For Quick Alerts
  ALLOW NOTIFICATIONS  
  For Daily Alerts

  ಮಾಸ್ಟರ್ ಆನಂದ್ ವಿರುದ್ಧ ನಟಿ ಶ್ರುತಿ ಕಿಡಿ ಕಿಡಿ

  By Harshitha
  |

  'ಬಿಗ್ ಬಾಸ್' ಮನೆಯ ಪ್ರ್ಯಾಕ್ಟಿಕಲ್ ಸ್ಪರ್ಧಿ ಅಂತಲೇ ಮಾಸ್ಟರ್ ಆನಂದ್ ಖ್ಯಾತಿ. ಇನ್ನೊಂದ್ಕಡೆ 'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 'ಅಮ್ಮ' ಅಂತ ಫೇಮಸ್ ಆಗಿರುವವರು ನಟಿ ಶ್ರುತಿ.

  'ನಟಿ ಶ್ರುತಿಗೆ 'ಅಮ್ಮ' ಸ್ಥಾನ ನೀಡಲಾರೆ' ಅಂತ ಹಿಂದೊಮ್ಮೆ ಮಾಸ್ಟರ್ ಆನಂದ್, ಸುದೀಪ್ ಮುಂದೆ ನೇರವಾಗಿ ಹೇಳಿದ್ರು. ಇದೀಗ ಸುಷ್ಮಾ ಆಗಮನವಾದ್ಮೇಲೆ ಅವರೊಟ್ಟಿಗೆ ಹೆಚ್ಚಾಗಿ ಗುರುತಿಸಿಕೊಂಡಿರುವ ಆನಂದ್ ನಟಿ ಶ್ರುತಿ ವಿರುದ್ಧ ಮಸಲತ್ತು ಮಾಡ್ತಿದ್ದಾರಾ? [ಅಳುಮುಂಜಿ ಶ್ರುತಿಗೂ ಕೋಪ; ಜಗಳಕ್ಕೂ ರೆಡಿಯಾದ ಆನಂದ]

  ಈ ಅನುಮಾನ ಎಷ್ಟು ಮಂದಿ ವೀಕ್ಷಕರನ್ನ ಕಾಡಿದ್ಯೋ ಇಲ್ವೋ ಗೊತ್ತಿಲ್ಲ. ಆದ್ರೆ, ನಟಿ ಶ್ರುತಿ ತಲೆಯಲ್ಲಂತೂ ಕೊರೆಯುತ್ತಿದೆ. ತಮ್ಮ ವಿರುದ್ಧ ಯಾರು ಮಾತನಾಡುತ್ತಾರೋ, ಅವರೊಂದಿಗೆ ಆನಂದ್ ಗುಂಪು ಕಟ್ಟಿಕೊಳ್ಳುತ್ತಾರೆ ಅಂತ ನಟಿ ಶ್ರುತಿ, ಚಂದನ್ ಮತ್ತು ಭಾವನಾ ಬೆಳಗೆರೆ ಬಳಿ ಹೇಳ್ತಿದ್ರು.

  'ಬಿಗ್ ಬಾಸ್' ಮನೆಯಲ್ಲಿ 57ನೇ ದಿನ ಮಾಸ್ಟರ್ ಆನಂದ್ ಬಗ್ಗೆ ನಟಿ ಶ್ರುತಿ ಏನೇನ್ ಹೇಳಿದ್ರು ಅಂತ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ.......

  ಗಂಪುಗಾರಿಕೆ!

  ಗಂಪುಗಾರಿಕೆ!

  ''ನನಗೆ ಯಾರು ಆಪೋಸಿಟ್ ಅಂತ ಅನಿಸ್ತಾರೆ. ನನ್ನ ವಿರುದ್ಧ ಯಾರು ಮಾತನಾಡುತ್ತಾರೆ ಅವರ ಜೊತೆ ಗುಂಪು ಕಟ್ಟಿಕೊಳ್ಳುತ್ತಾನೆ'' - ಶ್ರುತಿ ['ಅಮ್ಮ' ಶ್ರುತಿ ಬಗ್ಗೆ ಗರಂ ಆಗಿರುವ 'ಅಕ್ಕ' ಸುಷ್ಮಾ]

  ಹಿಂದೊಂದು ಮುಂದೊಂದು!

  ಹಿಂದೊಂದು ಮುಂದೊಂದು!

  ''ಅವನು ಬಾಯಲ್ಲಿ ಹೇಳುವುದೊಂದು. ಅವನ ಮನಸ್ಸಲ್ಲಿ ಇರುವುದು ಇನ್ನೊಂದು. ಯಾರು ಬರ್ತಾರೆ, ಯಾರು ಹೋಗ್ತಾರೆ ಅನ್ನೋದು ಮನಸ್ಸಲ್ಲಿ ಇರುವುದು ಒಂದು. ಹೇಳುವುದು ಇನ್ನೊಂದು'' - ಶ್ರುತಿ ['ಬಿಗ್ ಬಾಸ್' ಮನೆಯ 'ದರಿದ್ರ ಲಕ್ಷ್ಮಿ' ಅಂತೆ ನಟಿ ಶ್ರುತಿ!]

  ಚಂದನ್ ಗೆ ಫ್ರೆಂಡ್ ಅಲ್ಲ! ಯಾಕೆ?

  ಚಂದನ್ ಗೆ ಫ್ರೆಂಡ್ ಅಲ್ಲ! ಯಾಕೆ?

  ''ಆಮೇಲೆ ನಿನಗೆ (ಚಂದನ್), ರೆಹಮಾನ್ ಮತ್ತು ಕೃತಿಕಾಗೆ ಅವನು ಯಾಕೆ ಆಪೋಸಿಟ್ ಆಗಿ ಇರ್ತಾನೆ ಅಂದ್ರೆ ನೀವು ನನಗೆ ಫೇವರ್ ಆಗಿ ಇದ್ದೀರಾ'' - ಶ್ರುತಿ ['ಅಮ್ಮ' ಶ್ರುತಿ - 'ಅಕ್ಕ' ಸುಷ್ಮಾ ನಡುವೆ 'ಬಿಗ್' ವಾರ್.!]

  ರೆಹಮಾನ್ ವಿರುದ್ಧ ಯಾಕೆ?

  ರೆಹಮಾನ್ ವಿರುದ್ಧ ಯಾಕೆ?

  ''ರೆಹಮಾನ್ ಮೇಲೆ ಹಠ ಹಿಡಿದು ಬಿಟ್ಟ ನಾನು ಹಚ್ಚಲ್ಲ ಅಂತ. 'ಕಳ್ಳ-ಪೊಲೀಸ್' ಟಾಸ್ಕ್ ನಲ್ಲೂ ಅಷ್ಟೆ. ನಾಟ್ ಎ ಫೇರ್ ಗೇಮ್ ಅಟ್ ಆಲ್ ಅಂದ. ಯಾಕಪ್ಪಾ ಅಂದ್ರೆ, ನೀವು ಕಳ್ಳಿ ಅನ್ನೋದನ್ನ ರೆಹಮಾನ್ ನೋಡಲೇ ಇಲ್ಲ. ಅಕ್ಕ...ಅಕ್ಕ ಅಂದುಕೊಂಡು'' - ಶ್ರುತಿ [ಶ್ರುತಿ ಅಮ್ಮ ಮನೆಯಲ್ಲಿ ಕುರಿ ಮಂದೆ ಸಾಕುತ್ತಿದ್ದಾರಂತೆ..!]

  ಕ್ರಿಯೇಟ್ ಮಾಡುತ್ತಿರುವವರು ಯಾರು?

  ಕ್ರಿಯೇಟ್ ಮಾಡುತ್ತಿರುವವರು ಯಾರು?

  ''ಅದಿಲ್ಲ ಅಂದ್ರೂ, ಇವನು ಕ್ರಿಯೇಟ್ ಮಾಡ್ತಿದ್ದಾನೆ. ಅವರನ್ನ ನೀವು ತುಂಬಾ ಗೌರವಿಸುತ್ತೀರಾ ಅಂದ ಮಾತ್ರಕ್ಕೆ ಟಾಸ್ಕ್ ಸರಿಯಾಗಿ ನಡೆಯುತ್ತಿಲ್ಲ ಅಂತ ಇವನು ಬಿಂಬಿಸುತ್ತಾ ಇರೋದು'' - ಶ್ರುತಿ

   ನನ್ನನ್ನ ಉಳಿಸಲು ಯಾರೂ ಇಚ್ಛಿಸಲಿಲ್ಲ!

  ನನ್ನನ್ನ ಉಳಿಸಲು ಯಾರೂ ಇಚ್ಛಿಸಲಿಲ್ಲ!

  ''ಶ್ರುತಿ ಹೋಟೆಲ್ ಟಾಸ್ಕ್ ನಲ್ಲಿ ನಾನು ನಾಮಿನೇಟ್ ಆಗಿದ್ದು. ಮನೆಯಲ್ಲಿ ಯಾರನ್ನ ಉಳಿಸಿಕೊಳ್ಳುತ್ತೀರಾ ಅಂತ ಕೇಳಿದಾಗ, ಯಾರೂ ನನ್ನ ಹೆಸರನ್ನ ಹೇಳಲೇ ಇಲ್ಲ. ನನ್ನನ್ನ ಎಷ್ಟು ಗಟ್ಟಿ ಮಾಡ್ತು ಗೊತ್ತಾ ಅದು'' - ಶ್ರುತಿ

  English summary
  Kannada Actress Shruthi is annoyed with Master Anand. Read the article to know what happened on Day 57 in Bigg Boss Kannada 3.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X