»   » ಕುಚ್ಚಿಕ್ಕು ಗೆಳೆಯರು ಅಯ್ಯಪ್ಪ-ಚಂದನ್ ನಡುವೆ ಮನಸ್ತಾಪ

ಕುಚ್ಚಿಕ್ಕು ಗೆಳೆಯರು ಅಯ್ಯಪ್ಪ-ಚಂದನ್ ನಡುವೆ ಮನಸ್ತಾಪ

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಎಂಟ್ರಿಕೊಟ್ಟಾಗಿನಿಂದಲೂ ಕ್ರಿಕೆಟರ್ ಅಯ್ಯಪ್ಪ ಮತ್ತು ನಟ ಚಂದನ್ ಸಖತ್ ಕ್ಲೋಸ್ ಫ್ರೆಂಡ್ಸ್.

ನಾಮಿನೇಷನ್ ವಿಚಾರವಾಗಲಿ, ಪರ್ಸನಲ್ ವಿಚಾರವಾಗಲಿ ಎಲ್ಲವನ್ನೂ ಇಬ್ಬರೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ['ಬಿಗ್ ಬಾಸ್-3' ಕಾರ್ಯಕ್ರಮದ ಎಲ್ಲಾ ತಾಜಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ]

ಆದ್ರೆ, ಈಗ ಪರಿಸ್ಥಿತಿ ಹಾಗಿಲ್ಲ. ಅಯ್ಯಪ್ಪ ವಿರುದ್ಧ ನಟ ಚಂದನ್ ಸಿಡಿದೆದ್ದಿದ್ದಾರೆ. ಅಯ್ಯಪ್ಪ ಮತ್ತು ಚಂದನ್ ನಡುವೆ ಮನಸ್ತಾಪ ಭುಗಿಲೆದ್ದಿದೆ. ಒಂದ್ಕಡೆ ಅಯ್ಯಪ್ಪ ಮೇಲೆ ಚಂದನ್ ಚಾಡಿ ಹೇಳಿದ್ರೆ, ಇನ್ನೊಂದ್ಕಡೆ ಚಂದನ್ ಬಗ್ಗೆ ಅಯ್ಯಪ್ಪ ಬೇಸರ ವ್ಯಕ್ತಪಡಿಸುತ್ತಾರೆ.

ಇಬ್ಬರ ಭಿನ್ನಾಭಿಪ್ರಾಯ ನಿನ್ನೆ 'ಕಳ್ಳ-ಪೊಲೀಸ್' ಟಾಸ್ಕ್ ನಲ್ಲೂ ಮುಂದುವರಿಯಿತು. ಪೊಲೀಸ್ ಆಗಿದ್ದ ಅಯ್ಯಪ್ಪರನ್ನ ಚಂದನ್ ಲೇವಡಿ ಮಾಡುತ್ತಿದ್ದರು. ಮುಂದೆ ಓದಿ.....

ಕಳ್ಳ ಚಂದನ್ - ಪೊಲೀಸ್ ಅಯ್ಯಪ್ಪ

'ಬಿಗ್ ಬಾಸ್' ನೀಡಿದ್ದ 'ಕಳ್ಳ-ಪೊಲೀಸ್' ಟಾಸ್ಕ್ ನಲ್ಲಿ ಚಂದನ್ ಕಳ್ಳ ಆಗಿದ್ದರೆ, ಅಯ್ಯಪ್ಪ ಪೊಲೀಸ್ ಆಗಿದ್ದರು. ಪೊಲೀಸ್ ಅಯ್ಯಪ್ಪ ಕುರಿತು ಚಂದನ್ ಕಾಮೆಂಟ್ ಪಾಸ್ ಮಾಡಲು ಶುರುಮಾಡಿದರು. [ಕಳ್ಳ ಚಂದನ್ - ಪೊಲೀಸ್ ರೆಹಮಾನ್ ನಡುವೆ 'ಬಿಗ್' ಕಿರಿಕ್]

ಚಂದನ್ ಹೇಳಿದ್ದೇನು?

''ಐಪಿಎಸ್ - ಇಂಡಿಯನ್ ಪೊಲೀಸ್ ಸರ್ವೀಸ್. ಟ್ರೇನ್ಡ್ ಇನ್ ಡೆಹ್ರಾಡೂನ್.ಅಂತಹ ಪೊಲೀಸ್ ಬೇಕು ನಮಗೆ. ಇಲ್ಲಿ ಯಾರೋ ಮೂರು ಸ್ಟಾರ್ ಹಾಕೊಂಡು ನಿಂತವ್ರೆ, ಅವರ ಹಿಂದೆ ಯಾರೋ 320 ಮತ್ತು ಇನ್ನೊಬ್ಬ 520 ಅಂತೆ. ಆವ್ರೇಜ್ ನೋಡಿ 420'' - ಚಂದನ್

ಆಯ್ಯಪ್ಪ ತಿರುಗೇಟು

''ಯಾರು 420 ಅಂತ ಗೊತ್ತಾಗುತ್ತೆ. ಮಾತಾಡು ಮಾತಾಡು. ನಿನ್ನ ಕಾಲ ಈಗ'' - ಅಯ್ಯಪ್ಪ

ಚಂದನ್ ಗೆ ಬೇಸರವಾಗಿದ್ದೇನು?

''ತಪ್ಪಿಲ್ಲದೇ ಹೋದರೂ ಕರ್ಕೊಂಡು ಹೋದರು. ಸುಮ್ನೆ ಕೂತಿದ್ದೆ ನಾನು. ಒಂದ್ನಿಮಿಷ ಬನ್ನಿ ಅಂತ ಫುಲ್ ಮರ್ಯಾದೆ ಕೊಟ್ಬಿಟ್ಟು ಆಮೇಲೆ ಹೋಗೋಲೇ ಒಳಗೆ ಅಂತ ತಳ್ತಾರೆ. ನಿಮಗೆ ಬೇಜಾರಾಗಲ್ವಾ ಹೀಗೆ ಮಾಡಿದರೆ'' - ಚಂದನ್

ಪೊಲೀಸ್ ಹೇಗಿರಬೇಕು?

''ಚಿನ್ನ...ಎಷ್ಟು ಪೊಲೀಸ್ ಪಿಕ್ಚರ್ ನೋಡಿದ್ದೀಯಾ. ಯಾರಾದರೂ ಪೊಲೀಸ್ ಗಡ್ಡ ಬಿಟ್ಟವ್ನಾ. ಪೊಲೀಸ್ ರೂಲ್ ನಲ್ಲೇ ಇಲ್ಲ ಗಡ್ಡ ಬಿಡುವುದು'' - ಚಂದನ್

ರೂಲ್ ಬಗ್ಗೆ ಮಾತಾಡಬೇಡ!

''ರೂಲ್ ಬಗ್ಗೆ ನೀನು ಹೇಳ್ಬೇಡ. ರೂಲ್ ಬ್ರೇಕ್ ಮಾಡಿರುವವರು ತುಂಬ ಜನ ಇದ್ದಾರೆ. ನಾವು ಮಾತಾಡೋಕೆ ಸ್ಟಾರ್ಟ್ ಮಾಡಿದ್ರೆ ನೀನು ನಿಲ್ಲಲ್ಲ. ನಿನಗೆ ಅಧಿಕಾರ ಇಲ್ಲ ಪೊಲೀಸ್ ಬಗ್ಗೆ ಮಾತನಾಡೋಕೆ. ನೀನೇ ಒಬ್ಬ ಕಳ್ಳ'' - ಅಯ್ಯಪ್ಪ

ಸ್ನೇಹಿತರ ನಡುವೆ ಮನಸ್ತಾಪ ಶುರುವಾಗಿದ್ದು ಹೇಗೆ?

ಅಯ್ಯಪ್ಪ ಕ್ಯಾಪ್ಟನ್ ಆದ್ಮೇಲೆ ಮತ್ತು ಸೀಕ್ರೆಟ್ ರೂಮ್ ನಿಂದ ಪೂಜಾ ಗಾಂಧಿ ವಾಪಸ್ ಬಂದ್ಮೇಲಿಂದ ಅಯ್ಯಪ್ಪ ಮತ್ತು ಚಂದನ್ ನಡುವೆ ಮನಸ್ತಾಪ ಭುಗಿಲೆದ್ದಿದೆ. ['ಬಿಗ್ ಬಾಸ್' ಮನೆಯಲ್ಲಿ ಚಂದನ್-ಪೂಜಾ ಗಾಂಧಿ ನಡುವೆ ಶೀತಲ ಸಮರ]

ಪೂಜಾ ಗಾಂಧಿಗೆ ಸಪೋರ್ಟ್ ಮಾಡುವುದು ಇಷ್ಟವಿಲ್ಲ!

ಬಟ್ಟೆ ಒಗೆಯುವ ವಿಚಾರಕ್ಕೆ ಪೂಜಾ ಗಾಂಧಿಯನ್ನ ಅಯ್ಯಪ್ಪ ಸಪೋರ್ಟ್ ಮಾಡಿದ್ದು ಚಂದನ್ ಗೆ ಹಿಡಿಸಲಿಲ್ಲ. ''ನೀನು ಅವಳಿಗೆ ಸಪೋರ್ಟ್ ಮಾಡೋ ಹಾಗಿದ್ರೆ ಅಲ್ಲೇ ಇರು. ನಮ್ಮ ಫ್ರೆಂಡ್ ಶಿಪ್ ಕಟ್ ಗುರು'' ಎಂದಿದ್ದರು ಚಂದನ್. ['ಬಿಗ್ ಬಾಸ್' ಮನೆಯಲ್ಲಿ ಕಣ್ಣೀರಿಟ್ಟ ಅಯ್ಯಪ್ಪ-ಆನಂದ್]

English summary
Misunderstanding creeps in between Kannada Actor Chandan and Aiyappa. Read the article to know what has happened between Chandan and Aiyappa in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada