»   » 'ಬಿಗ್ ಬಾಸ್ ಕನ್ನಡ 3' ; ಈ ವಾರ ಉಳಿಯೋರು ಯಾರು?

'ಬಿಗ್ ಬಾಸ್ ಕನ್ನಡ 3' ; ಈ ವಾರ ಉಳಿಯೋರು ಯಾರು?

Posted By:
Subscribe to Filmibeat Kannada

ಯಾವುದು ಆಗಬಾರದು ಅಂತ ವೀಕ್ಷಕರು ಅಂದುಕೊಂಡಿದ್ರೋ, ಅದು 'ಬಿಗ್ ಬಾಸ್' ಮನೆಯಲ್ಲಿ ನಿನ್ನೆ ಆಗೇ ಹೋಯ್ತು. ಕಳೆದ ವಾರ ಎಲಿಮಿನೇಷನ್ ನಿಂದ ಬಚಾವ್ ಆಗಿದ್ದ 'ಬಿಲ್ಡಪ್ ರಾಣಿ' ಗೌತಮಿ ಈ ವಾರ ಔಟ್ ಆಗ್ಬೇಕು ಅಂತ ವೀಕ್ಷಕರು ಸಾಮಾಜಿಕ ಜಾಲತಾಣಗಳಲ್ಲಿ ಪಟ್ಟು ಹಿಡಿದಿದ್ದರು.

ಆದ್ರೆ, ವೀಕ್ಷಕರ ಇಚ್ಛೆಗೆ ವಿರುದ್ಧ ಈ ವಾರ 'ಬಿಗ್ ಬಾಸ್' ಮನೆಯ ಕ್ಯಾಪ್ಟನ್ ಆಗಿದ್ದಾರೆ 'ಚಿ.ಸೌ.ಸಾವಿತ್ರಿ' ಧಾರಾವಾಹಿ ಖ್ಯಾತಿಯ ನಟಿ ಗೌತಮಿ ಗೌಡ. 'ಬಿಗ್ ಬಾಸ್' ನೀಡಿದ ಕೈಯಲ್ಲಿ ನೀರಿನ ಬೌಲ್ ಹಿಡಿಯುವ ಟಾಸ್ಕ್ ಗೆದ್ದು ಗೌತಮಿ ಕ್ಯಾಪ್ಟನ್ ಪಟ್ಟ ಪಡೆದು ಈ ವಾರ ಸೇಫ್ ಆದರು. ['ಬಿಗ್ ಬಾಸ್' ನಿರ್ಣಯದಿಂದ ಮತ್ತೆ ವೀಕ್ಷಕರು ಬೇಸರ]

ಸಾಲದ್ದಕ್ಕೆ, ಸುಷ್ಮಾ ವೀರ್ ರನ್ನ ನೇರವಾಗಿ ನಾಮಿನೇಟ್ ಮಾಡಿದರು. ಇನ್ನೂ 'ಫೋನ್ ಬೂತ್' ಟಾಸ್ಕ್ ಸೋತ ಕಾರಣ ಅಯ್ಯಪ್ಪ ಮತ್ತು ಪೂಜಾ ಗಾಂಧಿ ಕೂಡ ನೇರವಾಗಿ ನಾಮಿನೇಟ್ ಆದರು. ಇನ್ನೂ ಮನೆ ಸದಸ್ಯರಿಂದ ಅತಿ ಹೆಚ್ಚು ವೋಟ್ ಪಡೆದು ರೆಹಮಾನ್ ಮತ್ತು ಚಂದನ್ ನಿಮ್ಮ ಎಸ್.ಎಂ.ಎಸ್ ನಿರೀಕ್ಷೆಯಲ್ಲಿದ್ದಾರೆ.

ಯಾರ್ಯಾರು ಯಾರ್ಯಾರನ್ನ ನಾಮಿನೇಟ್ ಮಾಡಿದರು ಅಂತ ತಿಳಿಯಲು ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ ಮಾಡಿ.....

ಈ ವಾರ ಶ್ರುತಿ ಸೇಫ್!

'ಬಿಗ್ ಬಾಸ್' ಮನೆಯಿಂದ ಹೊರಹೋಗುವ ಮುನ್ನ ಭಾವನಾ ಬೆಳಗೆರೆ ನೀಡಿದ ವರದಾನದ ಪರಿಣಾಮ ನಟಿ ಶ್ರುತಿ ಈ ವಾರ 'ಬಿಗ್ ಬಾಸ್' ಮನೆಯಲ್ಲಿ ಸೇಫ್ ಆಗಿದ್ದಾರೆ.

ಅಯ್ಯಪ್ಪ-ಪೂಜಾ ಗಾಂಧಿಗೆ ಶಿಕ್ಷೆ!

ಕಳೆದ ವಾರ 'ಫೋನ್ ಬೂತ್' ಟಾಸ್ಕ್ ನಲ್ಲಿ ಸೋತ ಕಾರಣ ನಟಿ ಪೂಜಾ ಗಾಂಧಿ ಮತ್ತು ಕ್ರಿಕೆಟರ್ ಅಯ್ಯಪ್ಪ ಈ ಬಾರಿ ನೇರವಾಗಿ ನಾಮಿನೇಟ್ ಆಗಿದ್ದಾರೆ.

ಕ್ಯಾಪ್ಟನ್ ಆದ ಗೌತಮಿ

ಅತಿ ಹೆಚ್ಚು ಸಮಯ ಕೈಯಲ್ಲಿ ನೀರಿನ ಬೌಲ್ ಹಿಡಿದು ಗೌತಮಿ ಕ್ಯಾಪ್ಟನ್ ಆಗಿ ಎಲಿಮಿನೇಷನ್ ನಿಂದ ತಪ್ಪಿಸಿಕೊಂಡುಬಿಟ್ಟರು.

ಸುಷ್ಮಾ ವೀರ್ ಮಿಸ್ ಆಗ್ಲಿಲ್ಲ!

ಮೊದಲಿನಿಂದಲೂ ಗೌತಮಿಗೂ ಸುಷ್ಮಾ ವೀರ್ ಗೂ ಅಷ್ಟಕಷ್ಟೆ. ಬೆನ್ನ ಹಿಂದೆ ಸುಷ್ಮಾ ವೀರ್ ಬಗ್ಗೆ ಮಾತನಾಡುತ್ತಿದ್ದ ಗೌತಮಿ ಈ ವಾರ ಕ್ಯಾಪ್ಟನ್ ಆದ ಕಾರಣ ಸುಷ್ಮಾ ರನ್ನ ನೇರವಾಗಿ ನಾಮಿನೇಟ್ ಮಾಡಿದರು.

ಅಯ್ಯಪ್ಪ ಆಯ್ಕೆ

ರೆಹಮಾನ್ ಮತ್ತು ಚಂದನ್ ರನ್ನ ಅಯ್ಯಪ್ಪ ನಾಮಿನೇಟ್ ಮಾಡಿದರು.

ರೆಹಮಾನ್ ಆಯ್ಕೆ

ಚಂದನ್ ಮತ್ತು ಕಿಟ್ಟಿ ರನ್ನ ರೆಹಮಾನ್ ನಾಮಿನೇಟ್ ಮಾಡಿದರು.

ಆನಂದ್ ವಿರುದ್ಧ ತಿರುಗಿದ ಪೂಜಾ ಗಾಂಧಿ

ಇಷ್ಟು ದಿನ ಮಾಸ್ಟರ್ ಆನಂದ್ ಬೆಸ್ಟ್ ಫ್ರೆಂಡ್ ಅಂತ ಹೇಳುತ್ತಿದ್ದ ನಟಿ ಪೂಜಾ ಗಾಂಧಿ ಈ ವಾರ ಆನಂದ್ ಮತ್ತು ರೆಹಮಾನ್ ರನ್ನ ನಾಮಿನೇಟ್ ಮಾಡಿದರು.

ಕಿಟ್ಟಿ ಹೆಸರು ಹೇಳಿದ ಶ್ರುತಿ

ಇಲ್ಲಿವರೆಗೂ ಸುನಾಮಿ ಕಿಟ್ಟಿಯನ್ನ ಸಪೋರ್ಟ್ ಮಾಡುತ್ತಿದ್ದ ನಟಿ ಶ್ರುತಿ ಈ ವಾರ ಕಿಟ್ಟಿ ಮತ್ತು ರೆಹಮಾನ್ ರನ್ನ ನಾಮಿನೇಟ್ ಮಾಡಿದರು

ಚಂದನ್ ಆಯ್ಕೆ

ಚಂದನ್ ನಾಮಿನೇಷನ್ - ರೆಹಮಾನ್, ಆನಂದ್

ಉಲ್ಟಾ ಹೊಡೆದ ಕಿಟ್ಟಿ

ಚಂದನ್ ಆಪ್ತ ಸ್ನೇಹಿತ ಅಂತ ಹೇಳಿಕೊಳ್ಳುತ್ತಿದ್ದ ಕಿಟ್ಟಿ, ಈ ವಾರ ರೆಹಮಾನ್ ಜೊತೆಗೆ ಚಂದನ್ ರನ್ನ ನಾಮಿನೇಟ್ ಮಾಡಿದರು.

ಸುಷ್ಮಾ ಆಯ್ಕೆ

ಸುಷ್ಮಾ ನಾಮಿನೇಷನ್ - ರೆಹಮಾನ್, ಚಂದನ್

ಆನಂದ್ v/s ಚಂದನ್

ಮೊದಲಿನಿಂದಲೂ ಆನಂದ್ ಮತ್ತು ಚಂದನ್ ನಡುವೆ ಎಲ್ಲವೂ ಸರಿಯಿಲ್ಲ. ಅದು ಈ ಬಾರಿಯ ನಾಮಿನೇಷನ್ ನಲ್ಲೂ ಸಾಬೀತಾಯಿತು. ರೆಹಮಾನ್ ಮತ್ತು ಚಂದನ್ ರನ್ನ ಆನಂದ್ ನಾಮಿನೇಟ್ ಮಾಡಿದರು.

ಈ ವಾರ ಉಳಿಯೋರು ಯಾರು?

ರೆಹಮಾನ್, ಚಂದನ್, ಅಯ್ಯಪ್ಪ, ಪೂಜಾ ಗಾಂಧಿ ಮತ್ತು ಸುಷ್ಮಾ ವೀರ್ ಈ ವಾರ ನಾಮಿನೇಟ್ ಆಗಿದ್ದಾರೆ. ಇವರಲ್ಲಿ ನಿಮ್ಮೆಲ್ಲರಿಂದ ಅತಿ ಹೆಚ್ಚು ಎಸ್.ಎಂ.ಎಸ್ ಪಡೆಯುವವರು ಸೇಫ್ ಆಗಲಿದ್ದಾರೆ.

ನಿಮ್ಮ ಅಭಿಪ್ರಾಯ ಏನು?

ರೆಹಮಾನ್, ಚಂದನ್, ಅಯ್ಯಪ್ಪ, ಪೂಜಾ ಗಾಂಧಿ ಮತ್ತು ಸುಷ್ಮಾ ವೀರ್ ಪೈಕಿ ಈ ವಾರ ಯಾರು ಸೇಫ್ ಆಗ್ಬೇಕು ಅಂತ ನಿಮ್ಮ ಅಭಿಪ್ರಾಯ ನಮಗೆ ತಿಳಿಸಿ. ಕೆಳಗಿರುವ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ.....

English summary
Kannada Actress Pooja Gandhi, Aiyappa, Sushma Veer, Rehman and Chandan are nominated for this week Eviction. Read the article to know who nominated whom on Day 71 in Bigg Boss Kannada 3.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada