»   » ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ

ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ

Posted By:
Subscribe to Filmibeat Kannada

ಮೂರು ವರ್ಷದ ಹಿಂದಿನ ಮಾತು. ಪ್ರೀತಿಸಿ, ಪರಸ್ಪರ ಒಪ್ಪಿಗೆ ಮೇರೆಗೆ ಮನೆಯಲ್ಲಿ ಗುರು-ಹಿರಿಯರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ನಟಿ ಪೂಜಾ ಗಾಂಧಿ ಮತ್ತು ಆನಂದ್ ಗೌಡ ಹೆಚ್ಚು ದಿನ ಒಂದಾಗಿ ಇರ್ಲಿಲ್ಲ.

ಕೆಲವೇ ದಿನಗಳಲ್ಲಿ ದೂರವಾದ ಪೂಜಾ ಗಾಂಧಿ ಮತ್ತು ಆನಂದ್ ಗೌಡ ಅದಕ್ಕೆ ಹತ್ತು-ಹಲವು ಕಾರಣಗಳನ್ನೂ ನೀಡಿದ್ರು. "ನನ್ನ ಕರಿಯ ಅಂತಾರೆ. ನನ್ನ ಬಣ್ಣ ಅವರಿಗೆ ಗೊತ್ತಿರಲಿಲ್ಲವಾ? ಇಡ್ಲಿ ಸಾಂಬಾರ್ ಚಟ್ನಿ ಗಂಧಿ ಪದಾರ್ಥಗಳಂತೆ. ಕನ್ನಡಿಗರು ತಿನ್ನುವ ಇಡ್ಲಿ ಸಾಂಬಾರ್ ಹೊಲಸು ಪದಾರ್ಥಗಳಾ? ಪೂಜಾ ಗಾಂಧಿ ಮದುವೆಯಾದ ಮೇಲೆ ಪೂಜಾ ಗೌಡ ಆಗಬಾರದಂತೆ. ಯಾಕೆ ಗೌಡ ಎಂಬ ಪಂಗಡಕ್ಕೆ ಮಹತ್ವವೇ ಇಲ್ಲವಾ?" ಅಂತೆಲ್ಲಾ ಹೇಳಿ ಆನಂದ್ ಗೌಡ ಅವರು ಪೂಜಾ ಗಾಂಧಿ ಜೊತೆಗಿನ ನಿಶ್ಚಿತಾರ್ಥವನ್ನು ಮುರಿದುಕೊಂಡಿದ್ದರು.[ಪೂಜಾ ಜೊತೆ ಆನಂದ್ ನಿಶ್ಚಿತಾರ್ಥ ಮುರಿದಿದ್ದು ಯಾಕೆ?]

ಆದ್ರೆ, ನಿಶ್ಚಿತಾರ್ಥ ಮುರಿದು ಬೀಳುವುದಕ್ಕೆ ಇದು ಅಸಲಿ ಕಾರಣ ಅಲ್ಲ. ಖುದ್ದು ಆನಂದ್ ಗೌಡ ತಮ್ಮನ್ನ ನಿಂದಿಸಿರುವ ಬಗ್ಗೆ ನಟಿ ಪೂಜಾ ಗಾಂಧಿ 'ಬಿಗ್ ಬಾಸ್' ಮನೆಯಲ್ಲಿ ಬಾಯ್ಬಿಟ್ಟಿದ್ದಾರೆ.[ನಿಂತುಹೋದ ನಿಶ್ಚಿತಾರ್ಥ: ಪೂಜಾ ಗಾಂಧಿ ಹೇಳಿದ್ದೇನು?]

'ಗೆಳೆಯ' ಅಯ್ಯಪ್ಪ ಜೊತೆ ಮಾತಿಗೆ ಕುಳಿತ ಪೂಜಾ ಗಾಂಧಿ ಮೂರು ವರ್ಷಗಳ ಹಿಂದಿನ ಫ್ಲ್ಯಾಶ್ ಬ್ಯಾಕ್ ಗೆ ತೆರಳಿದ್ದರು. ಆನಂದ್ ಗೌಡ ಏನೇನೆಲ್ಲಾ ಮಾಡಿದ್ರು ಅಂತ ಅಯ್ಯಪ್ಪಗೆ ಪೂಜಾ ಗಾಂಧಿ ಹೇಳುತ್ತಿದ್ದರು. ಆನಂದ್ ಗೌಡ ಮತ್ತು ಪೂಜಾ ಗಾಂಧಿ ನಡುವೆ ಆದ ಜಟಾಪಟಿಯನ್ನ ಪೂಜಾ ಗಾಂಧಿ ಮಾತುಗಳಲ್ಲೇ ಓದಿ ಕೆಳಗಿರುವ ಸ್ಲೈಡ್ ಗಳಲ್ಲಿ.....

ನಿಶ್ಚಿತಾರ್ಥ ಆದ ಬಳಿಕ......

''ಅವನ ಫ್ರೆಂಡ್ಸ್ ಅಂದ್ರೆ ಇರಾನಿ-ಇರಾಕಿ. ಎಲ್ಲರ ಮುಂದೆ ಅವಾಚ್ಯ ಶಬ್ಧದಿಂದ ನಿಂದಿಸಿದರು. ಮೊದಲ ಬಾರಿ ನನಗೆ ಶಾಕ್ ಆಯ್ತು. ಬೆಳಗ್ಗೆ ಅಷ್ಟೇ ಎಂಗೇಜ್ ಮೆಂಟ್ ಆಗಿದೆ. ಈಗ ಹೀಗೆ ಮಾತನಾಡುತ್ತಿದ್ದಾರೆ ಅಂತ'' - ಪೂಜಾ ಗಾಂಧಿ[ಮಳೆ ಹುಡುಗಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ.!]

ಬಾತ್ ರೂಮ್ ನಲ್ಲಿ ಅತ್ತಿದ್ದೇನೆ!

''ನನಗೆ ಅದನ್ನ ತಡೆದುಕೊಳ್ಳುವುದಕ್ಕೆ ಆಗ್ಲಿಲ್ಲ. ಬಾತ್ ರೂಮ್ ಗೆ ಹೋಗಿ ಅಳುವುದಕ್ಕೆ ಶುರು ಮಾಡಿದೆ. ನಾನು ತಪ್ಪು ಮಾಡಿಬಿಟ್ನಾ ಅಂತ ಆಗ ನನಗೆ ಆಗ ಅನಿಸೋಕೆ ಶುರುವಾಯ್ತು'' - ಪೂಜಾ ಗಾಂಧಿ[ಬಯಲಾದ ಅಯ್ಯಪ್ಪ ಪ್ರೇಮ ರಹಸ್ಯ ; ಕಣ್ಣೀರಿಟ್ಟ ಪೂಜಾ ಗಾಂಧಿ]

ಪಬ್ಲಿಕ್ ನಲ್ಲಿ ಅವಮಾನ ಮಾಡಿದ್ದಾರೆ!

''ನಂತರ ಪ್ರತಿದಿನ ನನ್ನನ್ನ ಬೈಯ್ತಿದ್ರು. ರೆಸ್ಟೋರೆಂಟ್ ಗೆ ಹೋದರೆ ಕೈಗೆ ಏನೇ ಸಿಕ್ಕಿದರೂ ಬಿಸಾಕೋದು. ಎಷ್ಟೋ ಸಲಿ ನನಗೆ ಪಬ್ಲಿಕ್ ನಲ್ಲಿ ಅವಮಾನ ಮಾಡಿದ್ದಾರೆ'' - ಪೂಜಾ ಗಾಂಧಿ

ಅನುಮಾನ ಜಾಸ್ತಿ

''ನನಗೆ ಯಾರಾದರೂ ಮೆಸೇಜ್ ಮಾಡಿದರೆ 'ಹಾಯ್' ಅಂತ. ''ಓ ಅವರು ಯಾರು? ಅವರ ಜೊತೆ ಏನು?'' ಅಂತ ಅನುಮಾನ ಪಡುವುದಕ್ಕೆ ಶುರುವಾಯ್ತು. ಶೂಟಿಂಗ್ ಮಾಡುವಾಗ ಹೀರೋ ಕೈ ಹಿಡಿದುಕೊಂಡರೆ 'ಅಟ್ರ್ಯಾಕ್ಟ್ ಮಾಡಬೇಕಾ' ಅಂತ ಹೇಳೋದು. ನನ್ನ ಡ್ರೈವರ್ ಜೊತೆ ಕೂಡ ಡೌಟ್ ಪಡುತ್ತಿದ್ದರು'' - ಪೂಜಾ ಗಾಂಧಿ

English summary
Kannada Actress Pooja Gandhi revealed her engagement breakup story with Anand Gowda to Aiyappa in Bigg Boss House. Read the article to know what all happened on Day 43 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada