»   » ಇನ್ನೆರಡು ವಾರ ಮಾಸ್ಟರ್ ಆನಂದ್ ಬಗ್ಗೆ ಯಾರೂ ಕೆಮ್ಮಂಗಿಲ್ಲ!

ಇನ್ನೆರಡು ವಾರ ಮಾಸ್ಟರ್ ಆನಂದ್ ಬಗ್ಗೆ ಯಾರೂ ಕೆಮ್ಮಂಗಿಲ್ಲ!

Posted By:
Subscribe to Filmibeat Kannada

'ಸೇಫ್ ಗೇಮ್ ಆಡುತ್ತಿದ್ದಾರೆ' ಅಂತ ಆರೋಪಗಳಿದ್ದರೂ, ಓವರ್ ಆಕ್ಟಿಂಗ್ ಮಾಡದೆ, ಅಲ್ಲಿಂದ ಇಲ್ಲಿಗೆ, ಇಲ್ಲಿಂದ ಅಲ್ಲಿಗೆ ತಂದಿಟ್ಟು ತಮಾಷೆ ನೋಡದೆ, 'ಬಿಗ್ ಬಾಸ್' ಮನೆ ಆಟವನ್ನ ನಿಯತ್ತಾಗಿ ಆಡುತ್ತಿರುವವರು ಮಾಸ್ಟರ್ ಆನಂದ್!

ನಾಲ್ಕು ವಾರಗಳು ಸೇಫ್ ಆಗಿದ್ದರೂ, ಕಳೆದ ವಾರ ಎಲಿಮಿನೇಷನ್ ಗೆ ನಾಮಿನೇಟ್ ಆಗಿದ್ದ ಮಾಸ್ಟರ್ ಆನಂದ್ ವೀಕ್ಷಕರ ಎಸ್.ಎಂ.ಎಸ್ ಕೃಪೆಯಿಂದ ಬಚಾವ್ ಆದರು.['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

master-anand

ಇಷ್ಟಕ್ಕೆ ಸುಮ್ಮನಾಗದ ಮಾಸ್ಟರ್ ಆನಂದ್ ನಿನ್ನೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ನೀಡಿದ 'ಹ್ಯಾಂಗ್ ಓವರ್' ಟಾಸ್ಕ್ ನಲ್ಲಿ ಉತ್ತಮ ಪರ್ಫಾಮೆನ್ಸ್ ನೀಡಿದರು. ಆದ ಕಾರಣ ಅವರಿಗೆ ಮುಂದಿನ ವಾರದ ನಾಮಿನೇಷನ್ ನಿಂದ ಇಮ್ಯೂನಿಟಿ ಪಡೆಯುವ ಚಾನ್ಸ್ ಸಿಕ್ತು.

'ಹ್ಯಾಂಗ್ ಓವರ್' ಟಾಸ್ಕ್ ನಲ್ಲಿ ಮಾನಸಿಕ ಸ್ಥಿರತೆ ಮತ್ತು ದೈಹಿಕ ಶಕ್ತಿಯನ್ನ ಪ್ರದರ್ಶಿಸಿದ ಮಾಸ್ಟರ್ ಆನಂದ್ ಮುಂದಿನ ವಾರದ ನಾಮಿನೇಷನ್ ನಿಂದ ಸೇಫ್ ಆಗಿದ್ದಾರೆ.

ಅಲ್ಲಿಗೆ, 'ಬಿಗ್ ಬಾಸ್' ಮನೆಯಲ್ಲಿ ಮಾಸ್ಟರ್ ಆನಂದ್ ಬಗ್ಗೆ ಇನ್ನೆರಡು ವಾರ ಯಾರೂ ಕೆಮ್ಮಂಗಿಲ್ಲ!

English summary
Kannada Actor Master Anand won Hang-Over task and became immune in next week Nomination. Read the article to know what all happened on Day 43 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada