»   » ಅಯ್ಯಪ್ಪ ಕಾಮುಕ ವ್ಯಾಘ್ರ! ನಟ ಚಂದನ್ ಆರೋಪ!

ಅಯ್ಯಪ್ಪ ಕಾಮುಕ ವ್ಯಾಘ್ರ! ನಟ ಚಂದನ್ ಆರೋಪ!

Posted By:
Subscribe to Filmibeat Kannada

ದಿನದಿಂದ ದಿನಕ್ಕೆ 'ಬಿಗ್ ಬಾಸ್' ಮನೆಯಲ್ಲಿ ಗದ್ದಲ-ಗಲಾಟೆ ಜಾಸ್ತಿಯಾಗುತ್ತಿದೆ. 'ಕಳ್ಳ-ಪೊಲೀಸ್' ಟಾಸ್ಕ್ ಶುರುವಾದಾಗಿನಿಂದಲೂ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಜಗಳದ್ದೇ ಸೌಂಡು.

ಮೊದಲು ರೆಹಮಾನ್ ಮತ್ತು ಚಂದನ್ ನಡುವೆ ಮಾತಿನ ಚಕಮಕಿ ಉಂಟಾಯ್ತು. ಮಿತ್ರ ಮತ್ತು ಗೌತಮಿ ಕಿತ್ತಾಡಿಕೊಂಡರು. ನಟಿ ಶ್ರುತಿ ಮತ್ತು ಕೃತಿಕಾ ನಡುವೆ ವಾಗ್ವಾದ ಕೂಡ ನಡೆಯಿತು. [ಅಮ್ಮ ಶ್ರುತಿ-ಮಗಳು ಕೃತಿಕಾ ನಡುವೆ ಮಾತಿನ ಸಮರ]

ಈಗ ಕಾನ್ಸ್ ಟೇಬಲ್ ಅಯ್ಯಪ್ಪ ಮತ್ತು ಕಳ್ಳ ಚಂದನ್ ಸರದಿ. ಕ್ಯಾಪ್ಟನ್ ಆದಾಗಿನಿಂದಲೂ ಕುಚ್ಚಿಕ್ಕು ಗೆಳೆಯರು ಚಂದನ್ ಮತ್ತು ಅಯ್ಯಪ್ಪ ನಡುವೆ ಎಲ್ಲವೂ ಸರಿಯಿಲ್ಲ. [ಕುಚ್ಚಿಕ್ಕು ಗೆಳೆಯರು ಅಯ್ಯಪ್ಪ-ಚಂದನ್ ನಡುವೆ ಮನಸ್ತಾಪ]

ಇಬ್ಬರ ಮನಸ್ತಾಪ ನಿನ್ನೆ ಜಗಜ್ಜಾಹೀರಾಯ್ತು. ''ಅಯ್ಯಪ್ಪ ಕಾಮುಕ ವ್ಯಾಘ್ರ'' ಎಂದು ಚಂದನ್ ಗಂಭೀರ ಆರೋಪ ಮಾಡಿದರು. ಮುಂದೆ ಓದಿ.....

ಮೊದಲು ಕೃತಿಕಾ ಸಿಕ್ಕಿಬಿದ್ದರು!

ಪ್ಲೇಟ್ ಕದಿಯುವುದಕ್ಕೆ ಹೋಗಿ ಕೃತಿಕಾ, ಕಾನ್ಸ್ ಟೇಬಲ್ ಅಯ್ಯಪ್ಪ ಕೈಯಲ್ಲಿ ಸಿಕ್ಕಿಬಿದ್ದರು. ಕದ್ದ ತಪ್ಪಿಗೆ ಶಿಕ್ಷೆ ಅನುಭವಿಸಬೇಕು ಎಂಬ ವಿಚಾರವಾಗಿ ಇನ್ಸ್ ಪೆಕ್ಟರ್ ಗೌತಮಿ ಮತ್ತು ಕೃತಿಕಾ ನಡುವೆ ಮಾತಿನ ಚಕಮಕಿ ನಡೆಯಿತು. ['ಕಳ್ಳ-ಪೊಲೀಸ್' ಆಟ; 'ಬಿಗ್ ಬಾಸ್' ಮನೆಯಲ್ಲಿ ಗದ್ದಲ ನಿಲ್ಲಂಗಿಲ್ಲ!]

ಕೃತಿಕಾಗೆ ಶಿಕ್ಷೆ

ಹಗ್ಗ ಹಿಡಿದು ನಿಲ್ಲಬೇಕು ಅಂತ ಗೌತಮಿ, ಕೃತಿಕಾಗೆ ಶಿಕ್ಷೆ ನೀಡಿದರು. ಕೃತಿಕಾರನ್ನ ಹತ್ತಿಸುವಾಗ ಅವರನ್ನ ಅಯ್ಯಪ್ಪ ಮುಟ್ಟಿದ್ದಕ್ಕೆ ಚಂದನ್ ಆರೋಪ ಮಾಡಲು ಶುರುಮಾಡಿದರು. [ಕಳ್ಳ ಚಂದನ್ - ಪೊಲೀಸ್ ರೆಹಮಾನ್ ನಡುವೆ 'ಬಿಗ್' ಕಿರಿಕ್]

ಸೊಂಟದ ವಿಷ್ಯ....

ಅಯ್ಯಪ್ಪ ಕೃತಿಕಾ ಸೊಂಟ ಹಿಡಿದು ಹತ್ತಿಸಿದ್ದಕ್ಕೆ ನೇತ್ರ, ''ಲೇಡಿ ಕಾನ್ಸ್ ಟೇಬಲ್ ಕೊಡ್ರಿ ನೀವು'' ಅಂದರು. ಅದಕ್ಕೆ ಸೊಪ್ಪು ಹಾಕಿದ ಚಂದನ್, ''ಹಂಗೆಲ್ಲಾ ಮ್ಯಾನ್ ಹ್ಯಾಂಡಲಿಂಗ್ ಮಾಡಬಾರದು. ಮುಟ್ಟಬೇಡ್ರಿ. ಅಯ್ಯಯ್ಯೋ ಅನ್ಯಾಯ...'' ಅಂತ ಕೂಗುವುದಕ್ಕೆ ಶುರುಮಾಡಿದರು. ['ಬಿಗ್ ಬಾಸ್' ಮನೆಯಲ್ಲಿ ಚಂದನ್-ಪೂಜಾ ಗಾಂಧಿ ನಡುವೆ ಶೀತಲ ಸಮರ]

ಚಂದನ್ ಮಾಡಿದ ಗಂಭೀರ ಆರೋಪ!

''ಕಾಮುಕ ವ್ಯಾಘ್ರ. ಹೆಣ್ಮಕ್ಕಳ ಸೊಂಟಕ್ಕೆಲ್ಲಾ ಕೈಹಾಕ್ತಾನೆ. ಕಾಮುಕ ಪಿ.ಸಿನ ಇಟ್ಕೊಂಡಿದ್ದೀರಲ್ಲ'' ಅಂತ ಚಂದನ್ ಆರೋಪ ಮಾಡಿದರು.

ಗೌತಮಿ-ಚಂದನ್ ನಡುವೆ ವಾಗ್ವಾದ

ಗೌತಮಿ - ''ಸುಳ್ಳು ಹೇಳ್ಕೊಂಡು ಓಡಾಡೋರು, ಮಾನ ಮರ್ಯಾದೆ ಇಲ್ದೇ ಇರೋರು ಬಂದ್ಬಿಟ್ಟು ಏನು ಹೇಳೋದು. ಅವಳೇನು ನಿನ್ನ ಅತ್ತೆ ಮಗಳಾ..''

ಚಂದನ್ - ''ಹೌದು ಅತ್ತೆ ಮಗಳೇ ಏನೀಗಾ. ರಿಲೀಸ್ ಮಾಡ್ರಿ ಕರ್ಕೊಂಡು ಹೋಗ್ತೀನಿ. ಅದು ಬಿಟ್ಟು ಸೊಂಟಕ್ಕೆ ಯಾಕೆ ಕೈ ಹಾಕ್ಬೇಕು''

ಅವಾಚ್ಯ ಶಬ್ದಗಳು ಶುರುವಾಯ್ತು!

ರೊಚ್ಚಿಗೆದ್ದು ಅಯ್ಯಪ್ಪ ಅವಾಚ್ಯ ಶಬ್ದಗಳನ್ನ ಬಳಸುವುದಕ್ಕೆ ಶುರುಮಾಡಿದರು. ಅಯ್ಯಪ್ಪ - ''ನಾಲಿಗೆ ಬಿಗಿ ಹಿಡಿದು ಮಾತಾಡು. ಏನ್ ಮಾತಾಡ್ತಾಯಿದ್ದೀಯಾ''

ಚಂದನ್ - ''ಏನು ಮುಟ್ಟಿದೆ ನೀನು. ನಾನು ನೋಡಿದ್ದನ್ನೇ ಮಾತಾಡ್ತಾಯಿರೋದು.''

ಅಯ್ಯಪ್ಪ - ''ಲೇಡಿ ಕಾನ್ಸ್ ಟೇಬಲ್ ಇಲ್ಲ. ಕೊಟ್ಟಿಲ್ಲ. ಏನ್ ಮಾಡೋದು.''

ಚಂದನ್ - ''ಅಲ್ಲಿ ಪೊಲೀಸೇ ಇಲ್ವಾ''

ವೈಯುಕ್ತಿಕ ಆರೋಪ ಆರಂಭ

ಅಯ್ಯಪ್ಪ - ''ನಿನ್ನ ಕ್ಯಾರೆಕ್ಟರ್ ಏನು ಅಂತ ನನಗೂ ಗೊತ್ತು.''

ಚಂದನ್ - ''ನಾವು ಸೀರಿಯಸ್ ಆದರೆ ಯಾವ ಜೈಲು ಇರಲ್ಲ, ಸ್ಟೇಷನ್ ಇರಲ್ಲ ಯಾವ ಸ್ವಾಮಿಗಳು ಇರಲ್ಲಾ. ಸೀರಿಯಸ್ ಆಗಿ ತಗೊಂಡ್ರೆ ಮುಖ ಮೂತಿ ಏನೂ ನೋಡಲ್ಲ.''

ಅಯ್ಯಪ್ಪ - ''ಏನು ಮುಖ ಮೂತಿ. ನೋಡೋಣ ಬಾರೋ.''

ಚಂದನ್ - ''ಬಾ ಮುಟ್ಟು ಬಾ''

ಅಯ್ಯಪ್ಪ - ''ನನ್ನ ಕ್ಯಾರೆಕ್ಟರ್ ಬಗ್ಗೆ ಮಾತಾಡಬೇಡ ನೀನು''

ರೆಹಮಾನ್ ಬೇಸರ

''ಟಾಸ್ಕ್ ನಿಂದ ಹೊರಗೆ ಮಾತಾಡ್ತಾರೆ. ಅದು ಸೀರಿಯಸ್ಸಾಗಿ ನನಗೆ ಇಷ್ಟ ಆಗಲ್ಲ. ಬಾಯಿಗೆ ಬಂದ ಹಾಗೆ ಮಾತನಾಡುತ್ತಾನೆ ಚಂದನ್. ಇನ್ನೊಬ್ಬರ ಕ್ಯಾರೆಕ್ಟರ್ ಬಗ್ಗೆ ಮಾತನಾಡುವಾಗ ನಮ್ಮ ಕ್ಯಾರೆಕ್ಟರ್ ಏನು ಅಂತ ತೋರಿಸುತ್ತೆ ರೀ. ಅರ್ಥ ಮಾಡಿಕೊಳ್ಳಬೇಕು ರೀ. ತಮಾಷೆಗೆ ಹೇಳ್ತಿದ್ದೀನಿ ಅಂತ ಹೇಳ್ಕೊಂಡು ಏನ್ ಬೇಕಾದ್ರೂ ಹೇಳ್ಬಹುದಾ ತಮಾಷೆಗೆ'' ಅಂತ ರೆಹಮಾನ್ ಬೇಸರ ವ್ಯಕ್ತಪಡಿಸುತ್ತಿದ್ದರು.

ಚಂದನ್ ಸಮರ್ಥನೆ ಏನು?

ಚಂದನ್ - ''ನಾನು ಅಲ್ಲಿ ಕಾಮಿಡಿ ಮಾಡೋಕೆ ಅಂತಾನೇ ಹೋಗಿದ್ದು.''

ನೇತ್ರ - ''ಕಾಮುಕ, ಕಾಮುಕ ವ್ಯಾಘ್ರ ಅಂತೆಲ್ಲಾ ಹೇಳಬಾರದಿತ್ತು. ಅದು ಅವರ EGO ಗೆ ಹರ್ಟ್ ಆಯ್ತು''

ಚಂದನ್ - ''ನಾನು ಕಾನ್ಸ್ ಟೇಬಲ್ ಗೆ ಬೈಯ್ತಿದದ್ದು. ಅಯ್ಯಪ್ಪಗೆ ಬೈದ್ನಾ''

ಅಯ್ಯಪ್ಪ ಹೈಲೈಟ್ ಗೆ ಚಂದನ್ ಕಾರಣ!

ಚಂದನ್ - ''ಅವನದ್ದು-ಪೂಜಾದು ಕನ್ಟೆಂಟ್ ಕೊಡಿಸಿದೋನೇ ನಾನು. ಅವನದ್ದು ಟ್ರ್ಯಾಕ್ ನೋಡಿ. ಏಳು ವಾರದಲ್ಲಿ ಏನಿದೆ. ಪೂಜಾದು ದುಬೈ ಸ್ಟೋರಿ ಎತ್ತಿದ್ದೆಲ್ಲಾ ನಾನೇ. ಎಲ್ಲಾ ಕೆದಕಿ ಕೆದಕಿ ಬೇಕು ನನಗೆ ಒಳ್ಳೆ ಮ್ಯಾಟರ್ ಅಂತ ಕೆದಕಿದ್ದು ನಾನೇ.''

ಪೂಜಾ ಗಾಂಧಿ ಕಾಮೆಂಟ್

ಅಯ್ಯಪ್ಪ ಬಗ್ಗೆ ಚಂದನ್ ಆರೋಪ ಮಾಡಿದ್ದು ನಟಿ ಪೂಜಾ ಗಾಂಧಿಗೆ ಬೇಸರವಾಯ್ತು. ''ಅವನು ಇಷ್ಟ ಬಂದಹಾಗೆ ಬಾಯಿ ಮಾಡ್ತಾನೆ. ನಾವೇನೂ ಜೋಕರ್ಸ್ ಅಲ್ಲ. ನಾನು ಬಟ್ಟೆ ಒಗೆಯುವ ಟಾಸ್ಕ್ ಕೊಟ್ಟಿದ್ದು ಸರಿಯಾಗಿತ್ತು. ಐ ಡೋಂಟ್ ರಿಗ್ರೆಟ್.'' ಅಂತಿದ್ದರು ಪೂಜಾ ಗಾಂಧಿ

ಸ್ನೇಹಕ್ಕೆ ಬೆಲೆ ಇಲ್ಲ

ಗೌತಮಿ - ''ಕೃತಿಕಾನ ಹತ್ತಿಸ್ಬೇಕಿತ್ತು. ಆಗ ಲಿಫ್ಟ್ ಮಾಡಬೇಕಿತ್ತು. ಅಷ್ಟಕ್ಕೆ ಲೇಡಿ ಕಾನ್ಸ್ ಟೇಬಲ್ ಇಲ್ಲ. ಕಾಮುಕ ಅಂತೆಲ್ಲಾ ಶುರುಮಾಡಿದರು.''

ಪೂಜಾ ಗಾಂಧಿ - ''ಅದು ರಾಂಗ್ ಅಲ್ವಾ. ಫ್ರೆಂಡ್ ಶಿಪ್ ಎಲ್ಲಾ ಕಳೆದುಹೋಯ್ತಾ. ಮೊದಲು ಆನಂದ್ ಜೊತೆ ಫ್ರೆಂಡ್ ಶಿಪ್ ಇತ್ತು. ಏನಾಯ್ತು. ಅಯ್ಯಪ್ಪ ಜೊತೆ ಫ್ರೆಂಡ್ ಶಿಪ್ ಇತ್ತು. ಈಗ ಏನಾಗ್ತಿದೆ.''

ಚಂದನ್ ಮನಸ್ಸಲ್ಲಿ ಏನಿದೆ?

ಅಯ್ಯಪ್ಪ - ''ಅವನ main agenda ಅಂದ್ರೆ ಅವನು ಹೊಡೆಸಿಕೊಳ್ಳಬೇಕು ಯಾರಿಂದನಾದರೂ. ಆಗ ಅವನು ಹೀರೋ ಆಗ್ತಾನೆ.''

English summary
Kannada Actor Chandan and Aiyappa had a heated argument during 'Kalla-Police' task. Read the article to know what all happened between Chandan and Aiyappa in Bigg Boss Kannada 3 on Day 46.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada