಟ ಮಿತ್ರ.

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮನೆಯೊಳಗೆ ಕಾಲಿಟ್ಟ ಮಿತ್ರ ಎಲ್ಲಾ ಸದಸ್ಯರಿಗೆ ಬಿಸಿ ಮುಟ್ಟಿಸಿದ್ದಾರೆ. [ಟಿವಿ9 ರೆಹಮಾನ್ ಮತ್ತು ನೇಹಾ ಗೌಡ ಕುರಿತ ಅಸಲಿ ವಿವಾದವೇನು?]

ನಟಿ ಶ್ರುತಿಗೆ 'ನೀವು ನಾಟಕ ಮಾಡುವುದರಲ್ಲಿ ಎಕ್ಸ್ ಪರ್ಟ್' ಅಂತ ನೇರವಾಗಿ ಬಾಣ ಬಿಟ್ಟ ಮಿತ್ರ, ರೆಹಮಾನ್ ಗೆ 'ಅಣ್ಣ-ತಂಗಿ' ಸಿನಿಮಾ ಉದಾಹರಣೆ ನೀಡಿ ಬುದ್ದಿ ಹೇಳುವ ಪ್ರಯತ್ನ ಮಾಡಿದ್ದಾರೆ.

ರೆಹಮಾನ್ ಮತ್ತು ಮಿತ್ರ ನಡುವೆ ನಡೆದ ಸಂಭಾಷಣೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

'ಅಣ್ಣ-ತಂಗಿ' ಸಿನಿಮಾ ನೋಡಿದ್ದೀರಾ?

''ನಿಮಗೆ ಓಂ ಸಾಯಿ ಪ್ರಕಾಶ್ ನಿರ್ದೇಶಕರು ಗೊತ್ತಾ. ಅವರು ಈ ಫ್ಯಾಮಿಲಿ ಸಿನಿಮಾಗಳೆಲ್ಲಾ ಮಾಡ್ತಾರೆ. ಅವರ 'ಅಣ್ಣ-ತಂಗಿ' ಸಿನಿಮಾ ಜಾಸ್ತಿ ನೋಡಿದ್ದೀರಾ ನೀವು ಅನ್ನೋದು ನನ್ನ ಅಭಿಪ್ರಾಯ. ಸೆಂಟಿಮೆಂಟ್ ಇರಬೇಕು ಮನುಷ್ಯನಿಗೆ ಆದ್ರೆ ಅತಿ ಆಗಬಾರದು. ಸಿನಿಮಾ ನಿಮಗೆ ತುಂಬಾ ಇಂಪ್ಯಾಕ್ಟ್ ಆಗಿದೆ ಅಂದುಕೊಳ್ತೀನಿ'' ಅಂತ ರೆಹಮಾನ್ ಗೆ ಮಿತ್ರ ಟಾಂಗ್ ನೀಡಿದರು. [ಮೊದ್ಲು 'ಅಣ್ಣ-ತಂಗಿ' ರೆಹಮಾನ್-ನೇಹ ರನ್ನ ಔಟ್ ಮಾಡ್ರಪ್ಪ!!]

ರೆಹಮಾನ್ ನೀಡಿದ ಪ್ರತಿಕ್ರಿಯೆ

''ನಿಮಗೆ ಅನಿಸಿದ ಹಾಗೆ ಯಾವುದೂ ಅತಿ ಇಲ್ಲ ಸರ್. ಪ್ರೀತಿ, ವಾತ್ಸಲ್ಯದಿಂದ ಯಾರು ನೋಡ್ತಾರೆ ಅವರಿಗೆ ಎಲ್ಲವೂ ಅರ್ಥವಾಗುತ್ತೆ. ಯಾಕಂದ್ರೆ ನಾನು ಅಕ್ಕನ ಜೊತೆ ಬೆಳೆದಿರುವವನು'' ಅಂತ ರೆಹಮಾನ್ ಮಿತ್ರಗೆ ಪ್ರತಿಕ್ರಿಯೆ ನೀಡಿದರು. ['ಬಿಗ್ ಬಾಸ್' ಮೇಲೆ ರೆಹಮಾನ್ ಮಾಡಿದ ಆರೋಪ ಏನು?]

ನಿಮ್ಮನ್ನ ನೀವು ಮೊದಲು ಕಂಡುಕೊಳ್ಳಿ

''ಈ ಹೋಟೆಲ್ ಗೆ ಸೇರಿದ ಮುಖ್ಯ ಉದ್ದೇಶ ನಿಮ್ಮನ್ನ ನೀವು ಕಂಡುಕೊಳ್ಳೋದು. ನಿಮ್ಮನ್ನ ನೀವು ಕಂಡುಕೊಳ್ಳೋಕೆ ಸಂಬಂಧ ಬ್ಯಾರಿಕೇಡ್ ಆದರೆ, ಅದನ್ನ ಪಕ್ಕಕ್ಕೆ ಸರಿಸಿ ನಿಮ್ಮನ್ನ ನೀವು ಹುಡುಕ್ಕೊಂಡ ಮೇಲೆ ಸಂಬಂಧಗಳನ್ನ ನೋಡಬಹುದಲ್ಲಾ. ಅದು ಯಾವಾಗ ಆದರೂ ಸಿಗುತ್ತೆ ಅಲ್ಲಾ?'' ಅಂತ ಮಿತ್ರ ರೆಹಮಾನ್ ಗೆ ಕೇಳಿದರು.

ಬ್ಯಾರಿಕೇಡ್ ಅಲ್ಲ!

''ನನಗೆ ಯಾವತ್ತೂ ಬ್ಯಾರಿಕೇಡ್ ಅಂತ ಅನಿಸಿಲ್ಲ. ನೀವು ಹೇಳ್ತೀರೋ ಮಾತಿನ ಮೇಲೆ ನಾವು ಖಂಡಿತ ಗಮನ ಹರಿಸಬಹುದು.'' ಅಂತ ರೆಹಮಾನ್ ಹೇಳಿದರು.

English summary
Kannada Actor Mitra advices Rahman regarding his sentimental relationship with Neha Gowda. Read the article to know what Mitra advised Rahman in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada