»   » ಶ್ರುತಿ v/s ಸುಷ್ಮಾ! 'ಬಿಗ್ ಬಾಸ್' ಮನೆ ಇಬ್ಭಾಗ.!

ಶ್ರುತಿ v/s ಸುಷ್ಮಾ! 'ಬಿಗ್ ಬಾಸ್' ಮನೆ ಇಬ್ಭಾಗ.!

Posted By:
Subscribe to Filmibeat Kannada

'ಬಿಗ್ ಬಾಸ್-3' ಕಾರ್ಯಕ್ರಮದಲ್ಲಿ 60 ದಿನಗಳು ಮುಗಿದಿವೆ. ಇಷ್ಟು ದಿನ 'ಬಿಗ್ ಬಾಸ್' ಮನೆಯಲ್ಲಿ ಕಿರಿಕಿರಿ, ಗದ್ದಲ, ಗಲಾಟೆ...ಎಲ್ಲವೂ ಇದ್ದಿದ್ದು ನಿಜ. ಆದ್ರೀಗ ಅದಕ್ಕಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ 'ಬಿಗ್ ಬಾಸ್' ಮನೆ ಇಬ್ಭಾಗವಾಗಿದೆ.

ಸುಷ್ಮಾ ವೀರ್, ಅಯ್ಯಪ್ಪ, ರೆಹಮಾನ್, ಪೂಜಾ ಗಾಂಧಿ ಮತ್ತು ಮಾಸ್ಟರ್ ಆನಂದ್ ಒಂದ್ಕಡೆ ಇದ್ದರೆ ನಟಿ ಶ್ರುತಿ, ಸುನಾಮಿ ಕಿಟ್ಟಿ, ಗೌತಮಿ, ಚಂದನ್ ಮತ್ತು ಭಾವನಾ ಬೆಳಗೆರೆ ಇನ್ನೊಂದ್ಕಡೆ ಇರ್ತಾರೆ.

ಒಬ್ಬರನ್ನ ಕಂಡರೆ ಇನ್ನೊಬ್ಬರಿಗೆ ಆಗಲ್ಲ. ಒಬ್ಬರ ಮುಖ ನೋಡಿದರೆ ಮತ್ತೊಬ್ಬರಿಗೆ ಕಿರಿಕಿರಿ ಆಗುವಷ್ಟು ಮನಸ್ತಾಪ 'ಬಿಗ್ ಬಾಸ್' ಮನೆಯಲ್ಲಿ ಮೂಡಿದೆ. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]

ಈ ಬಗ್ಗೆ ಕಿಚ್ಚ ಸುದೀಪ್, 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದಲ್ಲಿ ಪಂಚಾಯತಿ ನಡೆಸಿದರು. 'ಬಿಗ್ ಬಾಸ್' ಮನೆ ಎರಡು ಹೋಳಾಗಿರುವ ಬಗ್ಗೆ ಕೆಲವರ ಅಭಿಪ್ರಾಯ ಕೇಳಿದರು.

ಅದರಲ್ಲಿ ನಟಿ ಶ್ರುತಿ, ಸುಷ್ಮಾ ವೀರ್, ಪೂಜಾ ಗಾಂಧಿ, ಭಾವನಾ ಮತ್ತು ಸುನಾಮಿ ಕಿಟ್ಟಿ ಏನು ಹೇಳಿದರು ಅಂತ ಅವರ ಮಾತುಗಳಲ್ಲೇ ಓದಿ, ಕೆಳಗಿರುವ ಸ್ಲೈಡ್ ಗಳಲ್ಲಿ..........

ಸುನಾಮಿ ಕಿಟ್ಟಿ

''ನನ್ನ ಪ್ರಕಾರ ಎರಡು ಗುಂಪುಗಳು ಅಂತ ಏನಾಗಿದೆ, ಅವರೊಂದು ಕಡೆ ಕೂತ್ಕೊಳ್ತಾರೆ. ನಾವೊಂದು ಕಡೆ ಕೂತ್ಕೊಳ್ತೀವಿ. ಮನಸ್ತಾಪ ಜಾಸ್ತಿ ಆಗ್ಬಿಟ್ಟಿದೆ. ಎಲ್ಲೂ ಜಾಗವೇ ಇಲ್ಲ. ಒಂದು ಅಲ್ಲಿ ಕೂತ್ಕೋಬೇಕು. ಇಲ್ಲ ಇಲ್ಲಿ ಕೂತ್ಕೋಬೇಕು. ನಾನು ಗುಂಪಲ್ಲಿ ಕೂತ್ಕೊಂಡು ಮಾತಾಡಲ್ಲ. ಗೊತ್ತೋ, ಗೊತ್ತಿಲ್ದೆಯೋ ನಾನು ಒಂದು ಗುಂಪಲ್ಲಿ ಇದ್ದೀನಿ'' - ಸುನಾಮಿ ಕಿಟ್ಟಿ ['ಅಮ್ಮ' ಶ್ರುತಿ ಬಗ್ಗೆ ಗರಂ ಆಗಿರುವ 'ಅಕ್ಕ' ಸುಷ್ಮಾ]

ಪೂಜಾ ಗಾಂಧಿ

''ನಾನು ಮಾತಾಡೋಕೆ ಇಷ್ಟಪಡೋದು Like minded ಜನರ ಜೊತೆ. ಆನಂದ್, ರೆಹಮಾನ್, ಸುಷ್ಮಾ ಜೊತೆ ಮೈಂಡ್ ಕನೆಕ್ಟ್ ಆಗುತ್ತೆ. ಎಲ್ಲರೂ ನನ್ನ ಫ್ರೆಂಡ್ಸ್. ಆದ್ರೆ ಚೇಂಜಸ್ ಕಾಣಿಸ್ತಾಯಿದೆ. ನನ್ನ ಮನಸ್ಸಲ್ಲೂ ತುಂಬಾ ಪ್ರಶ್ನೆ ಇದೆ. ಅದನ್ನ ಕ್ಲಿಯರ್ ಮಾಡಿಕೊಳ್ಳುವ ಸಂದರ್ಭವೇ ಬರ್ತಾ ಇಲ್ಲ'' - ಪೂಜಾ ಗಾಂಧಿ

ಭಾವನಾ ಬೆಳಗೆರೆ

''ಇಷ್ಟು ದಿನ ಒಂದು ಫ್ಲೋನಲ್ಲಿ ಹೋಗ್ತಾಯಿತ್ತು. ಸುಷ್ಮಾ ಬಂದಾಗ ಒಂದು ಬ್ರೇಕ್ ಪಾಯಿಂಟ್ ಆಯ್ತು. ನಮಗೆ ಅವರ ಪೇಸ್ ಗೆ ಮ್ಯಾಚ್ ಆಗ್ತಿಲ್ಲ. ಎರಡು ಕಡೆ ಕನ್ ಫ್ಯೂಶನ್ ಇದೆ. ವಾರ್ಡನ್ ಬಂದ್ರೆ ಆಗತ್ತಲ್ಲಾ ಹಾಗೆ ಆಗ್ತಿದೆ'' - ಭಾವನಾ ಬೆಳಗೆರೆ

ಸುಷ್ಮಾ ವೀರ್

''ವಾರ್ಡನ್ ಆದವಳು ಕೆಟ್ಟದಕ್ಕೆ ಹೇಳ್ತಾಳಾ ಅಥವಾ ಒಳ್ಳೆಯದಕ್ಕೆ ಹೇಳ್ತಾಳಾ? ಅನ್ನೋದನ್ನ consider ಮಾಡಲ್ಲ. ಎಲ್ಲರೂ ಹೇಳ್ತಾರೆ ego ಬಿಟ್ಟುಬಿಟ್ಟಿದ್ದೀವಿ ಅಂತ. Ego ಬಿಟ್ಟಿದ್ದರೆ ಇಂತಹ ವಿಷಯಕ್ಕೆ ಕ್ಲ್ಯಾಶ್ ಆಗ್ತಾನೇ ಇರ್ಲಿಲ್ಲ. ನನ್ನ ಜೊತೆ ಯಾರು ಅಡ್ಜಸ್ಟ್ ಆಗ್ತಾರೋ ಅವರ ಜೊತೆ ಹೋಗಿ ಕೂತ್ಕೊಳ್ತೀನಿ. ವಾರ್ಡನ್ ಅನ್ನೋದು ಅವರಿಗೂ ಅನ್ನಿಸ್ಬೇಕು ಅಲ್ವಾ? ಅವರಿಗೆ ಯಾಕೆ ಹಾಗೆ ಅನ್ಸಲ್ಲ'' - ಸುಷ್ಮಾ ವೀರ್

ಶ್ರುತಿ

''ನಾವು ಮನೆಗೆ ಬಂದಾಗಿನಿಂದಲೂ ಎಲ್ಲರೂ ಎಲ್ಲಾ ಕೆಲಸ ಮಾಡೋದು ಅಭ್ಯಾಸವಾಗಿತ್ತು. ನಾನು ಅಡುಗೆ ಮನೆಗೆ ಹೋದಾಗ ಇಲ್ಲಿ ಬರಬಾರದು ಅಂತ ಹೇಳಿದ್ರು. ನನ್ನ ನೋಡಿದ ತಕ್ಷಣವೇ ಅವರಿಗೆ ಕಿರಿಕಿರಿ ಶುರುವಾಗುತ್ತೆ. ನನ್ನ ಹಾಗೆ ಯಾರಿಗೆ ಕಿರಿಕಿರಿ ಆಗಿದ್ಯೋ ನನ್ನ ಹತ್ತಿರ ಬಂದು ಹೇಳುವುದಕ್ಕೆ ಶುರುಮಾಡಿದರು. ಹಾಗೆ ಸಂಖ್ಯೆಗಳು ನನ್ನ ಜೊತೆ ಶುರುವಾಗಿದ್ದು. ಇದು ಒಳ್ಳೆ ವಾತಾವರಣ ಅಲ್ಲವೇ ಅಲ್ಲ'' - ಶ್ರುತಿ

English summary
For the first time Groupism is evident in Bigg Boss Kannada 3. Kannada Actress Shruthi, Sushma Veer, Actress Pooja Gandhi, Bhavana Belagere spoke about Groupism in the house.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada