»   » ತಬ್ಬಿಕೊಂಡ್ರು, ಕಣ್ ಹೊಡೆದ್ರು, ಕೈ ಹಿಡಿದ್ರು ಅಯ್ಯಪ್ಪ-ಪೂಜಾ!

ತಬ್ಬಿಕೊಂಡ್ರು, ಕಣ್ ಹೊಡೆದ್ರು, ಕೈ ಹಿಡಿದ್ರು ಅಯ್ಯಪ್ಪ-ಪೂಜಾ!

Posted By:
Subscribe to Filmibeat Kannada

ನಟಿ ಪೂಜಾ ಗಾಂಧಿಗೆ ರಿಯಲ್ಲಾಗೂ ಲವ್ ಆಗ್ಹೋಗಿದೆ. ಅಯ್ಯಪ್ಪ 'ಪಕ್ಷಿ ವೀಕ್ಷಣೆ' ಮಾಡುತ್ತಿರುವುದು, 'ಡವ್ ಹೊಡೆಯುತ್ತಿರುವುದು', 'ಕಾಗೆ ಹಾರಿಸುತ್ತಿರುವುದನ್ನ' ಸೀಕ್ರೆಟ್ ರೂಮ್ ನಲ್ಲಿ ಕಣ್ಣಾರೆ ನೋಡಿದರೂ ಪೂಜಾ ಗಾಂಧಿಗೆ ಪ್ರೇಮ ಜ್ವರ ಕಮ್ಮಿ ಆದ ಹಾಗಿಲ್ಲ.!

ಅಯ್ಯಪ್ಪ ಪ್ರೇಮ ರಹಸ್ಯವನ್ನ ಕೇಳಿ ಸೀಕ್ರೆಟ್ ರೂಮ್ ನಲ್ಲಿ ಕಣ್ಣೀರಿಟ್ಟಿದ್ದ ನಟಿ ಪೂಜಾ ಗಾಂಧಿ, 'ಬಿಗ್ ಬಾಸ್' ಮನೆಗೆ ರೀ ಎಂಟ್ರಿಕೊಟ್ಟ ಮೇಲೆ 'ಅಯ್ಯಪ್ಪ ಹೋಟೆಲ್'ಗೆ ಹೆಚ್ಚು ಟಿಪ್ಸ್ ನೀಡಿದ್ದರು.

ಸಾಲದ್ದಕ್ಕೆ, ಅಯ್ಯಪ್ಪಗೆ ಹೆಡ್ ಮಸಾಜ್ ಮಾಡಿ, ತಮ್ಮ ನಿಶ್ಚಿತಾರ್ಥ ನಿಂತು ಹೋದ ಫ್ಲ್ಯಾಶ್ ಬ್ಯಾಕ್ ಕಹಾನಿಯನ್ನ ಬಿಚ್ಚಿಟ್ಟಿದ್ದರು. [ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ಸಂಥಿಂಗ್ ಸಂಥಿಂಗ್?]

ತಮ್ಮ ಹಿಂದ್ಹಿಂದೆ ಪೂಜಾ ಗಾಂಧಿ ಸುತ್ತುತ್ತಿದ್ದರೂ, ಸೀರಿಯಸ್ ಆಗದ ಅಯ್ಯಪ್ಪ ನಿನ್ನೆ 'ಬಿಗ್ ಬಾಸ್' ಮನೆಯಲ್ಲಿ ಪೂಜಾ ಗಾಂಧಿಯನ್ನ ಅಪ್ಪಿಕೊಂಡರು. ಮುಂದೆ ಓದಿ......

ಸುದೀಪ್ ಕೇಳಿದ ಪ್ರಶ್ನೆ ಪೂಜಾ ಗಾಂಧಿ ತಲೆಯಲ್ಲಿ ಕೊರೆಯುತ್ತಿತ್ತು!

''ಬಿಗ್ ಬಾಸ್' ಮನೆಯಲ್ಲಿ ಅಯ್ಯಪ್ಪ ಇದುವರೆಗೂ ಎಷ್ಟು ವಿಕೆಟ್ ಉರುಳಿಸಿದ್ದಾರೆ'' ಅಂತ ಕಿಚ್ಚ ಸುದೀಪ್ ಪ್ರಶ್ನೆ ಕೇಳಿದ್ದರು. ಅದಕ್ಕೆ ಚಂದನ್, ''ನಾಲ್ಕು, ನಾಲ್ಕು ವರೆ'' ಅಂತ ಉತ್ತರ ನೀಡಿದ್ದರು. ನಂತರ Rapid Fire ರೌಂಡ್ ನಲ್ಲಿ ''ಪೂಜಾ ಗಾಂಧಿ ಸೀರಿಯಸ್ ಆಗಿದ್ದಾರೆ, ಅಯ್ಯಪ್ಪ ಪಕ್ಷಿ ವೀಕ್ಷಣೆ ಮಾಡುತ್ತಾರೆ ಅಂತ ಎಷ್ಟು ಜನಕ್ಕೆ ಅನಿಸುತ್ತೆ'' ಅಂತ ಪ್ರಶ್ನೆ ಮಾಡಿದ್ದರು. ಅದರಲ್ಲಿ ಬಹುತೇಕ ಮಂದಿ 'ಯೆಸ್' ಉತ್ತರ ಹಿಡಿದಿದ್ದರು. ['ಬಿಗ್ ಬಾಸ್' ಮನೆಗೆ ಪೂಜಾ ಗಾಂಧಿ ರೀ ಎಂಟ್ರಿ; ಅಯ್ಯಪ್ಪ ಏನಂದ್ರು?]

ಪೂಜಾ ಗಾಂಧಿಗೆ ಕ್ಲಾರಿಟಿ ಬೇಕಾಗಿತ್ತು!

ಸುದೀಪ್ ಕೇಳಿದ ಪ್ರಶ್ನೆಯಿಂದ ಕೊಂಚ ಕನ್ ಫ್ಯೂಸ್ ಆಗಿದ್ದ ನಟಿ ಪೂಜಾ ಗಾಂಧಿ, ಅಯ್ಯಪ್ಪ ಜೊತೆ ನೇರವಾಗಿ ಮಾತನಾಡಲು ಮುಂದಾದರು. [ಬಿಗ್ ಬಾಸ್ ಮನೆಯಲ್ಲಿ ಶುರುವಾಯಿತು, ಪ್ರೀತಿ-ಪ್ರೇಮ!]

ಅಯ್ಯಪ್ಪ-ಪೂಜಾ ಗಾಂಧಿ ಸಂಭಾಷಣೆ

ಪೂಜಾ ಗಾಂಧಿ - ''ಬಿಗ್ ಬಾಸ್ ಹೌಸ್ ಮರೆತು ಬಿಡಿ, ಎಲ್ಲ ಮರೆತು ಬಿಡಿ. ನಾನು ಕೇಳುವ ಪ್ರಶ್ನೆಗೆ ಬರೀ ಯೆಸ್ ಅಥವಾ ನೋ ಅಂತ ಉತ್ತರ ಕೊಡಬೇಕು''
ಅಯ್ಯಪ್ಪ - ಸರಿ ಆಯ್ತು ಕೇಳು! [ಬಯಲಾದ ಅಯ್ಯಪ್ಪ ಪ್ರೇಮ ರಹಸ್ಯ ; ಕಣ್ಣೀರಿಟ್ಟ ಪೂಜಾ ಗಾಂಧಿ]

ಪೂಜಾ ಗಾಂಧಿ ಕೇಳಿದ ಪ್ರಶ್ನೆ!

ಪೂಜಾ ಗಾಂಧಿ - ''Am i just another wicket?'' [ಅಯ್ಯಪ್ಪ ಬಳಿ ತಮ್ಮ ನಿಶ್ಚಿತಾರ್ಥ ಬ್ರೇಕಪ್ ರಹಸ್ಯ ಬಿಚ್ಚಿಟ್ಟ ಪೂಜಾ ಗಾಂಧಿ]

ಅಯ್ಯಪ್ಪ ಕೊಟ್ಟ ಉತ್ತರ

ಅಯ್ಯಪ್ಪ - NO

ಅಯ್ಯಪ್ಪಗೆ ನಿರೀಕ್ಷಿತ ಪ್ರಶ್ನೆ

ಅಯ್ಯಪ್ಪ - ''ನನಗೆ ಗೊತ್ತಿತ್ತು ನೀನು ಪ್ರಶ್ನೆ ಕೇಳುವ ಮುಂಚೆನೇ. ಇದನ್ನೇ ಕೇಳ್ತೀಯಾ ಅಂತ. ವಿಕೆಟ್ ಅಂತ ಏನಿಲ್ಲ. ಅವೆಲ್ಲಾ ಥಿಂಕ್ ಮಾಡಲ್ಲ''

ಏನೋ ಒಂಥರಾ.....

ಪೂಜಾ ಗಾಂಧಿ - ''ಒಂಥರಾ ಹಾಗೆ ಫೀಲ್ ಆಯ್ತು ಅಷ್ಟೆ.

ಅಯ್ಯಪ್ಪ - ''ಒಂಥರಾ... ಹಾಗೆ ಸುಮ್ಮನೆ ಅಂತನಾ''

ಪೂಜಾ ಗಾಂಧಿ - ''hug?''

ಅಯ್ಯಪ್ಪ ಹೇಳಿದ್ದೇನು?

ಅಯ್ಯಪ್ಪ - ''ಟೈಮ್ ಇದೆ. ಇದೆಲ್ಲಾ ಪನಿಶ್ಮೆಂಟ್ ನಿನಗೆ. ಹೇಳಿದ ತಕ್ಷಣ ಸುಲಭವಾಗಿ ಸಿಗಲ್ಲ. ಎಲ್ಲಾ ಸುಲಭವಾಗಿ ಸಿಗಬೇಕು ನಿನಗೆ. ಕೊಬ್ಬು ಸ್ವಲ್ಪ ಇಳಿಸಬೇಕು ನಿನಗೆ''

ಪೂಜಾ ಗಾಂಧಿ - ''ಸಾರಿ...''

ಅಯ್ಯಪ್ಪ - ''ನನ್ನ ಟೀಮ್ ನಲ್ಲಿ ಇದಿಯಾ. You should give 100%''

ಕೈ ಕೈ ಹಿಡಿದುಕೊಂಡ ಜೋಡಿ...

ಮಾತುಕತೆ ಮುಗಿದ ಬಳಿಕ ಪೂಜಾ ಗಾಂಧಿ, ಅಯ್ಯಪ್ಪ ಕೈಹಿಡಿದುಕೊಂಡು.

ಅಪ್ಪಿಕೊಂಡ ಅಯ್ಯಪ್ಪ

ಹೊರಡುವ ಮುನ್ನ ಪೂಜಾ ಗಾಂಧಿಯನ್ನ ಅಯ್ಯಪ್ಪ ಅಪ್ಪಿಕೊಂಡರು. ಅಪ್ಪಿಕೊಂಡು Are you happy ಅಂತ ಕೇಳಿದರು.

ಆಟದಲ್ಲೂ ಹುರಿದುಂಬಿಸಿದ ಅಯ್ಯಪ್ಪ

'ಟೈಯರ್ ಮಂಗಣ್ಣ' ಟಾಸ್ಕ್ ನಲ್ಲಿ ಪೂಜಾ ಗಾಂಧಿಯನ್ನ ಅಯ್ಯಪ್ಪ ಹುರಿದುಂಬಿಸಿದರು.

ಕದ್ದು-ಮುಚ್ಚಿ ಮಾತು!

ನೇತ್ರಗೆ ಸಿಕ್ಕ ವಿಶೇಷ ಅಧಿಕಾರದ ಫಲವಾಗಿ ಅಯ್ಯಪ್ಪ ಮತ್ತು ಸುಷ್ಮಾ ಗಾಜಿನ ಕೋಣೆಯೊಳಗೆ ಮಾತ್ರ ಇರಬೇಕು. 'ಬಿಗ್ ಬಾಸ್' ಮನೆಯ ಇತರೆ ಸದಸ್ಯರ ಜೊತೆ ಅವರಿಬ್ಬರು ಮಾತನಾಡುವಂತಿಲ್ಲ. ಹೀಗಿದ್ದರೂ, ಪ್ರೇಮ ಪಕ್ಷಿಗಳು ಮಾತನಾಡಿಕೊಂಡರು.

ಪೂಜಾ ಗಾಂಧಿ-ಅಯ್ಯಪ್ಪ ಸಂಭಾಷಣೆ

ಅಯ್ಯಪ್ಪ - ''98 ಟೈಯರ್ ಎಲ್ಲಾ ಈಸಿ. ಸುಷ್ಮಾ (ಪೂಜಾ ಗಾಂಧಿಯನ್ನ ಉದ್ದೇಶಿಸಿ) ನಮ್ಮ ಟೀಮ್ ಚೆನ್ನಾಗಿ ಮಾಡ್ತು

ಪೂಜಾ ಗಾಂಧಿ - ಗುಡ್ ನೈಟ್ ಭಾವನಾ

ಅಯ್ಯಪ್ಪ - ಗುಡ್ ನೈಟ್ ಸುಷ್ಮಾ

ಪೂಜಾ ಗಾಂಧಿ - ಕಮ್ ಆನ್ ಗಿವ್ ಮೀ ಎ ಹಗ್

ಕಣ್ ಹೊಡೆದ ಪೂಜಾ ಗಾಂಧಿ

ಇದೇ ಸೈಕಲ್ ಗ್ಯಾಪ್ ನಲ್ಲಿ ಪೂಜಾ ಗಾಂಧಿ ಅಯ್ಯಪ್ಪಗೆ ಕಣ್ ಹೊಡೆದ್ರು.

ಚಂದನ್ ಗೆ ಅಯ್ಯಪ್ಪ ಹೇಳಿದ್ದೇನು?

''ಅವಳು ಯಾಕೆ ಸೀರಿಯಸ್ ಆಗ್ತಾಳೆ. ನಾನ್ಯಾಕೋ ಸೀರಿಯಸ್ ಆಗ್ಲಿ'' ಅಂತ ಚಂದನ್ ಬಳಿ ಅಯ್ಯಪ್ಪ ಹೇಳಿದ್ದರು.

ಭಾವನಾ ಬಳಿ ಅಯ್ಯಪ್ಪ ಹೇಳಿದ್ದೇನು?

''ನಾವು ಆಚೆ ಹೋದ್ಮೇಲೆ ನೋಡೋಣ. ಇಲ್ಲಿ ಬೇಡ. ಅದರ ಬಗ್ಗೆ ಡಿಸ್ಕಷನ್'' ಅಂತ ಅಯ್ಯಪ್ಪ ಭಾವನಾ ಬಳಿ ಹೇಳಿದ್ದರಂತೆ.

ಕಿಟ್ಟಿ ಕಾಮೆಂಟ್!

''ಪಾಪ, ಪೂಜಾ ಗಾಂಧಿಗೆ ಅರ್ಥ ಆಗ್ತಿಲ್ಲ. ಅವರದ್ದೇ ಆದ ಲೋಕದಲ್ಲಿ ಇದ್ದಾರೆ. ನಾವು ನೀವು ಯಾರು ಹೇಳೋಕೆ ಆಗಲ್ಲ. ನೀವು ಹೇಳುವುದು ಹೇಳಿದ್ದೀರಾ ಬಿಟ್ಟುಬಿಡು'' - ಸುನಾಮಿ ಕಿಟ್ಟಿ

ಅಯ್ಯಪ್ಪ ಎಲ್ಲರಿಗೂ ಕಣ್ ಹಾಕಿದ್ದ!

''ಫಸ್ಟ್ ಬಂದಾಗ ಜಯಶ್ರೀ ಹಿಂದೆ ಬಿದ್ದಿದ್ನಾ. ಮಾಧುರಿಗೂ ಕಣ್ಣು ಹಾಕಿದ್ದ. ಪೂಜಾ ಹಿಟ್ ವಿಕೆಟ್'' ಅಂತ ಚಂದನ್ ಹೇಳ್ತಿದ್ದರು. [ಅಯ್ಯಪ್ಪ ಕಾಮುಕ ವ್ಯಾಘ್ರ! ನಟ ಚಂದನ್ ಆರೋಪ!]

English summary
Kannada Actress Pooja Gandhi gets cosy with Aiyappa in Bigg Boss House. Read the article to know what all happened on Day 50 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada