»   » ಶ್ರುತಿ-ಸುಷ್ಮಾ ಒಂದಾದ್ರು! ಅಯ್ಯಪ್ಪ-ಪೂಜಾ ಮತ್ತೆ ತಬ್ಬಿಕೊಂಡ್ರು!

ಶ್ರುತಿ-ಸುಷ್ಮಾ ಒಂದಾದ್ರು! ಅಯ್ಯಪ್ಪ-ಪೂಜಾ ಮತ್ತೆ ತಬ್ಬಿಕೊಂಡ್ರು!

Posted By:
Subscribe to Filmibeat Kannada

ರಾಜಕಾರಣದಲ್ಲಿ ಯಾರೂ ಶತ್ರು ಅಲ್ಲ, ಮಿತ್ರ ಅಲ್ಲ ಅಂತಾರೆ. ಹಾಗೇ, 'ಬಿಗ್ ಬಾಸ್' ಮನೆಯಲ್ಲೂ ಯಾರು ಯಾವಾಗ ಶತ್ರುಗಳಾಗ್ತಾರೆ, ಯಾವಾಗ ಫ್ರೆಂಡ್ಸ್ ಆಗಿ ಕೈಕೈ ಹಿಡಿದುಕೊಳ್ಳುತ್ತಾರೆ ಅಂತ ಅರ್ಥ ಮಾಡಿಕೊಳ್ಳುವುದು ತುಂಬಾ ಕಷ್ಟ.

ನಿನ್ನೆ-ಮೊನ್ನೆವರೆಗೂ ನಟಿ ಶ್ರುತಿ ಮತ್ತು ಸುಷ್ಮಾ ವೀರ್ ನಡುವೆ ಎಲ್ಲವೂ ಸರಿ ಇರ್ಲಿಲ್ಲ. ಇನ್ನೂ ಅಯ್ಯಪ್ಪ ಮತ್ತು ಪೂಜಾ ಗಾಂಧಿ ಮಧ್ಯೆ ಗೌತಮಿ ಎಂಟ್ರಿಕೊಟ್ಟ ಕಾರಣ 'ಬಿಗ್ ಬಾಸ್' ಮನೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿತ್ತು. ['ಬಿಗ್ ಬಾಸ್' ಮನೆಗೆ ಸುಷ್ಮಾ ವೀರ್.! ನಟಿ ಶ್ರುತಿಗೆ ಕಷ್ಟಕಷ್ಟ!]

ಆದ್ರೆ, ಕಳೆದ ವಾರದ 'ವಾರದ ಕಥೆ ಕಿಚ್ಚನ ಜೊತೆ' ಕಾರ್ಯಕ್ರಮದ ನಂತರ 'ಬಿಗ್ ಬಾಸ್' ಮನೆಯಲ್ಲಿ ಕೆಲ ಬದಲಾವಣೆಗಳಾಗಿದೆ. ನಟಿ ಶ್ರುತಿ ಮತ್ತು ಸುಷ್ಮಾ ವೀರ್ ಹಾಗೂ ಪೂಜಾ ಗಾಂಧಿ ಮತ್ತು ಅಯ್ಯಪ್ಪ ನಡುವೆ ನಡೆಯುತ್ತಿದ್ದ ಕದನಕ್ಕೆ ವಿರಾಮ ಸಿಕ್ಕಿದೆ. [ತಬ್ಬಿಕೊಂಡ್ರು, ಕಣ್ ಹೊಡೆದ್ರು, ಕೈ ಹಿಡಿದ್ರು ಅಯ್ಯಪ್ಪ-ಪೂಜಾ!]

'ಬಿಗ್ ಬಾಸ್' ಮನೆಯಲ್ಲಿ 71ನೇ ದಿನ ಆದ ಪ್ಯಾಚಪ್ ಸ್ಟೋರಿ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ....

ಭಾವನಾ ಬೆಳಗೆರೆ ಔಟ್ ಆದ್ಮೇಲೆ

ಭಾವನಾ ಬೆಳಗೆರೆ ಔಟ್ ಆದ್ಮೇಲೆ 'ಬಿಗ್ ಬಾಸ್' ಮನೆಯಲ್ಲಿ ನಟಿ ಶ್ರುತಿಗೆ ಒಂಟಿತನ ಕಾಡ್ತಿತ್ತೇನೋ...ತಕ್ಷಣ ಅವರನ್ನ ಸಮಾಧಾನ ಮಾಡೋಕೆ ನಟಿ ಪೂಜಾ ಗಾಂಧಿ ಮತ್ತು ಸುಷ್ಮಾ ವೀರ್ ಮುಂದಾಗಿದ್ದು ಅಚ್ಚರಿ ವಿಷಯ!

ನಟಿ ಶ್ರುತಿಗೆ ಸುಷ್ಮಾ ವೀರ್ ಹೇಳಿದ್ದೇನು?

''ಈ ಟೈಮ್ ನಲ್ಲಿ ಏನೇ ಕಿರಿಕಿರಿ ಇರ್ಲಿ, ನೀನು ಒಬ್ಬಳೇ ಅಂತ ಅಂದುಕೊಳ್ಳಬೇಡ. ಭಾವನಾ ಹೋಗಿರುವುದು ಒಂಟಿತನ ಇರುತ್ತೆ. ನಾನು ಇದ್ದೀನಿ ನಿನಗೆ'' - ಸುಷ್ಮಾ ವೀರ್

ನಟಿ ಶ್ರುತಿ ಫುಲ್ ಖುಷ್!

ಸುಷ್ಮಾ ವೀರ್ ಕೊಟ್ಟ ಭರವಸೆಗೆ ನಟಿ ಶ್ರುತಿ ಫುಲ್ ಖುಷ್ ಆಗಿ ಧನ್ಯವಾದ ಸಲ್ಲಿಸಿದರು.

ಪೂಜಾ ಗಾಂಧಿ ಕೂಡ ಕ್ಷಮೆ ಕೇಳಿದರು!

ಇದೇ ವೇಳೆ ನಟಿ ಪೂಜಾ ಗಾಂಧಿ ಕೂಡ ''ನಾನು ಕೂಡ ನಿಮಗೆ ಹರ್ಟ್ ಮಾಡಿರಬಹುದು. ಐ ಆಮ್ ಸಾರಿ'' ಅಂತ ನಟಿ ಶ್ರುತಿಗೆ ಕ್ಷಮೆ ಕೇಳಿದರು.

ಅಯ್ಯಪ್ಪಗೆ ಉರಿ!

ನಟಿ ಶ್ರುತಿ-ಪೂಜಾ ಗಾಂಧಿ-ಸುಷ್ಮಾ ವೀರ್ ಪ್ಯಾಚಪ್ ಆಗಿದ್ದು ಅಯ್ಯಪ್ಪಗೆ ಇಷ್ಟವಾಗ್ಲಿಲ್ಲ ಅಂತ ಕಾಣುತ್ತೆ. ಅದಕ್ಕೆ, ''ಹುಳ ಬಿಟ್ಟಿರುವುದು ಎಷ್ಟು ಜನಕ್ಕೆ ಅಂತ ಗೊತ್ತು. ಈಗ ಕನ್ವಿನ್ಸ್ ಮಾಡೋದು ಬೇರೆ. ನನ್ನ ಹತ್ರ ನಿನ್ನೆ ಬಂದು ಹೇಳಿದ್ರು - 'ಇನ್ಮುಂದೆ ಮಾತನಾಡಿಸುವುದಿಲ್ಲ. ಇಲ್ಲೂ ಅಷ್ಟೇ, ಹೊರಗೂ ಅಷ್ಟೇ' ಅಂತ. ನಾನು ಕೇರ್ ಮಾಡಲ್ಲ. ಒಂದ್ಸಲಿ ಡಿಲೀಟ್ ಆದ್ಮೇಲೆ ಡಿಲೀಟ್ ಅಷ್ಟೇ'' ಅಂತ ರೆಹಮಾನ್ ಮತ್ತು ಗೌತಮಿ ಬಳಿ ಹೇಳುತ್ತಿದ್ರು.

ಅಯ್ಯಪ್ಪ ಮತ್ತು ಪೂಜಾ ಗಾಂಧಿ ಒಂದಾದ್ರು!

ಅತ್ತ ಶ್ರುತಿ, ಸುಷ್ಮಾ ಮತ್ತು ಚಂದನ್ ಜೊತೆ ಗಲಾಟೆ ಮರೆತ ಪೂಜಾ ಗಾಂಧಿ, ಇತ್ತ ಅಯ್ಯಪ್ಪ ಜೊತೆಗೂ ಸ್ನೇಹ ಮುಂದುವರಿಸುವ ಆಲೋಚನೆ ಮಾಡಿದರು.

ಅಯ್ಯಪ್ಪ-ಪೂಜಾ ಗಾಂಧಿ ನಡುವಿನ ಸಂಭಾಷಣೆ

ಅಯ್ಯಪ್ಪ - ''ನಿನಗೆ ಚಂದನ್ ಜೊತೆ ಕ್ಲಾರಿಫೈ ಮಾಡಬೇಕು ಅಂದಾಗ, ಅವನ ಜೊತೆ ಹೋಗಿ ಮಾತನಾಡುತ್ತೀಯಾ. ಆ ತರಹ ನನ್ನ ಹತ್ರ ಮಾಡಿದ್ದೀಯಾ?''

ಪೂಜಾ ಗಾಂಧಿ - ''ಇಲ್ಲಿ ಏನೇ ಆದರೂ ನಾನೊಬ್ಬಳೇ ಫೈಟ್ ಮಾಡ್ಬೇಕು. ಎಲ್ಲೋ ಒಂದು ಕಡೆ ನನಗೆ ನಿಮ್ಮ ಜೊತೆ ಕಮ್ಫರ್ಟ್ ಫೀಲಿಂಗ್ ಇದೆ. ಅದಕ್ಕೆ ಮಾತನಾಡುತ್ತೀನಿ ಅಷ್ಟೇ''

ಅಯ್ಯಪ್ಪ - ''ವೀ ಆರ್ ಫ್ರೆಂಡ್ಸ್. ವೀ ವಿಲ್ ಆಲ್ವೇಸ್ ಬಿ. ಇದು ಆಟ. ಆಟದ ತರಹ ನೋಡು ಅಷ್ಟೇ''

ಪೂಜಾ ಗಾಂಧಿ - ''ನಮ್ಮ ಮಾತುಕತೆ ಮಧ್ಯೆ ಇನ್ನೊಬ್ಬರು ಬರುವುದು ನನಗೆ ಇಷ್ಟ ಇಲ್ಲ''

ಅಯ್ಯಪ್ಪ-ಪೂಜಾ ಮತ್ತೆ ತಬ್ಬಿಕೊಂಡರು!

ಇಬ್ಬರ ನಡುವೆ ಇದ್ದ ಭಿನ್ನಾಭಿಪ್ರಾಯ ಶಮನವಾದ ಬಳಿಕ ಅಯ್ಯಪ್ಪ ಮತ್ತು ಪೂಜಾ ಗಾಂಧಿ ತಬ್ಬಿಕೊಂಡರು.

English summary
Kannada Actress Shruthi and Sushma Veer patched up in Bigg Boss house. Actress Pooja Gandhi also tried to clear misunderstanding with Aiyappa. Read the article to know what all happened on Day 71 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada