»   » ಮಳೆ ಹುಡುಗಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ.!

ಮಳೆ ಹುಡುಗಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ.!

Posted By:
Subscribe to Filmibeat Kannada

'ಮುಂಗಾರು ಮಳೆ' ಚಿತ್ರದಿಂದ ಸ್ಯಾಂಡಲ್ ವುಡ್ ಗೆ ಕಾಲಿಟ್ಟ ನಟಿ ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯವಂತೆ. ಇದಕ್ಕೆ ಕಾರಣ ಅವರ ವೈಯುಕ್ತಿಕ ಬದುಕಲ್ಲಿ ಆಗಿರುವ ಆಘಾತ.

'ಬಿಗ್ ಬಾಸ್-3' ರಿಯಾಲಿಟಿ ಶೋನಲ್ಲಿ ಮೊನ್ನೆಯಷ್ಟೇ ತಮ್ಮ ನಿಶ್ಚಿತಾರ್ಥದ ಬಗ್ಗೆ ಮನಬಿಚ್ಚಿ ಮಾತನಾಡುತ್ತಿದ್ದ ನಟಿ ಪೂಜಾ ಗಾಂಧಿ, ''ಅಪ್ಪ-ಅಮ್ಮನ ಮಾತು ಮೀರಿ ನಾನು ನಿಶ್ಚಿತಾರ್ಥ ಮಾಡಿಕೊಳ್ಳಬಾರದಿತ್ತು'' ಅಂತ ಕಣ್ಣೀರಿಟ್ಟಿದ್ದರು. ಈಗ ಹುಡುಗರ ಕಂಡ್ರೆ ಭಯ ಅಂತಿದ್ದಾರೆ. [ಬಿಗ್ ಬಾಸ್-3 ಕುರಿತಾದ ತಾಜಾ ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ]

ಪೂಜಾ ಗಾಂಧಿ ಹೀಗೆನ್ನಲು ಕಾರಣವೇನು? ನಟಿ ಶ್ರುತಿ ಜೊತೆ ಪೂಜಾ ಗಾಂಧಿ ಮಾತನಾಡಿದ್ದೇನು? 'ಬಿಗ್ ಬಾಸ್' ಮನೆಯಲ್ಲಿ ಐದನೇ ದಿನ ನಡೆದ ಪ್ರಮುಖ ಘಟನಾವಳಿಗಳ ಚಿತ್ರಣ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನ ಒಂದೊಂದೇ ಕ್ಲಿಕ್ಕಿಸುತ್ತಾ ಹೋಗಿ.....

ಪೂಜಾ ಗಾಂಧಿಗೆ ಹುಡುಗರ ಕಂಡ್ರೆ ಭಯ.!

''ನನಗೆ 32 ವರ್ಷ ಆಯ್ತು. ಮದುವೆ ಆಗ್ಬೇಕು. ಆದ್ರೆ ಹುಡುಗರ ಕಂಡ್ರೆ ಭಯ ಆಗುತ್ತೆ. ಯಾಕಂದ್ರೆ ನನಗೆ ಅಷ್ಟು ಬೇಜಾರಾಗಿದೆ.'' - ಪೂಜಾ ಗಾಂಧಿ. ['ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿ ಕಣ್ಣೀರಧಾರೆ]

ನಾನು ಸಿಂಗಲ್.!

''ನಾನು ಸಿಂಗಲ್. ನನಗೆ ಬಾಯ್ ಫ್ರೆಂಡ್ ಇಲ್ಲ. ನನ್ನ ತಂಗಿಗೆ ಮದುವೆ ಫಿಕ್ಸ್ ಆಗಿದೆ. ಅವರೆಲ್ಲಾ ಹೊರಗಡೆ ಹೋಗ್ತಾರೆ. ರಾತ್ರಿ ಎರಡು ಗಂಟೆ ಆದರೂ, ಫೋನ್ ನಲ್ಲಿ ಇರ್ತಾರೆ. ಆದ್ರೆ, ನನಗೆ ಯಾರೂ ಇಲ್ಲ. ನನಗೆ ಯಾರೂ ಫೋನ್ ಮಾಡಲ್ಲ. ನನಗೂ ಬೇಜಾರಾಗುತ್ತೆ. ಆದ್ರೆ, ಆಗಿರುವ ಘಟನೆಯಿಂದ ಹುಡುಗರ ಕಂಡ್ರೆ ಭಯ ಆಗುತ್ತೆ'' ಅಂತ ಪೂಜಾ ಗಾಂಧಿ ನಟಿ ಶ್ರುತಿ ಜೊತೆ ಮನಬಿಚ್ಚಿ ಮಾತನಾಡಿದರು. ['ಬಿಗ್ ಬಾಸ್' ಮನೆಯಲ್ಲಿ ಪಶ್ಚಾತ್ತಾಪ ಪಟ್ಟ ಕೃತಿಕಾ, ಪೂಜಾ ಗಾಂಧಿ ]

ನಟಿ ಶ್ರುತಿ ಹೀಗೆ ಇರ್ಲಿಲ್ಲ.!

''ನೀವೆಲ್ಲಾ ಇದ್ದೀರಾ ಅಂತ ನಾನು ಇಷ್ಟು ಮಾತನಾಡುತ್ತಿದ್ದೇನೆ. ಇಲ್ಲಾಂದ್ರೆ ನಾನು ದಿನಕ್ಕೆ ನಾಲ್ಕು ಮಾತನಾಡಿದರೆ ಹೆಚ್ಚು. ಮುಂಚೆ ನಾನು ಹೀಗಿರ್ಲಿಲ್ಲ. ಪಟ-ಪಟ ಅಂತ ಮಾತನಾಡುತ್ತಿದ್ದೆ. ಆದ್ರೆ, ಸಿನಿಮಾ, ಲೈಫು, ಮೆಚ್ಯೂರಿಟಿ ಬಂದ್ಮೇಲೆ ಮಾತು ಕಮ್ಮಿ ಮಾಡಿಬಿಟ್ಟೆ'' ಅಂತ 'ಬಿಗ್ ಬಾಸ್' ಮನೆ ಸದಸ್ಯರಿಗೆ ನಟಿ ಶ್ರುತಿ ಹೇಳಿದರು.

ಮನೆಯಲ್ಲಿ 'ಕಿನ್ನರಿ' ಮೋಡಿ

''ಬಿಗ್ ಬಾಸ್' ಮನೆಗೆ ವಿಶೇಷ ಅತಿಥಿಯಾಗಿ 'ಕಿನ್ನರಿ' ಆಗಮನವಾಗಿದೆ. ಪುಟಾಣಿ ಜೊತೆ ಆಟವಾಡುತ್ತಾ, 'ಕಿನ್ನರಿ' ಇಷ್ಟಪಡುವ ಮನರಂಜನೆ ಮತ್ತು ಅಡುಗೆ ಮಾಡುತ್ತಾ 'ಬಿಗ್ ಬಾಸ್' ಮನೆ ಸದಸ್ಯರು ಕಾಲ ಕಳೆದರು.

'ಕಿನ್ನರಿ' ನೋಡಿ ಭಾವನಾ ಕಣ್ಣೀರು

'ಕಿನ್ನರಿ' ಪುಟಾಣಿ ನೋಡಿ, ತಮ್ಮ ಮಗಳನ್ನು ನೆನೆದು ಭಾವನಾ ಬೆಳಗೆರೆ ಕಣ್ಣೀರು ಹಾಕಿದರು.

ಒಂದಾದ ಜಯಶ್ರೀ-ರವಿ

ಮೊನ್ನೆಯಷ್ಟೇ ಗಾಯಕ ರವಿ ಮುರೂರು ಜೊತೆ ಕಿತ್ತಾಡ್ಕೊಂಡಿದ್ದ ಜಯಶ್ರೀ, ನಿನ್ನೆ ಅವರೊಂದಿಗೆ ನಗುನಗುತ್ತಾ ಮಾತನಾಡುತ್ತಿದ್ದರು. ಸಾಲದ್ದಕ್ಕೆ, ''ನಾನು ಹಾಗೆ ಮಾಡಬಾರದಿತ್ತು. ಆದ್ರೆ, ಅವತ್ತು ನನ್ನ ಥಿಂಕಿಂಗ್ ಆ ತರ ಇತ್ತು'' ಅಂತ ತಮ್ಮನ್ನ ತಾವು ಇತರರ ಮುಂದೆ ಸಮರ್ಥಿಸಿಕೊಳ್ಳೋಕೆ ಶುರುಮಾಡಿದರು.

ಪೂಜಾ ಗಾಂಧಿ ಅನುಕರಣೆ ಮಾಡಿದ ರವಿ

ನಟಿ ಪೂಜಾ ಗಾಂಧಿ ಮತ್ತು ಹುಚ್ಚ ವೆಂಕಟ್ ಅನುಕರಣೆ ಮಾಡುತ್ತಾ ಗಾಯಕ ರವಿ ಮುರೂರು ಜಾಲಿಯಾಗಿ ಕಾಲ ಕಳೆದರು.

ಟೀ ಮಾಡಿದ ಹುಚ್ಚ ವೆಂಕಟ್

ಗಾಯಕ ರವಿ ಮುರೂರು ಜೊತೆ ಹುಚ್ಚ ವೆಂಕಟ್ ಟೀ ಮಾಡಿ ಕುಡಿದರು.

English summary
Kannada Actress Pooja Gandhi expressed her thoughts about Men to Kannada Actress Shruthi in Bigg Boss house. Read to know more details about what all happened in Day 5 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada