»   » ನಟಿ ಶ್ರುತಿ ಕಾವಿ ತೊಡುತ್ತಾರಾ? ಅವರ ಮನದಾಳ ಏನು?

ನಟಿ ಶ್ರುತಿ ಕಾವಿ ತೊಡುತ್ತಾರಾ? ಅವರ ಮನದಾಳ ಏನು?

Posted By:
Subscribe to Filmibeat Kannada

''ನಟಿ ಶ್ರುತಿ ಮೊದಲಿನ ಹಾಗಿಲ್ಲ. 'ಬಿಗ್ ಬಾಸ್' ಮನೆಯಲ್ಲಿ ಅವರು ಡ್ರಾಮಾ ಮಾಡ್ತಿದ್ದಾರೆ. ಅವರು ಹೊರಗಡೆ ಇರುವುದೇ ಬೇರೆ. ಇಲ್ಲಿರುವುದೇ ಬೇರೆ'' ಹೀಗಂತ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ ಅನೇಕರು ನಟಿ ಶ್ರುತಿ ಮೇಲೆ ಬೆಟ್ಟು ಮಾಡಿದ್ದಾರೆ.

ನಟಿ ಸುಷ್ಮಾ ವೀರ್ ಅಂತೂ 'ಬಿಗ್ ಬಾಸ್' ಮನೆಗೆ ಬಂದ ಕೂಡಲೆ ಶ್ರುತಿ ವಿರುದ್ಧ ಬಂಡಾಯವೆದ್ದರು. ಇಬ್ಬರ ನಡುವೆ ಆದ ಮಾತಿನ ಚಕಮಕಿಗೆ ಕಿಚ್ಚ ಸುದೀಪ್ ಕೂಡ ಸಾಕ್ಷಿಯಾಗಿದ್ದರು. ['ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!]

ನಟಿ ಸುಷ್ಮಾ ವೀರ್ ಬಗ್ಗೆ ಬೇಸರಗೊಂಡ ನಟಿ ಶ್ರುತಿ, ನಿನ್ನೆ ಸುಷ್ಮಾ ಜೊತೆ ಕೂತು ಭಿನ್ನಾಭಿಪ್ರಾಯ ಶಮನ ಮಾಡಿಕೊಳ್ಳಲು ಯತ್ನಿಸಿದರು. ['ಬಿಗ್ ಬಾಸ್-3' ಶೋ ಕ್ವಿಟ್ ಮಾಡ್ತಾರಾ ನಟಿ ಶ್ರುತಿ?]

ಅದರಲ್ಲಿ ನಟಿ ಶ್ರುತಿ, ತಾವು ಬದಲಾಗಿದ್ದಕ್ಕೆ ಕಾರಣ ನೀಡುತ್ತಾ ತಮ್ಮ ಮನದಾಳವನ್ನ ಸುಷ್ಮಾ ಜೊತೆ ಹಂಚಿಕೊಂಡರು. ನಟಿ ಶ್ರುತಿ ಮತ್ತು ಸುಷ್ಮಾ ವೀರ್ ನಡುವೆ ನಡೆದ ಸಂಭಾಷಣೆ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ.....

ನಾನು ಇರೋದೇ ಹಿಂಗೆ!

ಶ್ರುತಿ- ನಾನಲ್ಲ, ನಾನಲ್ಲ ಅಂತಿರ್ತಿಯಲ್ಲಾ. ನಾನು ಹಿಂಗೆ. 25-30 ವರ್ಷದಿಂದ ನಾನು ಹಿಂಗೆ. ನಾನು ಎಲ್ಲಾ ಸಿಚ್ಯುಯೇಷನ್ ನಲ್ಲಿ ಹೇಗೆ ಬಿಹೇವ್ ಮಾಡ್ತೀನಿ ಅಂತ ನೀನು ನೋಡಿಲ್ಲ ಹತ್ತಿರದಿಂದ. ಕೇಳ್ಪಟಿರ್ತೀಯಾ.

ಸುಷ್ಮಾ - ಕೇಳ್ಪಟ್ಟಿರೋದು ಯಾರಿಂದ? ಮನೆಯವರಿಂದ. ದೊಡ್ದಮ್ಮ ಚಿಕ್ಕಮ್ಮದಿರಿಂದಲೇ ಅಲ್ವಾ?

ಶ್ರುತಿ - ಕರೆಕ್ಟ್. ಆದ್ರೆ ಅದು ಯಾವಾಗ್ಲೋ ಇರಬಹುದು. ನಾನು ಬದಲಾಗಿ ಬಹಳ ವರ್ಷ ಆಯ್ತು. ['ಅಮ್ಮ' ಶ್ರುತಿ ಬಗ್ಗೆ ಗರಂ ಆಗಿರುವ 'ಅಕ್ಕ' ಸುಷ್ಮಾ]

ನನ್ನಷ್ಟು ಸಿಟ್ಟು ಯಾರಿಗೂ ಇಲ್ಲ!

ಶ್ರುತಿ - ಮನಸ್ಸಲ್ಲಿ ನನಗಿರುವ ಸಿಟ್ಟು ಇಡೀ ಮನೆಯಲ್ಲಿ ಯಾರಿಗೂ ಇಲ್ಲ.

ಸುಷ್ಮಾ - ಅದನ್ನೇ ನಾನು ಹೇಳ್ತಿದ್ದದ್ದು. ಅಬ್ಬಾ ತಾಯಿ! ಬಂದೆ ನೋಡು ಟ್ರ್ಯಾಕ್ ಗೆ.

ಶ್ರುತಿ - ಅದು ನಿಜ. ಆದ್ರೆ ನಾನು ಕಂಟ್ರೋಲ್ ಮಾಡ್ತಿದ್ದೀನಿ. ನಾನು ಗೆಲ್ಲಬೇಕು ಅಂತಿರೋದು ನನ್ನನ್ನ. ['ಬಿಗ್ ಬಾಸ್' ಮನೆಯ 'ದರಿದ್ರ ಲಕ್ಷ್ಮಿ' ಅಂತೆ ನಟಿ ಶ್ರುತಿ!]

ಯಾರು ಅರ್ಹರಲ್ಲ!

ಸುಷ್ಮಾ - ಇಲ್ಲಿ ನೀನು ಯಾರು ಪರ-ಪಕ್ಷ ವಹಿಸಿಕೊಳ್ಳುತ್ತಿದ್ಯಲ್ಲಾ, ಅವರು ಅರ್ಹರಲ್ಲ. ಇದೇ ಅವರು ಮೂರು ವರ್ಷದ ಹಿಂದೆ ಸಿಕ್ಕಿದಿದ್ರೆ, ಅವರನ್ನ ದೂರ ನಿಲ್ಲಿಸ್ತಿದ್ದೆ ಅನ್ನೋದು ನನಗೆ ಗೊತ್ತು. ಅವರಿಗೆ ಅತಿಯಾದ ಸಪೋರ್ಟ್ ನೀನು ಮಾಡುತ್ತಿರುವುದು ತಪ್ಪು.

ಶ್ರುತಿ - ಅವರು ನನ್ನ ಗೌರವಿಸ್ತಾರೆ, ಇಷ್ಟಪಡ್ತಾರೆ ಬಿಟ್ರೆ, ನಾನು ಮನೆಯಲ್ಲಿ ಎಲ್ಲರನ್ನ ಒಂದೇ ತರಹ ನೋಡಿದ್ದೀನಿ. [ಶ್ರುತಿ ಅಮ್ಮ ಮನೆಯಲ್ಲಿ ಕುರಿ ಮಂದೆ ಸಾಕುತ್ತಿದ್ದಾರಂತೆ..!]

ಮೂಗಿನ ತುದಿಯಲ್ಲೇ ಕೋಪ!

ಶ್ರುತಿ - ಯಾರಾದರೂ ಹೀಗೆ ಅಂತ ನನ್ನ ಮನಸ್ಸಿಗೆ ಬಂದುಬಿಟ್ಟರೆ ನಾನು ಮಾತನಾಡಿಸುವುದಕ್ಕೆ ಹೋಗೋದೇ ಇಲ್ಲ. ಮೂಗಿನ ತುದಿಯಲ್ಲಿ ಕೋಪ ನನಗೆ.

ಸುಷ್ಮಾ - ಅದನ್ನೇ ನಾನು ಕೇಳ್ತಾಯಿರೋದು. [ನಟಿ ಶ್ರುತಿ ಬಗ್ಗೆ 'ಮಳೆ ಹುಡುಗಿ' ಪೂಜಾ ಗಾಂಧಿ ಹೇಳಿದ್ದೇನು?]

ಬದಲಾಗಿ 6 ವರ್ಷ ಆಯ್ತು

ಶ್ರುತಿ - ಬಹಳ ವರ್ಷಗಳಿಂದ ನಾನು ಬದಲಾಗಿದ್ದೀನಿ. ಸಕ್ಸಸ್ ಆಗ್ತೀನಾ, ಇಲ್ವಾ ಗೊತ್ತಿಲ್ಲ. ಈ ಬದಲಾವಣೆ ಬಂದು ಆರು ವರ್ಷ ಆಯ್ತು. ಕೋರ್ಟ್ ಮೆಟ್ಟಿಲು ಹತ್ತಿದಾಗಿನಿಂದ.

ಮದರ್ ತೆರೆಸಾ....

ಸುಷ್ಮಾ - ಕಳ್ಳತನ ಮಾಡುವಾಗ ದೇವರೇ ಕಾಪಾಡಪ್ಪಾ ಅನ್ನೋದು. ಅದಕ್ಕೆ ನಾನು ನಿನ್ನ ಮದರ್ ತೆರೆಸಾ ಅಂದಿದ್ದು.

ಶ್ರುತಿ - ನಿಜವಾಗ್ಲೂ ನಾನು ಹಾಗೇ ಆಗಿರೋದು.

ಸುಷ್ಮಾ - ಕಾವಿ ತೊಟ್ಟು ಹೋಗ್ಬಿಡು ಎಲ್ಲಾದರೂ.

ಶ್ರುತಿ - ಏನಕ್ಕೆ ಕಾವಿ ಹಾಕೋಬೇಕು. ಮನಸ್ಸಿಗೆ ಹಾಕೋಬೇಕು ಮೊದಲು. I'm on process.

English summary
Kannada Actress Shruthi tries to clear misunderstanding with Sushma Veer. Read the article to know what Shruthi spoke to Sushma Veer on Day 57 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada