»   » 'ಬಿಗ್ ಬಾಸ್' ಮನೆಯಲ್ಲಿ ಚಂದನ್-ಪೂಜಾ ಗಾಂಧಿ ನಡುವೆ ಶೀತಲ ಸಮರ

'ಬಿಗ್ ಬಾಸ್' ಮನೆಯಲ್ಲಿ ಚಂದನ್-ಪೂಜಾ ಗಾಂಧಿ ನಡುವೆ ಶೀತಲ ಸಮರ

Posted By:
Subscribe to Filmibeat Kannada

''ನಟ ಚಂದನ್ 'ಬಿಗ್ ಬಾಸ್' ಮನೆಯಲ್ಲಿ ತುಂಬಾ ಸೋಮಾರಿ'' ಎನ್ನುವ ಕಾರಣ ನೀಡಿ 'ಬಿಗ್ ಬಾಸ್-3' ಕಾರ್ಯಕ್ರಮದಿಂದ ಔಟ್ ಆಗುವ ಮುನ್ನ ನಟಿ ಪೂಜಾ ಗಾಂಧಿ, ನಟ ಚಂದನ್ ಗೆ 'ಎಲ್ಲರ ಬಟ್ಟೆ ಒಗೆಯುವ' ಶಿಕ್ಷೆ ನೀಡಿದ್ದರು.

ನಟಿ ಪೂಜಾ ಗಾಂಧಿ ಮರಳಿ 'ಬಿಗ್ ಬಾಸ್' ಮನೆಗೆ ಬಂದ ಮೇಲೂ ಈ ಶಿಕ್ಷೆ ಮುಂದುವರಿದ್ದಿದ್ದ ಕಾರಣ ಚಂದನ್ ಗೆ ಏಕಾಏಕಿ 35 ಜೊತೆ ಬಟ್ಟೆಯನ್ನ ನಟಿ ಪೂಜಾ ಗಾಂಧಿ ಒಗೆಯುವುದಕ್ಕೆ ಹಾಕಿದರು.

ತಮ್ಮ ಅಡುಗೆ ಚೆನ್ನಾಗಿಲ್ಲ ಅಂತ ಬೆನ್ನು ಹಿಂದೆ ಚಂದನ್ ಮಾತನಾಡಿದ್ದು ನಟಿ ಪೂಜಾ ಗಾಂಧಿಗೆ ಬೇಸರವಾಗಿದೆ. ಆ ಸಿಟ್ಟನ್ನ ತೀರಿಸಿಕೊಳ್ಳುವುದಕ್ಕೆ ಪೂಜಾ ಹೀಗೆ ಮಾಡಿರಬಹುದೇನೋ...[ಸೀಕ್ರೆಟ್ ರೂಮ್ ನಲ್ಲಿ ಪೂಜಾ ಗಾಂಧಿ ; ವೀಕ್ಷಕರ ಅಭಿಪ್ರಾಯವೇನು?]

ಇದೇ ವಿಚಾರವಾಗಿ ಈಗ ಚಂದನ್ ಮತ್ತು ಪೂಜಾ ಗಾಂಧಿ ನಡುವೆ ಶೀತಲ ಸಮರ ನಡೆಯುತ್ತಿದೆ. ಪೂಜಾ ಗಾಂಧಿ ನಡವಳಿಕೆ ವಿರುದ್ಧ ಚಂದನ್ ರೊಚ್ಚಿಗೆದ್ದಿದ್ದಾರೆ. ಮುಂದೆ ಓದಿ......

ಪೂಜಾ ಗಾಂಧಿ ಬಗ್ಗೆ ಚಂದನ್ ಕಾಮೆಂಟ್!

''ಅವಕಾಶವಾದಿ ಟಾಸ್ಕ್ ನಲ್ಲಿ ಹೋಗಿ 11ನೇ ಪ್ಲೇಸ್ ನಲ್ಲಿ ನಿಂತುಕೊಂಡರು ಪೂಜಾ ಗಾಂಧಿ. ನಾನು ನಿಂತಿದ್ದ ಜಾಗ ಕಿತ್ಕೊಂಡ್ರು ಪೂಜಾ. ಇವತ್ತು ಎರಡೆರಡು ಬಾರಿ ಅವಕಾಶವಾದಿ ಆದ್ರು. ಬಟ್ಟೆ ಒಗೆಯುತ್ತಾಯಿದ್ದಾನೆ ಹೇಗಿದ್ರೂ, ನನ್ನದೂ ಒಗೆಸೋಣ ಅಂತ. ನಾನು ಕೊಟ್ಟ ರಿಯಲ್ ಎಮೋಷನ್ಸ್ ನ ನನ್ನಿಂದ ಅದು ಬಂದಿದ್ದು ಅಂದ್ರು. ಅದಕ್ಕಿಂತ ಅವಕಾಶವಾದಿ ಬೇಕಾ'' ಅಂತ ಚಂದನ್ ಬೇಸರ ವ್ಯಕ್ತಪಡಿಸುತ್ತಿದ್ದರು. ['ಬಿಗ್ ಬಾಸ್' ಮನೆಗೆ ಪೂಜಾ ಗಾಂಧಿ ರೀ ಎಂಟ್ರಿ; ಅಯ್ಯಪ್ಪ ಏನಂದ್ರು?]

ಯಾರ ಮೇಲೂ ಇಷ್ಟು ಬೇಸರವಾಗಿಲ್ಲ

''ನನಗೆ ಯಾರ ಮೇಲೂ ಕೂಡ ಇಷ್ಟು ಹರ್ಟ್ ಆಗಿರ್ಲಿಲ್ಲ. ಆಗಿದ್ರೂ, ಅದನ್ನ ಕ್ಲಿಯರ್ ಮಾಡಿಕೊಂಡಿದ್ದೀನಿ. ಆದ್ರೆ ಇದು ನನಗೆ ತುಂಬಾ ಬೇಜಾರಾಗಿದೆ'' - ಚಂದನ್ [ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ]

ಹೆಂಗೆ ಉರೀತು ಗೊತ್ತಾ?

''ನನ್ನ ಮನಸ್ಸಲ್ಲಿರುವ ಕೊಳೆ ತೊಳಿಸಬೇಕು ಅಂತಾರೆ. ಹೆಂಗೆ ಉರೀತು ಗೊತ್ತಾ. 10 ಸ್ಪೆಗೆಟಿ ಇತ್ತು. ಜೊತೆಗೆ ಒಳ ಉಡುಪುಗಳೂ ಇತ್ತು. ಅದೆಲ್ಲಾ ಹಾಕ್ತಾರಾ ಒಂದು ಹೆಣ್ಣಾದವರು'' - ಚಂದನ್

ಮುಖದ ಮೇಲೆ ಎಸ್ದಂಗೆ!

''ಎಲ್ಲಾ ತಗೋತಾಯಿದ್ದೀನಿ ನಾನು ಅಂದ್ಬಿಟ್ಟು ಜಾಸ್ತಿ ಮಾಡೋದಲ್ಲ ಅದನ್ನ. ಬಟ್ಟೆ ಮುಖದ ಮೇಲೆ ಎಸ್ದಂಗೆ ಹಾಕ್ಬುಟ್ಟು. ಅದನ್ನೆಲ್ಲಾ ನಾನು ಮನಸ್ಸಿಗೆ ಹಾಕೊಂಡಿಲ್ಲ'' - ಚಂದನ್

ಸುದೀಪ್ ಕೂಡ ಪ್ರಶ್ನೆ ಕೇಳಿದ್ರು!

ಚಂದನ್ 'ಬಟ್ಟೆ ಒಗೆಯುವ ಟಾಸ್ಕ್' ಬಗ್ಗೆ ಸುದೀಪ್ ಕೂಡ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪ್ರಶ್ನೆ ಕೇಳಿದ್ರು. ''ಬೆಳಗ್ಗೆ ಎದ್ದು ಬೋರ್ ವೆಲ್ ಹೊಡಿಯೋದು. ಧೋಬಿ ಘಾಟ್ ಓಪನ್ ಮಾಡಿದ ಹಾಗಿದೆ. ಎಷ್ಟು ಎಂಜಾಯ್ ಮಾಡಿದ್ರಿ ಅಂತ ಗೊತ್ತಾಗಲಿಲ್ಲ. ಬಟ್ ಬಹಳ ನಗ್ತಾಯಿದ್ರಿ'' ಅಂತ ಚಂದನ್ ಗೆ ಸುದೀಪ್ ಕೇಳಿದ್ರು.

ಚಂದನ್ ಕೊಟ್ಟ ಉತ್ತರ

''ತುಂಬಾ ಎಂಜಾಯ್ ಮಾಡಿದ್ದೀನಿ. ಪೂಜಾ-ಅಯ್ಯಪ್ಪಗೆಲ್ಲಾ ರೇಗಿಸ್ಕೊಂಡು. ಚಿಕ್ಕು-ಚಾರ್ಲಿ ತರಹ ಮಕ್ಕಳು ಹುಟ್ಟಲಿ ಅಂತ. ಮೂರನೇ ದಿನದಿಂದ ಮನಸ್ಸಲ್ಲಿ ನೋವು ಶುರುವಾಯ್ತು. ನಮ್ಮಮ್ಮ ತುಂಬಾ ಕಷ್ಟಪಟ್ಟು ನಮ್ಮ ಸಾಕಿದ್ದಾರೆ. ಎಲ್ಲೋ ಒಂದು ಕಡೆ ಅವರು ನೆನಪಾಗ್ತಿದ್ರು'' - ಚಂದನ್

ಪೂಜಾಗೆ ಸುದೀಪ್ ಪ್ರಶ್ನೆ

''35 ಜೊತೆ ಕೊಡ್ತಾರೆ ನಿಮಗೆ ಪೂಜಾ ಗಾಂಧಿ ಅವರು. ಏನುದ್ದೇಶ ಪೂಜಾ ಅವರೇ ಅಷ್ಟೊಂದು ಬಟ್ಟೆ ಕೊಡುವುದಕ್ಕೆ'' ಅಂತ ಸುದೀಪ್ ಪೂಜಾ ಗಾಂಧಿಗೆ ಕೇಳಿದರು.

ಪೂಜಾ ಕೊಟ್ಟ ಉತ್ತರ

''ಅಷ್ಟು ಬಟ್ಟೆ ಇತ್ತು ತೊಳಿಯೋಕೆ. ಕೊಟ್ಬಿಟ್ಟೆ. ಇವತ್ತು ಏನು ಭಾವನೆ ಬಂದಿದೆ ಅವರಿಗೆ. ಅದು ಬೇಕಿತ್ತು. ಬಟ್ಟೆ ತೊಳಿಯುತ್ತಾ ತೊಳಿಯುತ್ತಾ ಅವರ ಮನಸ್ಸು ತೊಳಿಯಲಿ ಅಂತ ಕೊಟ್ಟೆ. 35 ಬಟ್ಟೆ ಕೊಟ್ಟಿದ್ದು ನನಗೆ ಬೇಜಾರಿಲ್ಲ. ಐ ಆಮ್ ಪ್ರೌಡ್ ಟು ಸೀ ದಟ್ ಹೀ ಈಸ್ ಎಮೋಷನಲ್'' ಅಂತ ಹೇಳಿದ್ರು ಪೂಜಾ ಗಾಂಧಿ

English summary
Kannada Actor Chandan is annoyed with Kannada Actress Pooja Gandhi over washing clothes. Read the article to know what is brewing between Chandan and Pooja Gandhi Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada