For Quick Alerts
  ALLOW NOTIFICATIONS  
  For Daily Alerts

  'ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!

  By Harshitha
  |

  'ಬಿಗ್ ಬಾಸ್' ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕಳೆದ ವಾರವಷ್ಟೆ ಮಿತ್ರ ಮತ್ತು ಗೌತಮಿ 'ಅತಿಥಿ'ಗಳ ರೂಪದಲ್ಲಿ 'ಬಿಗ್ ಬಾಸ್-3' ಕಾರ್ಯಕ್ರಮಕ್ಕೆ ಲಗ್ಗೆ ಇಟ್ಟಿದ್ದರು.

  ಈ ವಾರ 'ಬಿಗ್' ಸರ್ ಪ್ರೈಸ್ ಆಗಿ ಸುಷ್ಮಾ ವೀರ್ ಎಂಟ್ರಿಕೊಟ್ಟಿದ್ದಾರೆ. ರಂಗಭೂಮಿ ದಿಗ್ಗಜ ಗುಬ್ಬಿ ವೀರಣ್ಣ ಮೊಮ್ಮಗಳು, ಗಾಯಕಿ ಬಿ.ಜಯಶ್ರೀ ಪುತ್ರಿಯಾಗಿರುವ ಸುಷ್ಮಾ ವೀರ್ ಸ್ಪರ್ಧಿಯಾಗಿ ಬಂದಿರುವುದು 'ಬಿಗ್ ಬಾಸ್' ಮನೆಯ ಹಲವು ಸದಸ್ಯರಿಗೆ 'ಕಷ್ಟಕಷ್ಟ' ಎನ್ನುವಂತಾಗಿದೆ.

  ಹೇಳಿ ಕೇಳಿ ಸುಷ್ಮಾ ವೀರ್, ತಮ್ಮ ನೇರ ನುಡಿಗೆ ಹೆಸರುವಾಸಿ. ತಂಟೆಗೆ ಬಂದ್ರೆ ತರಾಟೆಗೆ ತೆಗೆದುಕೊಳ್ಳುವ ಜಾಯಮಾನ ಅವರದ್ದು. ಇಂತಹ 'ಜೋರು' ಸ್ಪರ್ಧಿ 'ಬಿಗ್ ಬಾಸ್' ಮನೆಗೆ ಬಂದಿರುವುದರಿಂದ ಹಲವರು ತುಟಿ ಕಚ್ಚಿಕೊಳ್ಳುವ ಹಾಗಾಗಿದೆ. [ಕಿಚ್ಚನ ಅರಮನೆಗೆ ವೈಲ್ಡ್ ಕಾರ್ಡ್ ಎಂಟ್ರಿ ಕೊಟ್ಟ ನಟಿ ಸುಷ್ಮಾ]

  ಆಗಲೇ, ''ನಟಿ ಶ್ರುತಿ ಹುಷಾರ್ ಆಗಿ ಆಡ್ತಿದ್ದಾರೆ'' ಅಂತ ಸುಷ್ಮಾ ಹೇಳಿದ್ದೇ ತಡ. ನಟಿ ಶ್ರುತಿ, ಸುಷ್ಮಾ ಬಗ್ಗೆ ಕಾಮೆಂಟ್ ಮಾಡುವುದಕ್ಕೆ ಶುರುಮಾಡಿದರು. ಮುಂದೆ ಓದಿ.....

  ಸುಷ್ಮಾ ವೀರ್ ಸರ್ ಪ್ರೈಸ್ ಎಂಟ್ರಿ

  ಸುಷ್ಮಾ ವೀರ್ ಸರ್ ಪ್ರೈಸ್ ಎಂಟ್ರಿ

  Luxury Budget ಅಂತ ಅಯ್ಯಪ್ಪ ಸ್ಟೋರ್ ರೂಮ್ ಒಳಗೆ ಹೋಗ್ತಿದ್ದಂತೆ 'ಬಿಗ್ ಬಾಸ್' ಮನೆಗೆ ಸರ್ ಪ್ರೈಸ್ ಆಗಿ ಎಂಟ್ರಿಕೊಟ್ಟವರು ನಟಿ ಸುಷ್ಮಾ ವೀರ್.

  'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ಸುಷ್ಮಾ ಹೇಳಿದ್ದೇನು?

  'ಬಿಗ್ ಬಾಸ್' ಸ್ಪರ್ಧಿಗಳ ಬಗ್ಗೆ ಸುಷ್ಮಾ ಹೇಳಿದ್ದೇನು?

  ''ಎಲ್ಲರೂ ಕಾನ್ಶಿಯಸ್ ಆಗಿದ್ದೀರಾ. ಕಾನ್ಶಿಯಸ್ ಆಗಿದ್ರೆ ಎಲ್ಲರೂ ಪ್ರೆಶರ್ ತಗೊತೀರಾ. ಬಿಟ್ಬಿಡಿ. ಎಲ್ಲರೂ ತಪ್ಪು ಮಾಡ್ತಾರೆ. ತಪ್ಪು ಮಾಡಿದರೆ ತಿದ್ಕೊಂಡು ಆಚೆ ಹೋಗ್ಬೇಕು. ಎಲ್ಲಾ ಟೈಮ್ ನಲ್ಲೂ ಕಾನ್ಶಿಯಸ್ ಆಗಿದ್ರೆ ಅದಿಕ್ಯಾಕೆ ಇಲ್ಲಿಗೆ ಬರ್ಬೇಕು'' ಅಂತ 'ಬಿಗ್ ಬಾಸ್' ಮನೆ ಸ್ಪರ್ಧಿಗಳಿಗೆ ಸುಷ್ಮಾ ಹೇಳಿದರು.

  ಸುಷ್ಮಾ ವೀರ್ ಬಗ್ಗೆ ಶ್ರುತಿ ಕಾಮೆಂಟ್!

  ಸುಷ್ಮಾ ವೀರ್ ಬಗ್ಗೆ ಶ್ರುತಿ ಕಾಮೆಂಟ್!

  ''ಅವರು ತುಂಬಾ ಜೋರು. ಕುಟ್ಟುಬಿಡ್ತಾಳೆ. ಸಖತ್ ಸ್ಟ್ರೇಟ್ ಫಾರ್ವಡ್. ಭಯಂಕರ. ಯಾವನಿಗೂ ಕೇರ್ ಮಾಡಲ್ಲ. ಲೈವ್ ನಲ್ಲಿ ಕೂತರೂ ಹಾಗೆ. ಬೈಬೇಕು ಅಂದ್ರೆ ಬೈತಾಳೆ. ತುಂಬಾ ತಿಳ್ಕೊಂಡಿದ್ದಾಳೆ. ಹತ್ತು ಮಾಳವಿಕಾ ಸೇರಿದ್ರೆ ಒಂದು ಸುಷ್ಮಾ'' - ಶ್ರುತಿ

  ಶ್ರುತಿಗೆ ಸುಷ್ಮಾ ಪಾಠ

  ಶ್ರುತಿಗೆ ಸುಷ್ಮಾ ಪಾಠ

  ''ತುಂಬಾ ಯೋಚನೆ ಮಾಡಿ ಮಾಡೋದಕ್ಕೆ ಹೋಗ್ಬೇಡ. ತಲೆ ಕೆಡಿಸಿಕೊಳ್ಳಬೇಡ. ತುಂಬಾ ಹುಷಾರ್ ಹುಷಾರ್ ಆಗಿ ಆಡ್ತಿದ್ದೀಯಾ. ನೀನು ಅಂತ ಅನಿಸ್ತಾನೇ ಇಲ್ಲ ಪುಟ್ಟಿ. ಟ್ರ್ಯಾಕ್ ಕರೆಕ್ಟ್ ಆಗಿದ್ದೀಯಾ. ಎಲ್ಲೋ ಒಂಥರಾ ಪರ್ಸನಲ್ ಆಗಿ ಕನೆಕ್ಟ್ ಆಗೋಕೆ ಆಗಲ್ಲ. ಅನ್ಸಿದ್ದನ್ನ ಹೇಳು. ಮುದ್ದಾಗಿ ಮಾತಾಡೋಕೆ ಹೋಗ್ಬೇಡ.'' ಅಂತ ನಟಿ ಶ್ರುತಿಗೆ ಸುಷ್ಮಾ ಹೇಳಿದರು.

  ಶ್ರುತಿ ಸಮರ್ಥನೆ

  ಶ್ರುತಿ ಸಮರ್ಥನೆ

  ''ನೀವು ನನ್ನ ನೋಡೇ ಇಲ್ಲ ಅಕ್ಕ'' ಅಂತ ಸುಷ್ಮಾ ಮಾತಿಗೆ ಶ್ರುತಿ ಸಮರ್ಥನೆ ಕೊಟ್ಟರು.

  ಸುಷ್ಮಾ ವೀರ್ ಪಂಚ್

  ಸುಷ್ಮಾ ವೀರ್ ಪಂಚ್

  ''ಅತಿ ವಿನಯಂ ಧೂರ್ತ ಲಕ್ಷಣಂ ಆಗ್ಬಾರ್ದು ಅಂತ ಹೇಳ್ತಿರೋದು ಅಷ್ಟೆ'' ಅಂತ ಶ್ರುತಿಗೆ ಸುಷ್ಮಾ ವೀರ್ ಹೇಳಿದರು

  ಸಂಬಂಧಿಗಳಾದರೂ ಭೇಟಿ ಮಾಡಿಲ್ಲ

  ಸಂಬಂಧಿಗಳಾದರೂ ಭೇಟಿ ಮಾಡಿಲ್ಲ

  ''ನನಗೆ ಅವರು ರಿಲೇಟಿವ್. ಅತ್ತೆ ಮಗಳು. ಮೂವತ್ತು ವರ್ಷದಲ್ಲಿ ಮೂರು ಬಾರಿ ಭೇಟಿ ಆಗಿರ್ಬಹುದು. ಒಟ್ಟಿಗೆ ಕೂತು ಊಟ ಕೂಡ ಮಾಡಿಲ್ಲ ನಾವು. ತುಂಬಾ ಪರಿಚಯ ಇರೋರ್ ತರಹ ಮಾತನಾಡುತ್ತಾಳೆ.'' ಅಂತ ಶ್ರುತಿ, ನೇತ್ರ ಮತ್ತು ಭಾವನಾ ಬಳಿ ಹೇಳ್ತಿದ್ರು.

  ಎಷ್ಟು ದಿನ ಸೇಫ್ ಆಗಿರೋಕೆ ಸಾಧ್ಯ?

  ಎಷ್ಟು ದಿನ ಸೇಫ್ ಆಗಿರೋಕೆ ಸಾಧ್ಯ?

  ''ಎಷ್ಟು ದಿನ ಅಂತ ಸೇಫ್ ಆಗಿ ಆಟವಾಡುತ್ತೀರಾ. ಹೊರಗಡೆ ಹೋದ್ಮೇಲೆ ಡವ್ ರಾಜಾ, ಡವ್ ರಾಣಿ ಅಂತ ಯಾಕೆ ಅನಿಸಿಕೊಳ್ತೀರಾ?'' - ಸುಷ್ಮಾ ವೀರ್ [ಡವ್ ರಾಣಿ ಕೃತಿಕಾ-ಶ್ರುತಿಗೆ ವೋಟ್ ಮಾಡ್ಬೇಡಿ ಪ್ಲೀಸ್!]

  ಖರಾಬ್ ದೆವ್ವ!

  ಖರಾಬ್ ದೆವ್ವ!

  ''ಅವಳನ್ನ ಅಮ್ಮ ಮಾಡಿದ್ದೀರಾ. ನನ್ನ ಅಕ್ಕ, ಅಜ್ಜಿ, ದೊಡ್ಡಮ್ಮ ಅಂತ ಮಾಡಿದ್ರೆ ಸರಿಯಿರಲ್ಲ. ನಾನೊಂಥರಾ ಖರಾಬ್ ದೆವ್ವ ಇದ್ಹಂಗೆ'' ಅಂತ 'ಬಿಗ್ ಬಾಸ್' ಮನೆಯ ಇತರೆ ಸದಸ್ಯರಿಗೆ ಸುಷ್ಮಾ ವೀರ್ ಬಿಸಿ ಮುಟ್ಟಿಸಿದರು.

  English summary
  Kannada Actress Sushma Veer makes Wild card entry into Bigg Boss house. Read the article to know what all happened on after Sushma's entry on Day 46 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X